ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

KD The Devil: ಕೆಡಿ ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಸಾಂಗ್‌​​​ ರಿಲೀಸ್! ನೋರಾ ಫತೇಹಿ ಭರ್ಜರಿ​​ ಡ್ಯಾನ್ಸ್

Sanjay Dutt : ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರದ ನೋರಾ ಫತೇಹಿ ಅವರು ನೃತ್ಯ ಮಾಡಿರುವ 'ಸರ್ಸೆ ಸರ್ಸೆ' ಹಾಡು ಬಿಡುಗಡೆಯಾಗಿದೆ. ಆ್ಯಕ್ಷನ್​ ಪ್ರಿನ್ಸ್​​ ಧ್ರುವ ಸರ್ಜಾ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರದಲ್ಲಿ ಸ್ಯಾಂಡಲ್​​ವುಡ್​ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಕಿಚ್ಚ ಸುದೀಪ್​, ರೀಷ್ಮಾ ನಾಣಯ್ಯ ಅವರಂತಹ ಖ್ಯಾತ ನಟರು ಪ್ರಮುಖ ಪಾತ್ರ ವಹಿಸಿದ್ದು, ಬಾಲಿವುಡ್​ನ ಸಂಜಯ್​ ದತ್​​, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಕೂಡಾ ಬಣ್ಣ ಹಚ್ಚಿದ್ದಾರೆ. ಸಂಜಯ್ ದತ್ ಕೂಡಾ ಸಖತ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ.

ಕೆಡಿ ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಸಾಂಗ್‌​​​ ರಿಲೀಸ್!

ಸಂಜಯ್‌ ದತ್‌ -

Yashaswi Devadiga
Yashaswi Devadiga Mar 14, 2026 8:40 PM

ಪ್ರೇಮ್ ನಿರ್ದೇಶನದ (Director Prem) 'ಕೆಡಿ' ಚಿತ್ರದ (KD Cinema) ನೋರಾ ಫತೇಹಿ (Nora Fatehi) ಅವರು ನೃತ್ಯ ಮಾಡಿರುವ 'ಸರ್ಸೆ ಸರ್ಸೆ' ಹಾಡು ಬಿಡುಗಡೆಯಾಗಿದೆ. ಆ್ಯಕ್ಷನ್​ ಪ್ರಿನ್ಸ್​​ ಧ್ರುವ ಸರ್ಜಾ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರದಲ್ಲಿ ಸ್ಯಾಂಡಲ್​​ವುಡ್​ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಕಿಚ್ಚ ಸುದೀಪ್​, ರೀಷ್ಮಾ ನಾಣಯ್ಯ ಅವರಂತಹ ಖ್ಯಾತ ನಟರು ಪ್ರಮುಖ ಪಾತ್ರ ವಹಿಸಿದ್ದು, ಬಾಲಿವುಡ್​ನ ಸಂಜಯ್​ ದತ್​​, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಕೂಡಾ ಬಣ್ಣ ಹಚ್ಚಿದ್ದಾರೆ. ಸಂಜಯ್ ದತ್ (Sanjay Datt)​​ ಕೂಡಾ ಸಖತ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ.

ಇದನ್ನೂ ಓದಿ: Actor Upendra: ಬೆಳಗ್ಗೆ ಲಿಂಕ್ ಪೋಸ್ಟ್ ಮಾಡ್ತೀನಿ, ತಕ್ಷಣ ಡಿಲೀಟ್‌ ಮಾಡ್ತೀನಿ; ಜನರ ತಲೆಗೆ ಹುಳಬಿಟ್ಟ ಉಪೇಂದ್ರ!

ಡೈರೆಕ್ಟರ್​​ ಪ್ರೇಮ್ ಆ್ಯಕ್ಷನ್​​ ಕಟ್​

ಕನ್ನಡ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿ ಸಖತ್​​​ ಸದ್ದು ಮಾಡುತ್ತಿರುವ ಈ ಸಿನಿಮಾಗೆ ಸ್ಟಾರ್ ಡೈರೆಕ್ಟರ್​​ ಪ್ರೇಮ್ ಆ್ಯಕ್ಷನ್​​ ಕಟ್​ ಹೇಳಿದ್ದಾರೆ. 'ಸರ್ಸೆ ನಿನ್ನ ಸೆರಗ ಸರ್ಸೆ' ಕನ್ನಡದ ಟೈಟಲ್‌ ಆಗಿದೆ. ಸಂಜಯ್ ದತ್ ಈ ಚಿತ್ರದಲ್ಲಿ ಧಕ್ ದೇವ್ ಅನ್ನುವ ರೋಲ್ ಮಾಡಿದ್ದಾರೆ.

ನೋರಾ ಫತೇಹಿ ಇಲ್ಲಿ ಸೆನೋರಿಟಾ ಅನ್ನುವ ರೋಲ್ ಮಾಡಿದ್ದಾರೆ. ಕೆಡಿ ಚಿತ್ರದ ಇದೇ ವರ್ಷ ರಿಲೀಸ್ ಆಗುತ್ತಿದೆ. ಏಪ್ರಿಲ್-30 ರಂದು ಈ ಚಿತ್ರ ಎಲ್ಲೆಡೆ ರಿಲೀಸ್ ಆಗುತ್ತಿದೆ. ಬಹು ಭಾಷೆಯಲ್ಲಿಯೇ ಈ ಸಿನಿಮಾ ರಿಲೀಸ್ ಆಗುತ್ತಿದೆ.ಪಂಚ ಭಾಷೆಗಳಲ್ಲೂ ಹಾಡು ಅನಾವರಣಗೊಳ್ಳುತ್ತಿದೆ.

ಏಕಕಾಲಕ್ಕೆ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.



ಟಾಕ್ಸಿಕ್, ಜನ ನಾಯಗನ್​, ಲವ್​ ಮಾಕ್ಟೇಲ್​​ 3ರಂತಹ ಚಿತ್ರಗಳ ಹಿಂದಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್​​ನ ವೆಂಕಟ್​ ಕೆ ನಾರಾಯಣ್​​ ನಿರ್ಮಾಣ ಮಾಡಿರುವ ಈ ಬಹುನಿರೀಕ್ಷಿತ ಚಿತ್ರಕ್ಕೆ, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: Actor Jaggesh: ಮೊಮ್ಮಗನ ಜೊತೆ ಸಂತೋಷದ ಕ್ಷಣ ಹಂಚಿಕೊಂಡ ಜಗ್ಗೇಶ್‌! ತಾತನನ್ನು ನೆನದು ಭಾವುಕ

ಈ ಮುಂಚೆ ‘ಅಣ್ತಮ್ಮ ಜೋಡೆತ್ತು ಕಣೋ ಹಾಡು ರಿಲೀಸ್‌ ಆಗಿತ್ತು. ಬಿಎಸ್ ಮಂಜುನಾಥ್ ಲಿರಿಕ್ಸ್ ಬರೆದಿದ್ದರು. ಖ್ಯಾತ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಹಾಡು ಗಮನ ಸೆಳೆಯುವ ರೀತಿಯಲ್ಲಿ ಇತ್ತು. ಈ ಹಾಡಲ್ಲಿ ಧ್ರುವ ಸರ್ಜಾ- ರಮೇಶ್ ಅರವಿಂದ್ ಹಾಗೂ ಧ್ರುವ ಮತ್ತು ಸಂಜಯ್ ದತ್ ಕಾಣಿಸಿಕೊಳ್ಳುತ್ತಾರೆ. ಎಲ್ಲರದ್ದೂ ರೆಟ್ರೋ ಲುಕ್. ಇದು ಗೆಳೆತನದ ಬಗ್ಗೆ ಮೂಡಿ ಬಂದ ಹಾಡಾಗಿದೆ. ಹೊಸ ವರ್ಷದ ಸಂದರ್ಭದಲ್ಲೇ ಹಾಡು ಬಿಡುಗಡೆ ಆಗಿತ್ತು.