ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ವಾಹ್‌ ವಾಹ್‌ ಜೀ ರಾಮ್‌ ಜೀ...ಸಬ್ʼಕೋ ಸನ್ಮತಿ ದೇದೋಜಿ

ಭಾರತೀಯನಿಗೆ ಆಜನ್ಮಪರ್ಯಂತ ಜತೆಗಿರುತ್ತಿದ್ದ ಮಂತ್ರವದು. ನಮಗೆ ಗೊತ್ತಿರುವುದು ಕೇವಲ ‘ರಘುಪತಿ ರಾಘವ ರಾಜಾರಾಂ’ ಅಷ್ಟೇ, ಅದನ್ನೆ ಪುನರಾವರ್ತಿಸುವುದು ನಮಗೆ ರೂಢಿ. ಆದರೆ ಆ ಹಾಡಿನ ಮೂಲವನ್ನು ನೋಡುವಾಗ, ಎಲ್ಲ ಹಾಡಿನಂತೆ ಈ ಹಾಡಿಗೂ ಪಲ್ಲವಿ ಸಲ್ಲುಗಳಿವೆಯೆನ್ನು ವುದು ತಿಳಿದು ಬರುತ್ತದೆ.

ವಿದ್ಯಮಾನ

‘ರಘುಪತಿ ರಾಘವ ರಾಜಾರಾಂ’ ಹಾಡಿನ ಮೂಲವನ್ನು ನೋಡಿದಾಗ, ಎಲ್ಲ ಹಾಡಿನಂತೆ ಇದಕ್ಕೂ ಪಲ್ಲವಿ ಸಲ್ಲುಗಳಿವೆಯೆನ್ನುವುದು ತಿಳಿದು ಬರುತ್ತದೆ. ಈ ಹಾಡಿನ ಮೂಲಪಾಠ ಹೀಗಿದೆ. ‘ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ, ಸುಂದರ ವಿಗ್ರಹ ಮೇಘಶಾಮ ಗಂಗಾ ತುಳಸೀ ಸಾಲಿಗ್ರಾಮ. ಭದ್ರಗಿರೀಶ್ವರ ಸೀತಾರಾಮ, ಭಕುತಜನ ಪ್ರಿಯ ಸೀತಾರಾಮ, ಜಾನಕಿರಮಣ ಸೀತಾರಾಮ ಜಯಜಯ ರಾಘವ ಸೀತಾರಾಮ’.

ಕಳೆದ ವಾರ, ರಾಷ್ಟ್ರಭಕ್ತ ಬಂಕಿಮಚಂದ್ರರ ಆನಂದಮಠದ ಶಿಶು, ‘ವಂದೇಮಾತರಂ’ ಹಾಡಿಗೆ ಒಂದು ಸಮುದಾಯದವರಿಗೆ ಬೇಸರವಾಗಬಹುದು ಎನ್ನುವ ಕಾರಣಕ್ಕೆ ಕತ್ತರಿ ಹಾಕಿದ ಬಗ್ಗೆ ವಿವರಿ ಸಿದ್ದೆ. ಈ ವಾರ, ಭಾರತದ ಮರ್ಯಾದೆಯಾದ ಶ್ರೀರಾಮನ ಜನಪ್ರಿಯ ಹಾಡೊಂದನ್ನು ಅದೇ ಮುಸ್ಲಿಂ ತುಷ್ಟೀಕರಣಕ್ಕಾಗಿ ತಿರುಚಿದ ಪ್ರಸಂಗವನ್ನು ತಿಳಿಸುತ್ತೇನೆ.

ಉತ್ತರ-ದಕ್ಷಿಣ ಎನ್ನದೇ ನಮ್ಮ ದೇಶದ ಎಲ್ಲ ಹಿಂದೂಗಳ ಮನೆಗಳಲ್ಲಿ ಸದಾ ಗುನುಗುತ್ತಿದ್ದ ಹಾಡು ‘ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಂ’. ಹುಟ್ಟಿದ ಹಸುಳೆಗಳಿಂದ ಹಿಡಿದು ಇಂದೋ ನಾಳೆಯೋ ಎನ್ನುವ ಮುದುಕರವರೆಗೆ ಎಲ್ಲರಿಗೂ ಪ್ರಿಯವಾಗುವ ಹಾಡಾಗಿತ್ತು ಅದು.

ಮನೆಯಲ್ಲಿ ಅಜ್ಜನೋ ಅಜ್ಜಿಯೋ ತಮ್ಮ ತೊಡೆಯಲ್ಲಿ ಮೊಮ್ಮಕ್ಕಳನ್ನು ಕುಳ್ಳಿರಿಸಿಕೊಂಡು, ಅವರ ಕೈಜಗ್ಗಿ ಚಪ್ಪಾಳೆ ಹೊಡೆಸುತ್ತಾ ಕಲಿಸುತ್ತಿದ್ದ ಮೊದಲ ಹಾಡಿದು. ಮುಂದೆ, ‘ರಘುಪತಿ ರಾಘವ ಮಾಡು ಪುಟ್ಟಾ’ ಅಂದ್ರೆ ಆ ಹಸುಳೆಗಳು ಚಪ್ಪಾಳೆಯನ್ನೇ ತಟ್ಟುವಷ್ಟು ರೂಢಿಯಾಗಿ ಬಿಡುತ್ತಿತ್ತು.

ಮನೆಗೆ ಬಂದ ನೆಂಟರಿಷ್ಟರಿಗೆ ಹೇಳುವುದು “ನೋಡಿ ನನ್ನ ಮೊಮ್ಮಗ ಸೀತಾರಾಂ ಜಯ ಜಯರಾಂ ಮಾಡೋದ್ ಕಲ್ತುಬಿಟ್ಟಿದ್ದಾನೆ"... “ಹೌದಾ? ಇಷ್ಟು ಬೇಗನೇ?" ಎಂದು ನೆಂಟರಿಷ್ಟರೂ ಅಚ್ಚರಿ ತೋರುವುದು. ಇನ್ನು, ಬಹಳ ಹೊತ್ತು ದೇವರ ಮುಂದೆ ಕುಳಿತು ಭಜನೆ ಮಾಡಲಾಗದ ಮುದುಕ ರಿಗೂ, ಕುಳಿತ ಒಂದುಬಾರಿ ರಘುಪತಿ ರಾಘವ ರಾಜಾರಾಂ ಅಷ್ಟನ್ನಾದ್ರೂ ಹೇಳಿಬಿಡೋಣ ಎನ್ನುವು‌ ದಿತ್ತು.

ಇದನ್ನೂ ಓದಿ: Vinayak V Bhat Column: ಬಹುಬಲಧಾರಿಣೀಂ ರಿಪುದಲವಾರಿಣೀಂ ಮಾತರಂ

ಭಜನೆ ಬಹಳ ಜನರಿಗೆ ಆಗಿಬರುವುದಿಲ್ಲ, ಬೇರೆ ಬೇರೆ ಭಜನೆಗಳು ಕಂಠಸ್ಥವಿರಬೇಕು, ಹೇಳಲು ಸೂಕ್ತ ಶಾರೀರ ಬೇಕು, ತಾಳಗಳ ಕನಿಷ್ಠ ಜ್ಞಾನ ಬೇಕು, ತಾಳ ಹಿಡಿದು ಬಡಿಯಲು ಬರಬೇಕು ಹೀಗೆಲ್ಲ ಇದೆ. ಆದರೆ ರಘುಪತಿ ರಾಘವ ರಾಜಾರಾಂ ಹೇಳಲು ಇವ್ಯಾವವೂ ಬೇಕಾಗಿರಲಿಲ್ಲ, ಅಥವಾ ಮೇಲೆ ಹೇಳಿದ ಎಲ್ಲವನ್ನೂ ಈ ರಘುಪತಿ ರಾಘವ ರಾಜಾರಾಂ ಹೇಳುವುದರಿಂದ ಕಲಿಯಬಹುದಾಗಿತ್ತು.

ಅಂತೂ, ಈ ‘ರಘುಪತಿ ರಾಘವ ರಾಜಾರಾಂ ಪತಿತಪಾವನ ಸೀತಾರಾಂ’ ದೇಶದ ಭಜನಾ ಸಂಸ್ಕೃತಿ ಯ ಆಧಾರ ಶಿಲೆಯಾಗಿತ್ತು ಎನ್ನಬಹುದು. ಹೇಳಲು ಬಹಳಷ್ಟು ಭಜನೆಗಳಿವೆ, ಶ್ರೀರಾಮನ ಭಜನೆ ಗಳೂ ನೂರಾರಿವೆ. ಆದರೆ ಯಾವುದೂ ಈ ಭಜನೆಗೆ ಹತ್ತಿರದ ಸ್ಪರ್ಧೆಯನ್ನೂ ನೀಡಲಿಲ್ಲ, ಭಜನೆ ಯೆಂದರೆ ‘ರಘುಪತಿ ರಾಘವ ರಾಜಾರಾಂ ಪತಿತಪಾವನ ಸೀತಾರಾಂ’.

ನೂರಾರು ಭಜನೆಗಳನ್ನು ಹೇಳಿದ ಮೇಲೆಯೂ ಕೊನೆಯಲ್ಲಿ ಈ ಭಜನೆ ಹೇಳಲೇಬೇಕು. ಈ ಭಜನೆ ಗೊಂದು ಸರಳ ಧಾಟಿಯೂ ಇತ್ತು, ದೇಶಾದ್ಯಂತ ಈ ಒಂದೇ ಧಾಟಿಯನ್ನು ಎಲ್ಲರೂ ಬಳಸು ತ್ತಿದ್ದರು ಎನ್ನುವುದು ಇನ್ನೂ ವಿಶೇಷ. ಒಂಥರಾ ‘ಯೂನಿವರ್ಸಲ್’ ಧಾಟಿಯಾಗಿತ್ತು ಅದು. ಆ ಹಾಡಿಗೆ ಒಂದು ಲಯವೂ ಇತ್ತು.

ಅದನ್ನೇ ‘ರಾಮ ಧುನ್’ ಎಂತಲೂ ಕರೆಯುತ್ತಾರೆ (ಈ ಹಾಡಿಗೆ ಖ್ಯಾತ ಹಿಂದುಸ್ತಾನಿ ಸಂಗೀತಜ್ಞ ವಿಷ್ಣು ದಿಗಂಬರ ಪಲುಸ್ಕರ್ ಅವರು ಸಂಗೀತ ಸಂಯೋಜಿಸಿದ್ದರಂತೆ). ನೋಡಲು ಒಂದು ಸಾಲಿನ ಹಾಡಾಗಿ ಕಂಡರೂ, ‘ರಘುಪತಿ ರಾಘವ ರಾಜಾರಾಂ’ ಎನ್ನುವುದು, ಭಾಷೆ, ಭೌಗೋಳಿಕ ಪ್ರದೇಶ, ಜಾತಿ ಹಾಗೂ ಜನಾಂಗಗಳನ್ನು ಮೀರಿ ದೇಶವನ್ನು ಒಗ್ಗೂಡಿಸಿದ್ದ ಮಂತ್ರವಾಗಿತ್ತು.

Screenshot_10 R

ಭಾರತೀಯನಿಗೆ ಆಜನ್ಮಪರ್ಯಂತ ಜತೆಗಿರುತ್ತಿದ್ದ ಮಂತ್ರವದು. ನಮಗೆ ಗೊತ್ತಿರುವುದು ಕೇವಲ ‘ರಘುಪತಿ ರಾಘವ ರಾಜಾರಾಂ’ ಅಷ್ಟೇ, ಅದನ್ನೆ ಪುನರಾವರ್ತಿಸುವುದು ನಮಗೆ ರೂಢಿ. ಆದರೆ ಆ ಹಾಡಿನ ಮೂಲವನ್ನು ನೋಡುವಾಗ, ಎಲ್ಲ ಹಾಡಿನಂತೆ ಈ ಹಾಡಿಗೂ ಪಲ್ಲವಿ ಸಲ್ಲುಗಳಿವೆ ಯೆನ್ನುವುದು ತಿಳಿದು ಬರುತ್ತದೆ.

ಈ ಹಾಡಿನ ಮೂಲಪಾಠ ಹೀಗಿದೆ. ‘ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ, ಸುಂದರ ವಿಗ್ರಹ ಮೇಘಶಾಮ ಗಂಗಾ ತುಳಸೀ ಸಾಲಿಗ್ರಾಮ. ಭದ್ರಗಿರೀಶ್ವರ ಸೀತಾರಾಮ, ಭಕುತಜನ ಪ್ರಿಯ ಸೀತಾರಾಮ, ಜಾನಕಿರಮಣ ಸೀತಾರಾಮ ಜಯಜಯ ರಾಘವ ಸೀತಾರಾಮ’.

ಈ ಹಾಡಿನ ನಿಖರವಾದ ಮೂಲವು ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ತುಳಸೀದಾಸರು ಬರೆದಿzರೆ ಅಥವಾ 17ನೇ ಶತಮಾನದ ಮರಾಠಿ ಸಂತ ಸಮರ್ಥ ರಾಮದಾಸ್ ಅವರ ಪ್ರಾರ್ಥನೆಯನ್ನು ಆಧರಿಸಿದೆ ಎನ್ನುವವರೂ ಇದ್ದಾರೆ. ಇದನ್ನು ಲಕ್ಷ್ಮಣಾಚಾರ್ಯರು ಎಂದು ಹೇಳಲಾದ ಸಂತರ ನಾಮ ರಾಮಾಯಣದಿಂದ (ಶ್ರೀ ನಾಮರಾಮಾಯಣಂ) ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗು ತ್ತದೆ.

ನಾಮ ರಾಮಾಯಣವು ಸಂಸ್ಕೃತದ ಭಕ್ತಿ ಶ್ಲೋಕಗಳ ಒಂದು ಸಂಪುಟವಾಗಿದ್ದು, ರಾಮನ ಅನೇಕ ಹೆಸರುಗಳನ್ನು ಪಠಿಸುವ ಮೂಲಕ ಸಂಪೂರ್ಣ ರಾಮಾಯಣವನ್ನು ಈ ಸ್ತುತಿ ನಿರೂಪಿಸುತ್ತದೆ. 108 ಶ್ಲೋಕಗಳನ್ನು ಹೊಂದಿದ ಈ ಸ್ತುತಿಮಾಲಿಕೆ ‘ಶುದ್ಧ ಬ್ರಹ್ಮ ಪರಾತ್ಪರ ರಾಮ’ದಿಂದ ಪ್ರಾರಂಭ ವಾಗುತ್ತದೆ ಮತ್ತು ಅದರ ಪ್ರತಿಯೊಂದು ಸಾಲುಗಳು ‘ರಾಮ’ ಶಬ್ದದಿಂದ ಕೊನೆಗೊಳ್ಳುತ್ತವೆ. ಈ ಸ್ತುತಿಯ ಕೆಲವು ಆವೃತ್ತಿಗಳಲ್ಲಿ ರಘುಪತಿ ರಾಘವ ರಾಜಾರಾಮ ಎಂಬ ಶ್ಲೋಕವನ್ನು ನಾವು ನೋಡಬಹುದಾಗಿದೆ.

ಮಹಾತ್ಮ ಗಾಂಧಿಯವರಿಗೆ ಯಾವ ದೇವರ ಪ್ರೇರಣೆಯಾಯಿತೋ ಏನೋ, ಹಾಡನ್ನು ತಿರುಚಿಯೇ ಬಿಟ್ಟರು! ಅವರು ತಿರುಚಿದ ಹಾಡು ಹೀಗಿದೆ. ‘ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾ ರಾಮ, ಸೀತಾರಾಮ ಸೀತಾರಾಮ ಭಜ ಪ್ಯಾರೇ ತೂ ಸೀತಾರಾಮ. ಈಶ್ವರ ಅಃ ತೇರೋ ನಾಮ್ ಸಬಕೋ ಸನ್ಮತಿ ದೇ ಭಗವಾನ್’.

ಮೂಲತಃ ಶ್ರೀರಾಮ ಭಕ್ತರೇ ಆಗಿದ್ದರು ಎಂದು ಹೇಳಲಾಗುವ ಮಹಾತ್ಮ ಗಾಂಧಿಯವರಿಗೆ, ಈ ಸುಂದರ ರಾಮ ಭಜನೆಯನ್ನು ವಿಕೃತಗೊಳಿಸುವ ಹಕ್ಕನ್ನು ಯಾರು ಕೊಟ್ಟಿದ್ದರೋ ತಿಳಿಯದು. ಅವರು ಕೊನೆಯುಸಿರೆಳೆಯುವಾಗ ‘ಹೇ ರಾಮ’ ಎಂದಿದ್ದರಂತೆ; ಅದಕ್ಕಾಗಿಯೇ ಅವರ ಸಮಾಧಿಯ ಮೇಲೆ ‘ಹೇ ರಾಮ’ ಅಂತಲೇ ಬರೆಯಲಾಗಿದೆ. ಹಾಗಾಗಿ ಅವರನ್ನು ಶ್ರೇಷ್ಠ ರಾಮಭಕ್ತರು ಎನ್ನಲಡ್ಡಿ ಯಿಲ್ಲವಲ್ಲ.

ಮಹಾತ್ಮ ಗಾಂಧಿಯವರು ಏನು ಹೇಳಿದರೂ ಅದನ್ನು ಕೇಳುವ ಅಥವಾ ಅದನ್ನು ಅನುಸರಿಸುವ ಕಾಲವಾಗಿತ್ತು ಅದು. ಹಾಗಾಗಿ ಎಲ್ಲರ ಬಾಯಲ್ಲೂ ಈ ತಿರುಚಿದ ಹಾಡು ನಲಿಯಲಾರಂಭ ವಾಯಿತು. ಮೂಲ ಸಾಹಿತ್ಯ ಮರೆತು, ಗಾಂಧಿಯವರಿಂದ ತಿರುಚಲ್ಪಟ್ಟ ಹೊಸ ಹಾಡು ದೇಶಾ ದ್ಯಂತ ಜನಪ್ರಿಯವಾಯಿತು.

ನಮಗೆಲ್ಲ ಸಣ್ಣವರಿದ್ದಾಗ ಶಾಲೆಯಲ್ಲಿ ಕಲಿಸಿದ್ದು ಮೋಹನದಾಸ ಕರಮಚಂದ ಗಾಂಧಿ ವಿರಚಿತ ಇದೇ ‘ಅಹು ಮಿಶ್ರಿತ’ ಹಾಡೇ ಆಗಿದೆ. ಬಾರಿ ಬಾರಿ ಅದನ್ನೇ ಹೇಳಿ ಹೇಳಿ ಕಡೆಗೆ ಇದೇ ನಿಜವಾದ ಹಾಡು ಎನ್ನುವಂತಾಗಿಹೋಯ್ತು. ಭಾರತೀಯ ಜನಮಾನಸದಿಂದ ಮೂಲ ಹಾಡು ಕಳೆದು ಹೋಯಿತು.

ಹಾಡಿನ ಮೂಲ ರಚಯಿತರಿಗೂ, ಹಾಡಿಗೂ ಹಾಗೂ ರಾಮಭಕ್ತರಿಗೂ ಮಹದನ್ಯಾಯವಾಯ್ತು. ಆದರೆ ಇವೆ ನಮಗೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗಿಂತ ಹೆಚ್ಚೇನಲ್ಲವಲ್ಲ. ನಮ್ಮನ್ನು ‘ಕಾಫಿ ರರು’ ಎಂದು ಗುರುತಿಸುವ ಮುಸಲ್ಮಾನರ ಮೇಲೆ ಗಾಂಧಿಯವರಿಗೆ ಅದ್ಯಾಕೆ ಅಷ್ಟು ಪ್ರೀತಿ ಯಿತ್ತೋ ತಿಳಿಯದು. ಏಕೆಂದರೆ ಅವರು ತಿರುಚಿದ ಹಾಡಿನಲ್ಲಿ ಏಸು ಕ್ರಿಸ್ತನಿಗೆ, ಜೈನ ಧರ್ಮ ಸ್ಥಾಪಕ ಮಹಾ ವೀರನಿಗೆ, ಬುದ್ಧನಿಗೆ ಯಾರಿಗೂ ಜಾಗ ಸಿಗಲಿಲ್ಲ; ಆದರೆ ಅಹುವಿಗೆ ಮಾತ್ರ ದಕ್ಕಿತು.

ಇದನ್ನು ಅತಿಯಾದ ಪ್ರೀತಿಯೆನ್ನದೇ ಮತ್ತೇನೆನ್ನಲು ಸಾಧ್ಯ ಹೇಳಿ? ಹಾಗಾದರೆ, ಗಾಂಧಿಯವರ ಈ ಎಲ್ಲ ಮುಸ್ಲಿಂ ತುಷ್ಟೀಕರಣದ ಕಾರ್ಯಕ್ರಮಗಳಿಂದ ಸಾಧಿಸಿದ್ದಾದರೂ ಏನು? ಎಂದು ಕೇಳಿದರೆ, ‘ಶೂನ್ಯ’ ಎನ್ನುವುದೇ ಉತ್ತರವಾಗುತ್ತದೆ. ಭಾರತ ಭಾಗವಾಗುವುದನ್ನು ತಪ್ಪಿಸಲಾಯಿತಾ? ಇಲ್ಲ. ಭಾರತದ ಉಳಿದ ಮುಸ್ಲಿಮರು ದೇಶದ ಮೂಲ ಸಂಸ್ಕೃತಿಯನ್ನು ಗೌರವಿಸುತ್ತ, ಶಾಂತಿಯಿಂದ ಬಹುಸಂಖ್ಯಾತರ ಜತೆ ಬದುಕುತ್ತಿದ್ದಾರಾ? ಅದೂ ಇಲ್ಲ.

ಈ ಎಲ್ಲ ಅತಿ ತುಷ್ಟೀಕರಣದ ಕಾರ್ಯಗಳಿಂದ ಭಾರತ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂದರೆ ಅತಿಶಯೋಕ್ತಿಯಾಗಲಾರದು. ಗಾಂಧಿಯವರ ಈ ಹೊಸ ಹಾಡನ್ನು ಹಿಂದುಗಳೇನೋ ಬಾಯಿಪಾಠ ಮಾಡಿ ಹಾಡಲು ಶುರು ಮಾಡಿದರು; ಆದರೆ ಮುಸ್ಲಿಮರಿಗೆ ಇದು ಅಪಥ್ಯವಾಯಿತು. ಈ ಹಾಡಿನಲ್ಲಿ ತಮ್ಮ ಅಹುವನ್ನು ಹಿಂದೂ ದೇವತೆ ಈಶ್ವರನ ಸಮಾನವಾಗಿ ಕರೆದಿರುವುದು ಅವರಿಗೆ ಹಿಡಿಸಲೇ ಇಲ್ಲ.

ಹಾಗಾಗಿ ಅವರು ಈ ಹಾಡನ್ನು ಸಾರಾಸಗಟಾಗಿ ತಿರಸ್ಕಾರ ಮಾಡಿದರು. ಪಾಪದ ಹಿಂದೂಗಳು ಮಾತ್ರ, ಇದು ಗಾಂಧೀಜಿ ನಮಗೆ ದಯಪಾಲಿಸಿದ ಹೊಸ ಮಂತ್ರವೆನ್ನುವಂತೆ ಶಾಲಾ-ಕಾಲೇಜು ಗಳಲ್ಲಿ, ಸಭೆ-ಸಮಾರಂಭಗಳಲ್ಲಿ ಹಾಗೂ ಚಳವಳಿಗಳ ಸಮಯದಲ್ಲಿ ಹಾಡುತ್ತಾ ತಮ್ಮ ಜಾತ್ಯ ತೀತತೆಯನ್ನು ಮೆರೆದರು. ಸಂಪ್ರದಾಯಸ್ಥ ಹಿಂದೂ ಮನೆತನದ ಹಿರಿಯರು, ಹಾಡಿದರೆ ಗಾಂಧಿ ಯವರ ಹಾಡನ್ನೇ ಹಾಡಬೇಕಾಗುತ್ತದೆ ಎನ್ನುವ ಕಾರಣದಿಂದಲೋ ಏನೊ, ತಮ್ಮ ಭಜನೆಯ ಪಟ್ಟಿಯಿಂದಲೇ ಈ ‘ರಘುಪತಿ ರಾಘವ ರಾಜಾರಾಂ’ ಹಾಡನ್ನು ಕೈಬಿಡುವಂತಾಯ್ತು.

ದೊಡ್ಡವರೆನಿಸಿಕೊಳ್ಳುವವರಿಂದ ಕಲಿಯಬೇಕಾದ್ದು ಎಷ್ಟಿರುತ್ತದೆಯೋ, ಕಲಿಯಬಾರದ್ದೂ ಇರುತ್ತದೆ ಎನ್ನುವುನ್ನು ನಾವು ತಿಳಿಯಬೇಕು. ಸತ್ಯ, ಅಹಿಂಸೆ, ದೇಹದಂಡನೆ, ಸತ್ಯಾಗ್ರಹ ಮುಂತಾ ದವುಗಳನ್ನು ನಾವು ಗಾಂಧಿಯವರಿಂದ ಕಲಿಯಬಹುದಾದರೆ, ಇಂಥ ಉಪದ್ಯಾಪಿತನ ವನ್ನು ಕಲಿಯಬಾರದು ಎನ್ನುವುದನ್ನೂ ತಿಳಿದುಕೊಳ್ಳಬೇಕು.

ಆಂಥೋನಿ ಪರೇಲ್ ಅವರು ತಮ್ಮ ’Gandhi’s Philosophy and the Quest for Harmony ’ ಕೃತಿ ಯಲ್ಲಿ ಹೀಗೆ ಬರೆಯುತ್ತಾರೆ: ರಾಮಧುನ್ ಅನ್ನು ಮಹಾನ್ ಹಿಂದೂ ಸಂತ, ಶ್ರೇಷ್ಠ ರಾಮಭಕ್ತ, ಗೋಸ್ವಾಮಿ ತುಳಸೀದಾಸ್ ಅವರು ರಚಿಸಿದ್ದರು. ಹಾಡನ್ನು ಹೆಚ್ಚು ಜಾತ್ಯತೀತ ವಾಗಿ ಕಾಣುವಂತೆ ಮಾಡಲು, ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಸಾಮರಸ್ಯದ ಸಂದೇಶ ವನ್ನು ಹರಡಲು ಗಾಂಽಯವರು ಮೂಲ ಭಜನೆಯನ್ನು ಮಾರ್ಪಡಿಸಿದರು.

ಹಿಂದೂಗಳ ಈಶ್ವರ ಮತ್ತು ಮುಸ್ಲಿಮರ ಅಹ್ ಒಂದೇ ಎಂದು ಸೇರಿಸಿದರು. ಭಾರತೀಯ ಸಮಾಜದ ಜಾತ್ಯತೀತ ಮತ್ತು ಸಂಯೋಜಿತ ದೃಷ್ಟಿಕೋನವನ್ನು ಬಿಂಬಿಸಲು ಈ ಹಾಡನ್ನು ವ್ಯಾಪಕವಾಗಿ ಬಳಸಲಾಯಿತು. ಇದನ್ನು 1930ರ ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಹಾಡಲಾಯಿತು. ಗಾಂಧಿ ಯವರ ಆಶ್ರಮದಲ್ಲೂ ಹಾಡಲಾಗುತ್ತಿತ್ತು.

ಹಿಂದೂ-ಮುಸ್ಲಿಂ ಏಕತೆಯನ್ನು ಉತ್ತಮವಾಗಿ ಪ್ರತಿಬಿಂಬಿಸಲು ‘ಸೀತಾರಾಮ ಸೀತಾರಾಮ ಭಜ ಪ್ಯಾರೇ ತೂ ಸೀತಾರಾಮ’ ಎನ್ನುವ ಪಲ್ಲವಿಯ ಬದಲಿಗೆ ‘ಭಜ್ ಮನ್ ಪ್ಯಾರೆ ರಾಮ ರಹೀಮ, ಭಜ್ ಮನ್ ಪ್ಯಾರೆ ಕೃಷ್ಣ ಕರೀಮ’ ಎಂದು ಬದಲಾಯಿಸಿದ್ದರು. ಗಾಂಧಿಯವರಿಗೆ, ರಘುಪತಿ ರಾಘವ ರಾಜಾರಾಂ ಹಾಡಷ್ಟೇ ಅಲ್ಲದೆ, ಗುಜರಾತಿ ಕವಿ ಮತ್ತು ಸಂತ ನರಸಿಂಹ ಮೆಹತಾ ರಚಿಸಿದ ಪ್ರಸಿದ್ಧ ‘ವೈಷ್ಣವ ಜನತೋ ತೇನೇ ಕಹಿಯೆರೆ, ಜೋ ಪೀಡ ಪರಾಯೀ ಜಾಣೇರೆ’ ಹಾಗೂ ವಂಶೀಧರ ಶುಕ್ಲ ವಿರಚಿತ ‘ಉಠ ಜಾಗಾ ಮುಸಾಫಿರ್ ಅಬ್ ರೈನ್ ಕಹಾ ಜೋ ಸೋವತ ಹೆ, ಜೋ ಸೋವತ ಹೇ ವೋ ಖೋವತ ಹೇ, ಜೋ ಜಾಗತ ಹೇ ಸೋಹಿ ಪಾವತ ಹೇ’ ಮುಂತಾದವು ಬಹಳ ಇಷ್ಟದ ಹಾಡುಗಳಾಗಿ ದ್ದವು.

ಅವುಗಳನ್ನು ತಿರುಚುವ ಗೋಜಿಗೆ ಹೋಗದೆ ಹಾಗೇ ಬಿಟ್ಟಿರುವುದಕ್ಕೆ ನಾವು ಸಂತೋಷ ಪಡಬೇಕಷ್ಟೇ. ಶ್ರೀಲ ಪ್ರಭುಪಾದರನ್ನು ಸೇರಿ ಆ ಕಾಲದ ಅನೇಕ ಹಿಂದೂ ಸಂತರುಗಳು ಮತ್ತು ಮುಸ್ಲಿಮರು ಸಹ, ಗಾಂಧೀಜಿ ಮಾಡಿದ ಈ ಬದಲಾವಣೆಗಳನ್ನು ಒಪ್ಪದೇ ಟೀಕಿಸಿದ್ದಾರೆ.

ಏಕೆಂದರೆ ಅವರು ಅಹುವನ್ನು ರಾಮನಿಗೆ ಸರಿಸಮನಾಗಿ ಇರಿಸಿದರು ಎನ್ನುವುದು ಮುಸ್ಲಿಮರ ವಾದವಾದರೆ, ಹಿಂದೂ ಭಜನೆಯಲ್ಲಿ ಇಸ್ಲಾಮಿಕ್ ಅಂಶಗಳ ಸೇರ್ಪಡೆಯಿಂದಾಗಿ ಮೂಲ ಸಾಹಿತ್ಯ ದ ವಿರೂಪಗೊಳಿಸುವಿಕೆಯಾಗಿದೆ ಎನ್ನುವುದು ಹಿಂದೂಗಳ ಆಕ್ಷೇಪವಾಗಿತ್ತು.

ರಘುಪತಿ ರಾಘವ್ ರಾಜಾರಾಮ್ ಹಾಡುವ ಸಮಯದಲ್ಲಿ ‘ಈಶ್ವರ್ ಅಹ್ ತೇರೋ ನಾಮ’ ಎಂಬ ಸಾಲನ್ನು ಸಾರ್ವಜನಿಕ ಸಭೆಗಳಲ್ಲಿ ಹಾಡಿದಾಗ, ಪ್ರೇಕ್ಷಕರ ವರ್ಗದಲ್ಲಿ ಅಸಮಾಧಾನ ಭುಗಿಲೆದ್ದಿ ರುವ ಉದಾಹರಣೆಗಳೂ ಇವೆ. ಆಗೆಲ್ಲ, ಇದು ಹಿಂದೂಗಳ ’ಅಸಹಿಷ್ಣುತೆಯ ಉತ್ತುಂಗ’ ಎಂದು ಕರೆದವರೂ ಇದ್ದಾರೆ.

‘ಮನ್ರೇಗಾ’ ಯೋಜನೆಯ ಬದಲಿಗೆ ‘ಜೀ ರಾಮ್ ಜೀ’ ಎನ್ನುವ ಹೆಸರಿನಿಂದ ಹೊಸ ಯೋಜನೆ ಯನ್ನು ಮೊನ್ನೆ ಲೋಕಸಭೆಯಲ್ಲಿ ಮಂಡಿಸಿದಾಗಲೂ, ವಿರೋಧ ಪಕ್ಷದವರು ಆಕಾಶ ಭೂಮಿ ಒಂದು ಮಾಡುವಂತೆ ಅರಚಾಟ ಮಾಡಿದರು. ವಿರೋಧ ಪಕ್ಷದವರಿಗೆ ಗಾಂಧಿ ಬೇಕು; ಆದರೆ ಅವರು ಬಹಳ ಪ್ರೀತಿಸುತ್ತಿದ್ದ ‘ರಾಮ’ ಮಾತ್ರ ಬೇಡ. ಎಂಥಾ ವೈರುಧ್ಯ ನೋಡಿ!

‘ಬಿಜೆಪಿಯವರು, ಅದರಲ್ಲೂ ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು, ಕಂಡ ಕಂಡ ಊರುಗಳ ಹೆಸರನ್ನು ಬದಲಾಯಿಸುತ್ತಾರೆ, ಮಾಡಲು ಅವರಿಗೆ ಕೆಲಸವಿಲ್ಲ’ ಎಂದು ಆಡಿಕೊಳ್ಳುವವರಿದ್ದಾರೆ.

ಪ್ರಯಾಗರಾಜ್ ‘ಅಹ್ ಬಾದ್’ ಆಗಿತ್ತು, ಅಯೋಧ್ಯಾ ‘ಫೈಜಾಬಾದ್’ ಆಗಿತ್ತು, ನರ್ಮದಾಪುರಂ ‘ಹೌಷಂಗಾಬಾದ್’ ಆಗಿತ್ತು, ಶ್ರೀಭೂಮಿ ಎನ್ನುವ ಪ್ರದೇಶ ‘ಕರೀಮ್ ಗಂಜ್’ ಆಗಿತ್ತು. ಹಾಗೆ ನಮ್ಮ ಊರುಗಳ ಹೆಸರನ್ನು ದಾಳಿಕೋರರು ಬದಲಿಸಿದಾಗ ನಮ್ಮ ತಕರಾರಿರಲಿಲ್ಲ. ಮೂಲ ಹೆಸರು ಗಳನ್ನು ಮತ್ತೆ ಬಳಕೆಗೆ ತಂದರೆ ಅದು ಅಸಹಿಷ್ಣುತೆಯಾಗಿಬಿಡುತ್ತದೆ. ವಂದೇ ಮಾತರಂ ಹಾಡಿಗೆ ಕತ್ತರಿ ಹಾಕಿದವರ ಬಗ್ಗೆ, ರಘುಪತಿ ರಾಘವ ರಾಜಾರಾಮ್ ಹಾಡನ್ನೇ ತಿರುಚಿದವರ ಬಗ್ಗೆ ಇವರು ಚಕಾರವೆತ್ತುವುದಿಲ್ಲ.

ಮೊಘಲ್ ಗಾರ್ಡನ್ ಹೆಸರನ್ನು ‘ಅಮೃತ ಉದ್ಯಾನ’ ಎಂದು ಹೆಸರಿಸಿದರೆ, ಔರಂಗಜೇಬ್ ಮಾರ್ಗ ವನ್ನು ‘ಅಬ್ದುಲ್ ಕಲಾಂ ಮಾರ್ಗ’ ಎಂದು ಬದಲಿಸಿದರೆ ತಕರಾರಿರುತ್ತದೆ. ಇಂಥವರಿಗೆ ಈಗಲಾ ದರೂ ‘ಸನ್ಮತಿ ದೇ ಭಗವಾನ್’ ಎಂದು ಪ್ರಾರ್ಥಿಸುವುದೊಂದೇ ನಮಗಿರುವ ಮಾರ್ಗೋಪಾಯ ವಾಗಿದೆ.

ವಿನಾಯಕ ವೆಂ ಭಟ್ಟ

View all posts by this author