ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ವಿನಾಕಾರಣ ಜೈಲಿನಲ್ಲಿ ಬಾಡಿದ ಸ್ನೇಹಲತೆ

1932ರಲ್ಲಿ ಅವಳು ಹುಟ್ಟಿದಾಗ ಭಾರತ ದೇಶ ಇನ್ನೂ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಸಾಲದು ಎಂಬಂತೆ, ಮನೆಯಲ್ಲಿ ಬೇಕಾದಷ್ಟು ಬಡತನವೂ ಇತ್ತು. ದೊಡ್ಡವಳಾಗುತ್ತಿದ್ದಂತೆ, ಬ್ರಿಟಿಷರು ಭಾರತೀಯರಿಗೆ ನೀಡುವ ಕಿರುಕುಳ, ಅದರಿಂದ ತನ್ನ ಸುತ್ತಮುತ್ತಲಿನ ಜನರು ಪಡುತ್ತಿರುವ ಕಷ್ಟ, ಆಪ್ತರ ನೋವು, ದುಃಖ ಇತ್ಯಾದಿ ಸಂಗತಿಗಳನ್ನೆಲ್ಲ ನೋಡುತ್ತಾ-ನೋಡುತ್ತಾ ಅವಳ ಮನಸ್ಸು ಕೂಡ ದಿನದಿನವೂ ಕಲ್ಲಾಗತೊಡಗಿತ್ತು

ವಿನಾಕಾರಣ ಜೈಲಿನಲ್ಲಿ ಬಾಡಿದ ಸ್ನೇಹಲತೆ

ವಿದೇಶವಾಸಿ

dhyapaa@gmail.com

1970ರಲ್ಲಿ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲೂ ಸುದ್ದಿ ಮಾಡಿದ ಚಲನ ಚಿತ್ರ ‘ಸಂಸ್ಕಾರ’. ಆ ವರ್ಷ ಇದು ರಾಷ್ಟ್ರ ಪ್ರಶಸ್ತಿಗೂ ಭಾಜನವಾಗಿತ್ತು. ಕನ್ನಡದ ಕೆಲ ಘಟಾನುಘಟಿ ಚಿಂತಕರು, ಲೇಖಕರು ಈ ಚಿತ್ರದಲ್ಲಿ ಪಾಲ್ಗೊಂಡಿದ್ದರು. ಯು.ಆರ್.ಅನಂತ ಮೂರ್ತಿಯವರ ಕಥೆಯನ್ನು ಆಧರಿಸಿ ನಿರ್ಮಾಣಗೊಂಡ ಈ ಚಿತ್ರದಲ್ಲಿ ಗಿರೀಶ್ ಕಾರ್ನಾ ಡ್ ಸಂಭಾಷಣೆಯನ್ನು ಬರೆದು ಅಭಿನಯವನ್ನೂ ಮಾಡಿದ್ದರು. ಅವರೊಂದಿಗೆ ಪಿ.ಲಂಕೇಶ್ ಕೂಡ ಅಭಿನಯಿಸಿದ್ದರು. ಪಟ್ಟಾಭಿರಾಮ ರೆಡ್ಡಿ ಚಿತ್ರದ ನಿರ್ಮಾ ಪಕರೂ, ನಿರ್ದೇಶಕರೂ ಆಗಿದ್ದರು. ಆದರೆ ಈ ಲೇಖನ ಇವರ‍್ಯಾರ ಕುರಿತಾಗಿಯೂ ಅಲ್ಲ, ಆ ಸಿನಿ ಮಾದ ಕುರಿತಾಗಿಯೂ ಅಲ್ಲ, ಆ ಚಲನಚಿತ್ರದ ನಾಯಕಿಯ ಕುರಿತಾದದ್ದು.

1932ರಲ್ಲಿ ಅವಳು ಹುಟ್ಟಿದಾಗ ಭಾರತ ದೇಶ ಇನ್ನೂ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಸಾಲದು ಎಂಬಂತೆ, ಮನೆಯಲ್ಲಿ ಬೇಕಾದಷ್ಟು ಬಡತನವೂ ಇತ್ತು. ದೊಡ್ಡವಳಾಗುತ್ತಿದ್ದಂತೆ, ಬ್ರಿಟಿಷರು ಭಾರತೀಯರಿಗೆ ನೀಡುವ ಕಿರುಕುಳ, ಅದರಿಂದ ತನ್ನ ಸುತ್ತಮುತ್ತಲಿನ ಜನರು ಪಡುತ್ತಿರುವ ಕಷ್ಟ, ಆಪ್ತರ ನೋವು, ದುಃಖ ಇತ್ಯಾದಿ ಸಂಗತಿಗಳನ್ನೆಲ್ಲ ನೋಡುತ್ತಾ-ನೋಡುತ್ತಾ ಅವಳ ಮನಸ್ಸು ಕೂಡ ದಿನದಿನವೂ ಕಲ್ಲಾಗತೊಡಗಿತ್ತು. ಆವಳು ಒಳಗೊ ಳಗೇ ಕುದಿಯುತ್ತಿದ್ದಳು. ಅವಳ ಕಲ್ಲು ಮನಸ್ಸು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಅಣಿ ಯಾಗುತ್ತಿತ್ತು.

ಇದನ್ನೂ ಓದಿ: Kiran Upadhyay Column: ದುಡ್ಡೇ ದೊಡ್ಡಪ್ಪ; ಜಾಹೀರಾತು ಅದರಪ್ಪ !

ಹೋರಾಟದ ಮೊದಲನೆಯ ಹೆಜ್ಜೆ ಎಂಬಂತೆ, ಸಣ್ಣ ವಯಸ್ಸಿನಲ್ಲಿಯೇ ಭಾರತೀಯ ಉಡುಗೆಯಾದ ಸೀರೆ ಉಡಲು ಆರಂಭಿಸಿದಳು. ಕೈಗೆ ಬಳೆ, ಕಿವಿಗೆ ಓಲೆ, ಮೂಗುತಿ ತೊಡು ತ್ತಿದ್ದಳು. ಹಣೆಗೆ ದೊಡ್ಡ ಕುಂಕುಮ ಇಟ್ಟುಕೊಳ್ಳುತ್ತಿದ್ದಳು. ಸಾಲದು ಎಂಬಂತೆ, ತನ್ನ ಕ್ರಿಶ್ಚಿ ಯನ್ ಹೆಸರನ್ನೂ ಬದಲಾಯಿಸಿ, ‘ಸ್ನೇಹಲತಾ’ ಎಂದು ಇಟ್ಟುಕೊಂಡಳು.

ತನ್ನ ಬಾಲ್ಯದ ದಿನಗಳ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಭಾಗವಹಿಸುತ್ತಿದ್ದಳು. ನಾಟಕ ಅವಳ ಹೋರಾಟದ ಮಾಧ್ಯಮವಾಯಿತು. ನಾಟಕವಾದರೂ ಎಂಥದ್ದು? ದೇಶ ಭಕ್ತಿ, ರಾಷ್ಟ್ರೀಯತೆಯ ಕುರಿತಾದದ್ದು. ಈ ನಡುವೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು.

ಬೆಳೆದು ದೊಡ್ಡವರಾಗಿದ್ದ ಸ್ನೇಹಲತಾ ನಾಟಕದಲ್ಲಿ ಅಭಿನಯಿಸುವುದನ್ನು ಮುಂದು ವರಿಸಿದ್ದರು. ನಾಟಕ ಅವರಿಗೆ ಆಸಕ್ತಿಯೂ, ಪ್ರೀತಿಯೂ, ಹೊಟ್ಟೆಪಾಡೂ ಆಗಿತ್ತು. 1960 ರಲ್ಲಿ ‘ದಿ ಮಡ್ರಾಸ್ ಪ್ಲೇಯರ್ಸ್’ ನಾಟಕ ತಂಡ ರಚನೆಯಾದ ಸಂದರ್ಭದಲ್ಲಿ ಸ್ನೇಹಲತಾ ಕೂಡ ಕೈಜೋಡಿಸಿದರು. ಆ ನಾಟಕ ಕಂಪನಿ ಸುಮಾರು ಐವತ್ತು ವರ್ಷ ನಡೆಯಿತು.

2010ರಲ್ಲಿ ಕಂಪನಿ ಮುಚ್ಚಿಹೋಗುವುದಕ್ಕೂ ಮೊದಲು ಸುಮಾರು ಇನ್ನೂರ ಐವತ್ತಕ್ಕೂ ಹೊಸ ನಾಟಕವನ್ನು ತಂಡದವರು ರಂಗಕ್ಕೆ ತಂದಿದ್ದರು. ತಂಡದಲ್ಲಿರುವಾಗ ಸ್ನೇಹಲತಾ ಕಥೆ ಬರೆಯುವುದು, ಸಂಭಾಷಣೆ ಹೆಣೆಯುವುದು, ನಾಟಕಗಳನ್ನು ನಿರ್ದೇಶಿಸುವುದು, ನಾಟ ಕಕ್ಕೆ ಬೇಕಾದ ವಸ್ತುಗಳನ್ನು ಹೊಂದಿಸುವುದು ಇತ್ಯಾದಿಗಳಲ್ಲೂ ತಮ್ಮನ್ನು ತೊಡಗಿ ಸಿಕೊಳ್ಳುತ್ತಿದ್ದರು. ಆ ತಂಡದ ನಾಟಕವನ್ನು ನೋಡಲು ತೆಲುಗು ಮತ್ತು ಕನ್ನಡದ ನಿರ್ಮಾ ಪಕರಾದ ಪಟ್ಟಾಭಿರಾಮ ರೆಡ್ಡಿ ಕಾಯಮ್ಮಾಗಿ ಬರುತ್ತಿದ್ದರು. ಅವರು ತಮ್ಮ ಸಿನಿಮಾಕ್ಕೆ ಬಹುತೇಕ ಕಲಾವಿದರನ್ನು ಈ ನಾಟಕ ತಂಡದಿಂದಲೇ ಆಯ್ದುಕೊಳ್ಳುತ್ತಿದ್ದರು.

ಅಲ್ಲಿಯೇ ಸ್ನೇಹಲತಾ ಮತ್ತು ಪಟ್ಟಾಭಿರಾಮ್ ಒಬ್ಬರಿಗೊಬ್ಬರು ಪರಿಚಿತರಾದರು. ಮಾ ಮೂಲಿ ಸಿನಿಮಾದ ಕಥೆಯಂತೆಯೇ ಅವರಿಬ್ಬರ ಜೀವನದಲ್ಲಿಯೂ ನಡೆಯಿತು. ಪರಿಚಯ ಪ್ರೇಮಕ್ಕೆ ತಿರುಗಿ, ಎರಡೂ ಪರಿವಾರದವರ ವಿರೋಧದ ನಡುವೆ ಇಬ್ಬರ ಮದುವೆಯೂ ಆಯಿತು.

ಆದರೆ, ಸಾಮಾನ್ಯವಾಗಿ ಮದುವೆಯ ನಂತರ ನಟಿಯರು ಅಭಿನಯದಿಂದ ದೂರ ಉಳಿದು ಮಕ್ಕಳು, ಮನೆ ನೋಡಿಕೊಳ್ಳುವ ಕಾಲದಲ್ಲಿ, ಸ್ನೇಹಲತಾ ಮದುವೆಯ ನಂತರ ಸಿನಿಮಾ ಗಳಲ್ಲಿ ಅಭಿನಯಿಸಲು ಆರಂಭಿಸಿದರು. ಸ್ನೇಹಲತಾ ಅಭಿನಯದ ಬಹುತೇಕ ಸಿನಿಮಾ ಗಳಿಗೆ ಪತಿ ಪಟ್ಟಾಭಿರಾಮ್ ರೆಡ್ಡಿಯವರೇ ನಿರ್ಮಾಪಕರಾಗಿರುತ್ತಿದ್ದರು. ಮೊದಲಿಂದಲೂ ಸಮಾಜದಲ್ಲಿರುವ ಪಿಡುಗು, ಅನಿಷ್ಟಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದ ಸ್ನೇಹಲತಾಗೆ ಅಂಥ ವಸ್ತುಗಳೇ ಹೆಚ್ಚು ಇಷ್ಟವಾಗುತ್ತಿದ್ದವು.

‘ಸಂಸ್ಕಾರ’ ಅದರ ಪರಿಣಾಮವಾಗಿಯೇ ಹುಟ್ಟಿಕೊಂಡ ಸಿನಿಮಾ. ಆ ಸಿನಿಮಾ ತಯಾರಾ ದರೂ ನಾಲ್ಕು ವರ್ಷಗಳ ಕಾಲ ಬಿಡುಗಡೆಯ ಭಾಗ್ಯ ಒದಗಿಬಂದಿರಲಿಲ್ಲ. ಮದ್ರಾಸ್ ಸೆನ್ಸಾರ್ ಮಂಡಳಿ ಚಲನಚಿತ್ರ ಪ್ರದರ್ಶನಕ್ಕೆ ಪರವಾನಗಿ ನೀಡದಿದ್ದಾಗ, ನ್ಯಾಯಾಲಯದ ಮೆಟ್ಟಿಲೇರಿ ಅನುಮತಿ ಪಡೆಯುವಾಗ ನಾಲ್ಕು ವರ್ಷಗಳೇ ಸಂದು ಹೋಗಿದ್ದವು.

ಒಮ್ಮೆ ಚಿತ್ರ ತೆರೆಗೆ ಬಂದದ್ದೇ ತಡ, ಅದಕ್ಕೆ ಒಂದರ ಹಿಂದೆ ಒಂದರಂತೆ ಪ್ರಶಸ್ತಿಗಳ ಸರಮಾಲೆ ಒದಗಿ ಬಂದವು. ಆಂಧ್ರದ ಮೂಲೆಯಲ್ಲಿ ಹುಟ್ಟಿದ್ದ ಬಡ ಹುಡುಗಿ ಸ್ನೇಹಲತಾ ರಾಷ್ಟ್ರ ಮಟ್ಟದ ನಟಿಯಾಗಿ ಮಾತ್ರವಲ್ಲ, ಸಾಮಾಜಿಕ ಕಾರ್ಯಕರ್ತೆಯಾಗಿಯೂ ಬೆಳೆದು ನಿಂತರು.

ಇಂತಿರ್ಪ ದಿನಗಳಲ್ಲಿ ಸ್ನೇಹಲತಾ ಅವರಿಗೆ ಜಾರ್ಜ್ ಫೆರ್ನಾಂಡಿಸ್ ಅವರ ಪರಿಚಯ ವಾಯಿತು. ಯೆಸ್, ಮೂಲತಃ ಕರ್ನಾಟಕದವರಾಗಿದ್ದು, ಮುಂಬೈಗೆ ಹೋಗಿ, ಅಲ್ಲಿಯ ಕಾರ್ಮಿಕ ಮುಖಂಡರಾಗಿ, ಮುಂದೆ ಉತ್ತರ ಭಾರತಕ್ಕೆ ಹೋಗಿ, ಅದರಲ್ಲೂ ಬಿಹಾರದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡು, ನಮ್ಮ ದೇಶದ ರೈಲ್ವೆ ಮಂತ್ರಿಯಾಗಿಯೂ, ರಕ್ಷಣಾ ಮಂತ್ರಿಯಾಗಿಯೂ ಹೆಸರು ಮಾಡಿದ ಜಾರ್ಜ್ ಫೆರ್ನಾಂಡಿಸ್.

ಆದರೆ ಅವರೊಂದಿಗಿನ ಪರಿಚಯವೇ ಮುಂದೊಂದು ದಿನ ತನ್ನ ದಾರುಣ ಸ್ಥಿತಿಗೆ ಕಾರಣ ವಾಗಬಹುದೆಂದು ಆ ಕ್ಷಣದಲ್ಲಿ ಸ್ನೇಹಲತಾ ಅವರಿಗೆ ಅರಿವಿರಲಿಲ್ಲ. 25 ಜೂನ್ 1975 ರವರೆಗೂ ಸ್ನೇಹಲತಾ ಜೀವನದಲ್ಲಿ ಎಲ್ಲವೂ ಸರಿಯಾಗಿ ಇತ್ತು. ಆ ದಿನ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.

ತುರ್ತು ಪರಿಸ್ಥಿತಿಯಲ್ಲಿ ಯಾರೂ ದೇಶದ ವಿರುದ್ಧವಾಗಲಿ, ಸರಕಾರದ ವಿರುದ್ಧವಾಗಲಿ ಮಾತನಾಡುವಂತಿರಲಿಲ್ಲ. ಮಾತನಾಡಿದವರನ್ನು (ಮುಂದೆ ಮಾತನಾಡಬಹುದಾದವ ರನ್ನು) ಅಂದಿನ ಸರಕಾರ ಬಂಧಿಸುತ್ತಿತ್ತು. ಅದಕ್ಕಾಗಿ ಸರಕಾರದ ಕಣ್ಣು ತಪ್ಪಿಸಿ ಕೆಲವರು ಅಡಗಿ ಕುಳಿತರು. ಅಂಥವರಲ್ಲಿ ಜಾರ್ಜ್ ಫೆರ್ನಾಂಡಿಸ್ ಕೂಡ ಒಬ್ಬರಾಗಿದ್ದರು. ಅಂದಿನ ಸರಕಾರ ಫೆರ್ನಾಂಡಿಸ್ ಅವರನ್ನು ಹುಡುಕುತ್ತಿತ್ತು.

ಅವರನ್ನು ಸೆರೆಮನೆಗೆ ಹಾಕುವುದು ಅಂದಿನ ಸರಕಾರದ ಪ್ರಮುಖ ವಿಷಯಗಳಲ್ಲಿ ಒಂದಾ ಗಿತ್ತು. ಏಕೆಂದರೆ, ತುರ್ತು ಪರಿಸ್ಥಿತಿ ಹೇರುವುದಕ್ಕಿಂತ ಮೊದಲೇ ಅವರು ಸರಕಾರದ ಕಣ್ಣಿಗೆ ಬಿದ್ದಿದ್ದರು. ಕಾರ್ಮಿಕರ ಮುಖಂಡರಾಗಿದ್ದ ಸಂದರ್ಭದ ಅವರು ರೈಲ್ವೆ ಕಾರ್ಮಿ ಕರ ಸಂಬಳ ಹೆಚ್ಚಿಸಬೇಕು, ನೌಕರರಿಗೆ ಉತ್ತಮ ಸೌಲಭ್ಯ ಒದಗಿಸಿಕೊಡಬೇಕು ಎಂದು ಸರಕಾ ರದ ವಿರುದ್ಧ ಆಂದೋಲನ ಮಾಡಿದ್ದರು. ಆ ಕಾಲದಲ್ಲಿ ಅದೊಂದು ದೊಡ್ಡ ಆಂದೋ ಲನವಾಗಿದ್ದು, ವಿಶ್ವದಾದ್ಯಂತ ಸುದ್ದಿ ಮಾಡಿತ್ತು. ಇದರಿಂದ ಸರಕಾರಕ್ಕೆ ಮುಜುಗರ ವಾಗಿತ್ತು.

ಅದೇ ರೀತಿಯ ಒಂದು ಆಂದೋಲನವನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರ ಕಾರದ ವಿರುದ್ಧ ಮಾಡಲು -ರ್ನಾಂಡಿಸ್ ತಯಾರಿ ನಡೆಸಿದ್ದರು. ಈ ವಿಷಯವನ್ನು ಅವರು ಸ್ನೇಹಲತಾ ಅವರಿಗೂ ತಿಳಿಸಿದ್ದರು. ಆದರೆ ಸ್ನೇಹಲತಾ ಅವರು ಜಾರ್ಜ್ ಫೆರ್ನಾಂಡಿಸ್ ಜತೆ ಕೈಜೋಡಿಸಲು ಹಿಂದೇಟು ಹಾಕಿದ್ದರು. ಏಕೆಂದರೆ ಫೆರ್ನಾಂಡಿಸ್ ಅವರ ಹೋರಾಟ ತೀವ್ರವಾಗಿರುತ್ತಿತ್ತು, ಸ್ನೇಹಲತಾ ಅವರಿಗೆ ಶಾಂತಿಯುತ ಹೋರಾಟ ದಲ್ಲಿ ಭರವಸೆಯಿತ್ತು.

ಸ್ನೇಹಲತಾ ಮತ್ತು ಜಾರ್ಜ್ ಫೆರ್ನಾಂಡಿಸ್ ನಡುವಿನ ಸ್ನೇಹದ ವಿಷಯ ಇಂದಿರಾ ಗಾಂಧಿ ಯವರಿಗೆ ಚೆನ್ನಾಗಿ ತಿಳಿದಿತ್ತು. ಆದ್ದರಿಂದ ಜಾರ್ಜ್ ಫೆರ್ನಾಂಡಿಸ್ ಅವರನ್ನು ಬಂಧಿಸುವ ಪ್ರಯತ್ನದಲ್ಲಿ ಅವರು ಸ್ನೇಹಲತಾ ಮೇಲೆ ಬಲೆ ಬೀಸಿದ್ದರು. ಸ್ನೇಹಲತಾರನ್ನು ಬಂಧಿಸಿದರೆ ಜಾರ್ಜ್ ಫೆರ್ನಾಂಡಿಸ್ ಸುಳಿವು ಸಿಗುತ್ತದೆ ಎಂಬ ಆಶಯ ಅಂದಿನ ಸರಕಾರಕ್ಕಿತ್ತು.

ಜೈಲಿನಲ್ಲಿ ಸ್ನೇಹಲತಾ ಅವರನ್ನು ಒಂದು ಸಣ್ಣ ಕತ್ತಲೆಯ ಕೋಣೆಯಲ್ಲಿ ಇಡಲಾಗಿತ್ತು. ಅಲ್ಲಿ ಮಲಮೂತ್ರ ವಿಸರ್ಜನೆಗೆಂದು ಒಂದು ಸಣ್ಣ ರಂಧ್ರ ಬಿಟ್ಟರೆ ಮತ್ತೇನೂ ಇರಲಿಲ್ಲ. ಇಲಿ, ಹೆಗ್ಗಣ, ಸೊಳ್ಳೆ, ಕ್ರಿಮಿಗಳೆಲ್ಲ ಆ ರಂಧ್ರದಿಂದ ಕೊಠಡಿಯೊಳಗೆ ಬರುತ್ತಿದ್ದವು. ಸ್ವಚ್ಛ ತೆಯ ಕೊರತೆಯಿಂದ ವಾಸನೆಯೂ ಸಾಕಷ್ಟು ಬರುತ್ತಿತ್ತು. ಸ್ನೇಹಲತಾ ಅವರಿಗೆ ಅಸ್ತಮಾ ಇದ್ದ ಕಾರಣ ಆ ಕೊಠಡಿಯಲ್ಲಿ ಉಸಿರಾಡುವುದೂ ಕಷ್ಟವಾಗುತ್ತಿತ್ತು.

ಸಾಲದು ಎಂಬಂತೆ ಪ್ರತಿನಿತ್ಯ ಅವರಿಗೆ ವಿಚಾರಣೆಯ ನೆಪದಲ್ಲಿ ಮೂರನೇ ದರ್ಜೆಯ ಪೊಲೀಸ್ ಟಾರ್ಚರ್ ನೀಡಲಾಗುತ್ತಿತ್ತು. ವಿಚಾರಣೆಗೆ ಬಂದ ತಕ್ಷಣ ಅವರ ಮೈ ಮೇಲಿನ ಬಟ್ಟೆ ಬಿಚ್ಚಿಸಲಾಗುತ್ತಿತ್ತು. ವಿರೋಽಸಿದರೆ, ಹೊಡೆತ, ಒದೆತ, ಲಾಟಿ ಏಟು ಬೀಳುತ್ತಿತ್ತು. ಎಲ್ಲರ ಎದುರೂ ಅವರನ್ನು ನಿರ್ವಸ ರನ್ನಾಗಿಯೇ ಗಂಟೆಗಟ್ಟಲೆ ನಿಲ್ಲಿಸಲಾಗುತ್ತಿತ್ತು.

ಪ್ರತಿನಿತ್ಯ ಹೊಸ ಹೊಸ ಶಿಕ್ಷೆ ಕೊಟ್ಟು ಬಾಯಿ ಬಿಡಿಸುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದರು. ಪೊಲೀಸರಿಗೆ ಸ್ನೇಹಲತಾ ಅವರಿಂದ ಜಾರ್ಜ್ ಫೆರ್ನಾಂಡಿಸ್ ಮಾಹಿತಿ ಬೇಕಿತ್ತು. ಆದರೆ ಸ್ನೇಹಲತಾಗೆ ಫೆರ್ನಾಂಡಿಸ್ ಎಲ್ಲಿದ್ದಾರೆ ಎಂಬ ಮಾಹಿತಿ ಇರದ ಕಾರಣ, ಅವರಿಂದ ಉತ್ತರ ಬರುತ್ತಿರಲಿಲ್ಲ.

ಪೊಲೀಸರ ಟಾರ್ಚರ್ ಸಹಿಸಲಾಗದೇ ಸ್ನೇಹಲತಾ ಬಾಯಿಂದ ಚೀತ್ಕಾರ ಹೊರಬರುತ್ತಿತ್ತು. ಇದು ಪಕ್ಕದ ಗಂಡಸರ ವಿಭಾಗದ ಸೆಲ್‌ನಲ್ಲಿರುವವರಿಗೂ ಕೇಳಿಸುತ್ತಿತ್ತು. ಆದರೆ ಅದು ಯಾರ ಕೂಗು ಎಂದು ಅವರಿಗೂ ಅರ್ಥವಾಗುತ್ತಿರಲಿಲ್ಲ. ಸ್ನೇಹಲತಾ ಇರುವ ಮಹಿಳೆಯರ ವಿಭಾಗದ ಜೈಲಿನಲ್ಲಿ 3-4 ಜನ ಮಹಿಳೆಯರು ಮಾತ್ರ ಇದ್ದರು. ಅವರನ್ನೆಲ್ಲ ದಿನದ ಶುಚಿ ತ್ವದ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿತು. ಪಕ್ಕದ ಗಂಡಸರ ಖಾನೆಯಲ್ಲಿರುವವರೊಂದಿಗೆ ಮಾತನಾಡುವುದಾಗಲಿ, ಇತರ ಸಂಪರ್ಕ ಸಾಽಸುವುದಾಗಲಿ ಅವರಿಗೆ ಸಾಧ್ಯವಾಗುತ್ತಿರ ಲಿಲ್ಲ.

ಅಂದ ಹಾಗೆ, ಪಕ್ಕದ ಗಂಡಸರ ಖಾನೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಆಡ್ವಾಣಿಯವರಂಥ ದಿಗ್ಗಜರಿದ್ದರು. ಅವರಿಗೂ ಈ ಹೆಣ್ಣಿನ ಚೀತ್ಕಾರ ಕೇಳಿಸುತ್ತಿತ್ತು. ಅವರೂ ಅಸಹಾಯಕರಾಗಿದ್ದರು. ಸ್ನೇಹಲತಾ ಅವರಿಗೆ ಅಸ್ತಮಾ ಇತ್ತು. ಸರಿಯಾಗಿ ಔಷಧಿ ದೊರಕದ ಕಾರಣ, ಜತೆಗೆ ಅವರು ಅನುಭವಿಸುತ್ತಿದ್ದ ಯಾತನೆಯಿಂದಾಗಿ ಅಸ್ತಮಾ ಉಲ್ಬಣಗೊಂಡಿತ್ತು.

ಅವರು ತೀರಾ ಅಸ್ವಸ್ಥರಾಗಿ ನಿತ್ರಾಣರಾಗಿದ್ದರು. ಆಗಬೇಕಾದz, ಯಾಕೆಂದರೆ ಈ ಪ್ರಕ್ರಿಯೆ ಸತತ ಎಂಟು ತಿಂಗಳವರೆಗೆ ನಡೆಯಿತು. ಈ ನಡುವೆ ಅಸ್ತಮಾ ಅತಿಯಾದಾಗ ಸ್ನೇಹಲತಾ ಆಗಾಗ ಎಚ್ಚರ ತಪ್ಪುತ್ತಿದ್ದದ್ದೂ ಉಂಟು. ಅತ್ತ ಮನೆಯವರಿಗೆಲ್ಲ ಜೈಲಿನಲ್ಲಿ ಏನು ನಡೆಯುತ್ತಿದೆ, ಸ್ನೇಹಲತಾ ಹೇಗಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಸಿಗುತ್ತಿರಲಿಲ್ಲ.

ಕೆಲವೊಮ್ಮೆ ಭೇಟಿಗಾಗಿ ಹೋದಾಗಲೂ ಜೈಲಿನ ಅಧಿಕಾರಿಗಳು ಇವತ್ತಲ್ಲ, ನಾಳೆ ಬನ್ನಿ ಎಂದು ಹಿಂದಿರುಗಿ ಕಳಿಸುತ್ತಿದ್ದರು. ಕೆಲವೊಮ್ಮೆ ಭೇಟಿಯಾದರೂ ಸ್ನೇಹಲತಾ ಮಾತ ನಾಡುವ ಮೊದಲೇ ಮನೆಯವರನ್ನು ವಾಪಸ್ ಕಳಿಸುತ್ತಿದ್ದರು.

ಒಂದು ದಿನ ಜೈಲಿನಿಂದ ಸ್ನೇಹಲತಾ ಮನೆಯವರಿಗೆ ಟೆಲಿಫೋನ್ ಕರೆ ಬಂದಿತ್ತು. ಸ್ನೇಹ ಲತಾ ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ನೀವು ಬಂದು ನೋಡಬಹುದು ಎಂಬ ಸಂದೇಶವನ್ನು ಜೈಲಿನ ಅಧಿಕಾರಿಗಳು ಕೊಟ್ಟಿದ್ದರು. ನೆಯವರು ಆಸ್ಪತ್ರೆಗೆ ಹೋಗಿ ನೋಡಿದಾಗ, ಅಸ್ತಿಪಂಜರಕ್ಕೆ ತೊಗಲನ್ನು ಸುತ್ತಿಕೊಂಡಂತೆ ಸ್ನೇಹಲತಾ ಮಂಚದ ಮೇಲೆ ಬಿದ್ದುಕೊಂಡಿದ್ದರು. ಅವರ ಮೈ-ಮುಖದ ತುಂಬ ಗಾಯ ಗಳಾಗಿದ್ದವು.

ಅಲ್ಲಿಗೇ ಮುಗಿಯಲಿಲ್ಲ. ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಆಗುತ್ತಿದ್ದಂತೆಯೇ ಬೆಂಗಳೂರು ಜೈಲಿಗೆ ಅವರನ್ನು ಪುನಃ ಸಾಗಿಸಲಾಯಿತು. ನಂತರದ ದಿನಗಳಲ್ಲಿ ಸ್ನೇಹಲತಾ ಅವರ ಆರೋಗ್ಯದಲ್ಲಿ ಸುಧಾರಣೆ ಆಗಲೇ ಇಲ್ಲ. ಅಸ್ತಮಾದಿಂದಾಗಿ ಅವರ ಶ್ವಾಸಕೋಶ ನಿತ್ರಾಣವಾಗಿತ್ತು. ದಿನದಿಂದ ದಿನಕ್ಕೆ ಅವರ ಹೃದಯವೂ ಸತ್ವ ಕಳೆದುಕೊಳ್ಳುತ್ತಿತ್ತು.

1977 ಜನವರಿ 15ರಂದು ಪೆರೋಲ್ ಮೇಲೆ ಅವರನ್ನು ಜೈಲಿನಿಂದ ಹೊರಗೆ ಕಳಿಸಿದರು. ಆದರೆ ಐದು ದಿನದಲ್ಲಿ, ಅಂದರೆ ಜನವರಿ 20ರಂದು ಸ್ನೇಹಲತಾ ಮರಣವನ್ನಪ್ಪಿದರು. ವಿಚಿತ್ರವೆಂದರೆ, ಆ ಎಂಟು ತಿಂಗಳಲ್ಲಿ ಸ್ನೇಹಲತಾ ಅವರನ್ನು ಜೈಲಿನಲ್ಲಿಟ್ಟು ವಿಚಾರಣೆ ನಡೆಸಿದ ಪೊಲೀಸರು ಅವರ ಮೇಲೆ ಚಾರ್ಜ್‌ಶೀಟನ್ನೇ ದಾಖಲಿಸಲಿಲ್ಲ.

ಪೊಲೀಸರಿಗೆ ಸ್ನೇಹಲತಾ ವಿರುದ್ಧ ಯಾವ ದಾಖಲೆಯೂ ಸಿಗಲಿಲ್ಲ. ಅದಕ್ಕಾಗಿ ಅವರ ಹೆಸರು ಚಾರ್ಜ್‌ಶೀಟ್‌ನಲ್ಲಿ ಬರಲೇ ಇಲ್ಲ. ಎಂಟು ತಿಂಗಳು ಹಿಂಸೆ ಕೊಟ್ಟಿದ್ದು ಮಾತ್ರ ಇತಿಹಾಸದ ಪುಟಗಳಲ್ಲಿ ದಾಖಲಾಗಿ ಉಳಿಯಿತು. ಸ್ನೇಹಲತಾ ಅವರ ಹೆಸರು ತುರ್ತು ಪರಿಸ್ಥಿತಿಯ ಕಾಲದಲ್ಲಿ ಹುತಾತ್ಮರಾದ ಮೊದಲ ಮಹಿಳೆ ಎಂದು ದಾಖಲಾಯಿತು.

ಜೈಲಿನಲ್ಲಿ ಇರುವಾಗ ಅವರು ಪ್ರತಿನಿತ್ಯ ಡೈರಿ ಬರೆಯುತ್ತಿದ್ದರು. ಅವರ ಜೈಲಿನ ಅನುಭವ ಗಳ A Prison Diary ಕೃತಿಯನ್ನು ಕರ್ನಾಟಕ ಮಾನವ ಹಕ್ಕುಗಳ ಆಯೋಗ ಪ್ರಕಟಿ ಸಿದೆ. ವರ್ಷಗಳ ಹಿಂದೆ ಅಂದಿನ ಮಂತ್ರಿ ಸ್ಮೃತಿ ಇರಾನಿ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿ ದಂದಿನಿಂದ ಈ ಕುರಿತು ಮಾಹಿತಿ ಸಂಗ್ರಹಿಸಿz. ಇತ್ತೀಚೆಗೆ ಕಂಗನಾ ರಣಾವತ್ ಅವರ ‘ಎಮರ್ಜೆನ್ಸಿ’ ಚಿತ್ರ ನೋಡುವಾಗ ಸ್ನೇಹಲತಾ ರೆಡ್ಡಿ, ಜಾರ್ಜ್ ಫೆರ್ನಾಂಡಿಸ್ ಎಲ್ಲ ನೆನಪಾ ದರು. ಇರಲಿ, ಇಂದಿರಾ ಗಾಂಧಿಯವರಂಥ, ಸ್ನೇಹಲತಾ ರೆಡ್ಡಿಯವರಂಥ, ಇವರಿಬ್ಬರ ವರ್ಗಕ್ಕೂ ಸೇರದ ಸ್ತ್ರೀಯರಿಗೆ ಮಹಿಳಾದಿನದ ಶುಭಾಶಯಗಳು.