ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

Yashaswi Devadiga

Sub Editor

yashaswidevadiga8@gmail.com

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹುಟ್ಟೂರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಜತೆಗೆ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ವಿಸ್ತಾರ ನ್ಯೂಸ್ ವೆಬ್ಸೈಟ್ ನಲ್ಲಿ ಉಪಸಂಪಾದಕಿಯಾಗಿ ವೃತ್ತಿ ಪ್ರಾರಂಭ. ಬಳಿಕ ನ್ಯೂಸ್ 18 ಕನ್ನಡದಲ್ಲಿ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಮೂರು ವರ್ಷಗಳಿಂದ ಕೆಲಸ ಮಾಡಿದ ಅನುಭವ. ಜೊತೆಗೆ ಕನ್ನಡ ಸಿನಿಮಾವೊಂದಕ್ಕೆ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡಿದ್ದೇನೆ. ಸಿನಿಮಾ ವೀಕ್ಷಣೆ, ಸಿನಿಮಾ ಮೇಕಿಂಗ್, ಸಿನಿಮಾ ವಿಮರ್ಶೆ, ಬರವಣಿಗೆ, ಓದು ನೆಚ್ಚಿನ ಹವ್ಯಾಸ.

Articles
Film Critics Academy Awards: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ : ಅತೀ ಹೆಚ್ಚು ನಾಮನಿರ್ದೇಶಿತರು ಯಾರು?

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ : ನಾಮನಿರ್ದೇಶಿತರು ಯಾರು?

Film Critics Academy Awards: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 7ನೇ ವರ್ಷದ ಪ್ರಶಸ್ತಿ ಸಮಾರಂಭಕ್ಕೂ ಮುನ್ನ ಟ್ರೋಫಿ ಅನಾವರಣ ಮತ್ತು ನಾಮ ನಿರ್ದೇಶಿತರ ಹೆಸರುಗಳನ್ನು ಘೋಷಿಸಲಾಯಿತು. ಟ್ರೋಫಿ ಅನಾವರಣ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಕೆ.ಎಂ ಚೈತನ್ಯ, ಖ್ಯಾತ ನಟಿ ಪೂಜಾ ಗಾಂಧಿ ಹಾಗೂ ನಟ ಶ್ರೀನಗರ ಕಿಟ್ಟಿ, ಅಂಬರ್ಸ್ಟೋನ್ ಪ್ರಾಪರ್ಟೀಸ್ ಸೇಲ್ಸ್ ಹೆಡ್ ಸುನೀಲ್, ಮಾರ್ಕೆಟಿಂಗ್ ಹಡೆ ಅನೂಪ್, ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್ ಶ್ವೇತಾ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಸಿನಿಮಾದ ಹಿರಿಯ ಪಿ.ಆರ್.ಓ ವಿಜಯ್ ಕುಮಾರ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

Anurag Dobhal: ಯೂಟ್ಯೂಬರ್ ಅನುರಾಗ್ ದೊಭಾಲ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

ಯೂಟ್ಯೂಬರ್ ಅನುರಾಗ್ ದೊಭಾಲ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

Anurag Dobhal condition serious : ಬಿಗ್ ಬಾಸ್ 17 ಸ್ಪರ್ಧಿ ಮತ್ತು ಯೂಟ್ಯೂಬರ್ ಅನುರಾಗ್ ದೋಭಾಲ್ ಅವರನ್ನು ಗುರುವಾರ ಐಸಿಯುನಿಂದ ಬಿಡುಗಡೆ ಮಾಡಿದ ನಂತರ ಅವರ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎಂದು ವರದಿಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಇರುವಾಗಲೇ ಅವರ ಕಾರು ಅಪಘಾತಕ್ಕೀಡಾಗಿ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮ್ಯಾನೇಜರ್ ರೋಹಿತ್ ಪಾಂಡೆ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾ, ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಅಂದಿನಿಂದ ಹದಗೆಟ್ಟಿದೆ ಎಂದು ಹೇಳಿದ್ದಾರೆ.

R Madhavan: ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಆರ್. ಮಾಧವನ್; ಆಗಿದ್ದೇನು?

ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಆರ್. ಮಾಧವನ್; ಆಗಿದ್ದೇನು?

R Madhavan: ಆರ್. ಮಾಧವನ್ ಅವರ ಹೆಸರಿನಲ್ಲಿ ಕಿಡಿಗೇಡಿಯೊಬ್ಬ ನಕಲಿ ಸೋಶಿಯಲ್ ಮೀಡಿಯಾ ಖಾತೆಯನ್ನು ತೆರೆದು ಜನರ ದಾರಿ ತಪ್ಪಿಸುತ್ತಿದ್ದಾನೆ. ಈ ವಿಷಯದ ಬಗ್ಗೆ ಸ್ವತಃ ಮಾಧವನ್ ಅವರೇ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ನಟ ಇತ್ತೀಚೆಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ತಮ್ಮನ್ನು ಪ್ರತಿನಿಧಿಸುವುದಾಗಿ ಯಾರೋ ಸುಳ್ಳು ಹೇಳಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Thalapathy Vijay: ಶೀಘ್ರದಲ್ಲಿಯೇ ತ್ರಿಶಾ ಮದುವೆ? ತಾಯಿ ಉಮಾ ಸುಳಿವು ನೀಡಿದ್ದೇನು?

ಶೀಘ್ರದಲ್ಲಿಯೇ ತ್ರಿಶಾ ಮದುವೆ? ತಾಯಿ ಉಮಾ ಸುಳಿವು ನೀಡಿದ್ದೇನು?

Thalapathy Vijay: ವಿಜಯ್ ಮತ್ತು ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ವಿವಾದ ಆರಂಭವಾದ ನಂತರ, ಇತ್ತೀಚೆಗೆ ನಡೆದ ಆರತಕ್ಷತೆಯಲ್ಲಿ ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಇಬ್ಬರೂ ಒಂದೇ ರೀತಿಯ ಉಡುಪುಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ನಂತರ, ಸಂಗೀತಾ ಅವರ ವಿಚ್ಛೇದನ ಅರ್ಜಿಯಿಂದ ಉಂಟಾದ ಗೊಂದಲದ ನಡುವೆ, ತ್ರಿಶಾ ಅವರೊಂದಿಗಿನ ಸಂಬಂಧವನ್ನು ಅಧಿಕೃತಗೊಳಿಸಲು ವಿಜಯ್ ಈ ದಿಟ್ಟ ಕ್ರಮ ಕೈಗೊಂಡಿದ್ದಾರೆ ಎಂದು ವದಂತಿ ಹಬ್ಬಿತ್ತು.

Anushka Shetty: ಕೊನೆಗೂ ಅನುಷ್ಕಾ ಶೆಟ್ಟಿಗೆ ಕೂಡಿಬಂತು ಕಂಕಣ ಭಾಗ್ಯ: ಉದ್ಯಮಿ ಜೊತೆ ಮದುವೆ?

ಕೊನೆಗೂ ಅನುಷ್ಕಾ ಶೆಟ್ಟಿಗೆ ಕೂಡಿಬಂತು ಕಂಕಣ ಭಾಗ್ಯ: ಉದ್ಯಮಿ ಜೊತೆ ಮದುವೆ?

Anushka Shetty: ಎಸ್.ಎಸ್. ರಾಜಮೌಳಿ ಅವರ ಬಾಹುಬಲಿ ಫ್ರಾಂಚೈಸಿಯಲ್ಲಿ ಪ್ರಭಾಸ್ ಎದುರು ನಟಿಸಿದ ನಂತರ ತೆಲುಗು ನಟಿ ಅನುಷ್ಕಾ ಶೆಟ್ಟಿ ಪ್ಯಾನ್-ಇಂಡಿಯಾ ಖ್ಯಾತಿಯನ್ನು ಗಳಿಸಿದರು. ಈ ಸಿನಿಮಾ ಬ್ಲಾಕ್ಬಸ್ಟರ್ ಯಶಸ್ಸನ್ನು ಗಳಿಸಿದ್ದಲ್ಲದೆ, ಪ್ರಭಾಸ್ ಮತ್ತು ಅನುಷ್ಕಾ ಜೋಡಿಯ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದವು. ಅಭಿಮಾನಿಗಳು ಜೋಡಿ ಡೇಟಿಂಗ್ ಮಾಡುತ್ತಿದೆ ಎಂದು ಕಮೆಂಟ್‌ ಕೂಡ ಮಾಡುತ್ತಿದ್ದರು. ಆದರೀಗ ನಟಿ ಅನುಷ್ಕಾ ಶೆಟ್ಟಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಬಿಸಿಬಿಸಿ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

KD  The Devil:  ಕೆಡಿ ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಸಾಂಗ್‌​​​ ರಿಲೀಸ್! ನೋರಾ ಫತೇಹಿ ಭರ್ಜರಿ​​ ಡ್ಯಾನ್ಸ್

ಕೆಡಿ ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಸಾಂಗ್‌​​​ ರಿಲೀಸ್!

Sanjay Dutt : ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರದ ನೋರಾ ಫತೇಹಿ ಅವರು ನೃತ್ಯ ಮಾಡಿರುವ 'ಸರ್ಸೆ ಸರ್ಸೆ' ಹಾಡು ಬಿಡುಗಡೆಯಾಗಿದೆ. ಆ್ಯಕ್ಷನ್​ ಪ್ರಿನ್ಸ್​​ ಧ್ರುವ ಸರ್ಜಾ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರದಲ್ಲಿ ಸ್ಯಾಂಡಲ್​​ವುಡ್​ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಕಿಚ್ಚ ಸುದೀಪ್​, ರೀಷ್ಮಾ ನಾಣಯ್ಯ ಅವರಂತಹ ಖ್ಯಾತ ನಟರು ಪ್ರಮುಖ ಪಾತ್ರ ವಹಿಸಿದ್ದು, ಬಾಲಿವುಡ್​ನ ಸಂಜಯ್​ ದತ್​​, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಕೂಡಾ ಬಣ್ಣ ಹಚ್ಚಿದ್ದಾರೆ. ಸಂಜಯ್ ದತ್ ಕೂಡಾ ಸಖತ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ.

Actor Upendra: ಬೆಳಗ್ಗೆ ಲಿಂಕ್ ಪೋಸ್ಟ್ ಮಾಡ್ತೀನಿ, ತಕ್ಷಣ ಡಿಲೀಟ್‌ ಮಾಡ್ತೀನಿ;  ಜನರ ತಲೆಗೆ ಹುಳಬಿಟ್ಟ  ಉಪೇಂದ್ರ!

ಬೆಳಗ್ಗೆ ಲಿಂಕ್ ಪೋಸ್ಟ್ ಮಾಡ್ತೀನಿ, ತಕ್ಷಣ ಡಿಲೀಟ್‌ ಮಾಡ್ತೀನಿ; ಉಪೇಂದ್ರ!

Actor Upendra: ನಟ ಉಪೇಂದ್ರ (Actor Upendra) ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ವಾರ್ನಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ (Link Post) ಪೋಸ್ಟ್ ಮಾಡಿ, ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡುವುದಾಗಿ ತಿಳಿಸಿದ್ದು, ಇದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ. ಹೀಗ್ಯಾಕೆ ಅಂದ್ರು?

Actor Jaggesh: ಮೊಮ್ಮಗನ ಜೊತೆ ಸಂತೋಷದ ಕ್ಷಣ ಹಂಚಿಕೊಂಡ ಜಗ್ಗೇಶ್‌! ತಾತನನ್ನು ನೆನದು ಭಾವುಕ

ಮೊಮ್ಮಗನ ಜೊತೆ ಸಂತೋಷದ ಕ್ಷಣ ಹಂಚಿಕೊಂಡ ಜಗ್ಗೇಶ್‌!

Actor Jaggesh: ಚಂದನವನದ ನವರಸ ನಾಯಕ, ಭಿನ್ನವಾಗಿ ಕಾಮಿಡಿ ಮಾಡುವ ಮೂಲಕ ಕನ್ನಡಿಗರ ಮನಗೆದ್ದ ಜಗ್ಗೇಶ್ ಆಗಾಗ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಇಬ್ಬರು ಮಕ್ಕಳು, ಸೊಸೆ, ಮೊಮ್ಮಗ ಮತ್ತು ಪತ್ನಿ ಬಗ್ಗೆ ಆಗಾಗ ಬರೆದುಕೊಳ್ಳುತ್ತಿರುತ್ತಾರೆ. ಮೊಮ್ಮಗ ಅರ್ಜುನ ಜೊತೆ ಕಾಲಕಳೆದ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

Anasuya Bharadwaj: ನಟಿ, ನಿರೂಪಕಿ ಅನಸೂಯಾ ವಿರುದ್ಧ ಅಶ್ಲೀಲ ಪೋಸ್ಟ್; ಇಬ್ಬರ ಬಂಧನ

ನಟಿ, ನಿರೂಪಕಿ ಅನಸೂಯಾ ವಿರುದ್ಧ ಅಶ್ಲೀಲ ಪೋಸ್ಟ್; ಇಬ್ಬರ ಬಂಧನ

Anasuya Bharadwaj: ನಟಿ ಅನಸೂಯಾ ಭಾರದ್ವಾಜ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕಡಪ ಜಿಲ್ಲೆಯ ಜನಾರ್ಧನ್ ಎಂಬ ವ್ಯಕ್ತಿಯನ್ನು ಸೈಬರಾಬಾದ್ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಅನಸೂಯಾ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಪ್ರಸಾರ ಮಾಡಲಾಗಿತ್ತು ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿಯನ್ನು ಸಿಕಂದರಾಬಾದ್‌ನ ಪಶ್ಚಿಮದ ಮಾರೆದುಪಳ್ಳಿಯ ಅರುಣ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.

Dhurandhar 2: ನಿಗೂಢವಾಗೆ ಉಳಿದ ಬಡೇ ಸಾಬ್! ಧುರಂಧರ 2ನಲ್ಲಿ ಈ ಪಾತ್ರ ನಿರ್ವಹಿಸೋದು ಯಾರು?

ನಿಗೂಢವಾಗೆ ಉಳಿದ ಬಡೇ ಸಾಬ್! ಈ ಪಾತ್ರ ನಿರ್ವಹಿಸೋದು ಯಾರು?

Dhurandhar 2: ಧುರಂಧರ್ 2 ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿರುವಾಗ, ಒಂದು ಹೊಸ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಆದಿತ್ಯ ಧರ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಾಯಕರಾಗಿರುವ ಈ ಚಿತ್ರವು ಈಗಾಗಲೇ ಭಾರಿ ಸಂಚಲನ ಮೂಡಿಸಿದೆ, ಆದರೆ ಬಡೇ ಸಾಹೇಬ್ ಪಾತ್ರದಲ್ಲಿ ನಟಿಸುವ ನಟನ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬುತ್ತಿವೆ. ಧುರಂಧರ್ 2 ಸಿನಿಮಾದಲ್ಲಿ ಬಡೇ ಸಾಬ್ ಎಂಬ ಪಾತ್ರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಪಾತ್ರದ ಬಗ್ಗೆ ಟೇಲರ್‌ನಲ್ಲಿ ಯಾವುದೇ ಉತ್ತರ ದೊರೆತಿಲ್ಲ. ಬಹುಶಃ ಈ ಪಾತ್ರವನ್ನು ನೇರವಾಗಿ ಸಿನಿಮಾದಲ್ಲಿಯೇ ತೋರಿಸಬಹುದು ಎನ್ನಲಾಗುತ್ತಿದೆ.

Ajith Kumar: ಮತ್ತೊಂದು ಹೊಸ ಕಾರು ಖರೀದಿಸಿದ್ರಾ ನಟ ಅಜಿತ್ ಕುಮಾರ್? ಬೆಲೆ ಎಷ್ಟು?

ಮತ್ತೊಂದು ಹೊಸ ಕಾರು ಖರೀದಿಸಿದ್ರಾ ನಟ ಅಜಿತ್ ಕುಮಾರ್?

Mahindra BE 6 Formula E car: ಇರಾನ್ ಜೊತೆಗಿನ ಅಮೆರಿಕ-ಇಸ್ರೇಲ್ ಸಂಘರ್ಷದಿಂದಾಗಿ ದುಬೈನಲ್ಲಿ ಸ್ವಲ್ಪ ಸಮಯ ಸಿಲುಕಿಕೊಂಡಿದ್ದ ತಮಿಳು ನಟ-ರೇಸರ್ ಅಜಿತ್ ಕುಮಾರ್ ಈ ವಾರದ ಆರಂಭದಲ್ಲಿ ಭಾರತಕ್ಕೆ ಮರಳಿದರು. ಭಾರತಕ್ಕೆ ಹಿಂದಿರುಗಿದ ನಂತರ, ಅವರು ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದರು. ದುಬೈನಿಂದ ವಾಪಸಾದ ಅಜಿತ್ ಕುಮಾರ್‌ಗೆ ಮಹೀಂದ್ರಾ ಕಂಪನಿಯು ತನ್ನ ಹೊಚ್ಚ ಹೊಸ ಫಾರ್ಮುಲಾ E ಥೀಮ್‌ನ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದೆ ಎಂದು ವರದಿಯಾಗಿದೆ.

Amruthadhaare Serial: ಅಪಾಯದಲ್ಲಿ ಮಲ್ಲಿ, ಕಾವಲಾಗ್ತಾನಾ ಗೌತಮ್? ಜೈದೇವ್‌‌ಗೆ ಸೋಲು ಖಚಿತ?

Amruthadhaare Serial: ಅಪಾಯದಲ್ಲಿ ಮಲ್ಲಿ, ಕಾವಲಾಗ್ತಾನಾ ಗೌತಮ್?

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಗೆ ಸಂಕಷ್ಟ ಎದುರಾಗಿದೆ. ಮಲ್ಲಿ ಪರೀಕ್ಷೆ ಬರೆಯಬಾರದು ಎಂದು ಜೈದೇವ್‌ ಪಣ ತೊಟ್ಟಿದ್ದಾಗಿದೆ. ಹೀಗಾಗಿ ತೊಂದರೆ ಕೊಡುತ್ತಲೇ ಇದ್ದಾನೆ. ರಾತ್ರೋರಾತ್ರಿಯೇ ಮಲ್ಲಿಗೆ ತೊಂದರೆ ಕೊಟ್ಟ ಜೈದೇವ್‌ ಬಗ್ಗೆ, ಮಲ್ಲಿ ಕೆಂಡ ಆಗಿದ್ದಳು. ನೀನು ಉತ್ತರ ಕೊಡಬೇಕಾದದ್ದು ಇಲ್ಲಿ ಅಲ್ಲ ಎಕ್ಸಾಂ ಮೂಲಕ ಉತ್ತರ ಕೊಡಬೇಕು ಎಂದು ಭೂಮಿಕಾ ಮಲ್ಲಿಗೆ ಹೇಳಿದ್ದಾಳೆ. ಈಗ ಎಕ್ಸಾಮ್‌ (Exam) ಹೊರಡಲು ಸಿದ್ದ ಆಗಿದ್ದಾಳೆ.

Adilakshmi Purana Serial: ‘ಆದಿ ಲಕ್ಷ್ಮೀ ಪುರಾಣ’ದಿಂದ ಹೊರ ಬಂದಿದ್ದೇಕೆ? ಕಾರಣ ತಿಳಿಸಿದ ನಟಿ ರಕ್ಷಿತಾ

‘ಆದಿ ಲಕ್ಷ್ಮೀ ಪುರಾಣ’ದಿಂದ ಹೊರ ಬಂದಿದ್ದೇಕೆ? ಕಾರಣ ತಿಳಿಸಿದ ನಟಿ ರಕ್ಷಿತಾ

Adilakshmi Purana Serial: ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾದ ಧಾರಾವಾಹಿ ಆದಿಲಕ್ಷ್ಮೀ ಪುರಾಣ . ಆದಿಲಕ್ಷ್ಮೀ ಪುರಾಣ ಧಾರಾವಾಹಿಯಿಂದ ಅಮೃತಾ ಪಾತ್ರಧಾರಿ ನಟಿ ರಕ್ಷಿತಾ ಹೊರ ಬಂದಿದ್ದರು. ಆದಿ ಲಕ್ಷ್ಮೀ ಜೋಡಿ ಜೊತೆಗೆ ಸಂಜೀವ್‌ ಮತ್ತು ಅಮೃತಾ ಜೋಡಿ ಕೂಡ ಜನಪ್ರಿಯತೆ ಪಡೆದಿತ್ತು. ಇದೇ ಪಾತ್ರಕ್ಕೆ ‘ಪಾರು’ ಖ್ಯಾತಿಯ ನಟಿ ಮಾನ್ಸಿ ಜೋಶಿ ಅವರು ಬಣ್ಣ ಹಚ್ಚಿದ್ದಾರೆ. . ಇದೀಗ ನಟಿ ರಕ್ಷಿತಾ ಸ್ವತಃ ತಾವು ಸೀರಿಯಲ್ ಬಿಡಲು ಕಾರಣ ಏನೆಂದು ತಿಳಿಸಿದ್ದಾರೆ.

Landlord Movie OTT: ಯುಗಾದಿ ಹಬ್ಬಕ್ಕೆ ಬರ್ತಿದ್ದಾನೆ ‘ಲ್ಯಾಂಡ್​​ಲಾರ್ಡ್’! ಸ್ಟ್ರೀಮಿಂಗ್‌ ಎಲ್ಲಿ?

ಯುಗಾದಿ ಹಬ್ಬಕ್ಕೆ ಬರ್ತಿದ್ದಾನೆ ‘ಲ್ಯಾಂಡ್​​ಲಾರ್ಡ್’!

Landlord Movie OTT: ದುನಿಯಾ ವಿಜಯ್ ಅವರ ‘ಲ್ಯಾಂಡ್​​ಲಾರ್ಡ್’ ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಜಡೇಶ್ ಕೆ ಹಂಪಿ ನಿರ್ದೇಶನ ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಯಶಸ್ಸು ಗಳಿಸಿತ್ತು. ಜಡೇಶ್ ಕೆ ಹಂಪಿ ನಿರ್ದೇಶನದ ಈ ಚಿತ್ರ 1980ರಲ್ಲಿ ಗ್ರಾಮೀಣ ಕರ್ನಾಟಕದಲ್ಲಿ ನಡೆಯುವ ಕಥೆಯನ್ನು ಹೇಳುತ್ತದೆ. ಈ ಚಿತ್ರವು ಸಾರಥಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿದೆ.

Vinay Gowda: ಸರಿಯಾಗಿ ನಾಯಿಗಳ ಹೆಸರೇ ಗೊತ್ತಿಲ್ಲ; ಇಂಥವರನ್ನ ಒದ್ದು ಓಡಿಸಬೇಕು: ಡಾಗ್‌ ಸತೀಶ್‌ ಬಗ್ಗೆ ವಿನಯ್‌ ಗೌಡ ಗರಂ

ಇಂಥವರನ್ನ ಒದ್ದು ಓಡಿಸಬೇಕು: ಡಾಗ್‌ ಸತೀಶ್‌ ಬಗ್ಗೆ ವಿನಯ್‌ ಗೌಡ ಗರಂ

Dog Satish: ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯಗಳಿಗೆ ಕಿಚ್ಚ ಸುದೀಪ್ ಅವರ ಹಾಡು ಹಾಕಿ ಡಾಗ್ ಸತೀಶ್ ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಇದಾಗಲೇ ಅವರ ಬಗ್ಗೆ ದೂರುಗಳೂ ದಾಖಲಾಗಿವೆ. , ಬಿಗ್‌ಬಾಸ್‌ ವಿಜೇತ ವಿನಯ್‌ ಗೌಡ ಅವರು ಡಾಗ್‌ ಸತೀಶ್‌ ಬಗ್ಗೆ ಸಂದರ್ಶನವೊಂದರಲ್ಲಿ ಅತ್ಯಂತ ಖಡಕ್‌ ಆಗಿ ಮಾತಾಡಿದ್ದಾರೆ.

MGR : ಎಂಜಿಆರ್ ಬಗ್ಗೆ ಕೀಳು ಮಾತು; ಜನರ ಬಳಿ ಕೈಮುಗಿದು ಕ್ಷಮೆ ಕೇಳಿದ ರಾಜೇಂದ್ರ ಪ್ರಸಾದ್

ಎಂಜಿಆರ್ ಬಗ್ಗೆ ಕೀಳು ಮಾತು; ಕ್ಷಮೆ ಕೇಳಿದ ರಾಜೇಂದ್ರ ಪ್ರಸಾದ್

actor Rajendra Prasad : ತೆಲುಗು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾದ ನಟ ರಾಜೇಂದ್ರ ಪ್ರಸಾದ್, ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ತಮಿಳುನಾಡಿನ ಖ್ಯಾತ ನಟ-ರಾಜಕಾರಣಿ ಎಂಜಿ ರಾಮಚಂದ್ರನ್ ಅಲಿಯಾಸ್ ಎಂಜಿಆರ್ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜೇಂದ್ರ ಪ್ರಸಾದ್, ಕಾಂತಾರಾವ್ ಅವರ ನಟನೆಯನ್ನು ಕೊಂಡಾಡುತ್ತಾ ಕಾಂತಾರಾವ್ ಮಾಡುತ್ತಿದ್ದ ಸಿನಿಮಾ, ಅವರ ಜನಪದ ಶೈಲಿನ ನಟನೆಯನ್ನು ನೋಡಿ ಎಂಜಿಆರ್ ಅಂಥಹವರೇ ಪ್ಯಾಂಟಿನಲ್ಲಿ ಮೂತ್ರವಿಸರ್ಜನೆ ಮಾಡಿಕೊಳ್ಳುತ್ತಿದ್ದರು ಎಂಬ ಹೇಳಿಕೆ ವಿವಾದವಾಗಿತ್ತು.

South OTT releases this week: ಈ ವಾರ OTTಗೆ ಎಂಟ್ರಿ ಕೊಟ್ಟ ಟಾಪ್ ಸೌತ್‌ ಸಿನಿಮಾಗಳಿವು!

ಈ ವಾರ OTTಗೆ ಎಂಟ್ರಿ ಕೊಟ್ಟ ಟಾಪ್ ಸೌತ್‌ ಸಿನಿಮಾಗಳಿವು!

South OTT releases this week: ಮಾರ್ಚ್ 2026 ರ ಎರಡನೇ ಶುಕ್ರವಾರ ಸಿನಿಮಾ ಪ್ರಿಯರಿಗೆ ಒಂದು ಹಬ್ಬದ ಸಂಭ್ರಮವಾಗಿತ್ತು, ಏಕೆಂದರೆ ವಿವಿಧ ಪ್ರಕಾರಗಳ ದಕ್ಷಿಣ ಭಾರತದ ಚಲನಚಿತ್ರಗಳು ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಜೀ 5 ನಂತಹ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಥಮ ಪ್ರದರ್ಶನಗೊಂಡವು. ಕಪಲ್ ಫ್ರೆಂಡ್ಲಿಯಿಂದ ಹಿಡಿದು ಮಲಯಾಳಂ ಪೆನ್ನಮ್ ಪೊರಟ್ಟುಮ್ ಮತ್ತು ಹಾಸ್ಯ ಮಹಾಸಾಯುಲಕು ವಿಘ್ನಯಪ್ತಿವರೆಗೆ, ಪ್ರತಿಯೊಂದು ರೀತಿಯ ಚಲನಚಿತ್ರ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಈ ವಾರ ಯಾವೆಲ್ಲ ಸೌತ್‌ ಸಿನಿಮಾಗಳು ಬಂದಿವೆ ನೋಡೋಣ.

Cocktail 2: 'ಧುರಂಧರ್ 2' ಜೊತೆಗೆ 'ಕಾಕ್‌ಟೇಲ್ 2' ಟೀಸರ್ ಬಿಡುಗಡೆ; ಫಸ್ಟ್ ಲುಕ್ ಪೋಸ್ಟರ್ ಔಟ್‌

'ಧುರಂಧರ್ 2' ಜೊತೆಗೆ 'ಕಾಕ್‌ಟೇಲ್ 2' ಟೀಸರ್ ಬಿಡುಗಡೆ

Cocktail 2: ಹೋಮಿ ಅದಜಾನಿಯಾ ಅವರ ಕಾಕ್‌ಟೇಲ್ 2 ಟೀಸರ್ ಆದಿತ್ಯ ಧಾರ್ ಅವರ ಧುರಂಧರ್: ದಿ ರಿವೆಂಜ್ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಅಭಿನಯದ ಮುಂಬರುವ ಚಿತ್ರ ಕಾಕ್‌ಟೇಲ್ 2 ರ ನಿರ್ಮಾಪಕರು ಇಂದು ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 18 ರಂದು ಚಿತ್ರಮಂದಿರಗಳಲ್ಲಿ ಮಾತ್ರ ಟೀಸರ್ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಬಹುನಿರೀಕ್ಷಿತ ಚಿತ್ರದ ಮೊದಲ ನೋಟವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಲಿದ್ದಾರೆ.

Neena Gupta: 66ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ? ವದಂತಿ ಬಗ್ಗೆ ನಟಿ  ಹೇಳಿದ್ದೇನು?

66ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ? ನಟಿ ಹೇಳಿದ್ದೇನು?

Neena Gupta: ಬಾಲಿವುಡ್​ನ ಹಿರಿಯ ನಟಿ ನೀನಾ ಗುಪ್ತಾ 66ನೇ ವಯಸ್ಸಿನಲ್ಲಿ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಹೈದರಾಬಾದ್‌ನಲ್ಲಿ ನಡೆದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಆರತಕ್ಷತೆಯಲ್ಲಿ ಗುಪ್ತಾ ಭಾಗವಹಿಸಿದ ನಂತರ, ಫೋಟೋಗಳು ಮತ್ತು ವೀಡಿಯೊಗಳಲ್ಲಿ ನಟಿಗೆ ಬೇಬಿ ಬಂಪ್‌ ಬಂದಿದೆ ಎಂಬ ಸುದ್ದಿ ಸಾಕಷ್ಟು ವೈರಲ್‌ ಆಯ್ತು. ಈ ಎಲ್ಲಾ ಮಾತುಗಳಿಗೆ ಇದೀಗ ನಟಿ ಸತ್ಯದ ಕುರಿತು ಸ್ಪಷ್ಟನೆ ನೀಡಿದ್ದಾರೆ.

Varalaxmi Sarathkumar: ಫ್ಯಾಕ್ಟರಿ ರೀತಿ ಮಕ್ಕಳನ್ನ ಹಡೆಯಬೇಡಿ; ನಟಿ ವರಲಕ್ಷ್ಮಿ ಶರತ್‌ಕುಮಾರ್

ಫ್ಯಾಕ್ಟರಿ ರೀತಿ ಮಕ್ಕಳನ್ನ ಹಡೆಯಬೇಡಿ; ನಟಿ ವರಲಕ್ಷ್ಮಿ ಶರತ್‌ಕುಮಾರ್

Varalaxmi Sarathkumar: ನಟಿ ವರಲಕ್ಷ್ಮಿ ಶರತ್‌ಕುಮಾರ್ ತಮ್ಮ ಚೊಚ್ಚಲ ತೆಲುಗು ನಿರ್ದೇಶನದ ಎಸ್ ಸರಸ್ವತಿಯ ಪ್ರಚಾರದಲ್ಲಿ ನಿರತರಾಗಿದ್ದಾರೆ . ಸಂದರ್ಶನದಲ್ಲಿ , , ಇಂದಿನ ಕಾಲದಲ್ಲಿ ಮಕ್ಕಳನ್ನು ಸಾಕಲು ಬೇಕಾದ ಹಣಕಾಸಿನ ಯೋಜನೆಗಳ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ. ಸಹನಟಿ ಪ್ರಿಯಾಮಣಿ ಮತ್ತು ಲಕ್ಷ್ಮಿ ಮಂಚು ಸೇರಿದಂತೆ ಕೆಲವರು ಅವರ ಮಾತನ್ನು ಒಪ್ಪಿಕೊಂಡರೆ, ಇತರರು ನಟಿಯನ್ನು ಟೀಕಿಸಿದರು.

Raani Serial Kannada: ಎಲ್ಲರ ಜೊತೆಗೂ ಬೆರೆಯೋ ಚಿನಕುರುಳಿ `ರಾಣಿ' ಲೆಕ್ಕಾಚಾರದಲ್ಲೂ ಪರ್ಫೆಕ್ಟ್!

Raani : ಎಲ್ಲರ ಜೊತೆಗೂ ಬೆರೆಯೋ `ರಾಣಿ' ಲೆಕ್ಕಾಚಾರದಲ್ಲೂ ಪರ್ಫೆಕ್ಟ್!

Raani Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಣಿ' ಧಾರಾವಾಹಿ ಬಗ್ಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತನ್ನ ಮುಗ್ಧ ನಟನೆಯಿಂದ ಎಲ್ಲರ ಮನಗೆದ್ದಿರುವ ಪುಟಾಣಿ ರಾಣಿ, ಈಗ ಮನೆ ಮನೆಯಲ್ಲೂ ಸದ್ದು ಮಾಡುತ್ತಿದ್ದಾಳೆ. ಪುಟಾಣಿ ರಾಣಿಯ ಪ್ರತಿಯೊಂದು ಹೆಜ್ಜೆಯೂ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯ ದಿನವೇ ಹುಟ್ಟಿದ ರಾಣಿ (Raani), ತನ್ನ ಭವಿಷ್ಯದ ಬಗ್ಗೆ ದೊಡ್ಡ ಕನಸನ್ನೇ ಕಟ್ಟಿಕೊಂಡಿದ್ದಾಳೆ. ಈಗ ಮಾವನಅಂಗಡಿಯಲ್ಲಿ ತನ್ನ ಬುದ್ದಿವಂತಿಕೆ ತೋರಿದ್ದಾಳೆ.

Amruthadhaare Serial: ಮಲ್ಲಿ ಸಪೋರ್ಟ್‌ಗೆ ನಿಂತ ಗೌತಮ್ ದಿವಾನ್! ಜೈದೇವ್‌ ಕಥೆ ಏನು?

Amruthadhaare: ಮಲ್ಲಿ ಸಪೋರ್ಟ್‌ಗೆ ನಿಂತ ಗೌತಮ್ ದಿವಾನ್!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮಲ್ಲಿಗೆ ಜೈದೇವ್‌ ಕೊಡುವ ಕಾಟ ಜೋರಾಗಿದೆ. ಹೇಗಾದ್ರೂ ಮಾಡಿ ಮಲ್ಲಿ ಎಕ್ಸಾಮ್‌ ಹೋಗದಂತೆ ತಡೆ ಮಾಡ್ತಿದ್ದಾನೆ ಜೈದೇವ್‌ . ಹಿಂದಿನ ದಿನ ಭರ್ಜರಿ ಕಾಟ ಕೊಟ್ಟಿದ್ದಲ್ಲದೇ ಈಗ ಮಲ್ಲಿ ಮೇಲೆ ರೌಡಿಗಳನ್ನು ಬಿಟ್ಟಿದ್ದಾನೆ. ಆದರೆ ಇದು ಪ್ಲ್ಯಾನ್‌ ಪ್ಲಾಪ್‌ ಆಗಿದೆ.

Jr NTR: ತೂಕ ಇಳಿಸಿಕೊಂಡ ಜೂನಿಯರ್ ಎನ್‌ಟಿಆರ್‌; ಫ್ಯಾನ್ಸ್‌ ಶಾಕ್‌

ತೂಕ ಇಳಿಸಿಕೊಂಡ ಜೂನಿಯರ್ ಎನ್‌ಟಿಆರ್‌; ಫ್ಯಾನ್ಸ್‌ ಶಾಕ್‌

Jr NTR: ಜೂನಿಯರ್ ಎನ್‌ಟಿಆರ್‌ ಅವರು ಇತ್ತೀಚಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದು ಕೂಡ ಅವರ ತೂಕದ ಬಗ್ಗೆ. ಅನೇಕ ಅಭಿಮಾನಿಗಳು (Fans) ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಫಿಟ್‌ನೆಸ್‌ ಬಗ್ಗೆ ವಿಶೇಷ ಗಮನ ಹರಿಸಿದ ಎನ್‌ಟಿಆರ್, 'ಟೆಂಪರ್' ಸಿನಿಮಾ ಸಮಯದಲ್ಲಿ ಪರ್ಫೆಕ್ಟ್ ಫಿಟ್ ಲುಕ್‌ನಲ್ಲಿ (Look) ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದರು. ಆ ಚಿತ್ರದ ನಂತರ ಎನ್‌ಟಿಆರ್ ಸತತ ಯಶಸ್ಸಿನ ಹಾದಿಯಲ್ಲಿದ್ದಾರೆ.

Naga Chaitanya: ಹೊಸ ಹೇರ್ ಸ್ಟೈಲ್, ರಗಡ್‌ ಲುಕ್‌; ನಾಗ ಚೈತನ್ಯ ಸಿಕ್ಸ್ ಪ್ಯಾಕ್ ಫೋಟೋ ವೈರಲ್‌

ನಾಗ ಚೈತನ್ಯ ಸಿಕ್ಸ್ ಪ್ಯಾಕ್ ಫೋಟೋ ವೈರಲ್‌

Naga Chaitanya: ದಕ್ಷಿಣ ಭಾರತದ ಜನಪ್ರಿಯ ನಟ ನಾಗ ಚೈತನ್ಯ ಅವರ ಮುಂಬರುವ ಪೌರಾಣಿಕ ಥ್ರಿಲ್ಲರ್ ಚಿತ್ರ ವೃಷಕರ್ಮ. ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿನ ಲುಕ್‌ನ ಫೋಟೋಗಳನ್ನು (Look) ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡಿದ್ದಾರೆ.

Loading...