ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Pralhad Joshi: ಅಮೆರಿಕ ಒಪ್ಪಂದದ ಬಗ್ಗೆ ಸುಳ್ಳಿನ ಕಂತೆ ಹರಿಬಿಡುತ್ತಿರುವ ವಿಪಕ್ಷಗಳು: ಪ್ರಲ್ಹಾದ್‌ ಜೋಶಿ ಕಿಡಿ

Pralhad Joshi: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಹಿತರಕ್ಷಣೆಗೆ ಬದ್ಧವಾಗಿಯೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. ಅಮೆರಿಕ ಸೇರಿ ವಿದೇಶಗಳೊಂದಿಗೆ ವಾಣಿಜ್ಯ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಆದರೆ, ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿವೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಹರಿಹಾಯ್ದಿದ್ದಾರೆ.

ಅಮೆರಿಕ ಒಪ್ಪಂದದ ಬಗ್ಗೆ ಸುಳ್ಳಿನ ಕಂತೆ ಹರಿಬಿಡುತ್ತಿರುವ ವಿಪಕ್ಷಗಳು: ಜೋಶಿ

ಕಲಬುರಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ. -

Profile
Siddalinga Swamy Feb 20, 2026 10:55 PM

ಕಲಬುರಗಿ, ಫೆ.20: ಫ್ರೀ ಟ್ರೇಡ್ ಅಗ್ರಿಮೆಂಟ್ ಮತ್ತು ಅಮೆರಿಕ ಜತೆಗಿನ ಒಪ್ಪಂದ ಬಗ್ಗೆ ವಿಪಕ್ಷಗಳು ಸುಳ್ಳಿನ ಕಂತೆಯನ್ನೇ ಹರಿಬಿಡುತ್ತಿವೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಲಬುರಗಿಯ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಆಯೋಜಿಸಿದ್ದ 'ಕೇಂದ್ರ ಬಜೆಟ್ 2026' ರ ಕುರಿತ ವಿಶೇಷ ಭಾಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಹಿತರಕ್ಷಣೆಗೆ ಬದ್ಧವಾಗಿಯೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. ಅಮೆರಿಕ ಸೇರಿದಂತೆ ವಿದೇಶಗಳೊಂದಿಗೆ ವಾಣಿಜ್ಯ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಆದರೆ, ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿವೆ ಎಂದು ಹರಿಹಾಯ್ದರು.

ಕೇಂದ್ರ ಸರ್ಕಾರ ಯಾವತ್ತೂ ದೇಶದ ರೈತರ ಹಿತ ಕಾಪಾಡುವಲ್ಲಿ ಬದ್ಧತೆ ತೋರುತ್ತಿದೆ. ಫ್ರೀ ಟ್ರೇಡ್ ಅಗ್ರಿಮೆಂಟ್ ಮತ್ತು ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದ ಸಹ ಇದನ್ನು ದೇಶದ ಕೃಷಿ, ಉತ್ಪನ್ನ, ತಾಂತ್ರಿಕ ವಲಯವನ್ನು ಪುಷ್ಟೀಕರಿಸುತ್ತದೆ ಎಂದು ಹೇಳಿದರು. 2026ರ ಕೇಂದ್ರ ಬಜೆಟ್ ಜನಕೇಂದ್ರಿತ, ಯುವಕೇಂದ್ರಿತ ಮತ್ತು ವಿಕಸಿತ ಭಾರತದ ಬೆಳವಣಿಗೆಗೆ ಪ್ರತೀಕವಾಗಿದೆ. ಇದು ಯುವ ಶಕ್ತಿಯ ಆಧಾರದ ಬಜೆಟ್ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವುದನ್ನು ಪ್ರತಿಪಾದಿಸುವಂತಿದೆ ಎಂದರು.

India AI Mission, India Semiconductor Mission ಮತ್ತು ಸ್ಟಾರ್ಟ್‌ಅಪ್ ಬೆಂಬಲ ಕಾರ್ಯಕ್ರಮಗಳು ಹೊಸ ತಲೆಮಾರಿಗೆ ಭಾರತದಲ್ಲೇ ವಿನ್ಯಾಸ, ಆವಿಷ್ಕಾರ ಮತ್ತು ಉತ್ಪಾದನೆಗೆ ಒಳ್ಳೇ ಅವಕಾಶ ಕಲ್ಪಿಸುತ್ತದೆ. ಕೈಗಾರಿಕಾ ಅಭಿವೃದ್ಧಿಗೆ ಕೇಂದ್ರದ ಯೋಜನೆಗಳು, ಪಿಎಂ-ಮಿತ್ರ ಪಾರ್ಕ್, ಕೈಗಾರಿಕಾ ಬೆಳವಣಿಗೆ, ಪ್ರಾದೇಶಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಬಜೆಟ್ ಅನ್ನು ಸಮರ್ಥಿಸಿಕೊಂಡರು.

ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದೆಲ್ಲೆಡೆ ಧಾರ್ಮಿಕ, ಸಾಂಸ್ಕೃತಿಕ ಪುನರುತ್ಥಾನ: ಪ್ರಲ್ಹಾದ್‌ ಜೋಶಿ

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪ, ಕಾರ್ಯದರ್ಶಿ ಶಿವರಾಜ ವಿ. ಇಂಗಿನಶೆಟ್ಟಿ, ಮಾಜಿ ಎಂಎಲ್‌ಸಿ ಅಮರನಾಥ ಎನ್. ಪಾಟೀಲ, ಶಶಿಕಾಂತ ಬಿ. ಪಾಟೀಲ, ಮಂಡಳಿ ಪದಾಧಿಕಾರಿಗಳು, ಉದ್ಯಮಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.