ಆರೋಪ,ಪ್ರತ್ಯಾರೋಪಗಳಿಗೂ ಘನತೆಯಿರಲಿ
ಆರೋಪ,ಪ್ರತ್ಯಾರೋಪಗಳಿಗೂ ಘನತೆಯಿರಲಿ
ಜಯಶ್ರೀ ಕಾಲ್ಕುಂದ್ರಿ
October 16, 2019
ಚರ್ಚೆ
ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು
ಪ್ರಜಾಪ್ರಭುತ್ವ ವ್ಯವಸ್ಥೆೆಗೆ ಪೂರಕವಾದ ದೇಶಹಿತದ ವಿಷಯಗಳಲ್ಲಿ ಸಾಮರಸ್ಯ ಕಾಯ್ದುಕೊಳ್ಳುವುದು ಸಹ ಪ್ರಜ್ಞಾಾವಂತ ನಾಗರಿಕರ ಪರಮ ಆದ್ಯತೆ ಯಾಗಲಿ.
ತಮಿಳುನಾಡಿನ ಮಹಾಬಲಿಪುರಂ ಸಾಗರ ತಟದಲ್ಲಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ಲಾಾಸ್ಟಿಿಕ್ ತ್ಯಾಾಜ್ಯವನ್ನು ಸಂಗ್ರಹಿಸಿ ವಿಲೇವಾರಿಗೆ ಅನುವು ಮಾಡಿಕೊಟ್ಟಿರುವುದು ದೇಶದಾದ್ಯಂತ ಮೆಚ್ಚುಗೆ ಗಳಿಸಿರುವುದರೊಂದಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವೊಂದನ್ನು ಹುಟ್ಟು ಹಾಕಿದೆ. ಪ್ರಧಾನಿ ಮೋದಿಯವರು ಮಹಾಬಲಿಪುರಂ ಬೀಚ್‌ನಲ್ಲಿ ಸುಮಾರು ಅರ್ಧ ಗಂಟೆಯಷ್ಟು ಸಮಯ ಬರಿಗಾಲಿನಲ್ಲಿ ನಡೆದೇ, ಸಮುದ್ರ ತಟವನ್ನು ಶುಚಿಗೊಳಿಸಿರುವುದು ಮಾತ್ರವಲ್ಲ, ಸಂಗ್ರಹಗೊಳಿಸಿದ ಕಸವನ್ನು ಹೋಟೆಲ್ ಸಿಬ್ಬಂದಿಯಾಗಿರುವ ಜಯರಾಜ್ ಅವರಿಗೆ ಹಸ್ತಾಾಂತರಿಸಿ ‘ಸ್ವಚ್ಛ ಭಾರತವೊಂದನ್ನು ನಿರ್ಮಿಸೋಣ’ ಎಂದು ದೇಶದ ಜನರಿಗೆ ಕರೆ ನೀಡಿರುವ ವಿಡಿಯೊ ವೈರಲ್ ಆಗಿರುವುದು ವಿಚಾರಾರ್ಹವೂ ಹೌದು. ಸ್ವಾಾತಂತ್ರ್ಯ ಭಾರತದ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಸ್ವಚ್ಛತಾ ಅಭಿಯಾನದ ಬಗ್ಗೆೆ ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಸ್ವತಃ ತಾವೇ ಈ ದಿಶೆಯಲ್ಲಿ ಹೆಜ್ಜೆೆಯಿರಿಸಿ ಪರಿಸರವನ್ನು ಸ್ವಚ್ಛವಾಗಿರಿಸಬೇಕೆಂಬ ಸ್ವಯಂ ಶಿಸ್ತು ತೋರಿದ ನಾಗರಿಕರಿಗೆ ಮಾದರಿಯಾಗುತ್ತಿರುವುದು ನಿಜಕ್ಕೂ ಪ್ರಶಂಸಾರ್ಹ.
ಪ್ಲಾಾಸ್ಟಿಿಕ್ ನಿಷೇಧದ ಕುರಿತು ಮೋದಿಜಿಯವರು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿಯೂ ಪ್ರಸ್ತಾಾಪಿಸಿ ದೇಶದ ನಾಗರಿಕರ ಗಮನ ಸೆಳೆದಿದ್ದಾಾರೆ. ಪ್ಲಾಾಸ್ಟಿಿಕ್ ನಿಷೇಧ ಇಡೀ ದೇಶವಾಸಿಗಳ ‘ಮನ್ ಕಿ ಬಾತ್’ ಎನಿಸಿದರೆ ಮಾತ್ರ ಪೂರಕ ಬದಲಾವಣೆ ಸಾಧ್ಯ. ಪ್ಲಾಸ್ಟಿಿಕ್ ನಿರ್ಮಿತ ವಸ್ತುಗಳು ಮಣ್ಣಿಿನಲ್ಲಿ ಕೊಳೆಯದೆ, ಗೊಬ್ಬರವಾಗದೆ, ಸುಟ್ಟರೆ ಪರಿಸರವನ್ನೇ ನಾಶಪಡಿಸುತ್ತವೆನ್ನುವ ಮಾತು ಸರ್ವವಿದಿತ. ವಿಪರ್ಯಾಸದ ಸಂಗತಿಯೆಂದರೆ ಪ್ಲಾಾಸ್ಟಿಿಕ್ ವಸ್ತುಗಳ ನಿಷೇಧವನ್ನು ಒಪ್ಪಿಿಕೊಳ್ಳಲಾರದಷ್ಟು ಅದರ ಬಳಕೆಗೆ ನಾವು ಒಗ್ಗಿಿಕೊಂಡಿದ್ದೇವೆ.
ಸರಕಾರದ ಆದೇಶ ಕಾನೂನುಗಳ ಪಾಲನೆಗಿಂತ ನಾವು ಪ್ರಕೃತಿಗೆ ಪೂರಕವಾಗಿರುವುದನ್ನೇ ಬಳಸುತ್ತೇವೆಂಬ ಇಚ್ಛಾಾಶಕ್ಕಿಿ ಎಲ್ಲಾಾ ನಾಗರಿಕರಲ್ಲೂ ಮೂಡಿದರೆ ಮಾತ್ರ ಸ್ವಚ್ಛ ಪರಿಸರದ ಒಡೆಯರು ನಾವಾಗುವುದು ಸಾಧ್ಯ. ಎಲ್ಲರಿಗೂ ಸೇರಿದ ವ್ಯವಸ್ಥೆೆಗೆ ನಮ್ಮ ಶುಚಿತ್ವದ ಹೊಣೆಗಾರಿಕೆಯ ಅರಿವು ಮೂಡಬೇಕಾಗಿದೆ. ಇನ್ನೊೊಂದು ಮೋಜಿನ ವಿಷಯವೆಂದರೆ ಮಹಾಬಲಿಪುರಂ ಸಾಗರ ತಟದಲ್ಲಿ ನಮ್ಮ ಪ್ರಧಾನಿಯವರು ಪ್ಲಾಾಸ್ಟಿಿಕ್ ಕಸವನ್ನು ಹೆಕ್ಕಿರುವುದನ್ನು ತಮಿಳುನಾಡಿನ ರಾಜಕೀಯ ಪಕ್ಷದ ಮುಖ್ಯಸ್ಥರೊಬ್ಬರು ನಾಟಕವೆಂದು ಬಣ್ಣಿಸಿ, ಜಾಲತಾಣಿಗರ ಟ್ರೋೋಲ್‌ಗೆ ಗುರಿಯಾಗಿದ್ದಾಾರೆ. ಟ್ರೋೋಲಿಗರು ಆ ನಾಯಕರನ್ನು ಕುರಿತು ‘ನಾಟಕವೆನಿಸಿದರೂ ಚಿಂತೆಯಿಲ್ಲ. ನೀವು ಸಹ ಪರಿಸರವನ್ನು ಶುದ್ಧವಾಗಿರಿಸಲು ಕೈ ಜೋಡಿಸಿ’ ಎಂದು ಕಾಲೆಳಿದಿದ್ದಾಾರೆ.
ಮೋದಿಯವರು ತಮ್ಮ ವಿದೇಶ ನೀತಿ, ದೇಶಹಿತದ ವಿಷಯದಲ್ಲಿ ತೆಗೆದುಕೊಳ್ಳುತ್ತಿರುವ ಕಠಿಣ ನಿರ್ಧಾರಗಳು ಹಾಗೂ ದಿಟ್ಟ ನಡೆ-ನುಡಿಗಳಿಂದ ದೇಶ-ವಿದೇಶಗಳಲ್ಲಿ ಪ್ರಶಂಸಿಲ್ಪಡುತ್ತಿರುವುದು ಅವರ ವಿರೋಧಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂದರ್ಶನವೊಂದರಲ್ಲಿ ಮೋದಿಯವರೇ ಲಘು ಹಾಸ್ಯರೂಪದಲ್ಲಿ ತಿಳಿಸಿದಂತೆ ವಿರೋಧಿಗಳು ಪ್ರತಿದಿನವೂ ಆಶೀರ್ವಾದದ ರೂಪದಲ್ಲಿ ಎಸೆಯುವ ಮೂರು-ನಾಲ್ಕು ಕಿಲೋಗಳಷ್ಟು ಬೈಗುಳಗಳನ್ನು ಸೇವಿಸಿ, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರಂತೆ.
ಇನ್ನು ಕಳೆದ ವಾರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಪ್ಯಾಾರಿಸ್‌ನ ಮೇರಿಗ್ನಾಾಕ್‌ನಲ್ಲಿ ನಡೆಸಿದ ಶಸ್ತ್ರ ಪೂಜೆಯೂ ಸಹ ವಿವಾದವೊಂದನ್ನು ಹುಟ್ಟು ಹಾಕಿರುವುದು ತೀರ ದುರದೃಷ್ಟಕರ. ಭಾರತೀಯ ಸಂಪ್ರದಾಯದಂತೆ ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧ ವಿಮಾನದ ಮೇಲೆ ‘ಓಂ’ ಎಂದು ಬರೆದಾಗ ಗಾಲಿಗಳಿಗೆ ನಿಂಬೆ ಹಣ್ಣು ಇರಿಸಿ ತೆಂಗಿನಕಾಯಿ-ಬಾಳೆಹಣ್ಣುಗಳನ್ನು ನೈವೇದ್ಯ ರೂಪದಲ್ಲಿ ಸಲ್ಲಿಸಿರುವುದು ಸಹ ವಿರೋಧಿಗಳ ಟೀಕೆಗೆ ಗುರಿಯಾಗಿದೆ. ವಿಪರ್ಯಾಸದ ಸಂಗತಿಯೆಂದರೆ ನಮ್ಮ ದೇಶದಲ್ಲಿ ಸಂಭ್ರಮಿಸುವ ವಿಷಯಗಳೂ ಸಹ ರಾಜಕೀಯ ಚರ್ಚೆಗೆ ಗುರಿಯಾಗುತ್ತಿಿರುವುದು ಆರೋಗ್ಯಕರ ಬೆಳವಣಿಗೆಯೆನಿಸದು. ರಫೇಲ್ ಜೆಟ್ ಖರೀದಿ ವಿಷಯದಲ್ಲಿ ಪ್ರತಿಪಕ್ಷಗಳು ಅವ್ಯವಹಾರ ನಡೆದಿದೆಯೆಂದು ಆರೋಪಿಸಿ ತೀವ್ರ ತೆರದಿ ವಿರೋಧ ವ್ಯಕ್ತಪಡಿಸಿದ ನಂತರ ಪ್ರತಿಭಟನೆ ನಡೆಸಿರುವ ವಿಷಯ ಜನಸಾಮಾನ್ಯರ ನೆನಪಿನಿಂದ ಮಾಸಿಲ್ಲ. ರಾಷ್ಟ್ರೀಯ ಪಕ್ಷದ ಹಿರಿಯ ನಾಯಕರೊಬ್ಬರು ರಕ್ಷಣಾ ಸಚಿವರು ಸಲ್ಲಿಸಿದ ಆಯುಧ ಪೂಜೆಯನ್ನು ನಾಟಕವೆಂದು ಬಣ್ಣಿಿಸಿದರು.
ಫ್ರಾಾನ್‌ಸ್ ದೇಶದಲ್ಲಿ ಇಂತಹ ನಾಟಕದ ಅಗತ್ಯವಿತ್ತೇ? ಎಂದು ಕುಟುಕಿದ್ದಾಾರೆ. ಆಡಳಿತ ಪಕ್ಷದ ನಾಯಕರು ‘ಕೊಟ್ರೋೋಚಿಯವರನ್ನು ಪೂಜಿಸುವವರಿಗೆ ಆಯುಧ ಪೂಜೆಯು ಅಗತ್ಯವೆನಿಸದು’ ಎಂದು ಟ್ವೀಟ್ ಮಾಡಿ ಬಲವಾದ ಮಾರುತ್ತರ ನೀಡಿದ್ದಾಾರೆ. ದೇವರ ಕಲ್ಪನೆ ಪೂಜೆ-ಪುನಸ್ಕಾಾರಗಳು ಕೇವಲ ಒಂದು ಧರ್ಮದವರಿಗೆ ಸೀಮಿತವಾಗಿಲ್ಲ. ನಾವು ಮಾಡುವ ಉತ್ತಮ ಕೆಲಸಗಳಿಗೆ ಉತ್ತೇಜನ ನೀಡುವಂತಹ ಆಚರಣೆಯಿಂದ ಯಾವ ನಷ್ಟವೂ ಕಾಣಸಿಗದು. ಆಯುಧ ಪೂಜೆಯ ವಿಧಿ-ವಿಧಾನಗಳ ಆಚರಣೆಯಿಂದ ಫ್ರಾಾನ್‌ಸ್ ದೇಶದ ನಾಗರಿಕರಿಗೂ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿದಂತಾಗುವುದಿಲ್ಲವೇ? ರಕ್ಷಣಾ ಸಚಿವರು ಫ್ರಾಾನ್‌ಸ್ ದೇಶದಲ್ಲಿ ತಾವು ಸಲ್ಲಿಸಿದ ಪೂಜೆಯನ್ನು ಸಮರ್ಥಿಸಿಕೊಳ್ಳುತ್ತಾಾ ‘ಪೂಜಿಸುವುದು ನಮ್ಮ ಸಂಸ್ಕೃತಿ. ನಾವು ಚಿಕ್ಕಂದಿನಿಂದಲೂ ನಂಬಿದಂತೆ ನಮ್ಮನ್ನು ಅಗೋಚರ ಶಕ್ತಿಿಯೊಂದು ಕಾಯುತ್ತದೆ’ ಎಂದು ಪ್ರತಿಕ್ರಿಿಯೆ ನೀಡಿದ್ದಾರೆ.
ಆಯುಧ ಪೂಜೆಯ ವಿಷಯದಲ್ಲಿ ವಿರೋಧ ಪಕ್ಷಗಳಲ್ಲೂ ಒಮ್ಮತವಿಲ್ಲದಿರುವುದೂ ಸಹ ಚರ್ಚೆಗೆ ಗ್ರಾಾಸವಾಗಿದೆ. ‘ಎಷ್ಟೋೋ ಜನ ರಾಜಕೀಯ ನಾಯಕರು ಚುನಾವಣೆ ಸಮೀಪಿಸುತ್ತಿಿದ್ದಂತೆಯೇ ಗೆಲುವಿನ ಬೀಜ ಮಂತ್ರವನ್ನು ಅರಿಯಲು ಜ್ಯೋೋತಿಷಿಗಳ ಮೊರೆ ಹೋಗುವುದು’ ಹೋಮ-ಹವನಾದಿಗಳನ್ನು ಮಾಡುವುದು, ತಮ್ಮ ಅನುಕೂಲಕ್ಕೆೆ ತಕ್ಕುದಾದ ಧರ್ಮದ ಅನುಯಾಯಿಯಾಗುವುದು, ಕ್ಯಾಾಮೆರಾಗಳ ಎದುರಿಗೆ ತಾವೊಬ್ಬ ದೈವಭಕ್ತ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಿಸುವುದು ಮುಂತಾದ ವಿಷಯಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಲಿರುತ್ತವೆ. ಗ್ರಹ ಮಂತ್ರಿಿ ಅಮಿತ್ ಶಾ ಅವರು ತೀಕ್ಷ್ಣವಾಗಿ ಪ್ರತಿಕ್ರಿಿಯಿಸಿರುವಂತೆ ‘ಯಾವುದನ್ನು ವಿರೋಧಿಸಬೇಕು. ಯಾವುದನ್ನು ವಿರೋಧಿಸಬಾರದು ಎಂಬುದನ್ನು ವಿರೋಧಿಗಳು ನಿಶ್ಚಯಿಸಿಕೊಂಡು ಮಾತನಾಡುವುದು ಸೂಕ್ತ’. ಅಧುನಿಕ ವಿಚಾರಗಳಿಗೆ ಒಗ್ಗಿಿಕೊಂಡರೂ ನಂಬಿಕೆ-ಭಕ್ತಿಿ-ಭಾವನೆಗಳೇ ಭಾರತೀಯರ ಜೀವಾಳವಾಗಿದೆ. ಇಸ್ರೋೋ ವಿಜ್ಞಾಾನಿಗಳು ಸಹ ಉಪಗ್ರಹವನ್ನು ಉಡಾವಣೆಗೊಳಿಸುವ ಮುನ್ನ ಪೂಜೆ ಸಲ್ಲಿಸಿರುವ ವಿಷಯ ವಾಹಿನಿಗಳಲ್ಲಿ ಬಿತ್ತರವಾಗಿದೆ. ವಿರೋಧಿಗಳ ವಿರೋಧದ ಮಾತಂತಿರಲಿ, ರಫೆಲ್ ಯುದ್ಧ ವಿಮಾನದ ಸೇರ್ಪಡೆಯಿಂದ ಭಾರತೀಯ ಸೇನೆ ಇನ್ನು ಬಲಶಾಲಿಯಾಗಿರುವುದಂತೂ ಸತ್ಯ.
ಜಮ್ಮ-ಕಾಶ್ಮೀರ ರಾಜ್ಯದ ವಿಷಯದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸುವಲ್ಲಿ ಕೇಂದ್ರ ಸರಕಾರ ಇರಿಸಿದ ದಿಟ್ಟ ಹಾಗೂ ಅಸಾಮಾನ್ಯ ನಡೆ ಹಾಗೂ ಕಾಶ್ಮೀರದ ಜನತೆಯ ಹಿತ ಚಿಂತನೆಗಾಗಿಯೇ ಎಂಬ ವಿಷಯ ಭಾರತೀಯರೆಲ್ಲರಿಗೂ ಒಪ್ಪಿಿತವಾದ ವಿಚಾರ. ಇಲ್ಲಿಯೂ ಸಹ ಮೊಸಳೆ ಕಣ್ಣೀರು ಸುರಿಸುತ್ತಿಿರುವ ಪರಿವಾರವಾದಿ ರಾಜಕಾರಣಿಗಳು ಮೊಸರಿನಲ್ಲಿಯೂ ಕಲ್ಲು ಹುಡುಕುತ್ತ ವಿರೋಧಕ್ಕಾಾಗಿ ವಿರೋಧಿಸುತ್ತಿಿರುವ ವಿರೋಧಿ ಪಕ್ಷಗಳ ನಾಯಕರು ಸರಕಾರದ ಈ ನಿರ್ಧಾರವನ್ನು ಟೀಕಿಸುತ್ತಿಿದ್ದಾಾರೆ. ಇಡೀ ದೇಶವೇ ಭಾರತದ ಮುಕುಟವೆನಿಸಿದ ಕಾಶ್ಮೀರದಿಂದ ಭಯೋತ್ಪಾಾದನೆ ಹಾವಳಿ ಪೂರ್ಣ ಪ್ರಮಾಣದಲ್ಲಿ ನಿರ್ಮೂಲನವಾಗಲಿ, ಪಂಡಿತರು ತಮ್ಮ ನೆಲೆಗೆ ಮರಳಲಿ, ಹಿಂದಿನ ದಿನಗಳಂತೆ ಕಾಶ್ಮೀರ ಭುವಿಯ ಸ್ವರ್ಗವೆನಿಸಲೆಂದು ಹಾರೈಸುತ್ತಿಿದೆ. ಎಂದಿನಂತೆ ಮತ ಬ್ಯಾಾಂಕ್ ರಾಜಕಾರಣ ಮತ್ತು ಮತ ಬ್ಯಾಾಂಕ್ ನೀತಿ ನಿಯಮಾವಳಿಗಳನ್ನೇ ಅನುಸರಿಸಿದರೆ ರಾಷ್ಟ್ರದ ಹಿತಕ್ಕೆೆ ಹಾನಿಯಾಗುತ್ತದೆಂದು ವಿರೋಧಿಗಳಿಗೆ ತಿಳಿಯದೇ? ಕಾಶ್ಮೀರದ ವಿಷಯದಲ್ಲಿ ಸರಕಾರದ ವಿರುದ್ಧ ತೋರಿದ ವಿರೋಧಿಗಳ ನಡೆಯಿಂದ ದೇಶದ ನಾಗರಿಕರು ಸಹ ಮುಜುಗರವನ್ನು ಅನುಭವಿಸುವಂತಾಗಿದೆ.
ರಾಷ್ಟ್ರಹಿತದ ವಿಷಯಗಳಲ್ಲಿಯೂ ಅವರಿಗೆ ತಿಳಿಯದು. ಮೊಸರಿನಲ್ಲಿಯೂ ಕಲ್ಲು ಹುಡುಕುವ ವಿರೋಧಿಗಳ ಸಂಖ್ಯೆೆ ದಿನೇದಿನೆ ಹೆಚ್ಚುತ್ತಲೇ ಇದೆ. ನಿರ್ದಿಷ್ಟ ವ್ಯಕ್ತಿಿ ಸಮುದಾಯ ಧರ್ಮಗಳನ್ನು ಕೇವಲ ವಿರೋಧಿಸುವುದಕ್ಕಾಾಗಿಯೇ ವಿರೋಧಿಸುವ ಜನರು ಸಾರ್ವಜನಿಕ ವಲಯಗಳಲ್ಲಿ ಎಲ್ಲೆೆ ಮೀರಿ ಮಾತನಾಡುತ್ತಲೇ ಇರುತ್ತಾಾರೆ. 130 ಕೋಟಿ ಜನಸಂಖ್ಯೆೆಯುಳ್ಳ ನಮ್ಮ ದೇಶದಲ್ಲಿ ಅಭಿಪ್ರಾಾಯ ಭೇದಗಳಿರುವುದು. ಪ್ರಜಾಪ್ರಭುತ್ವ ವ್ಯವಸ್ಥೆೆಗೆ ಪೂರಕವೆನಿಸಿದರೂ ದೇಶಹಿತದ ವಿಷಯಗಳಲ್ಲಿ ಸಾಮರಸ್ಯ ಕಾಯ್ದುಕೊಳ್ಳುವುದು ಸಹ ಪ್ರಜ್ಞಾಾವಂತ ನಾಗರಿಕರ ಪರಮ ಆದ್ಯತೆಯಾಗಿದೆಯೆಂಬ ಮಾತು ನಿರ್ವಿವಾದ. ಪ್ರಜಾಪ್ರಭುತ್ವ ವ್ಯವಸ್ಥೆೆಯಲ್ಲಿ ರಾಜಕೀಯ ನಾಯಕರು ಸದನಗಳಲ್ಲಿ ಮತ್ತೆೆ ಚುನಾವಣೆ ಸಮಯದಲ್ಲಿ ಆಡಳಿತ ಪಕ್ಷದ ವಿರುದ್ಧ ಮಾಡುವ ಸಾರ್ವಜನಿಕ ಹಿತಾಸಕ್ತಿಿಯ ಟೀಕೆ-ಟಿಪ್ಪಣಿಗಳು, ಹೆಣೆಯುವ ತಂತ್ರ-ಪ್ರತಿತಂತ್ರಗಳು ಸ್ವಾಾಗತಾರ್ಹವೆನಿಸಿದರೂ ವೈಯಕ್ತಿಿಕ ಟೀಕೆ ಖಂಡಿತವಾಗಿಯೂ ಸಲ್ಲ. ಎದುರಾಳಿಯ ಕಾಲೆಳೆಯುವದರ ಭರದಲ್ಲಿ ಎಲ್ಲೆೆ ಮೀರಿ ಮಾತನಾಡುವುದು. ಅವಾಚ್ಯ ಶಬ್ದಗಳಿಂದ ನಿಂದಿಸುವುದು. ಏಕವಚನದ ಪ್ರಯೋಗ ಮಾಡುವುದು ಸಹ ಖಂಡನಾರ್ಹ.