ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kalaburagi as state's second capital: ಕಲ್ಯಾಣ ಕರ್ನಾಟಕಕ್ಕೆ ಪ್ರಾಶಸ್ತ್ಯ ನೀಡಲು ಆಗ್ರಹ: ಕಲಬುರಗಿ ಆಗಲಿ ರಾಜ್ಯದ ಎರಡನೇ ರಾಜಧಾನಿ

ಬೆಂಗಳೂರು ಕೇಂದ್ರಿತ ಅಭಿವೃದ್ಧಿಗೆ ಪರ್ಯಾಯವಾಗಿ ರಾಜ್ಯದ ವಿವಿಧ ನಗರಗಳಲ್ಲಿ ಆರ್ಥಿಕ, ತಂತ್ರಜ್ಞಾನ ಹಾಗೂ ಕೈಗಾರಿಕಾ ಚಟವಟಿಕೆಗಳನ್ನು ವಿಕೇಂದ್ರೀಕರಿಸುವ ಚಿಂತನೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕಲಬುರಗಿಗೆ ಕೇವಲ ಬಿಯಾಂಡ್ ಬೆಂಗಳೂರು ಕ್ಲಸ್ಟರ್‌ನ ಸ್ಥಾನಮಾನ ನೀಡುವು ದಕ್ಕಿಂತ, ಆಡಳಿತಾತ್ಮಕವಾಗಿ ಹೆಚ್ಚಿನ ಮಹತ್ವ ನೀಡಬೇಕು ಎನ್ನಲಾಗಿದೆ.

ದೇವೇಂದ್ರ ಜಾಡಿ ಕಲಬುರಗಿ

ಬೆಂಗಳೂರು ಮೇಲಿನ ಒತ್ತಡ ತಗ್ಗಿಸಲು ಪರ್ಯಾಯ ಆರ್ಥಿಕ ಕೇಂದ್ರದ ಚಿಂತನೆ

ರಾಜಧಾನಿ ಬೆಂಗಳೂರಿನಲ್ಲಿ ಜನಸಂಖ್ಯೆ, ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆ ಬೆಂಗಳೂರಿಗೆ ಪರ್ಯಾವಾಗಿ ರಾಜ್ಯದಲ್ಲಿ ಮತ್ತೊಂದು ನಗರವನ್ನು ಆರ್ಥಿಕವಾಗಿ ಕೇಂದ್ರವನ್ನಾಗಿ ಬೆಳೆಸುವ ಚರ್ಚೆ ಸದ್ಯ ಮತ್ತೆ ಮುನ್ನೆಲೆಗೆ ಬಂದಿದೆ. ಆದ್ದರಿಂದ ಬೆಂಗಳೂರು ನಗರದಲ್ಲಿ ದೊರಕುವ ಎಲ್ಲ ಮೂಲಸೌರ್ಯಗಳನ್ನು ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕೇಂದ್ರ ಕಲಬುರಗಿಯಲ್ಲಿ ಸಿಗುವಂತೆ ಅಭಿವೃದ್ಧಿ ಮಾಡಬೇಕು. ಅಲ್ಲದೇ ಕರ್ನಾಟಕದ ಎರಡನೇ ರಾಜಧಾನಿಯನ್ನಾಗಿ ಕಲಬುರಗಿಯನ್ನು ಘೋಷಣೆ ಮಾಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ.

ಬೆಂಗಳೂರು ಕೇಂದ್ರಿತ ಅಭಿವೃದ್ಧಿಗೆ ಪರ್ಯಾಯವಾಗಿ ರಾಜ್ಯದ ವಿವಿಧ ನಗರಗಳಲ್ಲಿ ಆರ್ಥಿಕ, ತಂತ್ರಜ್ಞಾನ ಹಾಗೂ ಕೈಗಾರಿಕಾ ಚಟವಟಿಕೆಗಳನ್ನು ವಿಕೇಂದ್ರೀಕರಿಸುವ ಚಿಂತನೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕಲಬುರಗಿಗೆ ಕೇವಲ ಬಿಯಾಂಡ್ ಬೆಂಗಳೂರು ಕ್ಲಸ್ಟರ್‌ನ ಸ್ಥಾನಮಾನ ನೀಡುವುದಕ್ಕಿಂತ, ಆಡಳಿತಾತ್ಮಕವಾಗಿ ಹೆಚ್ಚಿನ ಮಹತ್ವ ನೀಡಬೇಕು ಎನ್ನಲಾಗಿದೆ.

ಇದನ್ನೂ ಓದಿ: Kalaburagi Transport App: ಕೈಕೊಟ್ಟ ನಮ್ಮ ಕಲಬುರಗಿ ಸಾರಿಗೆ App

ಕಲಬುರಗಿಯತ್ತ ದೃಷ್ಟಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪ್ರಮುಖ ಕೇಂದ್ರವಾಗಿರುವ ಕಲಬುರಗಿ ಶಿಕ್ಷಣ, ಆರೋಗ್ಯ, ಕೃಷಿ, ವ್ಯಾಪಾರ, ಕೈಗಾರಿಕೆ ಹಾಗೂ ಸಾರಿಗೆ ಕ್ಷೇತ್ರಗಳಲ್ಲಿ ತನ್ನದೇ ಆದ ಪ್ರಾದೇಶಿಕ ಮಹತ್ವ ಹೊಂದಿದೆ. ರಾಜಧಾನಿಯ ಮೇಲಿನ ಒತ್ತಡ ಕಡಿಮೆ ಮಾಡಲು ಪರ್ಯಾಯ ಆರ್ಥಿಕ ಕೇಂದ್ರದ ಅಗತ್ಯದ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ಕಲಬುರಗಿಯ ಸಾಮರ್ಥ್ಯವನ್ನು ಕಡೆಗಣಿಸಲು ಸಾಧ್ಯವಿಲ್ಲ. ಎರಡನೇ ರಾಜಧಾನಿ ಸ್ಥಾನಮಾನ ದೊರೆತರೆ ಸರಕಾರದ ಪ್ರಮುಖ ಇಲಾಖೆಗಳ ಪ್ರಾದೇಶಿಕ ಕಚೇರಿಗಳು, ಉನ್ನತ ಮಟ್ಟದ ಸಭೆಗಳು ಹಾಗೂ ಅಭಿವೃದ್ಧಿ ಯೋಜನೆಗಳ ಮೇಲ್ವಿಚಾರಣೆಗೆ ಕಲಬುರಗಿ ಪ್ರಮುಖ ಕೇಂದ್ರವಾಗಬಹುದು. ಇದರಿಂದ ಬೆಂಗಳೂರಿನ ಮೇಲಿನ ಆಡಳಿತಾತ್ಮಕ ಒತ್ತಡವೂ ತಗ್ಗುವ ಸಾಧ್ಯತೆ ಇದೆ.

371(ಜೆ) ಬಳಿಕವೂ ಅಭಿವೃದ್ಧಿಯ ಪ್ರಶ್ನೆ: ಕಲ್ಯಾಣ ಕರ್ನಾಟಕಕ್ಕೆ 371(ಜೆ) ವಿಶೇಷ ಸ್ಥಾನಮಾನ ಜಾರಿಯಾಗಿ ಹಲವು ವರ್ಷಗಳು ಕಳೆದರೂ, ಕೈಗಾರಿಕಾ ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ನಿರೀಕ್ಷಿತ ವೇಗ ಇನ್ನೂ ಕಾಣುತ್ತಿಲ್ಲ ಎಂಬ ಅಸಮಾಧಾನ ಜನರಲ್ಲಿದೆ. ವಿಶೇಷ ಸ್ಥಾನಮಾನವು ಈ ಭಾಗಕ್ಕೆ ಅವಕಾಶಗಳನ್ನು ಕಲ್ಪಿಸಿದ್ದರೂ, ಅವುಗಳನ್ನು ಸಮಗ್ರ ಪ್ರಾದೇಶಿಕ ಅಭಿವೃದ್ಧಿ ಯಾಗಿ ಪರಿವರ್ತಿಸಲು ಆಡಳಿತಾತ್ಮಕ ವಿಕೇಂದ್ರೀಕರಣದ ಜತೆಗೆ ಬಲವಾದ ರಾಜಕೀಯ ಸಂಕಲ್ಪವೂ ಅಗತ್ಯ. ಈ ಹಿನ್ನೆಲೆ ಕಲಬುರಗಿಗೆ ಎರಡನೇ ರಾಜಧಾನಿ ಸ್ಥಾನಮಾನ ನೀಡುವುದು ಅಭಿವೃದ್ಧಿಗೆ ಹೊಸ ದಿಕ್ಕು ನೀಡಬಲ್ಲ ಹೆಜ್ಜೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಜನರ ಕೂಗಿಗೆ ರಾಜಕೀಯ ಧ್ವನಿ ಬೇಕಿದೆ: ಕಲಬುರಗಿಯ ಬುದ್ಧಿಜೀವಿಗಳು, ಚಿಂತಕರು, ಪ್ರಗತಿಪರರು, ಸಂಘ-ಸಂಸ್ಥೆಗಳು ಹಾಗೂ ವಿವಿಧ ವಲಯಗಳ ಮುಖಂಡರು ಎರಡನೇ ರಾಜಧಾನಿ ಬೇಡಿಕೆಗೆ ಧ್ವನಿ ನೀಡುತ್ತಿದ್ದಾರೆ. ಇದು ಕೇವಲ ಜಿಲ್ಲೆಯ ಬೇಡಿಕೆಯಲ್ಲ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಪ್ರಶ್ನೆ ಎಂದು ಪರಿಗಣಿಸಬೇಕು ಎಂಬ ಒತ್ತಾಯವೂ ಹೆಚ್ಚುತ್ತಿದೆ. ಕಲ್ಯಾಣ ಕರ್ನಾಟಕವನ್ನು ಪ್ರತಿನಿಧಿಸುವ ಸಚಿವರು, ಶಾಸಕರು ಹಾಗೂ ಸಂಸದರು ಪಕ್ಷಭೇದ ಮರೆತು ಈ ಬೇಡಿಕೆಯನ್ನು ಸರಕಾರದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಬೇಕು. ವಿಧಾನಸಭೆ ಮತ್ತು ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿ, ಅಗತ್ಯ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂಬುದು ಜನರ ನಿರೀಕ್ಷೆ.

ಬಿಯಾಂಡ್ ಬೆಂಗಳೂರು ಮೀರಿದ ಅವಕಾಶ: ರಾಜ್ಯದ ವಿವಿಧ ನಗರಗಳಲ್ಲಿ ತಂತ್ರಜ್ಞಾನ, ಸ್ಟಾರ್ಟ್‌ಅಪ್ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ಬೆಳೆಸುವ ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಕಲಬುರಗಿಗೂ ಸ್ಥಾನವಿದೆ. ಆದರೆ ಈಗ ನಡೆಯುತ್ತಿರುವ ಎರಡನೇ ಬೆಂಗಳೂರು ಚರ್ಚೆಯನ್ನು ಕಲ್ಯಾಣ ಕರ್ನಾಟಕದ ದೀರ್ಘಕಾಲದ ಅಭಿವೃದ್ಧಿ ಬೇಡಿಕೆಯೊಂದಿಗೆ ಜೋಡಿಸ ಬೇಕಿದೆ. ರಾಜಧಾನಿ ಸ್ಥಾನಮಾನವೆಂದರೆ ಕೇವಲ ಹೆಸರಿನ ಬದಲಾವಣೆ ಅಲ್ಲ. ಆಡಳಿತ, ಹೂಡಿಕೆ, ಉದ್ಯೋಗ, ಮೂಲಸೌಕರ್ಯ ಮತ್ತು ಸಾರ್ವಜನಿಕ ಸೇವೆಗಳ ವಿಸ್ತರಣೆಗೆ ಅದು ವೇಗವರ್ಧಕವಾಗ ಬಹುದು. ಹೀಗಾಗಿ ಕಲಬುರಗಿಯನ್ನು ಎರಡನೇ ರಾಜಧಾನಿಯಾಗಿ ರೂಪಿಸುವ ಸಾಧ್ಯತೆ ಸರ್ಕಾರ ಸಮಗ್ರವಾಗಿ ಪರಿಶೀಲಿಸಬೇಕು.

ರಾಜಧಾನಿ ಬೆಂಗಳೂರು ಇರಲಿ: ಆದರೆ ರಾಜ್ಯದ ಅಭಿವೃದ್ಧಿಯ ಮತ್ತೊಂದು ಶಕ್ತಿಕೇಂದ್ರವಾಗಿ ಕಲಬುರಗಿ ರೂಪುಗೊಳ್ಳಲಿಇದು ಈಗ ಕಲ್ಯಾಣ ಕರ್ನಾಟಕದ ಜನರ ಸ್ಪಷ್ಟ ಕೂಗು ಕಲಬುರಗಿಗೆ ಏಕೆ ರಾಜಧಾನಿ ಪಟ್ಟ? ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕೇಂದ್ರವಾಗಿರುವ ಕಲಬುರಗಿ ಏಳು ಜಿಲ್ಲೆಗಳ ಸಂಪರ್ಕಕೊಂಡಿ ಯಾಗಿದೆ. ಶಿಕ್ಷಣ, ಆರೋಗ್ಯ, ಕೃಷಿ, ವ್ಯಾಪಾರ, ಕೈಗಾರಿಕೆ ಹಾಗೂ ಸಾರಿಗೆ ಕ್ಷೇತ್ರಗಳಲ್ಲಿ ತನ್ನದೇ ಸಾಮರ್ಥ್ಯ ಹೊಂದಿದೆ. ಎರಡನೇ ರಾಜಧಾನಿ ಸ್ಥಾನಮಾನ ದೊರೆತರೆ ಆಡಳಿತಾತ್ಮಕ ವಿಕೇಂದ್ರೀಕರಣದ ಜತೆಗೆ ಹೂಡಿಕೆ, ಉದ್ಯೋಗ ಹಾಗೂ ಮೂಲಸೌಕರ್ಯಕ್ಕೆ ವೇಗ ಸಿಗಬಹುದು. 371(ಜೆ) ಆಶಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸಾಕಾರಗೊಳಿಸಲು ಇದು ಹೊಸ ರಾಜಕೀಯ ಹಾಗೂ ಆಡಳಿತಾತ್ಮಕ ಹೆಜ್ಜೆಯಾಗಬಹುದು.

image

ಬೆಂಗಳೂರಿನ ಮೇಲಿನ ಹೆಚ್ಚಿನ ಜವಾಬ್ದಾರಿಯನ್ನು ಕೊಂಚ ತಗ್ಗಿಸಲು ಕಲಬುರಗಿಯನ್ನು ಎರಡನೇ ರಾಜಧಾನಿಯಾಗಿ ಮಾಡಬೇಕು. ಬೆಂಗಳೂರು ಹೊರತುಪಡಿಸಿ ಕೈಗಾರಿಕಾ ಅಭಿವೃದ್ಧಿಗೆ ಗುರುತಿಸುವ ಐದು ನಗರಗಳಲ್ಲಿ ಕಲಬುರಗಿಗೆ ಕಡ್ಡಾಯವಾಗಿ ಸ್ಥಾನ ನೀಡಬೇಕು. ಪಿಎಂ ಮಿತ್ರ ಪಾರ್ಕ್ ಸೇರಿದಂತೆ ಕೈಗಾರಿಕಾ ಯೋಜನೆಗಳಿಗೆ ವೇಗ ನೀಡಿ, ರಸ್ತೆ, ರೈಲು, ವಿಮಾನ, ವಿದ್ಯುತ್ ಹಾಗೂ ನೀರಿನ ಸೌಲಭ್ಯ ಬಲಪಡಿಸಿದರೆ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ದೊಡ್ಡ ಅವಕಾಶ ಸಿಗಲಿದೆ.

ಶರಣಬಸಪ್ಪ ಎಂ.ಪಪ್ಪಾ, ಕೆಕೆಸಿಸಿಐ ಅಧ್ಯಕ್ಷ
image

ಬೆಂಗಳೂರಿನ ಮೇಲಿನ ಆಡಳಿತಾತ್ಮಕ ಒತ್ತಡ ತಗ್ಗಿಸಲು ೨ನೇ ಬೆಂಗಳೂರು ನಿರ್ಮಾಣದ ಚಿಂತನೆ ಸ್ವಾಗತಾರ್ಹ. ಕಲಬುರಗಿ ಈಗಾಗಲೇ ಆಡಳಿತ, ಶಿಕ್ಷಣ, ಆರೋಗ್ಯ, ವಾಣಿಜ್ಯ ಹಾಗೂ ಸಾರಿಗೆ ಕ್ಷೇತ್ರಗಳಲ್ಲಿ ಪ್ರಮುಖ ಕೇಂದ್ರವಾಗಿದೆ. ಹೀಗಾಗಿ, ಕಲಬುರಗಿಯನ್ನು ಉಪರಾಜಧಾನಿ ಅಥವಾ ದ್ವಿತೀಯ ಆಡಳಿತ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು.

ದೀಪಕನಾಗ್ ಪುಣ್ಯಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ