ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಿಕ್ಕಬಳ್ಳಾಪುರವಿನ್ನು ವಿಶ್ವಬಳ್ಳಾಪುರ: ಮಧುಸೂದನ ಸಾಯಿ

ಚಿಕ್ಕಬಳ್ಳಾಪುರ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವರ್ಷಗಳ ಹಿಂದೆ ಉದ್ಘಾಟಿಸಿದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯು ಬಿಲ್ಲಿಂಗ್ ಕೌಂಟರ್‌ಗಳಿಲ್ಲದೆ ಎಲ್ಲ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಆರೈಕೆ ನೀಡುತ್ತಿದ್ದು ಇಂತಹ ಸೌಲಭ್ಯ ನೀಡುವ ವಿಶ್ವದ ಏಕೈಕ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಗುರುತಿಸಿಕೊಂಡಿದೆ.

ಮುನಿರಾಜು ಎಂ ಅರಿಕೆರೆ

ಸತ್ಯಸಾಯಿಗ್ರಾಮದ ಉಚಿತ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮತ್ತಷ್ಟು ಮೇಲ್ದರ್ಜೆಗೆ : ಸದ್ಗುರು ಮಾಧ್ಯಮ ಸಂವಾದ

ಚಿಕ್ಕಬಳ್ಳಾಪುರ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವರ್ಷಗಳ ಹಿಂದೆ ಉದ್ಘಾಟಿಸಿದ ಶ್ರೀ ಮಧುಸದನ ಸಾಯಿ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯು ಬಿಲ್ಲಿಂಗ್ ಕೌಂಟರ್‌ಗಳಿಲ್ಲದೆ ಎಲ್ಲ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಆರೈಕೆ ನೀಡುತ್ತಿದ್ದು ಇಂತಹ ಸೌಲಭ್ಯ ನೀಡುವ ವಿಶ್ವದ ಏಕೈಕ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಗುರುತಿಸಿಕೊಂಡಿದೆ.

360 ಹಾಸಿಗೆ ಸೌಲಭ್ಯದ ಈ ಆಸ್ಪತ್ರೆಯು ಸದ್ಯವೇ 960ಕ್ಕೂ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಲಿದ್ದು ಚಿಕ್ಕಬಳ್ಳಾಪುರ ಇನ್ನು ಮುಂದೆ ವಿಶ್ವಬಳ್ಳಾಪುರವಾಗಲಿದೆ ಎಂದು ಒನ್ ಇಂಡಿಯಾ ಒನ್ ವರ್ಲ್ಡ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಹೇಳಿದರು.

ತಾಲೂಕಿನ ಮುದ್ದೇನಹಳ್ಳಿ ಸಮೀಪದ ಸತ್ಯಸಾಯಿ ಗ್ರಾಮದಲ್ಲಿ ಗುರುವಾರ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವ ಸೇವೆಯೇ ಮಾಧವ ಸೇವೆ ಎಂಬ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಪರಿವರ್ತನೆ ಸಾಧ್ಯ. ಕೆಲಸ ಹೆಚ್ಚು, ಪ್ರಚಾರ ಕಡಿಮೆ ಇರಬೇಕು ಎಂಬುದು ಸತ್ಯಸಾಯಿ ಬಾಬಾ ಅವರ ಸಂದೇಶವಾಗಿದ್ದು, ಅದನ್ನೇ ನಮ್ಮ ಸೇವಾ ಸಂಸ್ಥೆ ಧ್ಯೇಯವನ್ನಾಗಿಸಿಕೊಂಡಿದೆ ಎಂದರು.

ಇದನ್ನೂ ಓದಿ: Chinthamani News: ಜು.11ರಂದು ಬೆಂಗಳೂರಿಗೆ ಚಿಂತಾಮಣಿಯಿಂದ ಬಸ್ ವ್ಯವಸ್ಥೆ; ಸರ್ಕಾರಿ ನೌಕರರಿಗೆ ಆರ್. ಅಶೋಕ್ ಕುಮಾರ್ ಕರೆ

ತಾವು ಛತ್ತೀಸ್‌ಗಢದಲ್ಲಿ ಜನಿಸಿದ್ದು, ತಮ್ಮ ಪೋಷಕರು ಪುಟ್ಟಪರ್ತಿ ಸತ್ಯಸಾಯಿ ಬಾಬಾ ಅವರ ಭಕ್ತರಾಗಿದ್ದರಿಂದ ಉನ್ನತ ಶಿಕ್ಷಣಕ್ಕಾಗಿ ಪುಟ್ಟಪರ್ತಿಗೆ ಬರುವ ಅವಕಾಶ ದೊರೆಯಿತು. ಅಲ್ಲಿ ಸತ್ಯಸಾಯಿ ಬಾಬಾ ಅವರ ಆಶೀರ್ವಾದದಿಂದ ಜೀವನದ ದಿಕ್ಕು ಬದಲಾಯಿತು. ಕನ್ನಡ ಕಲಿಯಿರಿ ಹಾಗೂ ಕರ್ನಾಟಕವನ್ನೇ ಕಾರ್ಯಕ್ಷೇತ್ರವಾಗಿಸಿಕೊಳ್ಳಿ ಎಂಬ ಬಾಬಾ ಅವರ ಮಾರ್ಗದರ್ಶನದಿಂದ ಇಂದು ಕನ್ನಡದಲ್ಲಿ ಮಾತನಾಡುವ ಅವಕಾಶ ದೊರೆತಿರುವುದು ತಮ್ಮ ಸೌಭಾಗ್ಯ ಎಂದು ಹೇಳಿದರು.

ಸುಮಾರು ಐವತ್ತು ವರ್ಷಗಳ ಹಿಂದೆಯೇ ಸತ್ಯಸಾಯಿ ಬಾಬಾ ಅವರು ಮುದ್ದೇನಹಳ್ಳಿಯನ್ನು ಆಶೀರ್ವದಿಸಿ ಸತ್ಯಸಾಯಿ ಗ್ರಾಮ ಎಂದು ನಾಮಕರಣ ಮಾಡಿದ್ದರು. ಈ ಕ್ಷೇತ್ರ ರಾಜ್ಯಕ್ಕೆ ದಾರಿ ದೀಪವಾಗಲಿದೆ ಎಂಬ ಅವರ ಸಂಕಲ್ಪ ಇಂದು ಸಾಕಾರಗೊಂಡಿದೆ ಎಂದು ತಿಳಿಸಿದರು. ಆರೋಗ್ಯ ಸೇವೆ ವ್ಯಾಪಾರವಾಗಬಾರದು : ಸಮಾಜದಲ್ಲಿ ಆರೋಗ್ಯ ಸೇವೆ ವ್ಯಾಪಾರದ ವಸ್ತುವಾಗ ಬಾರದು. ಗುಣಮಟ್ಟದ ಆರೋಗ್ಯ ಸೇವೆ ಪ್ರತಿಯೊಬ್ಬರಿಗೂ ಉಚಿತವಾಗಿ ಲಭ್ಯವಾಗಬೇಕು ಎಂಬ ಉದ್ದೇಶ ದಿಂದ ಸೇವಾ ಕಾರ್ಯಗಳನ್ನು ವಿಸ್ತರಿಸಲಾಗಿದೆ.

Screenshot_3 ok

ಇದುವರೆಗೆ ಸುಮಾರು 13 ಲಕ್ಷಕ್ಕೂ ಹೆಚ್ಚು ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗಿದೆ. ಬಾಗೇಪಲ್ಲಿ ಭಾಗದಲ್ಲಿ ಆರೋಗ್ಯ ಸೇವೆಗಳ ವಿಸ್ತರಣೆಯಿಂದ ಶಿಶು ಮರಣ ಪ್ರಮಾಣ ಗಣನೀಯ ವಾಗಿ ಕಡಿಮೆಯಾಗಿದ್ದು, ಉತ್ತಮ ಆರೋಗ್ಯ ವ್ಯವಸ್ಥೆಯೇ ಉತ್ತಮ ಸಮಾಜ ನಿರ್ಮಾಣಕ್ಕೆ ಆಧಾರವಾಗಿದೆ ಎಂದು ಹೇಳಿದರು. ರಾಯಪುರ ಸೇರಿದಂತೆ ದೇಶದ ವಿವಿಧ ಉಚಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸಲಾಗಿದ್ದು, ಅಲ್ಲಿನ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಸಹ ಶ್ಲಾಸಿzರೆ ಎಂದು ಹೇಳಿದರು.

ಒನ್ ಇಂಡಿಯಾ ಒನ್ ವರ್ಲ್ಡ್ ಅಭಿಯಾನದ ಭಾಗವಾಗಿ ಭಾರತವಲ್ಲದೆ ಅಮೆರಿಕ, ತಾಂಜಾನಿಯಾ, ಫಿಜಿ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳಲ್ಲಿ ವೈದ್ಯಕೀಯ, ಶಿಕ್ಷಣ ಮತ್ತು ಆಧ್ಯಾತ್ಮ ಸೇವೆ ನೀಡಲಾಗುತ್ತಿದೆ ಎಂದವರು ತಿಳಿಸಿದರು.

ಉಚಿತ ಶಿಕ್ಷಣದಿಂದ ಸಮಾಜಮುಖಿ ಪರಿವರ್ತನೆ: ರಾಜ್ಯದ 18 ಜಿಲ್ಲೆಗಳಲ್ಲಿ ಉಚಿತ ಗುರುಕುಲ ಶಿಕ್ಷಣ ನೀಡಲಾಗುತ್ತಿದ್ದು, ಬಡ ಮತ್ತು ಗ್ರಾಮೀಣ ಕುಟುಂಬಗಳ ಮಕ್ಕಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜಮುಖಿ ವೈದ್ಯರು, ನರ್ಸ್‌ಗಳು ಹಾಗೂ ವಿವಿಧ ಕ್ಷೇತ್ರಗಳ ಪರಿಣಿತರನ್ನು ರೂಪಿಸಲಾಗುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ಅನ್ನದಾಸೋಹ ಸೇವೆಗಳನ್ನು ಯಾವುದೇ ಪ್ರತಿPಲಾಪೇಕ್ಷೆಯಿಲ್ಲದೆ ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಮಾನವಸೇವೆಯ ಜೀವಂತ ಮಾದರಿ: ನರಸಿಂಹಮೂರ್ತಿ: ಮಾನವ ಅಭ್ಯುದಯ ವಿಶ್ವವಿದ್ಯಾ ಲಯದ ಕುಲಪತಿ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ಆಧ್ಯಾತ್ಮಿಕತೆ ಮತ್ತು ಮಾನವ ಸೇವೆಯ ಸಮನ್ವಯವೇ ಸತ್ಯಸಾಯಿ ಗ್ರಾಮದ ವಿಶೇಷತೆ ಎಂದರು. ಸತ್ಯಸಾಯಿ ಬಾಬಾ ಈ ಕ್ಷೇತ್ರಕ್ಕೆ 31 ಬಾರಿ ಭೇಟಿ ನೀಡಿ ಆಶೀರ್ವದಿಸಿದ್ದರು. ಅವರು 2011ರಲ್ಲಿ ದೇಹತ್ಯಾಗ ಮಾಡಿದರೂ ಅವರ ದೈವಿಕ ಸಂಕಲ್ಪವನ್ನು ಶ್ರೀ ಮಧುಸೂದನ ಸಾಯಿ ಕಳೆದ 11 ವರ್ಷಗಳಿಂದ ಯಶಸ್ವಿಯಾಗಿ ಮುಂದು ವರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಪತ್ರಕರ್ತರಿಗೆ ಉಚಿತ ಆರೋಗ್ಯ ಕಾರ್ಡ್ ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಸತ್ಯಸಾಯಿ ಗ್ರಾಮದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ಆರೋಗ್ಯ ಕಾಡ್ ಗಳನ್ನು ನೀಡಲಾಗುವುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು. ಪತ್ರಕರ್ತರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಜಿಲ್ಲೆಯ 80ಕ್ಕೂ ಹೆಚ್ಚು ಪತ್ರಕರ್ತರು ಭಾಗವಹಿಸಿದ್ದರು.