ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೌಕರರ ವರ್ಗಾವಣೆ ಕೌನ್ಸೆಲಿಂಗ್ ವ್ಯವಸ್ಥೆ ಕಣ್ಮರೆ

ಸರಕಾರದ ನಾಯಕತ್ವ ಬದಲಾವಣೆ ಮತ್ತು ಆಂತರಿಕ ರಾಜಕಾರಣದ ಗದ್ದಲದಲ್ಲಿ ಮುಗಿದು ಹೋಗಿದ್ದೇ ಗೊತ್ತಾಗಲಿಲ್ಲ. ಇದರ ಮಧ್ಯೆ, ಈಗ ನೌಕರರ ವರ್ಗಾವಣೆಯನ್ನು ಪಾರದರ್ಶಕವಾಗಿ ನಡೆಸಲು ಅನುಸರಿಸ ಲಾಗುತ್ತಿದ್ದ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಕೈಬಿಡಬೇಕೆನ್ನುವ ನಿಟ್ಟಿನಲ್ಲಿ ಅನೇಕ ಇಲಾಖೆಗಳು ಚಿಂತನೆ ನಡೆಸಿವೆ ಎನ್ನಲಾಗಿದೆ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಅಬಕಾರಿ ಇಲಾಖೆಯಲ್ಲಿನ ಪ್ರಭಾವಿಗಳ ಕೈ ಚಳಕ, ಸರಕಾರದಲ್ಲಿ ವರ್ಗಾವಣೆ ಇನ್ನು ತುಂಬಾ ದುಬಾರಿ

ರಾಜ್ಯದಲ್ಲಿ ಸದ್ದಿಲ್ಲದೆ ಮುಗಿದು ಹೋದ ನೌಕರರ ವರ್ಗಾವಣೆ ನಂತರ ಈಗ ಪಾರದರ್ಶಕ ವ್ಯವಸ್ಥೆಯ ಪ್ರತೀಕವಾದ ಕೌನ್ಸೆಲ್ ವ್ಯವಸ್ಥೆ ಕೂಡ ಕಣ್ಮರೆಯಾಗುತ್ತಿದೆ. ಸರಕಾರದ ನಾಯಕತ್ವ ಬದಲಾವಣೆ ಮತ್ತು ಆಂತರಿಕ ರಾಜಕಾರಣದ ಗದ್ದಲದಲ್ಲಿ ಮುಗಿದು ಹೋಗಿದ್ದೇ ಗೊತ್ತಾಗಲಿಲ್ಲ. ಇದರ ಮಧ್ಯೆ, ಈಗ ನೌಕರರ ವರ್ಗಾವಣೆಯನ್ನು ಪಾರದರ್ಶಕವಾಗಿ ನಡೆಸಲು ಅನುಸರಿಸ ಲಾಗುತ್ತಿದ್ದ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಕೈಬಿಡಬೇಕೆನ್ನುವ ನಿಟ್ಟಿನಲ್ಲಿ ಅನೇಕ ಇಲಾಖೆಗಳು ಚಿಂತನೆ ನಡೆಸಿವೆ ಎನ್ನಲಾಗಿದೆ.

ಇದಕ್ಕೆ ಕಾರಣ ಕೌನ್ಸೆಲಿಂಗ್ ಬಲೆಗೆ ಸಿಲುಕದೆ ಅನೇಕ ವರ್ಷಗಳಿಂದ ರಾಜಧಾನಿ ಬೆಂಗಳೂರಿನ ಝಾಂಡಾ ಹೂಡಿರುವ ಹಾಗೂ ಆಯಕಟ್ಟಿನ ಸ್ಥಳಯಲ್ಲಿ ಪಟ್ಟಾಗಿ ಕುಳಿತಿರುವ ಅನೇಕ ಬಲಾಢ್ಯ ಅಧಿಕಾರಿಗಳು ಇದನ್ನು ಉತ್ತೇಜಿಸುತ್ತಿದ್ದು, ಇದಕ್ಕಾಗಿ ತಮ್ಮ ಇಲಾಖೆಗಳ ನೂತನ ಮಂತ್ರಿಗಳನ್ನು ವಿವಿಧ ರೀತಿಯಲ್ಲಿ ಮನವೊಲಿಸುತ್ತಿzರೆ. ಹೀಗೆ ಸದ್ದಿಲ್ಲದ ಕೌನ್ಸೆಲಿಂಗ್ ಕಣ್ಮರೆ ಮಾಡುವ ಈ ಪ್ರಯತ್ನ ಸದ್ಯ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿದ್ದು, ಇದು ಮುಖ್ಯಮಂತ್ರಿ ಅವರ ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ: Vijay Darda Column: ಇಮ್ರಾನ್‌ ಖಾನ್‌ ಸಾಹೇಬರ ಅದೃಷ್ಟ ಬದಲಾದೀತೆ ?

ಇದೇ ರೀತಿ ಇತರ ಇಲಾಖೆಗಳಲ್ಲೂ ಪ್ರಯತ್ನ ನಡೆದಿದ್ದು, ಇದಕ್ಕೆ ಕೆಲವು ಇಲಾಖೆ ಸಚಿವರೂ ಒಪ್ಪಿಗೆಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ವರ್ಗಾವಣೆಯಲ್ಲಿ ಕೌನ್ಸೆಲಿಂಗ್ ವ್ಯವಸ್ಥೆ ರzದರೂ ಅಚ್ಚರಿ ಇಲ್ಲ ಎನ್ನುವಂತಾಗಿದೆ. ಇದಕ್ಕೆ ಮೂಲ ಕಾರಣವೇ ನೆಂದರೆ, ಕಳೆದ ವರ್ಷ ಅಬಕಾರಿ ಇಲಾಖೆ ಪ್ರಥಮ ಬಾರಿಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಸಿತ್ತು. ಇದರಿಂದ 1.20ಲಕ್ಷ ನೌಕರರ ಇಲಾಖೆಯಲ್ಲಿ ಶೇ.75ರಷ್ಟು ಮಂದಿ ಯಾವುದೇ ರಾಜಕೀಯ ಪ್ರಭಾವ, ಹಣಕಾಸಿನ ವೆಚ್ಚ, ಲಂಚಾವತಾರಗಳಿಲ್ಲದೆ ತಮಗೆ ಇಚ್ಚಿಸಿದ ಸ್ಥಳಗಳಿಗೆ ವರ್ಗಾವಣೆ ಪಡೆದಿದ್ದರು.

ಕಾನ್ಸ್‌ʼಸ್ಟೇಬಲ್‌ನಿಂದ ಇನ್ಸ್‌ʼಪೆಕ್ಟರ್‌ವರೆಗೆ ಮಾತ್ರ ನಡೆದಿದ್ದ ಈ ಕೌನ್ಸೆಲ್ ಈ ವರ್ಷದಿಂದ ಅಧೀಕ್ಷಕರು ಮತ್ತು ಉಪ ಆಯುಕ್ತರ ವರೆಗೂ ನಡೆಯಬೇಕಿತ್ತು. ಇದು ರಾಜ್ಯ ಸರಕಾರದ ಬಜೆಟ್ ಭರವಸೆ ಕೂಡ ಆಗಿತ್ತು. ಆದರೆ ಇದನ್ನು ಮೊಗ್ಗಿನ ಮೊಟಕುಗೊಳಿಸುವ ಪ್ರಯತ್ನ ಇಲಾಖೆಯಲ್ಲಿ ನಡೆದಿದೆ ಎಂದು ಆ ಇಲಾಖೆ ಅಧಿಕಾರಿಗಳೇ ಹೇಳಿದ್ದಾರೆ.

ಒಂದೊಮ್ಮೆ ಇದು ಅನುಷ್ಟಾನವೇ ಆದರೆ ರಾಜ್ಯದಲ್ಲಿ ವರ್ಗಾವಣೆಯಲ್ಲಿ ರಾಜಕಾರಣದ ಹಸ್ತಕ್ಷೇಪ ಹೆಚ್ಚಾಗುತ್ತದೆ. ಅಲ್ಲದೆ, ವರ್ಗಾವಣೆಗೆ ರಾಜಕಾರಣಿಗಳ ಶಿಫಾರಸು ಅನಿವಾರ್ಯವಾಗಲಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಇದು ಪ್ರಕಾಶ್ ಸಿಂಗ್ ಮತ್ತು ಕೇಂದ್ರ ಸರಕಾರದ ನಡುವಿನ ಪ್ರಕರಣ ದಲ್ಲಿ 2006ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಉಲ್ಲಂಘನೆ ಕೂಡ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ವಿಚಾರ ಸರಕಾರಿ ನೌಕರರ ಸಂಘದ ಗಮನಕ್ಕೂ ಬಂದಿದ್ದು ಸಂಘದ ಪದಾಧಿಕಾರಿಗಳು ಇದರ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ.

ಬರ ನಿರ್ವಹಣೆಗೆ ಒಟ್ಟು 635 ಕೋಟಿ ರು. ಕುಡಿಯುವ ನೀರಿನ ಉದ್ದೇಶಕ್ಕಾಗಿ ಡಿಸಿಗಳಿಗೆ 117 ಕೋಟಿ ರು. ಅನುದಾನ ನೀಡಲಾಗಿದೆ. ಪ್ರತಿ ಕ್ಷೇತ್ರಗಳಿಗೆ 189 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇದನ್ನೂ ಕುಡಿಯುವ ನೀರಿಗೆ ಉದ್ದೇಶಕ್ಕೆ ಬಳಸಲಾಗುತ್ತಿದೆ. ಇದರ ಜೊತೆಗೆ 25 ಕೋಟಿ ರು. ಮೇವು ಕಿಟ್ ಖರೀದಿಗಾಗಿ ನೀಡಲಾಗಿದೆ. ಕೆಎಂಎಫ್‌ʼಗೂ ಹಣ ನೀಡುವಂತೆ ಮನವಿ ಮಾಡಿದ್ದೇವೆ. ಡಿಸಿಗಳ ಪಿಡಿ ಖಾತೆಗಳಲ್ಲಿ 329 ಕೋಟಿ ರು. ಹಣ ಇದೆ. ಇದನ್ನು ಬರಕ್ಕೆ ಮಾತ್ರ ಬಳಸಲು ಸೂಚನೆ ನೀಡಲಾಗಿದೆ. ಆ ಮೂಲಕ ಒಟ್ಟು ಸುಮಾರು 635 ಕೋಟಿ ರು. ಬರ ನಿರ್ವಹಣೆಗಾಗಿ ಹಣವನ್ನು ಇಟ್ಟಿದ್ದೇವೆ ಎಂದರು

ಇದೇ ಕೌನ್ಸೆಲಿಂಗ್ ಕರಾಮತ್ತು !

ರಾಜ್ಯ ಸರಕಾರ ಈ ವರ್ಷ ಏಪ್ರಿಲ್ 13ರಿಂದ ಶೇ.6 ಮಿತಿಯಲ್ಲಿ ಸರಕಾರಿ ನೌಕರರ ವರ್ಗಾವಣೆ ನಡೆಸಲು ಆದೇಶ ಹೊರಡಿಸಿತ್ತು. ಅಷ್ಟೊತ್ತಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದ್ದ ರಿಂದ ವರ್ಗಾವಣೆ ಅವಧಿಯನ್ನು ಮೂರು ಬಾರಿ ವಿಸ್ತರಿಸಿ ನಂತರ ಜುಲೈ 16ಕ್ಕೆ ಅಂತ್ಯಗೊಳಿಸಿತ್ತು. ಹೀಗಾಗಿ ಈ ವರ್ಷ ರಾಜ್ಯದಲ್ಲಿ ಈ ವರ್ಷ ವರ್ಗಾವಣೆ ಆಗಿದ್ದೂ ಗೊತ್ತಾಗಿಲ್ಲ. ಅದರ ಸಮಯ ಹೋಗಿದ್ದೂ ಗೊತ್ತಾಗಿಲ್ಲ. ಅಷ್ಟೇ ಆಗಿದ್ದರೆ ಸರಿ. ಈ ವರ್ಷ ಯಾವುದೇ ಲಂಚಾವತಾಲ ಮತ್ತು ರಾಜಕಾರಣಿಗಳ ಪ್ರಭಾವಗಳಿಲ್ಲದೆ ತಮ್ಮ ಸೇವಾ ಜೇಷ್ಠತೆ ಆಧಾರದಲ್ಲಿ ಯಾವುದೇ ವೆಚ್ಚವಿಲ್ಲದೆ ಸುಲಭವಾಗಿ ವರ್ಗಾವಣೆ ಪಡೆಯುತ್ತಿದ್ದ ಕೌನ್ಸೆಲ್ ವ್ಯವಸ್ಥೆ ಕೂಡ ಈ ಬಾರಿ ಕಮರಿ ಹೋಗಿತ್ತು.

ಆದರೂ ಇದನ್ನು ಸರಕಾರದ ಯಾವುದೇ ಹಿರಿಯ ಅಧಿಕಾರಿಗಳೂ ಗಮನಿಸಿ ಕ್ರಮ ಕೈಗೊಳ್ಳಲಿಲ್ಲ. ಆಗ ಪೂರ್ಣ ಪ್ರಮಾಣದ ಸಂಪುಟ ಇರಲಿಲ್ಲ. ಇದ್ದ ಸಚಿವರೂ ಇದರ ಬಗ್ಗೆ ಗಮನ ನೀಡಲಿಲ್ಲ. ಇದರಿಂದಾಗಿ ಕಳೆದ ವರ್ಷಗಳಿಂದ ಕೌನ್ಸೆಲಿಂಗ್ ಆರಂಭ ಮಾಡಿದ್ದ ಅಬಕಾರಿ ಇಲಾಖೆ, ಆರೋಗ್ಯ, ಕಂದಾಯ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ, ಕಾರ್ಮಿಕ, ಪೊಲೀಸ್, ಶಿಕ್ಷಣ ಇಲಾಖೆಗಳು ಕೌನ್ಸೆಲಿಂಗ್ ಮಾತನ್ನೇ ಮರೆತು ಹೋದವು. ನಂತರ ಸರಕಾರದ ನಾಯಕತ್ವ ಬದಲಾಗಿ ಆ ಇಲಾಖೆಗಳಿಗೆ ಮಂತ್ರಿಗಳು ಬರುವಷ್ಟರಲ್ಲಿ ವರ್ಗಾವಣೆ ಅವಧಿಯೇ ಮುಕ್ತಾಯವಾಗಿ ಕೌನ್ಸೆಲಿಂಗ್ ಕಣ್ಣರೆಯಾಗಿತ್ತು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.