ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗ್ರಾಮೀಣ ನಾಟಕಗಳ ಪ್ರಚಾರಕ್ಕೂ ಎಐ ಬಳಕೆ

ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ ಪ್ರದರ್ಶನ ಕಾಣುತ್ತಿರುವ ಗುಳೇದಗುಡ್ಡದ ಸಂಗಮೇಶ್ವರ ನಾಟ್ಯ ಸಂಘದಿಂದ ಪಕ್ಕದ ಮನಿ ಚಂದ್ರಿ, ನೋಡಾಕ ನೀ ಸುಂದ್ರಿ ನಾಟಕ ಹಾಗೂ ಕೆಬಿಆರ್‌ ಡ್ರಾಮಾ ಕಂಪನಿ ಯ ಗಿಚ್ಚ ಗಿಲಿಗಲಿ ನಾಯಕಿ ಸೇರಿದಂತೆ ವಿವಿಧ ಅನೇಕ ಕಂಪನಿಗಳು ಎಐ ತಂತ್ರಜ್ಞಾನಗಳನ್ನು ಬಳಸಿ ಪ್ರಚಾರ ಕೈಗೊಂಡಿದ್ದು, ಇದಕ್ಕೆ ಲಕ್ಷಗಟ್ಟಲೇ ಜನರು ವೀಕ್ಷಣೆ ಮಾಡಿದ್ದಾರೆ. ಎಐ ಪ್ರಚಾರದ ವಿಡಿಯೊ ವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ದಿನದಿಂದ ಇಲ್ಲಿಯವರೆಗೆ 24 ಲಕ್ಷಕ್ಕಿಂತ ಹೆಚ್ಚಿನ ಜನರು ವಿಡಿಯೊ ವೀಕ್ಷಿಸಿದ್ದಾರೆ.

ಅಭಿಷೇಕ ಪಾಟೀಲ ಬಾಗಲಕೋಟೆ

ಬನಶಂಕರಿ ಜಾತ್ರೆಯಲ್ಲಿ ಪ್ರದರ್ಶನಗೊಳ್ಳುವ ನಾಟಕಗಳ ಸಂಘದಿಂದ ವಿನೂತನ ಪ್ರಚಾರ ತಿಂಗಳು ಪೂರ್ತಿ ನಡೆಯುವ ಜಾತ್ರೆ

ಕೃತಕ ಬುದ್ಧಿ ಮತ್ತೆ (ಎಐ) ಬಳಸಿಕೊಂಡು ವಿಡಿಯೊ ಮಾಡುವುದು, ಫೋಟೊಗಳನ್ನು ಎಡಿಟ್ ಮಾಡುವುದು ಸಾಮಾನ್ಯ. ಆದರೆ, ಜಾತ್ರೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ನಾಟಕ ಪ್ರಚಾರಕ್ಕೆ ಎಐ ಬಳಸಿಕೊಂಡಿರುವುದು ತಂತ್ರಜ್ಞಾನ ಸರಿಯಾದ ಬಳಕೆಗೆ ಹಿಡಿದಿರುವ ಕನ್ನಡಿ ಎಂದರೆ ತಪ್ಪಾಗ ಲಾರದು.

ಇನ್‌ಸ್ಟಾಗ್ರಾಮ್‌ನ್ನು ಸಮಯ ವ್ಯರ್ಥ ಮಾಡಲು ಬಳಸುವುದೇ ಹೆಚ್ಚಾದ ದಿನಗಳಲ್ಲಿ ಅದರಲ್ಲಿ ಬಂದಿರುವ ರೀಲ್ ಒಂದನ್ನು ನೋಡಿ, ನಮ್ಮ ಪ್ರಚಾರಕ್ಕೆ ಎಐ ಬಳಸಿಕೊಳ್ಳಬಹುದು ಎಂದು ಯೋಚನೆ ಮಾಡಿ, ತಮ್ಮ ನಾಟಕದ ಪ್ರಚಾರದ ವಿಡಿಯೋ ಮಾಡಿಕೊಂಡು, ಆ ವಿಡಿಯೊ ಮೂಲಕವೇ ನಾಟಕ ನಿರೀಕ್ಷೆಗೂ ಮೀರಿ ಪ್ರಚಾರ ಪಡೆಯುವಂತಾಗಿದೆ.

ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ ಪ್ರದರ್ಶನ ಕಾಣುತ್ತಿರುವ ಗುಳೇದಗುಡ್ಡದ ಸಂಗಮೇಶ್ವರ ನಾಟ್ಯ ಸಂಘದಿಂದ ಪಕ್ಕದ ಮನಿ ಚಂದ್ರಿ, ನೋಡಾಕ ನೀ ಸುಂದ್ರಿ ನಾಟಕ ಹಾಗೂ ಕೆಬಿಆರ್‌ ಡ್ರಾಮಾ ಕಂಪನಿಯ ಗಿಚ್ಚ ಗಿಲಿಗಲಿ ನಾಯಕಿ ಸೇರಿದಂತೆ ವಿವಿಧ ಅನೇಕ ಕಂಪನಿಗಳು ಎಐ ತಂತ್ರಜ್ಞಾನಗಳನ್ನು ಬಳಸಿ ಪ್ರಚಾರ ಕೈಗೊಂಡಿದ್ದು, ಇದಕ್ಕೆ ಲಕ್ಷಗಟ್ಟಲೇ ಜನರು ವೀಕ್ಷಣೆ ಮಾಡಿ ದ್ದಾರೆ. ಎಐ ಪ್ರಚಾರದ ವಿಡಿಯೊ ವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ದಿನದಿಂದ ಇಲ್ಲಿಯವರೆಗೆ 24 ಲಕ್ಷಕ್ಕಿಂತ ಹೆಚ್ಚಿನ ಜನರು ವಿಡಿಯೊ ವೀಕ್ಷಿಸಿದ್ದಾರೆ.

ಈ ವಿಡಿಯೊ ಮೂಲಕವೇ ನಮ್ಮ ನಾಟಕಕ್ಕೆ ಹೆಚ್ಚಿನ ಪ್ರಚಾರ ದೊರೆತಿದೆ ಎನ್ನುತ್ತಾರೆ ವೃತ್ತಿ ರಂಗಭೂಮಿ ಕಲಾವಿದೆ ಹಾಗೂ ಸಂಗಮೇಶ್ವರ ನಾಟ್ಯ ಸಂಘದ ಮಾಲಕಿ ಜ್ಯೋತಿ ಗುಳೇದಗುಡ್ಡ. ಇನ್‌ಸ್ಟಾಗ್ರಾಮ್ನಲ್ಲಿ ಎಐ ವಿಡಿಯೋ ನೋಡಿ ಅದನ್ನು ತಯಾರಿಸಿದವರಿಗೆ ಹೆಲಿಕ್ಯಾಪ್ಟರ್‌ ಮೂಲಕ ನಮ್ಮ ನಾಟಕ ಪ್ರಚಾರ ಮಾಡುವ ವಿಡಿಯೋ ಮಾಡಿಕೊಡಲು ಹೇಳಿದ್ದೆ. ಅವರು ವಾರದ ಸಮಯ ತೆಗೆದುಕೊಂಡು ಉತ್ತಮ ವಿಡಿಯೋ ಮಾಡಿದ್ದಾರೆ.

ಇದನ್ನೂ ಓದಿ: Surendra Pai Column: ಹೊಸ ವರ್ಷದ ಸಂಪನ್ನತೆ: ಸರಳ ಸೂತ್ರಗಳಿವು

ಈ ವಿಡಿಯೋ ಮೂಲಕ ರಾಜ್ಯಾದ್ಯಂತ ನಮ್ಮ ನಾಟಕ ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ ಪ್ರದರ್ಶನಕೊಳ್ಳುತ್ತಿರುವುದು ಗೊತ್ತಾಗಿದೆ. ಕಲಾ ಪ್ರೇಮಿಗಳು ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕಾರಣದಿಂದ ನಾಟಕಗಳನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ತಿಂಗಳ ಕಾಲ ನಡೆಯುವ ಜಾತ್ರೆ: ಉತ್ತರ ಕರ್ನಾಟಕದ ಪ್ರಸಿದ್ಧ ಬನಶಂಕರಿ ದೇವಿ ಜಾತ್ರೆಯ ರಥೋತ್ಸವ ಜನವರಿ 3 ರಂದು ನಡೆಯಲಿದೆ. ಅಂದಿನಿಂದ ಅಂದಾಜು ತಿಂಗಳವರೆಗೆ ನಡೆಯುವ ಜಾತ್ರೆಯಲ್ಲಿ ನಾಟಕ ಕಂಪನಿಗಳದ್ದೇ ದರಬಾರ್. ಜಾತ್ರೆಯಲ್ಲಿ ಪಾಲ್ಗೊಳ್ಳುವ ನಾಟಕ ಕಂಪನಿಗಳಿಗೆ ಒಂದು ವರ್ಷಕ್ಕೆ ಆಗುವ ಆದಾಯ ಈ ಒಂದು ತಿಂಗಳಲ್ಲಿ ಬರಲಿದೆ ಎಂದರೆ ತಪ್ಪಾಗಲಾರದು.‌

ಜನವರಿ 1 ರಿಂದಲೇ ನಾಟಕಗಳ ಪ್ರದರ್ಶನ ನಡೆಯಲಿದ್ದು, ದಿನಕ್ಕೆ 4 ಪ್ರದರ್ಶನ ನಡೆಯಲಿದ್ದು, ಸಂಜೆಯ ನಂತರ ಪ್ರದರ್ಶನಗೊಳ್ಳುವ ನಾಟಕಗಳಿಗೆ ಜನರು ಹೆಚ್ಚು. ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಹಾಗೂ ಆರಮುಗಂ ಖ್ಯಾತಿಯ ರವಿಶಂಕರ ಸೇರಿದಂತೆ ಅನೇಕ ಖ್ಯಾತ ನಟರು ಇಲ್ಲಿನ ನಾಟಕಗಳಲ್ಲಿ ಪಾಲ್ಗೊಂಡಿದ್ದಾರೆ.

ಜತೆಗೆ ಈಚೆಗೆ ನಿಧನರಾದ ಕಲಿಯುಗದ ಖ್ಯಾತಿಯ ರಾಜು ತಾಳಿಕೋಟಿ ಸೇರಿದಂತೆ ಸೀರಿಯಲ್ ಹಾಗೂ ರಿಯ್ಯಾಲಿಟಿ ಶೋದಲ್ಲಿ ಹೆಸರು ಮಾಡಿರುವ ಅನೇಕರು ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ದ್ದಾರೆ.

AI Pic

ಈ ಬಾರಿ ಕಾಮಿಡಿ ಕಿಲಾಡಿ ಖ್ಯಾತಿಯ ಬಸವರಾಜ ದಂಪತಿಯೊಂದಿಗೆ, ಗಿಚ್ಚ ಗಿಲಿಗಿಲಿಯ ನಯನಾ, ಕಾಮಿಡಿ ಕಿಲಾಡಿ ಖ್ಯಾತಿಯ ಸುಜಾತಾ ಗುಬ್ಬಿ, ಹರೀಶ ಹಿರಿಯೂರ ಸೇರಿದಂತೆ ಅನೇಕ ಕಲಾವಿದರು ವಿವಿಧ ನಾಟಕಗಳಲ್ಲಿ ಬಣ್ಣ ಹಚ್ಚಲಿದ್ದಾರೆ.

ಹರಿದು ಬರುತ್ತಿರುವ ಜನಸಾಗರ: ಜನವರಿ 3 ರಂದು ಬನದ ಹುಣ್ಣಿಮೆಯಂದು ನಡೆಯುವ ಬನಶಂಕರಿ ರಥೋತ್ಸವದ ಅಂಗವಾಗಿ ಈಗಾಗಲೇ ನವರಾತ್ರಿ ಪ್ರಾರಂಭವಾಗಿದ್ದು, ಈ ಹಿನ್ನೆಲೆ ಯಲ್ಲಿ ಬನಶಂಕರಿ ದೇವಿಯ ದರ್ಶನ ಪಡೆಯಲು ಪ್ರತಿ ದಿನ ಸಾವಿರಾರೂ ಗಟ್ಟಲೇ ಜನ ಆಗಮಿಸು ತ್ತಿದ್ದಾರೆ.

ಎರಡ್ಮೂರು ನಾಟಕ ಕಂಪನಿಗಳಿಂದ ಎಐ ಪ್ರಚಾರ

ಎಐ ತಂತ್ರಜ್ಞಾನ ಮೂಲಕ ಸಿನಿಮಾ ಪ್ರಚಾರ, ವಿವಿಧ ವಸ್ತುಗಳ ಬ್ರ್ಯಾಡಿಂಗ್ ಮಾಡುವುದು ಸಾಮಾನ್ಯವಾಗಿರುವ ದಿನಗಳಲ್ಲಿ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಪಾಲ್ಗೊಂಡಿರುವ ಗುಳೇದ ಗುಡ್ಡದ ಸಂಗಮೇಶ್ವರ ನಾಟ್ಯ ಸಂಘದಿಂದ ಹೆಲಿಕ್ಯಾಪ್ಟರ್‌ಹಾಗೂ ಕೆಬಿಆರ್‌ಡ್ರಾಮಾ ಕಂಪನಿಯ ಗಿಚ್ಚ ಗಿಲಿಗಲಿ ನಾಯಕಿ ಡ್ರೋನ್ ಮೂಲಕ ಪ್ರಚಾರ ಮಾಡುವ ವಿಡಿಯೊಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಇದರ ಜತೆಗೆ ಇನ್ನೂ ಎರಡು ನಾಟಕ ಕಂಪನಿಗಳು ಎಐ ಬಳಸಿಕೊಂಡು ಪ್ರಚಾರ ಮಾಡುತ್ತಿವೆ.

ಹೆಸರಿನಲ್ಲೇ ಜನರ ಆಕರ್ಷಣೆ

ಬನಶಂಕರಿದೇವಿ ಜಾತ್ರೆಯಲ್ಲಿ ಕಮತಗಿಯ ಶ್ರೀಗುರು ಹೊಳೆಹುಚ್ಚೇಶ್ವರ ನಾಟ್ಯ ಸಂಘದಿಂದ ಹುಡಗಿ ಕತ್ತಲದಾಗ ಹುಡುಗ ನೀ ಹಿತ್ತಲದಾಗ, ತಾಳಿಕೋಟಿಯ ಶ್ರೀಗುರು ಖಾಸ್ಗತೇಶ್ವರ ನಾಟ್ಯ ಸಂಘದಿಂದ ಗಂಗಿ ನೀ ಜಗ್ಗ ಬ್ಯಾಡ ಲುಂಗಿ, ಕುಂಟೋಜಿಯ ಘನಮಠೇಶ್ವರ ನಾಟ್ಯ ಸಂಘದಿಂದ ಹುಬ್ಬ ಹಾರಿಸ್ಯಾಳ, ಜಾತ್ರ್ಯಾಗ ಧೂಳ್ ಎಬ್ಬಿಸ್ಯಾಳ, ಮಂಡಲಗಿರಿಯ ಶ್ರೀಗುರು ಸಿದ್ದಲಿಂಗೇಶ್ವರ ನಾಟ್ಯ ಸಂಘದಿಂದ ನಿಂಗಿ ಗತ್ತು, ಸಂಗ್ಯಾಗ ಗೊತ್ತು ಹಾಗೂ ಗುಳೇದಗುಡ್ಡದವರ ಪಕ್ಕದ ಮನಿ ಚಂದ್ರಿ, ನೋಡಾಕ ನೀ ಸುಂದ್ರಿ, ಕೆಬಿಆರ್‌ಡ್ರಾಮಾ ಕಂಪನಿಯ ಗಿಚ್ಚ ಗಿಲಿಗಿಲಿ ನಾಯಕಿ ಸೇರಿದಂತೆ ಇನ್ನೂ ಹೆಚ್ಚಿನ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ.