2 ದಿನದಲ್ಲಿ ರಾಜ್ಯ ನಾಯಕರು ದೆಹಲಿಗೆ
15ರ ಒಳಗೆ ಸಚಿವರ ಪಟ್ಟಿ ಸಿದ್ದ
ಸಂಪುಟ ವಿಸ್ತರಣೆಗೆ ಒತ್ತಡ
ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ರಾಜ್ಯದಲ್ಲಿ ಬಹು ನಿರೀಕ್ಷಿತ ಮಂತ್ರಿ ಮಂಡಲ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಹನ್ನೆರಡು ಮಂದಿ ಸಚಿವರ ಆಡಳಿತ ಆರಂಭಿಸಿ ಒಂದು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಉಳಿದ 20 ಸಚಿವರ ಸಂಪುಟ ವಿಸ್ತರಣೆಗೆ ಒತ್ತಡ ವಿಪರೀತವಾಗಿದೆ. ಇದನ್ನರಿತ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಸೋಮವಾರ ವಿದೇಶ ಪ್ರವಾಸದಿಂದ ವಾಪಸಾಗಲಿದ್ದು ಇದರ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆಗೆ ಚಾಲನೆ ಸಿಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಜುಲೈ 8ರಂದು ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ದೆಹಲಿಗೆ ತೆರಳಿದ್ದು ರಾಜ್ಯ ದಲ್ಲಿ ಸದ್ಯ ನಡೆಯುತ್ತಿರುವ ಎಸ್ ಐಆರ್, ಮುಂದೆ ಎದುರಾಗುವ ಬಿಬಿಎಂಪಿ ಚುನಾವಣೆ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಬಾಕಿ ಉಳಿದಿರುವ 20 ಸಚಿವರ ನೇಮಕಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆದು ನೂತನ ಸಚಿವರ ಪಟ್ಟಿ ಅಂತಿಮಗೊಳ್ಳುವ ಸಂಭವ ಇದೆ.
ಇದನ್ನೂ ಓದಿ: Cabinet Expansion: ಸಚಿವ ಸ್ಥಾನಕ್ಕಾಗಿ ಯಾವುದೇ ಶಾಸಕರ ಬೆಂಬಲಿಗರು ಬರಬಾರದು: ಸಿಎಂ ಡಿ ಕೆ ಶಿವಕುಮಾರ್ ಸೂಚನೆ
ನೂತನ ಸಚಿವರ ಪಟ್ಟಿ ಒಂದೇ ದಿನದಲ್ಲಿ ಸಿದ್ಧವಾಗದಿದ್ದರೆ ಚರ್ಚೆ ಮತ್ತೆರಡು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ, ಏಕೆಂದರೆ ಉಳಿದಿರುವ 20 ಮಂತ್ರಿ ಸ್ಥಾನಗಳನ್ನು ಜಾತಿ, ಧರ್ಮ, ಪ್ರಾಂತ್ಯ, ಜಿಲ್ಲೆ ಹಾಗೂ ಪಕ್ಷ ನಿಷ್ಠೆ, ಹಿರಿಯರು, ಕಿರಿಯರು ಎನ್ನುವ ಆಧಾರದಲ್ಲಿ ಹಂಚಿಕೆ ಮಾಡ ಬೇಕಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸುಮಾರು 6 ರಿಂದ 7 ಬಾರಿ ಶಾಸಕರಾದವರು ಮುಂದಿನ ಚುನಾವಣೆಗಳಲ್ಲಿ ಸ್ಪರ್ಧೆಯನ್ನು ಮಾಡಿದವರು ಸೇರಿದಂತೆ 45ಕ್ಕೂ ಹೆಚ್ಚು ಶಾಸಕರು ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ, ಆದ್ದರಿಂದ ಸಚಿವ ಸ್ಥಾನ ಹಂಚಿಕೆ ನಾಯಕರಿಗೆ ದೊಡ್ಡ ಸವಾ ಲಾಗಲಿದೆ. ವಿಶೇಷ ಎಂದರೆ ಈ ಬಾರಿ ಮಂತ್ರಿ ಸ್ಥಾನಗಳ ಹಂಚಿಕೆಯಲ್ಲಿ ಹೈಕಮಾಂಡ್ ಪ್ರಾಬಲ್ಯ ಹೆಚ್ಚಾಗಿರುತ್ತದೆ. ಅದರಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾ ರ್ಜುನ ಖರ್ಗೆ ಅವರ ಪಾತ್ರ ಹೆಚ್ಚಾಗಿರ ತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಏಕೆಂದರೆ ಸಿದ್ದರಾಮಯ್ಯ ಅವರು ಈಗಾಗಲೇ ಮೂರು ವರ್ಷಗಳ ಕಾಲ ಮುಖ್ಯಮಂತ್ರಿ ಅಧಿಕಾರ ಅನುಭವಿಸಿರು ವುದರಿಂದ ಹಾಗೂ ತಮ್ಮ ಪುತ್ರ ಯತೀಂದ್ರ ಅವರೇ ಸಂಪುಟದಲ್ಲಿರುವ ಕಾರಣ ವಿಸ್ತರಣೆ ಸಂದರ್ಭದಲ್ಲಿ ಹೆಚ್ಚು ಹಠ ಹಿಡಿಯುವ ಸಾಧ್ಯತೆ ಕಡಿಮೆ. ಇನ್ನು ಡಿ.ಕೆ. ಶಿವಕುಮಾರ್ ತಮ್ಮ ಬೇಡಿಕೆ ಯಂತೆ ಮುಖ್ಯಮಂತ್ರಿ ಸ್ಥಾನ ವನ್ನೇ ಗಿಟ್ಟಿಸಿರುವುದ ರಿಂದ ತಮ್ಮವರಿಗೇ ಮಂತ್ರಿ ಸ್ಥಾನ ನೀಡಬೇಕೆಂದು ಪಟ್ಟುಹಿಡಿಯಲಾಗದು. ಆದ್ದರಿಂದ ದಲಿತ ಸಿಎಂ ಪ್ರಸ್ತಾಪ ಮೂಲೆ ಗುಂಪಾಗಿರುವುದರಿಂದ ಮತ್ತು ಈ ಹಿಂದಿನ ಅವಧಿಯಲ್ಲಿ ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನಿರೀಕ್ಷೆಗಳು ಈಡೇರದ ಕಾರಣ ಸಂಪುಟ ವಿಸ್ತರಣೆ ವಿಷಯದಲ್ಲಿ ಖರ್ಗೆ ಅವರ ಕೈಬಲ ಹೆಚ್ಚಾಗಿರುವ ಸಂಭವ ಕಾಣುತ್ತಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ. ಹೀಗಾಗಿ ಸಂಪುಟ ಸೇರುವವರ ಪಟ್ಟಿ ಯಲ್ಲಿ ಹೈಕಮಾಂಡ್ ಕೋಟಾ ಅಡಿಯಲ್ಲಿ ಖರ್ಗೆ ಬೆಂಬಲಿಗರಿಗೆ ಹೆಚ್ಚು ಅವಕಾಶ ಸಿಕ್ಕರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಹೇಳಲಾಗುತ್ತಿದೆ.
ಪಟ್ಟಿ ಈಗಾಗಲೇ ಸಿದ್ದವಾಗಿದೆಯೇ? ಹಾಗೆ ನೋಡಿದರೆ ಮುಖ್ಯಮಂತ್ರಿ ಪ್ರಮಾಣವಚನ ಸಂದರ್ಭ ದಲ್ಲಿ ಬಹುತೇಕ ಸಂಭವನೀಯ ಸಚಿವರ ಪಟ್ಟಿ ಸಿದ್ಧವಾಗಿತ್ತು. ಇದರಲ್ಲಿ ಸಂಖ್ಯಾಶಾಸ್ತ್ರದ ಲೆಕ್ಕಾಚಾರದಲ್ಲಿ 13 ಮಂದಿಗೆ ಮಾತ್ರ ಮೊದಲ ಹಂತದಲ್ಲಿ ಮಂತ್ರಿ ಸ್ಥಾನ ನೀಡಲಾಗಿತ್ತು ಎನ್ನಲಾಗಿದೆ. ಇನ್ನುಳಿದಂತೆ ಶಿವರಾಜ್ ತಂಗಡಗಿ, ರುದ್ರಪ್ಪ ಲಮಾಣಿ, ಎಚ್.ಸಿ.ಬಾಲಕೃಷ್ಣ, ತನ್ವೀರ್ ಸೇಠ್ ಸೇರಿದಂತೆ ಅನೇಕ ಸಚಿವರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಈಗ ಒಂದಷ್ಟು ಹೆಸರುಗಳನ್ನು ಸೇರಿಸುವುದು ಮತ್ತು ತೆಗೆಯುವ ಸರ್ಕಸ್ ಮಾಡು ವುದಷ್ಟೇ ಬಾಕಿಯಾಗಿದ್ದು ಇದಕ್ಕಾಗಿ ತಿಣುಕಾಡಬೇಕಾಗಿದೆ.
ಇಲ್ಲಿ ಜಾತಿ ಲೆಕ್ಕಾಚಾರವೇ ಆಧಾರ ಲೆಕ್ಕಾಚಾರದ ಪ್ರಕಾರ, ಮುಖ್ಯಮಂತ್ರಿ ಅವರು ಒಕ್ಕಲಿಗ ಸಮಾಜಕ್ಕೆ ಸೇರಿರುವ ಕಾರಣ ಅವರ ಸಮುದಾಯಕ್ಕೆ ಆದ್ಯತೆ ಕಡಿಮೆ, ಆದರೂ ಇನ್ನೂ ನಾಲ್ಕು ಮಂದಿಗೆ ಸ್ಥಾನ ಸಿಗಬಹುದು. ಆದರೆ ಲಿಂಗಾಯತ ಸಮಾಜಕ್ಕೆ ಹೆಚ್ಚು ಆದ್ಯತೆ ನೀಡುವ ಚರ್ಚೆ ಇರುವ ಕಾರಣ ಇನ್ನೂ 5 ಮಂದಿಗೆ ಮಂತ್ರಿಸ್ಥಾನ ಲಭಿಸಬಹುದು. ಹಾಗೆಯೇ ಪರಿಶಿಷ್ಟ ಜಾತಿಯಲ್ಲಿ ಎಡಗೈ ಮತ್ತು ಬಲಗೈ ಸಮಾಜಗಳಿಗೆ ತಲಾ ಒಂದೊಂದು ಅವಕಾಶ ಸಿಗಬಹುದು ಎನ್ನಲಾಗಿದೆ. ಆದರೆ ಹಿಂದುಳಿದ ವರ್ಗದ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇಲ್ಲದ ಕಾರಣ ಆ ವರ್ಗಕ್ಕೆ ಇನ್ನೂ ನಾಲ್ಕರಿಂದ ಐದು ಮಂದಿಗೆ ಸಂಪುಟದಲ್ಲಿ ಅವಕಾಶ ಲಭಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.