ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Anushka Shetty: ಕೊನೆಗೂ ಅನುಷ್ಕಾ ಶೆಟ್ಟಿಗೆ ಕೂಡಿಬಂತು ಕಂಕಣ ಭಾಗ್ಯ: ಉದ್ಯಮಿ ಜೊತೆ ಮದುವೆ?

Anushka Shetty: ಎಸ್.ಎಸ್. ರಾಜಮೌಳಿ ಅವರ ಬಾಹುಬಲಿ ಫ್ರಾಂಚೈಸಿಯಲ್ಲಿ ಪ್ರಭಾಸ್ ಎದುರು ನಟಿಸಿದ ನಂತರ ತೆಲುಗು ನಟಿ ಅನುಷ್ಕಾ ಶೆಟ್ಟಿ ಪ್ಯಾನ್-ಇಂಡಿಯಾ ಖ್ಯಾತಿಯನ್ನು ಗಳಿಸಿದರು. ಈ ಸಿನಿಮಾ ಬ್ಲಾಕ್ಬಸ್ಟರ್ ಯಶಸ್ಸನ್ನು ಗಳಿಸಿದ್ದಲ್ಲದೆ, ಪ್ರಭಾಸ್ ಮತ್ತು ಅನುಷ್ಕಾ ಜೋಡಿಯ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದವು. ಅಭಿಮಾನಿಗಳು ಜೋಡಿ ಡೇಟಿಂಗ್ ಮಾಡುತ್ತಿದೆ ಎಂದು ಕಮೆಂಟ್‌ ಕೂಡ ಮಾಡುತ್ತಿದ್ದರು. ಆದರೀಗ ನಟಿ ಅನುಷ್ಕಾ ಶೆಟ್ಟಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಬಿಸಿಬಿಸಿ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಕೊನೆಗೂ ಅನುಷ್ಕಾ ಶೆಟ್ಟಿಗೆ ಕೂಡಿಬಂತು ಕಂಕಣ ಭಾಗ್ಯ: ಉದ್ಯಮಿ ಜೊತೆ ಮದುವೆ?

ಅನುಷ್ಕಾ ಶೆಟ್ಟಿ -

Yashaswi Devadiga
Yashaswi Devadiga Mar 15, 2026 8:27 AM

ಎಸ್.ಎಸ್. ರಾಜಮೌಳಿ ಅವರ ಬಾಹುಬಲಿ ಫ್ರಾಂಚೈಸಿಯಲ್ಲಿ ಪ್ರಭಾಸ್ ಎದುರು ನಟಿಸಿದ ನಂತರ ತೆಲುಗು ನಟಿ ಅನುಷ್ಕಾ ಶೆಟ್ಟಿ (Anushka Shetty ) ಪ್ಯಾನ್-ಇಂಡಿಯಾ ಖ್ಯಾತಿಯನ್ನು ಗಳಿಸಿದರು. ಈ ಸಿನಿಮಾ ಬ್ಲಾಕ್ಬಸ್ಟರ್ ಯಶಸ್ಸನ್ನು ಗಳಿಸಿದ್ದಲ್ಲದೆ, ಪ್ರಭಾಸ್ (Actor Prabhas) ಮತ್ತು ಅನುಷ್ಕಾ ಜೋಡಿಯ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದವು. ಅಭಿಮಾನಿಗಳು ಜೋಡಿ ಡೇಟಿಂಗ್ ಮಾಡುತ್ತಿದೆ ಎಂದು ಕಮೆಂಟ್‌ ಕೂಡ ಮಾಡುತ್ತಿದ್ದರು. ಆದರೀಗ ನಟಿ ಅನುಷ್ಕಾ ಶೆಟ್ಟಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ (Wedding Bells Soon) ಕಾಲಿಡಲಿದ್ದಾರೆ ಎಂಬ ಬಿಸಿಬಿಸಿ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. 44ನೇ ವಯಸ್ಸಿನಲ್ಲಿ ಅನುಷ್ಕಾ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.

ವಿವಾಹ ವದಂತಿಗಳು ಮತ್ತೆ ವೈರಲ್

ಈಗ, ಅನುಷ್ಕಾ ಅವರ ವಿವಾಹ ವದಂತಿಗಳು ಮತ್ತೆ ವೈರಲ್ ಆಗುತ್ತಿವೆ. ಆದರೆ, ಈ ಬಾರಿ, ಅವರು ಪ್ರಭಾಸ್ ಅವರೊಂದಿಗೆ ಹೆಸರಿಲ್ಲ. ಉದ್ಯಮಿಯೊಂದಿಗೆ ಮದುವೆಯಾಗುವ ಬಗ್ಗೆ ಯೋಚಿಸುತ್ತಿರಬಹುದು ಎಂದು ವರದಿ ಇದೆ. ಬೆಂಗಳೂರಿನ ಖ್ಯಾತ ಉದ್ಯಮಿಯೊಬ್ಬರ ಜೊತೆ ವಿವಾಹವಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಬೆಂಗಳೂರಿನ ಸೊಸೆಯಾಗಲು ಅನುಷ್ಕಾ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Actor Upendra: ಬೆಳಗ್ಗೆ ಲಿಂಕ್ ಪೋಸ್ಟ್ ಮಾಡ್ತೀನಿ, ತಕ್ಷಣ ಡಿಲೀಟ್‌ ಮಾಡ್ತೀನಿ; ಜನರ ತಲೆಗೆ ಹುಳಬಿಟ್ಟ ಉಪೇಂದ್ರ!

ಉದ್ಯಮಿ ಮತ್ತು ಅನುಷ್ಕಾ ಮದುವೆಗೆ ಎರಡೂ ಕುಟುಂಬದವರು ಈಗಾಗಲೇ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದ್ದು, ಈ ವರ್ಷದ ಅಂತ್ಯದೊಳಗೆ ಶುಭ ಕಾರ್ಯ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ನಟಿ ಅನುಷ್ಕಾ ಶೆಟ್ಟಿ ಅವರ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟಿಯ ಮದುವೆಯ ಅಧಿಕೃತ ಸುದ್ದಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಸಿನಿಮಾ ಕಥೆ ಏನು?

ಸಿನಿಮಾಗಳ ವಿಚಾರಕ್ಕೆ ಬರೋದಾದರೆ, ಅನುಷ್ಕಾ ಮಿಸ್ ಶೆಟ್ಟಿ ಮಿಸ್ಟರ್ ಪಾಲಿಶೆಟ್ಟಿ ಚಿತ್ರದಲ್ಲಿ ಕಾಣಿಸಿಕೊಂಡರು, ಇದು ಗಲ್ಲಾಪೆಟ್ಟಿಗೆಯಲ್ಲಿ ಸರಾಸರಿ ಗಳಿಕೆ ಕಂಡಿತು. ಅವರ ಕೊನೆಯ ಬಿಡುಗಡೆಯಾದ ಘಟ್ಟಿ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಲಿಲ್ಲ ಆದರೆ ವಿಮರ್ಶಕರಿಂದ ಪ್ರಶಂಸೆಯನ್ನು ಪಡೆಯಿತು. ನಟಿ ಕಥನರ್ - ದಿ ವೈಲ್ಡ್ ಸೋರ್ಸೆರರ್ ಮೂಲಕ ಮಲಯಾಳಂನಲ್ಲಿ ಪದಾರ್ಪಣೆ ಮಾಡಲು ಸಹ ಸಿದ್ಧರಾಗಿದ್ದಾರೆ.

ರೋಜಿನ್ ಥಾಮಸ್ ನಿರ್ದೇಶನದ 'ಕಥನರ್ - ದಿ ವೈಲ್ಡ್ ಸೋರ್ಸರರ್' ಚಿತ್ರದಲ್ಲಿ ಜಯಸೂರ್ಯ ಕೇರಳದ ಪೌರಾಣಿಕ ಪಾದ್ರಿ ಕಡಮತ್ತತ್ತು ಕಥನರ್ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ಮಾಪಕರು 2024 ರಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದರು ಮತ್ತು ಅಂದಿನಿಂದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: KD The Devil: ಕೆಡಿ ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಸಾಂಗ್‌​​​ ರಿಲೀಸ್! ನೋರಾ ಫತೇಹಿ ಭರ್ಜರಿ​​ ಡ್ಯಾನ್ಸ್

ಎರಡು ವರ್ಷಗಳ ಹಿಂದೆಯೇ ಚಿತ್ರತಂಡವು ಚಿತ್ರದ ಒಂದು ಸಣ್ಣ ಕುಕ್‌ ಬಿಡುಗಡೆ ಮಾಡಿತು. 'ಕಥನರ್' ಈ ವರ್ಷದ ಯಾವುದೇ ಸಮಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.