ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಉಳಿದ ಸ್ಥಾನಕ್ಕೆ ಹೆಬ್ಬಾಳ್ಕರ್, ಬಸವರಾಜ್ ಸಾಧ್ಯತೆ
ಹಾಲಿ ಮಂತ್ರಿಗಳ ಆತಂಕ
ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರಕ್ಕೆ 6 ತಿಂಗಳು ಸಮೀಪಿಸು ತ್ತಿದ್ದಂತೆ ಮತ್ತೆ ಸಂಪುಟ ಪುನಾರಚನೆ ಚರ್ಚೆ ತೀವ್ರಗೊಂಡಿದೆ. ಸಂಪುಟದಲ್ಲಿ ಖಾಲಿ ಉಳಿದಿರುವ ಎರಡು ಮಂತ್ರಿ ಸ್ಥಾನಗಳನ್ನು ನೀಡಬೇಕಿರುವ ಹಿನ್ನೆಲೆಯಲ್ಲಿ ಸರಕಾರದಲ್ಲಿ ಬೆಳಗಾವಿ ಅಧಿವೇಶನ ನಂತರ ಸಂಪುಟ ವಿಸ್ತರಣೆ ಬಗ್ಗೆ ಆಗಾಗ ಚರ್ಚೆಯಾಗುತ್ತಿತ್ತು. ಆದರೆ ಇದು ಮುಂದುವರಿದು ಸಂಪುಟ ಪುನಾರಚನೆ ಹಂತಕ್ಕೆ ತಲುಪುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿನ ದೆಹಲಿ ಭೇಟಿ ಸಂದರ್ಭದಲ್ಲಿ ಈ ವಿಚಾರವಾಗಿ ಹೈಕಮಾಂಡ್ ಜತೆ ಚರ್ಚಿಸಿದ್ದಲ್ಲದೆ, ಕೂಡಲೇ ಉಳಿದ ಸ್ಥಾನಗಳನ್ನು ತುಂಬುವ ಬಗ್ಗೆ ಒತ್ತಾಯಿಸಿರು ವುದರಿಂದ ಸಂಪುಟ ಪುನಾರಚನೆ ಮಾಡಬೇಕೆನ್ನುವ ಒತ್ತಡ ಹೆಚ್ಚಾಗಿದೆ. ಇದರ ಪರಿಣಾಮ ಸಚಿವಕಾಂಕ್ಷಿಗಳಲ್ಲಿ ಕಮರಿ ಹೋಗಿದ್ದ ಆಸೆ ಚಿಗುರೊಡೆದಿದ್ದರೆ, ಸಂಪುಟದಲ್ಲಿರುವ ಸುಮಾರು ನಾಲ್ಕು ಸಚಿವರಿಗೆ ಹುದ್ದೆ ಕಳೆದುಕೊಳ್ಳುವ ಭೀತಿ ಆರಂಭವಾಗಿದೆ.
ರಾಜ್ಯ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯವಿಲ್ಲದೆ ಸರಕಾರ ಅನೇಕ ಬಾರಿ ಮುಜುಗರ ಅನುಭವಿಸು ವಂತಾಗಿದ್ದು, ಇದರಿಂದ ತುರ್ತಾಗಿ ಉಳಿದೆರಡು ಸ್ಥಾನಗಳನ್ನು ಭರ್ತಿ ಮಾಡಬೇಕಿದೆ, ಹಾಗೆಯೇ ದಿನ ಕಳೆದಂತೆ ಸರಕಾರ ಅವಧಿ ಮುಗಿಯುತ್ತಿದ್ದು ಆಕಾಂಕ್ಷಿಗಳು ಬೇಸತ್ತು ಹೋಗುತ್ತಿರುವುದರಿಂದ ಪಕ್ಷದ ವರಿಷ್ಟರಿಗೂ ಖಾಲಿ ಉಳಿದ ಸ್ಥಾನಗಳ ಭರ್ತಿ ಅನಿವಾರ್ಯವಾಗಿದೆ. ಆದರೆ ಉಳಿದ ಸ್ಥಾನಗಳಿಗೆ ತಕ್ಷಣ ಸಚಿವರನ್ನು ನೇಮಿಸಿದರೂ ಮಾಜಿ ಸಚಿವ ಎಂ. ಕೃಷ್ಣಪ್ಪ ಸೇರಿದಂತೆ ಅನೇಕ ಆಕಾಂಕ್ಷಿಗಳ ಬೇಡಿಕೆಗಳು ಹಾಗೇಯೇ ಉಳಿಯುತ್ತವೆ.
ಇದನ್ನೂ ಓದಿ: Former CM Siddaramaiah: ಇಂದಿನ ಚುನಾವಣಾ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಹೀಗಾಗಿ ಹೇಗಿದ್ದರೂ ಉಳಿದ ಎರಡು ಸ್ಥಾನಗಳನ್ನು ಭರ್ತಿ ಮಾಡುವುದರ ಜತೆಗೆ ಇನ್ನಷ್ಟು ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ಅವರ ಸ್ಥಾನಗಳಿಗೆ ಹೈಕಮಾಂಡ್ ಭರವಸೆಯಿಂದ ಮೌನವಾಗಿರುವ ಪ್ರಬಲ ಆಕಾಂಕ್ಷಿಗಳನ್ನು ನೇಮಕ ಮಾಡುವುದು ಸೂಕ್ತ ಎನ್ನುವ ಬಗ್ಗೆ ಪಕ್ಷದ ವರಿಷ್ಠರು ಚಿಂತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆ ಪಕ್ಷದ ಒಳಗೆ ತೀವ್ರವಾಗು ತ್ತಿದ್ದಂತೆ ಈಗಾಗಲೇ ಸಚಿವ ಸ್ಥಾನವನ್ನು ದೀರ್ಘ ಕಾಲ ಅನುಭವಿಸಿದವರು, ಸಚಿವರಾಗಿ ಕಡಿಮೆ ಅವಧಿಯಲ್ಲಿ ಪಕ್ಷಕ್ಕೆ ಮುಜುಗರ ತಂದವರನ್ನು ಸಂಪುಟದಿಂದ ಕೈ ಬಿಡುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಗಂಭೀರವಾಗಿ ಚಿಂತಿಸಿದ್ದಾರೆ ಎಂದು ಎಐಸಿಸಿ ಮೂಲಗಳು ತಿಳಿಸಿವೆ.
ಜಾತಿ ಲೆಕ್ಕಾಚಾರ ಹೇಗೆ?
ಈ ಮಧ್ಯೆ ಪ್ರಬಲ ಆಕಾಂಕ್ಷಿಗಳಾಗಿರುವ ಎಂ. ಕೃಷ್ಣಪ್ಪ, ಇಂಡಿ ಕ್ಷೇತ್ರದ ಯಶವಂತರಾಯ್ ಪಾಟೀಲ್ ಹಾಗೂ ಬಳ್ಳಾರಿಯ ನಾಗೇಂದ್ರ ಹಾಗೂ ತನ್ವೀರ್ ಸೇಠ್ ಅವರಿಗೆ ಅವಕಾಶ ನೀಡಬೇಕೆನ್ನುವ ನಿಟ್ಟಿನಲ್ಲಿ ಸಂಪುಟಕ್ಕೆ ಕತ್ತರಿ ಹಾಕುವ ಚರ್ಚೆ ನಡೆದಿದೆ ಎನ್ನಲಾಗಿದೆ. ಅಂದರೆ ಹೊಸದಾಗಿ ಸಚಿವರಾಗಿರುವ ಇಬ್ಬರು ಒಕ್ಕಲಿಗ ಮಂತ್ರಿಗಳಿಗೂ ಕೊಕ್ ನೀಡಿ ಆಸ್ಥಾನವನ್ನು ಕೃಷ್ಣಪ್ಪ ಹಾಗೂ ನಾಗೇಂದ್ರ ಅವರಿಗೆ ನೀಡುವುದು ಹಾಗೇಯೇ ಲಿಂಗಾಯತರೊಬ್ಬರು ಹಾಗೂ ಅಲ್ಪಸಂಖ್ಯಾತರೊಬ್ಬರಿಗೆ ಕೊಕ್ ನೀಡಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ತನ್ವೀರ್ ಸೇಠ್ ಅವರಿಗೆ ಅವಕಾಶ ಕಲ್ಪಿಸುವ ಬಗ್ಗೆಯೂ ಚರ್ಚೆಯಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿ
ಯಾರಿಗೆ ಕಷ್ಟ, ಯಾರಿಗೆ ಅದೃಷ್ಠ ?
ಪಕ್ಷದ ನಾಯಕರು ಈಗಾಗಲೇ ತೀರ್ಮಾನಿಸಿರುವಂತೆ ಖಾಲಿ ಉಳಿದಿರುವ ಸ್ಥಾನಗಳಿಗೆ ಹಾವೇರಿಯ ಬಸವರಾಜ ಶಿವಣ್ಣನವರ್ ಅವರನ್ನು ನೇಮಿಸುವ ನಿರ್ಧಾರವಾಗಿದೆ ಎನ್ನಲಾಗಿದೆ. ಆದರೆ ಈವರೆಗೂ ನಿರ್ಧಾರವಾಗಿದೆ ಎನ್ನಲಾದ ಮತ್ತೊಂದು ಸ್ಥಾನವನ್ನು ಗಾಯತ್ರಿ ಶಾಂತೇಗೌಡ ಅವರ ಬದಲು ಮಾಜಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರು ಕೇಳಿ ಬಂದಿದೆ. ಇದಕ್ಕೆ ರಾಜ್ಯದ ನಾಯಕರು ಹಾಗೂ ಪಕ್ಷದ ವರಿಷ್ಠರು ಕೂಡ ಒಂದು ಹಂತದ ಸಮ್ಮತಿ ನೀಡಿದ್ದಾರೆ ಎಂದೂ ಹೇಳಲಾಗಿದೆ. ಆದರೆ ಇದರಿಂದ ಲಿಂಗಾಯತ ಸಮುದಾಯಕ್ಕೆ ನೀಡಿರುವ ಪ್ರಾತಿನಿಧ್ಯ ಹೆಚ್ಚಾಗ ಲಿದ್ದು, ಇದನ್ನು ಸರಿಪಡಿಸಲು ಈಗಾಗಲೇ ಸಚಿವರಾಗಿರುವ ಯಾರಾದರೂ ಲಿಂಗಾಯತ ಸಮಾಜದ ಸಚಿವರಿಗೆ ಸಂಪುಟದಿಂದ ಕೋಕ್ ನೀಡುವ ಚರ್ಚೆಯೂ ಗಂಭೀರವಾಗಿ ನಡೆದಿದೆ.