ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌ಮಾಗಿ ಉತ್ಸವಕ್ಕೆ ಕ್ರಿಸ್ʼಮಸ್‌ ಸಂಭ್ರಮ ಸಾಥ್

ಒಂದೆಡೆ ಅರಮನೆ ಅಂಗಳದಲ್ಲಿ ಮಾಗಿ ಉತ್ಸವ, ಮತ್ತೊಂದೆಡೆ ಕ್ರಿಸ್ ಮಸ್ ರಜೆ, ಮಗ ದೊಂದು ಕಡೆ ಕೈಬೀಸಿ ಕರೆಯುವ ವಸ್ತು ಪ್ರದರ್ಶನ, ಚಾಮುಂಡಿ ಬೆಟ್ಟ, ಮೃಗಾಲಯ ಸೇರಿ ದಂತೆ ಮೈಲಾರಿ ದೋಸೆ, ಹನುಮಂತು ಪಲಾವ್ ನಂತಹ ಬಾಯೂರಿಸುವ ತಿಂಡಿ ತಿನಿಸು ಮೈಸೂರಿನಲ್ಲಿ ಪ್ರವಾಸಿಗರನ್ನು ಹಿಡಿದಿಟ್ಟುಕೊಂಡಿದೆ.

ಇತ್ತ ವರ್ಷಾಂತ್ಯ, ಅತ್ತ ಹೊಸ ವರ್ಷದ ಸ್ವಾಗತಕ್ಕೆ ಪ್ರವಾಸಿಗರಿಂದ ಕಿಕ್ಕಿರಿದ ಅರಮನೆ ನಗರಿ ಮೈಸೂರು

ಕೆ.ಜೆ.ಲೋಕೇಶ್ ಬಾಬು ಮೈಸೂರು

ಮೈ ಕೊರೆಯುವ ಚಳಿ ಹಾಗೂ ಇಬ್ಬನಿಯ ನಡುವೆಯೂ ಮೈಸೂರು ಮುದುಡಿಕೊಂಡಿಲ್ಲ. ಒಂದು ವಾರದಿಂದ ಎಲ್ಲಿ ನೋಡಿದರಲ್ಲಿ ಜನವೋ ಜನ, ವಾಹನಗಳ ದಟ್ಟಣೆ ಇಡೀ ಮೈಸೂರನ್ನು ಆವರಿಸಿದೆ.

ಒಂದೆಡೆ ಅರಮನೆ ಅಂಗಳದಲ್ಲಿ ಮಾಗಿ ಉತ್ಸವ, ಮತ್ತೊಂದೆಡೆ ಕ್ರಿಸ್ ಮಸ್ ರಜೆ, ಮಗ ದೊಂದು ಕಡೆ ಕೈಬೀಸಿ ಕರೆಯುವ ವಸ್ತು ಪ್ರದರ್ಶನ, ಚಾಮುಂಡಿ ಬೆಟ್ಟ, ಮೃಗಾಲಯ ಸೇರಿದಂತೆ ಮೈಲಾರಿ ದೋಸೆ, ಹನುಮಂತು ಪಲಾವ್ ನಂತಹ ಬಾಯೂರಿಸುವ ತಿಂಡಿ ತಿನಿಸು ಮೈಸೂರಿನಲ್ಲಿ ಪ್ರವಾಸಿಗರನ್ನು ಹಿಡಿದಿಟ್ಟುಕೊಂಡಿದೆ. ಪರಿಣಾಮ, ಇಡೀ ನಗರ ಜನಜಾತ್ರೆಯಾಗಿದೆ.

ಚಳಿಯ ಸಂಜೆಗಳು: ನಗರದ ಎಲ್ಲಾ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿಪೊಟ್ಟಣ ಜೋಡಿಸಿ ಟ್ಟಂತೆ ವಾಹನಗಳ ನಿಲುಗಡೆ, ಮೈಸೂರಿನ ಹೃದಯ ಭಾಗದ ಹೋಟೆಲುಗಳಲ್ಲಿ ತಿಂಡಿ, ಊಟದ ಸಮಯದಲ್ಲಿ ಕಿಕ್ಕಿರಿದ ಜನಸಂದಣಿ ಸಾಮಾನ್ಯವಾಗಿಬಿಟ್ಟಿದೆ.

ಚಳಿಯ ಸಂಜೆಯಲ್ಲಿ ಅರಮನೆಗೆ ಬಂದ ನಾಗರಿಕರು, ಪ್ರವಾಸಿಗರು ಅರಳಿ ನಳನಳಿಸುತ್ತಿದ್ದ ಹೂವಿನ ಲೋಕಕ್ಕೆ ವಿಸ್ಮಿತರಾಗುತ್ತಿದ್ದಾರೆ. ಶೃಂಗೇರಿಯ ವಿದ್ಯಾಶಂಕರ ದೇಗುಲದ ಸೌಂದರ್ಯಕ್ಕೆ ಅಚ್ಚರಿ ಪಟ್ಟರೆ, ಸಾಲುಮರ ತಿಮ್ಮಕ್ಕನ ಪ್ರತಿಕೃತಿ ನೋಡಿ ಪುಳಕಿತಗೊಳ್ಳು ತ್ತಿದ್ದಾರೆ.

ಇದನ್ನೂ ಓದಿ: Lalbagh Flower Show: ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ರಂಜಿಸಲಿರುವ ಸಂಗೊಳ್ಳಿ ರಾಯಣ್ಣ- ಕಿತ್ತೂರು ಚೆನ್ನಮ್ಮ

ಅರಳಿದ ಹೂವಿನ ಲೋಕ: ಸುಮಾರು 25 ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡಗಳು, ಮರಿಗೋಲ್ಡ್, ಸಾಲ್ತಿಯ, ತೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ಫ್ರೆಂಚ್ ಮಂಗೋಲ್ಡ್, ಜಿನಿಯಾ ಪೆಲಂಬೂಡಿಯ ಸೇರಿ 35 ಜಾತಿಯ ಹೂವಿನ ಗಿಡಗಳು, ಅಂದಾಜು 4 ಲಕ್ಷ ನಾನಾ ಹೂವುಗಳನ್ನು ಪ್ರದರ್ಶನಕ್ಕೆ ಬಳಸಲಾಗಿದೆ.

ಗುಲಾಬಿ, ಕೈಸಾಂಥಿಮಮ್, ಪಿಂಗ್ ಪಾಂಗ್, ಕಾರ್ನೆಷನ್, ಆಸ್ಟಮೇರಿಯ, ಜರ್ಬೇರಾ, ಆಂಥೋರಿಯಮ್, ಆರ್ಕಿಡ್ಸ್, ಬ್ಲೂಡ್ಡೆಸಿ ಹೂಗಳನ್ನು ಅಲಂಕರಿಸಲಾಗುವುದು. ಶೃಂಗೇರಿ ದೇವಸ್ಥಾನದ ಮಾದರಿಯನ್ನು ಹೂವಿನಿಂದ ಅಲಂಕರಿಸಲಾಗಿದೆ.

ಆಪರೇಷನ್ ಸಿಂಧೂರ: ಮುಮ್ಮಡಿ ಕೃಷ್ಣರಾಜ ಒಡೆಯರ್ ಪ್ರತಿಕೃತಿ, ಸಂವಿಧಾನ ಪ್ರಸ್ತಾವನೆ, ಕಾಳಿಂಗ ಮರ್ಧನ, ವಿಶ್ವಕಪ್ ವಿಜೇತ ಮಹಿಳಾ ಕ್ರಿಕೆಟ್ ತಂಡ, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸೇನಾ ಪರಿಕರಗಳ ಮಾದರಿಗಳು ಆಕರ್ಷಿಸಿದರೆ, ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ದೇಶಕ್ಕೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಶೌರ್ಯದಿಂದ ನಿಂತಿದ್ದಾರೆ.

Screenshot_4 R

ಮಕ್ಕಳಿಗೆ ವಿಶೇಷ ಆಕರ್ಷಣೆ: ಮಕ್ಕಳ ಆಕರ್ಷಣೆಗೆ ವಿವಿಧ ಮಾದರಿಯ 2 ಕೊಕ್ಕರೆಗಳು, ಕೊಂಬೆಯಲ್ಲಿ ಕುಳಿತಿರುವ 2 ಪಕ್ಷಿಗಳು, ಒಂದು ಲೇಡಿ ಬಗ್ (ದುಂಬಿ), ಒಂದು ಕ್ಯಾರೇಟ್ ಹಿಡಿದಿರುವ ಮೊಲ, ಎರಡು ಮೊಲದ ನಗುವಿನ ಮುಖ, ಒಂದು ಹುಳುವಿನ ಆಕಾರ, ಮಾವಿನ ಹಣ್ಣಿನ ಮಾದರಿ, ಮಾತಾ ಮತ್ತು ’ಕರಡಿ ಮಾದರಿ ರೂಪುಗೊಳ್ಳುತ್ತಿವೆ.

ಔಷಧ ಗಿಡಗಳ ವಿತರಣೆ: ಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಬರುವ ಗಣ್ಯರಿಗೆ, ಸಾರ್ವಜನಿಕರಿಗೆ ಸಾಂಕೇತಿಕವಾಗಿ ಔಷಧಿ ಯುಕ್ತ ಗಿಡಗಳಾದ ಅಲೋವೆರಾ, ತುಳಸಿ, ಮಲ್ಲಿಗೆ, ವೀಳ್ಯದೆಲೆ ಹಾಗೂ ಚಕ್ರಮುನಿ ಗಿಡಗಳನ್ನು ವಿತರಿಸಲಾಗುತ್ತಿದೆ.

ಛಾಯಾಚಿತ್ರ ಪ್ರದರ್ಶನ: ಮೈಸೂರು ಆರಮನೆ ಆವರಣದ ಫಲಪುಷ್ಪ ಪ್ರದರ್ಶನದಲ್ಲಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದ್ದು, ದಸರಾ ಅಂದು-ಇಂದು ಗಮನ ಸೆಳೆದಿದೆ.

ಹಳೆಯ ದಸರಾದ ವಿಡಿಯೋ ಚಿತ್ರೀಕರಣ, ಸಾಕ್ಷ್ಯಚಿತ್ರ ಪ್ರದರ್ಶನವೂ ಇದೆ. ಮಾತ್ರವಲ್ಲ, ಅತ್ಯುತ್ತಮವಾಗಿ ಬೊಂಬೆಗಳನ್ನು ಪ್ರದರ್ಶಿಸುವ ಆಯ್ದ ಐವರನ್ನು ಆಹ್ವಾನಿಸಿ, ಅರಮನೆಯ ಆವರಣದಲ್ಲಿ ಬ್ಲಾಕ್‌ಗಳಲ್ಲಿ ಭವ್ಯ ಬೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ.

Screenshot_5 R

ವಿಶೇಷ ಆಕರ್ಷಣೆ: ಡಿ.31ರಂದು ಅರಮನೆಯ ವಿದ್ಯುತ್ ದೀಪಾಲಂಕಾರವನ್ನು ಸಂಜೆ 7 ರಿಂದ 9ರವರೆಗೆ ವಿಸ್ತರಿಸಲಾಗಿದೆ. ಸಂಜೆ 5ರಿಂದ ರಾತ್ರಿ 9.30ರವರೆಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ಗಳಿರುತ್ತವೆ. ಅಂದು ರಾತ್ರಿ 11 ರಿಂದ 12ರವರೆಗೆ ಪೊಲೀಸ್ ಬ್ಯಾಂಡ್ ಆಯೋಜಿಸಲಾಗಿದೆ. 12ರಿಂದ 15 ನಿಮಿಷ ಬಣ್ಣಗಳ ಚಿತ್ತಾರಗಳಿಂದ ಕೂಡಿದ ಕಬ್ಬ ರಹಿತ ಹಸಿರು ಪಟಾಕಿ ಸಿಡಿಸಲಾಗುತ್ತದೆ.

4 ಲಕ್ಷ ಹೂವುಗಳ ಮಾದರಿ

ಉಯ್ಯಾಲೆಯಲ್ಲಿ ರಾಧೆಯೊಂದಿಗೆ ಕುಳಿತ ಕೃಷ್ಣ, ಸಿರಿಧಾನ್ಯಗಳನ್ನು ಮೈವೆತ್ತು ನಿಂತ ಸಾಲುಮರದ ತಿಮ್ಮಕ್ಕ ಸೆಳೆದರೆ, ಶೃಂಗೇರಿ ದೇವಾಲಯ ಸೂಜಿಗಲ್ಲಿನಂತೆ ಆಕರ್ಷಿತ್ತಿದೆ. 4 ಲಕ್ಷ ಹೂವುಗಳಿಂದ ವಿವಿಧ ಮಾದರಿಗಳನ್ನು ಅರಳಿಸಲಾಗಿದೆ. ಶೃಂಗೇರಿ ದೇಗುಲವು 50 ಅಡಿ ಅಗಲ, 16 ಅಡಿ ಉದ್ದ ಹಾಗೂ 25 ಅಡಿ ಎತ್ತರ ಹೊಂದಿದ್ದು, ಗುಲಾಬಿ, ಸೇವಂತಿಗೆ ಸೇರಿದಂತೆ ವಿವಿಧ ಹೂಗಳಿಂದ ಅಲಂಕರಿಸಲಾಗಿದೆ. ದ್ವಾರಗಳನ್ನು ಹೂವು ಹಾಗೂ ತೆಂಗಿನ ಗರಿಗಳ ಚಪ್ಪರದಿಂದ ಸಿಂಗರಿಸಲಾಗಿದೆ.

ಹತ್ತು ದಿನಗಳ ಉತ್ಸವ

ಅರಮನೆ ಮಂಡಳಿಯು ಕ್ರಿಸ್‌ಮಸ್ ರಜೆ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಅರಮನೆ ಮಂಡಳಿ ಆಯೋಜಿಸಿರುವ 10 ದಿನಗಳ ಮಾಗಿ ಉತ್ಸವ ಫಲಪುಷ್ಪ ಪ್ರದರ್ಶನ ದಲ್ಲಿ ಘಮ್ಮೆನ್ನುವ ಪುಷ್ಪಗಳ ಸುವಾಸನೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹೃದಯರ ಮನ ತಣಿಸುತ್ತಿವೆ.

25 ಸಾವಿರ ಹೂಕುಂಡಗಳು

ಚಾಂಪಿಯನ್ ಆದ ಮಹಿಳಾ ಕ್ರಿಕೆಟಿಗರು, ಕೊಕ್ಕೊ, ಕಬಡ್ಡಿ, ಅಂಧ ಕ್ರಿಕೆಟಿಗರು ಭಾವ ಚಿತ್ರವನ್ನು ಡಿಜಿಟಲ್ ಬೋರ್ಡ್‌ನಲ್ಲಿ ಪ್ರದರ್ಶಿಸಿ ಸಾಧಕರನ್ನು ಅಭಿನಂದಿಸಲಾಗಿದೆ. 25 ಸಾವಿರಕ್ಕೂ ಹೆಚ್ಚಿನ ಅಲಂಕಾರಿಕ ಹೂಕುಂಡಗಳು, ಬೋನ್ಸಾಯ್ ಗಿಡಗಳು, 35 ಜಾತಿಯ ಹೂವು ಗಿಡಗಳು ನಳನಳಿಸುತ್ತಿವೆ. ಎರಡು ದ್ವಾರಗಳಲ್ಲಿ ನವಿಲು, ಮಕ್ಕಳನ್ನು ಆಕರ್ಷಿಸಲು ಛೋಟಭೀಮ್, ಕಾಳಿಂಗ ಮರ್ಧನ, ಅಳಿಲು ಸೈಕಲ್, ಹಂಸ ಮಾದರಿಯ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದೆ. ವಿವಿಧ ಹಣ್ಣು ಮತ್ತು ತರಕಾರಿ ಕೆತ್ತನೆಗಳಿಂದ ಗಣ್ಯ ವ್ಯಕ್ತಿಗಳು ಮತ್ತು ಪ್ರಾಣಿ ಪಕ್ಷಿಗಳು ಸಾಧನೆಯ ಕತೆಗಳನ್ನು ಹೇಳುತ್ತಿವೆ. ಮಕ್ಕಳ ಕಾರ್ಟೂನ್ ತಾರೆಗಳಾದ ಛೋಟಾ ಭೀಮ್, ಮಾಶಾ ಕರಡಿ ಸೇರಿದಂತೆ ವಿವಿಧ ಮಾದರಿಗಳು ಸೆಳೆಯು ತ್ತಿವೆ.