ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BJP-JDS alliance: ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಅಡ್ಡಡ್ಡ ಅನುಮಾನ

ರಾಜ್ಯ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ದೋಸ್ತಿಗಳು ಕಣಕ್ಕಿಳಿಸಿದ್ದ ಹೆಚ್ಚುವರಿ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಹೆಚ್ಚುವರಿ ಅಭ್ಯರ್ಥಿ ಜಯ ಸಾಧಿಸಿದ್ದು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಅಡ್ಡ ಮತದಾನ ಮಾಡಿರುವ ಈಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ, ಅಷ್ಟೇ ಅಲ್ಲಇದು ರಾಜ್ಯದಲ್ಲಿ ಮುಂದಾಗುವ ರಾಜಕೀಯ ಬದಲಾವಣೆಯ ಸೂಚನೆಯನ್ನೂ ತಿಳಿಸುವ ದಿಕ್ಸೂಚಿಯಾಗಲಿದೆ

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ದೋಸ್ತಿಗಳಿಂದ ಪರಸ್ಪರ ಸಂದೇಶ ರವಾನೆ

ರಾಜಕೀಯ ಬದಲಾವಣೆಯ ದಿಕ್ಸೂಚಿಯಾದ ಫಲಿತಾಂಶ

ಸರಕಾರದ ಮಧ್ಯಂತರ ಅವಧಿಯಲ್ಲಿ ಬರುವ ಚುನಾವಣೆಗಳು ಮುಂದಿನ ರಾಜಕೀಯ ದಿಕ್ಸೂಚಿ ಯಾಗುವುದುಂಟು. ಆದರೆ ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನಗಳು ಮುಂದಿನ ರಾಜಕೀಯ ದಿಕ್ಸೂಚಿ ಎಂದು ಸಾರುತ್ತಿದೆ.

ರಾಜ್ಯ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ದೋಸ್ತಿ ಗಳು ಕಣಕ್ಕಿಳಿಸಿದ್ದ ಹೆಚ್ಚುವರಿ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಹೆಚ್ಚುವರಿ ಅಭ್ಯರ್ಥಿ ಜಯ ಸಾಧಿಸಿದ್ದು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಅಡ್ಡ ಮತದಾನ ಮಾಡಿರುವ ಈಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ, ಅಷ್ಟೇ ಅಲ್ಲಇದು ರಾಜ್ಯದಲ್ಲಿ ಮುಂದಾಗುವ ರಾಜಕೀಯ ಬದಲಾವಣೆಯ ಸೂಚನೆಯನ್ನೂ ತಿಳಿಸುವ ದಿಕ್ಸೂಚಿ ಯಾಗಲಿದೆ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.

ಪಕ್ಷಗಳು ಸಂಖ್ಯಾ ಬಲದ ಪ್ರಕಾರ ಕಾಂಗ್ರೆಸ್ 4 ಹಾಗೂ ಮೈತ್ರಿ ಪಕ್ಷಗಳು 2 ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಬಹುದಿತ್ತು, ಆದರೆ ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳಲ್ಲಿ ಉಳಿಯುವ ಮತಗಳಿಂದ ಹೆಚ್ಚುವರಿ ಒಂದು ಅಭ್ಯರ್ಥಿ ಗೆಲ್ಲಿಸಲು ಅವಕಾಶವಿತ್ತು. ಹೀಗಾಗಿ ಕಾಂಗ್ರೆಸ್ ಹೆಚ್ಚುವರಿ ಅಭ್ಯರ್ಥಿ ಅಂದರೆ ೫ನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿತ್ತು. ಹಾಗೆಯೇ ಮೈತ್ರಿ ಪಕ್ಷಗಳ ಹೆಚ್ಚುವರಿ ಅಭ್ಯರ್ಥಿಯಾಗಿ ಅಂದರೆ 3ನೇ ಅಭ್ಯರ್ಥಿಯಾಗಿ ಗೋವಿಂದರಾಜು ಕಣಕ್ಕಿಳಿ ದಿದ್ದರು. ಇದರಲ್ಲಿ ಕಾಂಗ್ರೆಸ್ʼನ ಹೆಚ್ಚುವರಿ ಅಭ್ಯರ್ಥಿ ವಿನಯ್ ಕಾರ್ತಿಕ್ ಜಯ ಸಾಧಿಸಿದ್ದಾರೆ.

ಇದನ್ನೂ ಓದಿ: Karnataka MLC Election: ವಿಧಾನಪರಿಷತ್‍ ಚುನಾವಣೆ: ಅಡ್ಡ ಮತದಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಎಂದ ಛಲವಾದಿ ನಾರಾಯಣಸ್ವಾಮಿ

ಇದೇನೂ ರಾಜಕಾರಣದ ದೊಡ್ಡ ಅಚ್ಚರಿಯೇನಲ್ಲ. ಆದರೆ ವಿನಯ್ ಕಾರ್ತಿಕ್ ಅವರನ್ನು ಗೆಲ್ಲಿಸಲು ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನ 11 ಶಾಸಕರು ಅಡ್ಡಮತದಾನ ಮಾಡಿರು ವುದು ಈಗ ದೇಶದ ಗಮನ ಸೆಳೆದಿದೆ, ಕಾರಣ ಹೆಚ್ಚುವರಿ ಅಭ್ಯರ್ಥಿಯಾಗಿ ಗೋವಿಂದರಾಜು ಕಣಕ್ಕಿಳಿದು ಸೋತಿರುವುದು ಕೇವಲ ಜೆಡಿಎಸ್ ಅಭ್ಯರ್ಥಿಯಲ್ಲ, ಬದಲಾಗಿ ಅವರು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಮುಂದೆ ಗಟ್ಟಿಗೊಳಿಸಿ ರಾಜ್ಯದಲ್ಲಿ ದೋಸ್ತಿ ಸರಕಾರವನ್ನು ಅಧಿಕಾರಕ್ಕೆ ತರಬೇಕಿದ್ದ ಪ್ರಯತ್ನದ ಸಂಕೇತವಾಗಿದ್ದರು. ಆದರೆ ಇವರನ್ನು ಸೋಲಿಸಲು ಬಿಜೆಪಿ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿರುವುದು ದೋಸ್ತಿಗಳಲ್ಲಿ ಪರಸ್ಪರ ಅನುಮಾನ ಮೂಡಿಸಿದೆ ಎನ್ನಲಾಗಿದೆ.

ಅಷ್ಟೇ ಅಲ್ಲ ಇದು ಮುಂದೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದುವರಿಯುವ ರೀತಿ ಹಾಗೂ ಅವುಗಳ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ದಿಕ್ಸೂಚಿಯೂ ಆಗಿದೆ ಎಂದು ಎರಡೂ ಪಕ್ಷಗಳು ನಾಯಕರು ಹೇಳುತ್ತಿದ್ದಾರೆ.

ಈ ಗುಪ್ತ ಚುನಾವಣೆಯಲ್ಲಿ ಜೆಡಿಎಸ್‌ನಿಂದ 4 ಶಾಸಕರು ಅಡ್ಡಮತದಾನ ಮಾಡಿದ್ದಾರೆ ಎನ್ನಲಾಗಿದ್ದು, ಬಿಜೆಪಿಯಿಂದ 7 ಶಾಸಕರ ಅಡ್ಡಮತದಾವಾಗಿದೆ ಎಂದು ಶಂಕಿಸಲಾಗಿದೆ. ಇಲ್ಲಿ ಜೆಡಿಎಸ್‌ಗಿಂತ ಬಿಜೆಪಿ ಶಾಸಕರೇ ಹೆಚ್ಚಾಗಿ ಕಾಂಗ್ರೆಸ್‌ಗೆ ಅಡ್ಡಮತದಾನ ಮಾಡಿ ಜೆಡಿಎಸ್ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದಾರೆ ಎಂದು ಪಕ್ಷದ ಮುಖಂಡರು ಲೆಕ್ಕಾಚಾರ ಮಾಡುತ್ತಿದ್ದಾರೆ. ಈ ಬೆಳವಣಿಗೆಯಿಂದ ಜೆಡಿಎಸ್ ಜತೆಗಿನ ದೋಸ್ತಿಯನ್ನು ಬಿಜೆಪಿ ಇಷ್ಟ ಪಡುತ್ತಿಲ್ಲ ಎನ್ನುವುದು ತೋರಿಸುವುದೇ ಅಥವಾ ಬಿಜೆಪಿಯಲ್ಲಿನ ನಾಯಕತ್ವದ ವಿರುದ್ಧ ಪಕ್ಷದ ಶಾಸಕರೇ ಕಾಂಗ್ರೆಸ್ ಪರ ಅಡ್ಡಮತದಾನ ಮಾಡಿ ಪಕ್ಷದ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆಯೇ ಎನ್ನುವ ಪ್ರಶ್ನೆಗಳು ಬಿಜೆಪಿ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ

ಮೈತ್ರಿ ಬಿರುಕು ಅನಾವರಣದ ಸಂಕೇತ

ಇತ್ತೀಚಿನ ಬಿಜೆಪಿ-ಜೆಡಿಎಸ್ ದೋಸ್ತಿಗಳು ಬೆಳವಣಿಗೆ ಗಮನಿಸಿದರೆ ಮುಂದಿನ ಚುನಾವಣೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿದ್ದು, ಅವರೇ ಮುಖ್ಯಮಂತ್ರಿ ಎನ್ನುವ ಚರ್ಚೆ ಜೆಡಿಎಸ್ ವಲಯದಲ್ಲಿತ್ತು. ಈ ಚರ್ಚೆಗಳು ಬಿಜೆಪಿಯಲ್ಲಿ ಕೆಲವು ನಾಯಕರನ್ನು ಕುದಿಯುವಂತೆ ಮಾಡಿದೆ ಎನ್ನಲಾಗಿದೆ. ಹೀಗಾಗಿ ಇತ್ತೀಚಿಗೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಆಂತರಿಕ ಬಿರುಕಗಳು ಹೆಚ್ಚಾಗಿದ್ದರೂ ಅದು ಗೋಚರವಾಗುತ್ತಿಲ್ಲ, ಆದರೆ ವಿಧಾನಪರಿಷತ್ತಿನ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ಮೈತ್ರಿ ಪಕ್ಷಗಳು ನಡುವಿನ ಹೊಂದಾಣಿಕೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ಸಂದೇಶ ಎಂದು ಎರಡೂ ಪಕ್ಷಗಳ ಮುಖಂಡರು ಬಹಿರಂಗ ವಾಗಿಯೇ ಹೇಳಿದ್ದಾರೆ.

ಹಾಗೆ ನೋಡಿದರೆ ಇಡೀ ದೇಶಕ್ಕೆ ಆಪರೇಷನ್ ಕಮಲ ಸಂದೇಶ ಸಾರಿರುವ ಬಿಜೆಪಿಗೆ ಪರಿಷತ್‌ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ 4 ಮತಗಳನ್ನು ಗಳಿಸಿ ಗೆಲ್ಲಿಸಿಕೊಡವುದು ಕಷ್ಟವಾಗಿರ ಲಿಲ್ಲವೇ ಎನ್ನುವ ಪ್ರಶ್ನೆ ಜೆಡಿಎಸ್ ಕಾರ್ಯಕರ್ತರದು, ಏಕೆಂದರೆ ಗೆಲುವಿಗಾಗಿ ಹೆಚ್ಚಿನ ಸಂಖ್ಯೆಯ ಮತದಾರರಿರುವ ಕಾಂಗ್ರೆಸ್ ನಾಯಕರೇ ತನ್ನೆಲ್ಲಾ ಶಾಸಕರನ್ನು ರೆಸಾರ್ಟ್‌ನಲ್ಲಿ ಇರಿಸಿದ್ದಾರೆ. ಹೀಗಾಗಿರುವಾಗ ಬಿಜೆಪಿ ನಾಯಕರಿಗೆ ಈ ವಿಚಾರದಲ್ಲಿ ಏಕೆ ಆಸಕ್ತಿ ವಹಿಸಲಿಲ್ಲ ಎನ್ನುವ ಅನುಮಾನದ ಪ್ರಶ್ನೆಯನ್ನು ಜೆಡಿಎಸ್ ಮುಖಂಡರು ಕೇಳುತ್ತಿದ್ದಾರೆ

ಇದು ಜೆಡಿಎಸ್ ರಕ್ಷಣಾ ತಂತ್ರವೇ ?

ಈ ಮಧ್ಯೆ ನಿರೀಕ್ಷಿತ ಮತಗಳಿಲ್ಲದಿದ್ದರೂ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಿದ್ದು ಏಕೆ ಎನ್ನುವ ಪ್ರಶ್ನೆ ಬಿಜೆಪಿಯವರದ್ದಾಗಿದೆ, ಏಕೆಂದರೆ ಜೆಡಿಎಸ್ ತನ್ನ ಹೆಚ್ಚುವರಿ ಅಭ್ಯರ್ಥಿ ಗೋವಿಂದರಾಜು ಅವರನ್ನು ಕಣಕ್ಕಿಳಿಸದಿದ್ದರೆ ಇರುವ 18 ಮಂದಿ ಶಾಸಕರಿಗೂ ಕಾಂಗ್ರೆಸ್‌ನಿಂದ ಆಪರೇಷನ್ ಹಸ್ತದ ಆಪಾಯವಿತ್ತು ಎನ್ನಲಾಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ಹೆಚ್ಚುವರಿ ಅಭ್ಯರ್ಥಿ ಇಳಿಸಿ ತನ್ನ ಶಕ್ತಿ ಉಳಿಸಿಕೊಂಡಿದೆ, ಜತೆಗೆ ಬಿಜೆಪಿ ದೋಸ್ತಿಯನ್ನು ಪರೀಕ್ಷೆ ಮಾಡಿ ರಾಷ್ಟ್ರೀಯ ನಾಯಕರಿಗೆ ಸಂದೇಶ ರವಾನಿಸಿದೆ ಎಂದೂ ಹೇಳಲಾಗಿದೆ. ಹೀಗಾಗಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರಿಗೆ ಅಡ್ಡ ಮತದಾನದ ಮಾಹಿತಿ ಇತ್ತಾದರೂ ಏಕೆ ಜಾಗ್ರತೆ ವಹಿಲಿಲ್ಲ. ಗೋವಿಂದರಾಜು ಅವರನ್ನು ಕಣಕ್ಕಿಳಿಸಿ ಪರೀಕ್ಷೆ ಮಾಡಿದ್ದಾರೂ ಏಕೆ ಎಂದು ಬಿಜೆಪಿ ಮುಖಂಡರು ಪ್ರಶ್ನಿಸುತ್ತಿದ್ದಾರೆ.