ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Union Minister of Steel H.D. Kumaraswamy: ಕಾಫಿ ಬೆಳೆ ಸಾಲದ ಬಡ್ಡಿ ದರ ಶೇ.3ಕ್ಕೆ ಇಳಿಸಲು ಯತ್ನ: ಹೆಚ್.ಡಿ.ಕೆ

ಕಾಫಿ ಬೆಳೆಗಾರರ ಫಸಲು ಸಾಲದ ಮೇಲಿನ ಬಡ್ಡಿ ದರವನ್ನು ಶೇ.3ಕ್ಕೆ ಇಳಿಸುವ ನಿಟ್ಟಿನಲ್ಲಿಯೂ ಪ್ರಾಮಾ ಣಿಕ ಪ್ರಯತ್ನ ಕೈಗೊಳ್ಳುವಾಗಿ ಹೇಳಿದ ಕುಮಾರಸ್ವಾಮಿ, ವನ್ಯಜೀವಿಗಳ ದಾಳಿ ತಡೆಗೆ ತಾನು ಮುಖ್ಯ ಮಂತ್ರಿಯಾಗಿದ್ದಾಗ ಜಾರಿಗೆ ತಂದ ರೈಲ್ವೇ ಕಂಬಿ ಅಳವಡಿಕೆ ಯೋಜನೆಯನ್ನು ಈಗಿನ ರಾಜ್ಯ ಸರಕಾರ ಜಾರಿಗೆ ತರುತ್ತಿಲ್ಲ.

ಅನಿಲ್ ಎಚ್.ಟಿ.

ಬಾಳೆಹೊನ್ನೂರಿನ ರಾಷ್ಟ್ರೀಯ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಂಭ್ರಮಕ್ಕೆ ತೆರೆ

ಬಾಳೆಹೊನ್ನೂರು: ಸರ್ಫೇಸಿ ಕಾಯಿದೆಯನ್ನು ಹಿಂಪಡೆಯುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಚರ್ಚಿಸುವುದಲ್ಲದೇ, ಕಾಫಿ ಬೆಳೆಗಾರರ ಫಸಲು ಸಾಲದ ಬಡ್ಡಿ ದರವನ್ನು ಶೇ.3ಕ್ಕೆ ಇಳಿಸಲು ಪ್ರಾಮಾಣಿಕ ಪ್ರಯತ್ನ ಕೈಗೊಳ್ಳುವುದಾಗಿ ಕೇಂದ್ರದ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಬಾಳೆಹೊನ್ನೂರಿನಲ್ಲಿ ರಾಷ್ಟ್ರೀಯ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾ ರೋಪ ಸಮಾರಂಭದಲ್ಲಿ ಕಾಫಿ ಕೈಪಿಡಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರು ಸಲ್ಲಿಸಿದ್ದ ಮನವಿಯ ಅಂಶಗಳನ್ನು ಪ್ರಸ್ತಾಪಿಸಿ ದರು.

ಸಾಲಗಾರರ ಕಾಫಿ ತೋಟಗಳನ್ನು ವಿದೇಶಿಯರೂ ಹರಾಜಿನಲ್ಲಿ ಖರೀದಿಸುತ್ತಿರುವ ಬೆಳವಣಿಗೆ ಖಂಡಿತಾ ಸರಿಯಲ್ಲ. ಬೆಳೆಗಾರರ ನಿಯೋಗದೊಂದಿಗೆ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಬಳಿ ತೆರಳಿ ಸರ್ಫೇಸಿ ಕಾಯಿದೆಯನ್ನು ಹಿಂಪಡೆಯಲು ಮುಂದಾಗುವುದಾಗಿ ಹೇಳಿದರು.

ಕಾಫಿ ಬೆಳೆಗಾರರ ಫಸಲು ಸಾಲದ ಮೇಲಿನ ಬಡ್ಡಿ ದರವನ್ನು ಶೇ.3ಕ್ಕೆ ಇಳಿಸುವ ನಿಟ್ಟಿನಲ್ಲಿಯೂ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳುವಾಗಿ ಹೇಳಿದ ಕುಮಾರಸ್ವಾಮಿ, ವನ್ಯಜೀವಿಗಳ ದಾಳಿ ತಡೆಗೆ ತಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ರೈಲ್ವೇ ಕಂಬಿ ಅಳವಡಿಕೆ ಯೋಜನೆಯನ್ನು ಈಗಿನ ರಾಜ್ಯ ಸರಕಾರ ಜಾರಿಗೆ ತರುತ್ತಿಲ್ಲ.ಮಾನವನ ಜೀವ ರಕ್ಷಣೆಗೆ ವೈಜ್ಞಾನಿಕ ರೀತಿ ಪರಿಹಾರ ಕಂಡುಕೊಳ್ಳಬೇಕಾದ ಅತ್ಯಗತ್ಯವಿದೆ ಎಂದೂ ಅವರು ಪ್ರತಿಪಾದಿಸಿದರು.

ಇದನ್ನೂ ಓದಿ: CCRI: ಕಾಫಿ ಸಂಶೋಧನಾ ಕೇಂದ್ರಕ್ಕೆ ಶತಮಾನೋತ್ಸವ ಸಂಭ್ರಮ

ಅರಣ್ಯ ಇಲಾಖೆಯು ಅನಗತ್ಯವಾಗಿ ಒತ್ತುವರಿ ಹೆಸರಿನಲ್ಲಿ ಕಾಫಿ ಕೃಷಿಕರ ಭೂಮಿಯನ್ನು ವಶ ಪಡಿಸಿಕೊಳ್ಳುತ್ತಿರುವ ಬೆಳವಣಿಗೆ ಸರಿಯಲ್ಲ. ಅರಣ್ಯ ಇಲಾಖೆ ಪ್ರತೀ ವರ್ಷ ಕೋಟ್ಯಾಂತರ ರುಪಾಯಿ ಲೆಕ್ಕ ತೋರಿಸಿ ನೆಟ್ಟಿರುವ ಸಸಿಗಳನ್ನು ಮೊದಲು ತೋರಿಸಿ ನಂತರ ರೈತರ ಭೂಮಿ ವಿಚಾರಕ್ಕೆ ಬರಲಿ ಎಂದು ಕುಮಾರಸ್ವಾಮಿ ಅರಣ್ಯಾಧಿಕಾರಿಗಳ ವಿರುದ್ದ ಕಿಡಿ ಕಾರಿದರು.

ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವಂದ ಮಾತನಾಡಿ, ಮೊದಲಿನಂತೆ ಭಾರತ ಇತರ ದೇಶಗಳ ಬೇಡಿಕೆಯ ಮೇಲೆ ಅವಲಂಬಿತವಾಗದೇ ಕಾಫಿ ದರವನ್ನು ತಾನೇ ನಿರ್ಧರಿಸುವ ಹೊಣೆಗಾರ ದೇಶವಾಗಿ ಪರಿವರ್ತನೆಯಾಗಿದೆ ಎಂದೂ ದಿನೇಶ್ ಹೆಮ್ಮೆಯಿಂದ ನುಡಿದರು.

ಕಾಫಿ ಮಂಡಳಿ ಕಾರ್ಯದರ್ಶಿ ಎಂ.ಕೂರ್ಮಾರಾವ್ ಮಾತನಾಡಿದರು. ಶಾಸಕರಾದ ಟಿ.ಡಿ. ರಾಜು ಗೌಡ, ಎಸ್.ಎಲ್.ಬೋಜೇಗೌಡ, ಹೆಚ್.ಕೆ.ಸುರೇಶ್, ಉಗಾಂಡ ದೇಶದ ಕಾಫಿ ಸಂಶೋದನಾ ವಿಭಾಗದ ಮುಖ್ಯಸ್ಥ ಜೆಫ್ರಿ, ಆಂಧ್ರದ ಅರಖು ಜಿಲ್ಲಾಧಿಕಾರಿ ದಿನೇಶ್ ಕುಮಾರ್, ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸೆಂಥಿಲ್ ಕುಮಾರ್ ವೇದಿಕೆಯಲ್ಲಿದ್ದರು.

ಕೊಡಗು ಜಿಲ್ಲೆಯ ಮೂಲೆಮನೆ ಎಸ್ಟೇಟ್ ನ ಜಿ.ಜಿ. ಪದ್ಮಶ್ರೀ ಅವರಿಗೆ ಅತ್ಯುತ್ತಮ ಕಾಫಿ ತೋಟ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನನ್ನ ಜೀವ ಐದು ಬಾರಿ ಉಳಿಸಿದ ದೇವರು

ನನ್ನ ಜೀವವನ್ನು ದೇವರು ಐದು ಬಾರಿ ಉಳಿಸಿದ್ದಾನೆ. ಬಹುಷ ಜನರ ಅನೇಕ ಸಂಕಷ್ಟಗಳ ಪರಿಹಾರಕ್ಕಾಗಿ ನನ್ನ ಜೀವ ಉಳಿಸಿ ಆ ಕೆಲಸವನ್ನು ನನ್ನಿಂದ ಮಾಡಿಸುವ ಇಚ್ಛೆ ದೇವರಿಗೆ ಇರಬೇಕು. ಇನ್ನೆರಡು ವರ್ಷ ದೇವರ ದಯೆಯಿದ್ದರೆ ಮುಖ್ಯಮಂತ್ರಿಯಾಗಿ ಜನರು ಮತ್ತು ಕೃಷಿಕರಿಗೆ ಅಗತ್ಯ ಅನುಕೂಲ ಕಲ್ಪಿಸುವುದಾಗಿಯೂ ಕುಮಾರಸ್ವಾಮಿ ಹೇಳಿದರು.

ಎರಡು ಬಾರಿ ಮುಖ್ಯಮಂತ್ರಿಯಾಗುವುದೂ ನನ್ನ ಪ್ರಯತ್ನವಾಗಿರಲಿಲ್ಲ. ಜನರೂ ನನಗೆ ಮುಖ್ಯ ಮಂತ್ರಿಯಾಗಲು ಅಗತ್ಯ ಶಾಸಕ ಬಲ ನೀಡಿರಲಿಲ್ಲ. ಆದರೆ ದೈವೇಚ್ಛೆಯಿಂದ ಮುಖ್ಯಮಂತ್ರಿ ಯಾದೆ. ತನ್ನ ರಾಜಕೀಯ ಜೀವನ ಮುಗಿದೆ ಹೋಯಿತು ಎನ್ನುವವರಿಗೆ ಸಡ್ಡು ಹೊಡೆಯುವಂತೆ ತಾನು ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗಿಯೂ ಕುಮಾರಸ್ವಾಮಿ ಹೇಳಿದರು.

ಸಿಕ್ಕ ಸಿಕ್ಕವರಿಗೆ ಖರ್ಚು ಮಾಡಬೇಡಿ

ಈ ಕಾಫಿ ಬೆಳೆಗಾರರು ಹೇಗೆ ಅಂದ್ರೆ, ಕಾಫಿಗೆ ಉತ್ತಮ ಬೆಲೆ ಬಂದರೆ ಸಾಕು. ಬಾವ.. ಬಾವ ಎಂದು ಕೊಂಡು ಸಿಕ್ಕಸಿಕ್ಕವರಿಗೆ ಖರ್ಚು ಮಾಡಿ ದುಡ್ಡು ಉಡಾಯಿಸುತ್ತಾರೆ. ಉಳಿತಾಯ ಮಾಡೋದಿಲ್ಲ. ಪೈಪೋಟಿಯಲ್ಲಿ ಖರ್ಚು ಮಾಡುವುದನ್ನ ನಿಲ್ಲಿಸಿ, ಕುಟುಂಬಕ್ಕಾಗಿ ಉಳಿತಾಯ ಮಾಡೋದನ್ನು ಕಲಿಯಿರಿ. ಕಾಫಿ ಬೆಳೆಗಾರರೆಂದರೆ ನೆಮ್ಮದಿಯ ಜೀವನ ಎಂಬ ಖ್ಯಾತಿಯನ್ನು ಹಣ ಉಳಿತಾಯದ ಮೂಲಕ ಸಂರಕ್ಷಿಸಿಕೊಳ್ಳಿ ಎಂದು ಕಾಫಿ ಬೆಳೆಗಾರರಿಗೆ ಹಾಸ್ಯಮಯವಾಗಿ ಕುಮಾರಸ್ವಾಮಿ ಕಿವಿ ಮಾತು ಹೇಳಿದರು.