ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರೀತಮ್ ತಯಾರಿಸಿದ ವಿಠ್ಠಲ ರೂಪದ ಗಣೇಶ ಮೂರ್ತಿ

ಮನೆಯಲ್ಲಿಯೇ ಮೂರ್ತಿಗಳನ್ನು ತಯಾರಿಸು ವುದರ ಜತೆಗೆ, ನಗರದ ಕಲ್ಮಠ ಗಲ್ಲಿಯ ವಿನೋದ ಬಡಿಗೇರ ಅವರ ಗಣೇಶ ಮೂರ್ತಿ ತಯಾರಿಕಾ ಕಾರ್ಯದಲ್ಲಿಯೂ ಪ್ರೀತಮ್ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾನೆ. ಹಿರಿಯ ಕಲಾವಿದರೊಂದಿಗೆ ಕೆಲಸ ಮಾಡುವ ಮೂಲಕ ಮೂರ್ತಿ ತಯಾರಿಕೆಯ ವಿವಿಧ ಸೂಕ್ಷ್ಮತೆಗಳನ್ನು ಕಲಿಯುತ್ತಿರುವ ಈ ಬಾಲಕ,

ಶರೀಫ ನದಾಫ

ಬೈಲಹೊಂಗಲ: ಗಣೇಶೋತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿರುವ ಸಂದರ್ಭದಲ್ಲಿ, ನಗರದ 14 ವರ್ಷದ ಬಾಲಕನೊಬ್ಬ ತನ್ನ ಕಲಾತ್ಮಕ ಪ್ರತಿಭೆಯಿಂದ ಗಣೇಶನ ಮೂರ್ತಿಗಳನ್ನು ರೂಪಿಸುತ್ತ ಗಮನ ಸೆಳೆಯುತ್ತಿದ್ದಾನೆ. ಬೈಲಹೊಂಗಲ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ನಿವಾಸಿ ಹಾಗೂ ಕೆ.ಆರ್.ಸಿ.ಇ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಪ್ರೀತಮ್ ಹಾಂಡು ರಂಗ ಬೊಂಗಾಳೆ ಬಾ ಲ್ಯದಿಂದಲೇ ಗಣೇಶ ಮೂರ್ತಿ ತಯಾರಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡು, ಇದೀಗ ತನ್ನ ಕೈಚಳಕದಿಂದ ವೈವಿಧ್ಯಮಯ ಹಾಗೂ ಮನಮೋಹಕ ಮೂರ್ತಿಗಳನ್ನು ರೂಪಿಸುತ್ತಿದ್ದಾನೆ.

ಪ್ರೀತಮ್ಗೆ ಗಣೇಶ ಮೂರ್ತಿ ತಯಾರಿಕೆಯ ಆಸಕ್ತಿ ಏಳನೇ ವಯಸ್ಸಿನಲ್ಲೇ ಮೊಳಕೆಯೊಡೆದಿದೆ. ಆರಂಭದಲ್ಲಿ ಮನೆಯಲ್ಲಿಯೇ ಗಣೇಶನ ಸಣ್ಣ ಮೂರ್ತಿಗಳನ್ನು ತಯಾರಿಸುವ ಮೂಲಕ ಕಲಿಕೆ ಆರಂಭಿಸಿದ ಬಾಲಕ, ವರ್ಷದಿಂದ ವರ್ಷಕ್ಕೆ ತನ್ನ ಕೌಶಲವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಕೊಂಡಿದ್ದಾನೆ.

ಇದನ್ನೂ ಓದಿ: Unique Ganeshotsav: ಸಾಯಿರಾಂ ಶಾಲೆಯಲ್ಲಿ ವಿಭಿನ್ನ ಗಣೇಶೋತ್ಸವ; ಆರೋಗ್ಯ, ಶಿಸ್ತು–ಏಕತೆಯ ಸಂದೇಶ

ಮಣ್ಣು ಹಾಗೂ ವಿವಿಧ ಪರಿಕರಗಳನ್ನು ಬಳಸಿ ಮೂರ್ತಿಯ ಆಕಾರ, ಭಂಗಿ, ಅಲಂಕಾರ ಹಾಗೂ ಮುಖದ ಭಾವನೆಗಳನ್ನು ನೈಜವಾಗಿ ಮೂಡಿಸುವಲ್ಲಿ ವಿಶೇಷ ಆಸಕ್ತಿ ಹೊಂದಿರುವ ಪ್ರೀತಮ್, ಓದಿನ ಜೊತೆಗೆ ತನ್ನ ಕಲಾ ಪ್ರತಿಭೆಯನ್ನೂ ಬೆಳೆಸಿಕೊಳ್ಳುತ್ತಿದ್ದಾನೆ.

ಮನೆಯಲ್ಲಿಯೇ ಮೂರ್ತಿಗಳನ್ನು ತಯಾರಿಸು ವುದರ ಜತೆಗೆ, ನಗರದ ಕಲ್ಮಠ ಗಲ್ಲಿಯ ವಿನೋದ ಬಡಿಗೇರ ಅವರ ಗಣೇಶ ಮೂರ್ತಿ ತಯಾರಿಕಾ ಕಾರ್ಯದಲ್ಲಿಯೂ ಪ್ರೀತಮ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ. ಹಿರಿಯ ಕಲಾವಿದರೊಂದಿಗೆ ಕೆಲಸ ಮಾಡುವ ಮೂಲಕ ಮೂರ್ತಿ ತಯಾರಿಕೆಯ ವಿವಿಧ ಸೂಕ್ಷ್ಮತೆಗಳನ್ನು ಕಲಿಯುತ್ತಿರುವ ಈ ಬಾಲಕ, ಗಣೇಶನ ವಿವಿಧ ರೂಪ ಗಳನ್ನು ತನ್ನ ಕಲ್ಪನೆ ಹಾಗೂ ಕೈಚಳಕದ ಮೂಲಕ ಸಾಕಾರಗೊಳಿ ಸುತ್ತಿದ್ದಾನೆ. ಬಾಲ್ಯದಲ್ಲಿಯೇ ಇಂತಹ ಕಲೆಯತ್ತ ಒಲವು ಬೆಳೆಸಿಕೊಂಡಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಬಾರಿಯ ಗಣೇಶೋತ್ಸವಕ್ಕಾಗಿ ಪ್ರೀತಮ್ ವಿಶೇಷವಾಗಿ ಪಂಡರಪುರದ ಪಾಂಡುರಂಗ ದೇವಸ್ಥಾನ ಹಾಗೂ ವಿಠ್ಠಲ ರೂಪದ ಗಣೇಶ ಮೂರ್ತಿಯನ್ನು ನಿರ್ಮಿಸಿದ್ದು, ಭಕ್ತಿ ಮತ್ತು ಕಲೆಯ ಅಪೂರ್ವ ಸಂಯೋಜನೆಯಾಗಿ ಮೂಡಿಬಂದಿದೆ. ಬಾಲಕನ ಕಲ್ಪನಾಶಕ್ತಿ, ಶ್ರದ್ಧೆ ಹಾಗೂ ಪರಿಶ್ರಮಕ್ಕೆ ಈ ಮೂರ್ತಿ ಸಾಕ್ಷಿಯಾಗಿದ್ದು, ಗಣೇಶ ಮೂರ್ತಿ ತಯಾರಿಕೆಯಲ್ಲಿ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡುವ ಭರವಸೆಯನ್ನು ಮೂಡಿಸಿದೆ. ಚಿಕ್ಕ ವಯಸ್ಸಿನಲ್ಲಿಯೇ ಕಲೆಯೊಂದನ್ನು ಆರಾಧನೆಯಂತೆ ಬೆಳೆಸಿಕೊಂಡಿರುವ ಪ್ರೀತಮ್ನ ಪ್ರತಿಭೆಗೆ ಸಾರ್ವಜ ನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.