ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KPSC Recruitment Scam: ಕೆಪಿಎಸ್‌ಸಿ ಅಕ್ರಮದ ಮಧ್ಯವರ್ತಿ ಬಸವರಾಜ ಪಾಲುದಾರಿಕೆ ಸಂಸ್ಥೆಗಳಲ್ಲಿ ಸಿಐಡಿ ಶೋಧ: ಕನ್ನಾಳೆ ಸಂಪತ್ತಿನ ಮೂಲ ಹುಡುಕಾಟ

ಆರೋಪಿ ಬಸವರಾಜ ಕನ್ನಾಳೆ ಸಂಪತ್ತಿನ ಮೂಲದ ಬಗ್ಗೆ ಸಿಐಡಿ ತಂಡ ಮಾಹಿತಿ ಕಲೆ ಹಾಕುತ್ತಿದೆ. ಬೀದರ್ ನಗರದ ನ್ಯೂ ಆದರ್ಶ ಕಾಲೋನಿಯಲ್ಲಿನ ಇನ್ಸೂರೆನ್ಸ್ ಸಂಸ್ಥೆ ಹಾಗೂ ಭಾಲ್ಕಿಯಲ್ಲಿನ ಓಂ ಲಕ್ಷ್ಮಿ ಸೌಹಾರ್ದ ಸಹಕಾರ ಸಂಘ, ಕನ್ನಾಳೆ ಟ್ರಾವೆಲ್‌ನಲ್ಲಿ ಕೋಟಿ ಕೋಟಿ ರುಪಾಯಿ ಹಣ ಹೂಡಿಕೆ ಮಾಡಿರುವ ಬಗ್ಗೆ ತನಿಖೆ ನಡೆದಿದೆ.

ಚನ್ನಬಸವ ಮೋಕ್ತೆದಾರ ಬೀದರ್

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶು ವೈದ್ಯಾಧಿಕಾರಿಗಳ ನೇಮಕ ಅಕ್ರಮದಲ್ಲಿ ಬಂಧಿತ ಬಸವರಾಜ ಕನ್ನಾಳೆ ಆಪ್ತಮಿತ್ರರಿಗೆ ಸಿಐಡಿ ಶಾಕ್ ನೀಡಿದೆ. ಕನ್ನಾಳೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೋಣಗಾಪೂರ ಮೂಲದವ ಹೀಗಾಗಿ ತವರು ಜಿಲ್ಲೆಯಲ್ಲಿ ಆತನ ಹತ್ತಿರದವರ ಮೇಲೆ ಸಿಐಡಿ ಕಣ್ಣಿಟ್ಟಿದೆ.

ಬೀದರ್‌ನಲ್ಲಿ ತನಿಖೆಗಿಳಿದ ಸಿಐಡಿ ತಂಡ ತೀವ್ರ ಶೋಧ ನಡೆಸುತ್ತಿದೆ. ಡಿವೈಎಸ್ಪಿ ಅಸ್ಲಂ ಬಾಷಾ ನೇತೃತ್ವದ ತಂಡ ಶೋಧ ಕಾರ್ಯ ಮುಂದುವರುರಿಸಿದೆ. ಆರೋಪಿ ಬಸವರಾಜ ಕನ್ನಾಳೆ ಸಂಪತ್ತಿನ ಮೂಲದ ಬಗ್ಗೆ ಸಿಐಡಿ ತಂಡ ಮಾಹಿತಿ ಕಲೆ ಹಾಕುತ್ತಿದೆ. ಬೀದರ್ ನಗರದ ನ್ಯೂ ಆದರ್ಶ ಕಾಲೋನಿ ಯಲ್ಲಿನ ಇನ್ಸೂರೆನ್ಸ್ ಸಂಸ್ಥೆ ಹಾಗೂ ಭಾಲ್ಕಿಯಲ್ಲಿನ ಓಂ ಲಕ್ಷ್ಮಿ ಸೌಹಾರ್ದ ಸಹಕಾರ ಸಂಘ, ಕನ್ನಾಳೆ ಟ್ರಾವೆಲ್‌ನಲ್ಲಿ ಕೋಟಿ ಕೋಟಿ ರುಪಾಯಿ ಹಣ ಹೂಡಿಕೆ ಮಾಡಿರುವ ಬಗ್ಗೆ ತನಿಖೆ ನಡೆದಿದೆ.

ಇದನ್ನೂ ಓದಿ: KPSC Recruitment Scam: ಕೆಪಿಎಸ್‌ಸಿ ಹಗರಣ: ಜ್ಞಾನೇಂದ್ರ ಅಮಾನತು: ಕರ್ಮಕಾಂಡಕ್ಕೆ ಮತ್ತೊಂದು ಬಲಿ

ಇನ್ಸೂರೆನ್ಸ್ ಸಂಸ್ಥೆಯ ಮೇಲೆ ದಾಳಿ: ಬೀದರ್ ನಗರದ ಸರ್ವರಕ್ಷಾ ಸುವಿಧಾ ಪ್ರೈವೇಟ್ ಲಿಮಿಟೆಡ್ ಜನರಲ್ ಆಂಡ್ ಇನ್ಸೂರೆನ್ಸ್ ಸಂಸ್ಥೆಯ ಮೇಲೆ ಸಿಐಡಿ ಡಿವೈಎಸ್ಪಿ ಅಸ್ಲಂ ಬಾಷಾ ನೇತೃತ್ವದ ತಂಡ ದಾಳಿ ನಡೆಸಿ ದಾಖಲೆ ಪರಿಶೀಲಿಸಿದೆ. ಈ ಸಂಸ್ಥೆ ಬಸವರಾಜ ಕನ್ನಾಳೆ ಆಪ್ತರದ್ದು ಎನ್ನಲಾಗಿದೆ. ಬೆಂಗಳೂರಿನಲ್ಲಿ ಆರ್ ಟಿ ಓ ಇನ್ಸ್‌ಪೆಕ್ಟರ್ ರಾಜಶೇಖರ ಚಿದ್ರಿ ಒಡೆತನಕ್ಕೆ ಸೇರಿದ್ದಾಗಿದೆ. ಇದರಲ್ಲಿ ಕನ್ನಾಳೆ ಡೀಲ್ ಹಣ ಹೂಡಿಕೆ ಮಾಡಿರುವ ಶಂಕೆ ಮೇಲೆ ದಾಳಿ ನಡೆದಿದೆ. ಸಂಸ್ಥೆ ಕಡತ ಕಂಪ್ಯೂಟರ್ ಜಪ್ತಿ ಮಾಡಿ ಪರಿಶೀಲಿಸಲಾಗುತ್ತಿದೆ.

ಕನ್ನಾಳೆ ಆಪ್ತರಿಗೆ ಗಾಳ

ಕನ್ನಾಳೆ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಹಲವರ ಹೆಸರು ಪತ್ತೆಯಾಗಿದ್ದು, ಇವರಿಗೆ ಕನ್ನಾಳೆ ವ್ಯವಹಾ ರದ ಬಗ್ಗೆ ಕೆಲವರಿಗೆ ಗೊತ್ತಿರುವ ಸಾಧ್ಯತೆಗಳಿವೆ. ಹೀಗಾಗಿ ಸಿಐಡಿ ತಂಡ ಇಲ್ಲಿಯೇ ಬಿಡುಬಿಟ್ಟಿದ್ದು, ಕನ್ನಾಳೆ ನಿಕಟವರ್ತಿಗಳಿಗೆ ಗಾಳ ಹಾಕಿ ಇನ್ನಷ್ಟು ಮಾಹಿತಿ ಕಲೆ ಹಾಕುವುದಕ್ಕೆ ಮುಂದಾಗಿದೆ. ಕನ್ನಾಳೆ ಬಂಧನದಿಂದ ನಿಕಟವರ್ತಿಗಳಲ್ಲಿ ಭೀತಿ ಶುರುವಾಗಿದೆ.

ಲೈಫ್‌ ಸ್ಟೈಲ್‌ ಚೇಂಜ್

ಕಳೆದ ಎರಡ್ಮೂರು ವರ್ಷಗಳಲ್ಲಿ ಬಸವರಾಜ ಕನ್ನಾಳೆ ಲೈಫ್‌ ಸ್ಟೈಲ್‌ ಚೇಂಜ್ ಆಗಿತ್ತು. ಉಳ್ಳವನಿ ದ್ದೇನೆಂಬ ಸ್ಟೈಲ್ ಶುರುವಾಗಿತ್ತು. ಮಾತೆತ್ತಿದ್ದರೆ ಕೋಟಿಯದ್ದೇ ಮಾತು. ಪೂರ್ತಿ ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದನು. ದಿಢೀರ್ ಆದ ಕುಬೇರವೇ ಇದಕ್ಕೆ ಕಾರಣ ಎನ್ನಬಹುದು. ಆತನು ತನ್ನದೇಯಾದ ಬ್ರ್ಯಾಂಡ್ ಇಮೇಜ್ ಕ್ರಿಯೇಟ್ ಮಾಡಿಕೊಳ್ಳಲು. ಮುಂದೆ ರಾಜಕೀಯದಲ್ಲಿ ಬೆಳೆಯಲು.

ಎಂಎಲ್‌ಎ ಟಿಕೆಟ್ ಪಡೆಯಲು ಹೀಗೆ ನಾನಾ ಸ್ಕೇಚ್ ಹಾಕಿದ್ದನು. ಇದಕ್ಕಾಗಿ ತಾನೊಬ್ಬ ಉಳ್ಳವ ಎಂಬುದು ಬಹಿರಂಗ ವಾಗಿಯೇ ತೋರಿಸಿ ಕೊಳ್ಳಲು ಹವಣಿಸುತ್ತಿದ್ದ ಎಂದು ಆತನ ಆಪ್ತರೆ ಹೇಳು ತ್ತಿದ್ದಾರೆ. ತನ್ನ ಬಳಿಯಿರುವ ಐಷಾರಾಮಿ ವಾಹನಗಳಿಗೆ 7890 ಫ್ಯಾನ್ಸಿ ಸಂಖ್ಯೆ ಪಡೆಯುತ್ತಿದ್ದನು ಎನ್ನಲಾಗಿದೆ.