ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಹೋರಾತ್ರಿ ನಾಟಕಕ್ಕೆ ಸಿಗದ ಕಲಾವಿದರು?

ವಚನ ಕಲ್ಯಾಣಕ್ಕೆ ಒಟ್ಟು 75 ಕಲಾವಿದರನ್ನು ಆಯ್ಕೆ ಮಾಡುವ ಗುರಿ ಹೊಂದಿದ್ದರೂ, ಅರ್ಜಿ ಯನ್ನು ಕೇವಲ ಕೇವಲ 58 ಮಂದಿ ಮಾತ್ರ ಸಲ್ಲಿಸಿದ್ದಾರೆ. ನಿಗದಿತ ದಿನಾಂಕ ಮುಗಿದರೂ ಅಗತ್ಯ ವಿರುವಷ್ಟು ಕಲಾವಿದರಿಂದ ಅರ್ಜಿ ಬಾರದಿರುವುದರಿಂದ ಇದೀಗ ಅರ್ಜಿ ಅವಧಿಯನ್ನು ವಿಸ್ತರಿಸಲು ಇಲಾಖೆ ಮುಂದಾಗಿದೆ.

ವೈಭವ ಸಿ ಕೊಳ್ಳಿ ಬೆಂಗಳೂರು

ವಚನ ಕಲ್ಯಾಣ ಅಹೋರಾತ್ರಿ ನಾಟಕ: ಯುವ ಕಲಾವಿದರಿಗೆ ಪ್ರೋತ್ಸಾಹ

ತಾಂತ್ರಿಕ ದೋಷದ ನೆಪದಲ್ಲಿ ಅರ್ಜಿ ಅವಧಿ ವಿಸ್ತರಣೆ ನಿರೀಕ್ಷೆ

ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ವಚನ ಕಲ್ಯಾಣ ಅಹೋರಾತ್ರಿ ನಾಟಕಕ್ಕೆ ಅಗತ್ಯವಿರುವಷ್ಟು ಕಲಾವಿದರ ಕೊರತೆ ಎದುರಾಗಿ ದೆಯೇ ಎನ್ನುವ ಅನುಮಾನ ಶುರುವಾಗಿದೆ.

ಈ ಹಿಂದೆ ಮಲೆಗಳಲ್ಲಿ ಮದುಮಗಳು ಕಾದಂಬರಿ ಆಧಾರಿತ ಅಹೋರಾತ್ರಿ ನಾಟಕದ ಯಶಸ್ಸಿನ ಬಳಿಕ, 12ನೇ ಶತಮಾನದ ವಚನ ಕ್ರಾಂತಿಯನ್ನು ಆಧರಿಸಿ ವಚನ ಕಲ್ಯಾಣ ನಾಟಕಕ್ಕೆ ಸರಕಾರ ಮುಂದಾಗಿತ್ತು. ಇದಕ್ಕೆ ಬೇಕಿರುವ ಅನುದಾನವನ್ನು ಮೀಸಲಿಟ್ಟು, ನಾಟಕದಲ್ಲಿ ಅಭಿನಯಿಸಲು ಯುವ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಜಿ ಆಹ್ವಾನಿಸಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿಗಳು ಬಾರದಿರುವುದರಿಂದ ಅವಧಿಯನ್ನು ವಿಸ್ತರಿಸಲಾಗಿದೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ವಚನ ಕಲ್ಯಾಣಕ್ಕೆ ಒಟ್ಟು 75 ಕಲಾವಿದರನ್ನು ಆಯ್ಕೆ ಮಾಡುವ ಗುರಿ ಹೊಂದಿದ್ದರೂ, ಅರ್ಜಿಯನ್ನು ಕೇವಲ ಕೇವಲ 58 ಮಂದಿ ಮಾತ್ರ ಸಲ್ಲಿಸಿದ್ದಾರೆ. ನಿಗದಿತ ದಿನಾಂಕ ಮುಗಿದರೂ ಅಗತ್ಯವಿರುವಷ್ಟು ಕಲಾವಿದರಿಂದ ಅರ್ಜಿ ಬಾರದಿರುವುದರಿಂದ ಇದೀಗ ಅರ್ಜಿ ಅವಧಿಯನ್ನು ವಿಸ್ತರಿಸಲು ಇಲಾಖೆ ಮುಂದಾಗಿದೆ.

18 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದ್ದು, ರಂಗಭೂಮಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತಿದೆ. ಮೈಸೂರು, ಬೆಳಗಾವಿ, ಬೀದರ್, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಿಂದ ಅರ್ಜಿಗಳು ಬಂದಿರುವುದು ಗಮನಾರ್ಹ.

ಇದನ್ನೂ ಓದಿ: K V Chandramouli Column: ಮರುನಾಮಕರಣ: ಪರಿವರ್ತನೆಯೋ? ರಾಜಕೀಯವೋ ?

ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಗ್ರಾಮೀಣ ಹಿನ್ನೆಲೆಯ ಯುವಕರು ಸಹ ಭಾಗವಹಿಸುತ್ತಿರುವುದು ಸಕಾರಾತ್ಮಕ ಅಂಶವಾಗಿದೆ ಎಂದು ಇಲಾಖೆ ಹೇಳಿದೆ.

ಏನಿದು ವಚನ ಕಲ್ಯಾಣ?: ಈ ಹಿಂದೆ ರಾಷ್ಟ್ರಕವಿ ಕುವೆಂಪು ಅವರ ಮಲೆಗಳಲ್ಲಿ ಮದು ಮಗಳು ಕೃತಿಯನ್ನು ಆಧರಿಸಿ ಪ್ರದರ್ಶಿಸಲಾದ ಅಹೋರಾತ್ರಿ ನಾಟಕವು ಮೈಸೂರು ಹಾಗೂ ಬೆಂಗಳೂರುಗಳಲ್ಲಿ 116 ಯಶಸ್ವಿ ಪ್ರದರ್ಶನಗಳನ್ನು ನೀಡಿ ಜನಮನ ಗೆದ್ದಿತ್ತು. ಅದೇ ಮಾದರಿಯಲ್ಲಿ ಇದೀಗ 12ನೇ ಶತಮಾನದ ಶರಣ ಚಳುವಳಿ ಮತ್ತು ವಚನ ಸಾಹಿತ್ಯ ದ ತತ್ವಗಳನ್ನು ಆಧರಿಸಿ ವಚನ ಕಲ್ಯಾಣ ಎಂಬ ಹೊಸ 9 ಗಂಟೆಗಳ ದೀರ್ಘ ನಾಟಕವನ್ನು ರೂಪಿಸುತ್ತಿದೆ.

ವಚನ ಕಲ್ಯಾಣ ನಾಟಕವು 12ನೇ ಶತಮಾನದ ಶರಣ ಚಳುವಳಿ, ವಚನ ಸಾಹಿತ್ಯ ಮತ್ತು ಸಮಾಜ ಪರಿವರ್ತನೆಯ ಆಶಯಗಳನ್ನು ರಂಗರೂಪದಲ್ಲಿ ಜನರಿಗೆ ತಲುಪಿಸುವ ವಿಶಿಷ್ಟ ಪ್ರಯತ್ನವಾಗಿದೆ. ಬಸವಣ್ಣ ಮತ್ತು ಶರಣರ ಕಾಲದ ಸಾಮಾಜಿಕ ಕ್ರಾಂತಿ, ಸಮಾನತೆ, ಧರ್ಮ-ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಆಧರಿಸಿದೆ. ವಚನ ಸಾಹಿತ್ಯದ ಸಾರವನ್ನು ನಾಟಕದ ಮೂಲಕ ಪ್ರೇಕ್ಷಕರಿಗೆ ತಲುಪಿಸುವುದು ಇದರ ಮುಖ್ಯ ಉದ್ದೇಶ ವಾಗಿದೆ.

ಈ ಮಹಾ ಪ್ರಯೋಗಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ.ಕೆ.ಮರುಳು ಸಿದ್ದಪ್ಪ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚನೆಯಾಗಿದೆ. ನಾಟಕ ರಚನೆ ಕೆ.ವೈ. ನಾರಾಯಣ ಸ್ವಾಮಿ, ನಿರ್ದೇಶನ ಸಿ. ಬಸವಲಿಂಗಯ್ಯ, ಸಂಗೀತ ಹಂಸಲೇಖ, ರಂಗ ಪರಿಕರ ಶಶಿಧರ ಅಡಪ, ಉಡುಗೆ ವಿನ್ಯಾಸ ಪ್ರಮೋದ್ ಶಿಗ್ಗಾಂವ, ಬೆಳಕು ನಂದಕಿಶೋರ್ ಮಾಡಲಿದ್ದಾರೆ. ಆದರೆ, ಅರ್ಜಿಗಳ ಸಂಖ್ಯೆ ಇನ್ನೂ ಕಡಿಮೆ ಇರುವುದರಿಂದ, ಆಯ್ಕೆ ಪ್ರಕ್ರಿಯೆಗೆ ಸವಾಲು ಎದುರಾ ಗುತ್ತಿದೆ. ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದ ಯುವಕರಲ್ಲಿ ರಂಗಭೂಮಿ ಆಸಕ್ತಿ ತುಸು ಕಡಿಮೆಯಾದಂತಿದೆ. ಜತೆಗೆ, ಪೂರ್ಣಕಾಲಿಕವಾಗಿ ಮೂರು ತಿಂಗಳು ಸಮಯ ಮೀಸಲಿಡ ಬೇಕಿರುವುದರಿಂದ ಅನೇಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ

ಜೂನ್ ಅಂತ ದಲ್ಲಿ ಪ್ರದರ್ಶನ?

ಕಲಾವಿದರಿಗೆ ಮೂರು ತಿಂಗಳ ತರಬೇತಿ ನಂತರ, ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಪ್ರದರ್ಶನ ಆರಂಭಿಸುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 10 ರಿಂದ 12 ಪ್ರದರ್ಶನ ಆಯೋಜಿಸಿ, ನಂತರ ರಾಜ್ಯದ ವಿವಿಧ ಜಿಲ್ಲೆ ಗಳಲ್ಲಿ ಪ್ರದರ್ಶನ ನೀಡುವ ಯೋಜನೆ ರೂಪಿಸಲಾಗಿದೆ. ಈ ಮೂಲಕ ವಚನ ಸಾಹಿತ್ಯ ವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ.

image

ವಚನ ಕಲ್ಯಾಣ ಅಹೋರಾತ್ರಿ ನಾಟಕ ಆಯೋಜಿಸಲು ಸಿದ್ಧತೆ ನಡೆದಿದ್ದು, ಶೀಘ್ರದಲ್ಲಿಯೇ ರಂಗ ತರಬೇತಿ ಪ್ರಾರಂಭವಾಗಲಿದೆ. ನಾಟಕದ ಕಾರ್ಯ ಸಂಯೋಜಿಸಲು ಹಿರಿಯ ರಂಗಕರ್ಮಿ ಮರುಳಸಿದ್ದಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಶೀಘ್ರದ ಅಭ್ಯಾಸ ಹಾಗೂ ಪ್ರದರ್ಶನದ ದಿನಾಂಕ ಪ್ರಕಟಿಸಲಾಗುವುದು.

- ಬಿ.ಎಸ್.ಮಂಜುನಾಥ ಸ್ವಾಮಿ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
image

ನಾಟಕಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಒಟ್ಟು 75 ಕಲಾವಿದರನ್ನು ಆಯ್ಕೆ ಮಾಡುವ ಯೋಜನೆ ಇದೆ. ಕಲಾವಿದರಲ್ಲಿ ನಿರಾಸಕ್ತಿ ಎಂಬುದಿಲ್ಲ, ತಾಂತ್ರಿಕ ಸಮಸ್ಯೆ ಪ್ರಮುಖ ಕಾರಣ. ಅವಽ ವಿಸ್ತರಣೆ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಗಳು ಬರಲಿವೆ ಎಂಬ ನಿರೀಕ್ಷೆ ಇದೆ. ಕಲಾವಿದರಿಗೆ ಮೂರು ತಿಂಗಳ ತರಬೇತಿ ನಂತರ ನಾಟಕ ಪ್ರದರ್ಶಿಸಲಾಗುತ್ತದೆ.

- ಸಿ.ಬಸವಲಿಂಗಯ್ಯ, ನಾಟಕದ ನಿರ್ದೇಶಕ