ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ವಚ್ಛತೆಯಿಲ್ಲದಿದ್ದರೂ ಶುಲ್ಕವಂತೂ ಕೊಡಲೇಬೇಕು

ನಗರದಲ್ಲಿರುವ ಅನೇಕ ಭಾಗದಲ್ಲಿ ಉಚಿತ ಸಾರ್ವಜನಿಕ ಶೌಚಾಲಯ ಎಂಬ ಬರಹವಿದ್ದರೂ, ಕೆಳಭಾಗ ದಲ್ಲಿ ಪೇ ಅಂಡ್ ಯೂಸ್, ನೀಟ್ ಅಂಡ್ ಕ್ಲೀನ್ ಎಂಬ ಸ್ಟಿಕರ್ ಅಂಟಿಸಿ ಮೂತ್ರ ವಿಸರ್ಜನೆಗೆ 5 ರು. ಹಾಗೂ ಮಲ ವಿಸರ್ಜನೆಗೆ 10 ರು. ಶುಲ್ಕ ವಿಧಿಸಲಾಗುತ್ತಿದೆ. ಇದರಿಂದ ಬಡವರು, ದಿನಗೂಲಿ ಕಾರ್ಮಿಕ ರು ಹಾಗೂ ಸಾಮಾನ್ಯ ಜನರು ಪ್ರತಿ ಸಲ ಶುಲ್ಕವನ್ನು ಕೊಟ್ಟು ಹೋಗಬೇಕಾದ ಪರಿಸ್ಥಿತಿ ಬಂದಿದೆ. ಅನೇಕ ಸಮಯದಲ್ಲಿ ಐದು ರುಪಾಯಿ ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹಲವರು ರಸ್ತೆಬದಿ ಯಲ್ಲಿಯೇ ಮಾಡುತ್ತಿದ್ದಾರೆ

ವೈಭವ ಸಿ.ಕೊಳ್ಳಿ ಬೆಂಗಳೂರು

ಮೂತ್ರಾಲಯಕ್ಕೆ ಉಚಿತವಿದ್ದರೂ ಹಣ ಸಂಗ್ರಹಣೆ

ಸಾರ್ವಜನಿಕ ಶೌಚಾಲಯದ ನಿರ್ವಹಣೆ ವಿರುದ್ಧ ಜನಾಕ್ರೋಶ

ದೇಶದಲ್ಲಿ ಸುಲಭ ಶೌಚಾಲಯವನ್ನು ಹುಡುಕುವುದು ಕಷ್ಟವೇನಲ್ಲ. ಏಕೆಂದರೆ ಅರ್ಧ ಕಿಮೀ ದೂರದಲ್ಲಿಯೇ ದುರ್ವಾಸೆ ಎಲ್ಲಿಂದ ಬರುತ್ತಿದೆಯೋ ಅಲ್ಲಿಯೇ ಸಾರ್ವಜನಿಕ ಶೌಚಾಲಯವಿದೆ ಎನ್ನುವ ಮಾತು ತಮಾಷೆಗೆ ಅನೇಕರು ಹೇಳುತ್ತಾರೆ. ಆದರೆ ಈ ತಮಾಷೆ ಮಾತು ಸತ್ಯ ಎನ್ನುವ ರೀತಿಯಲ್ಲಿ ರಾಜಧಾನಿ ಬೆಂಗಳೂರಿನ ಅನೇಕ ಸಾರ್ವಜನಿಕ ಶೌಚಾಲಯಗಳಿವೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿದೆ.

ರಾಜಧಾನಿ ಬೆಂಗಳೂರಿನ ಅನೇಕ ಸಾರ್ವಜನಿಕ ಶೌಚಾಲಯದಲ್ಲಿ ಸ್ವಚ್ಛತೆಯಿಲ್ಲ, ಸರಿಯಾಗಿ ನೀರಿಲ್ಲ. ಆದರೆ ಶುಲ್ಕವನ್ನು ಪಡೆಯುವುದರಲ್ಲಿ ಮಾತ್ರ ಎಂದಿಗೂ ಹಿಂದೆ ಬಿದ್ದಿಲ್ಲ. ಬೆಂಗಳೂರಿ ನಲ್ಲಿರುವ ಅನೇಕ ಸಾರ್ವಜನಿಕ ಶೌಚಾಲಯದಲ್ಲಿ ಮೂತ್ರಾಲಯಗಳನ್ನು ಬಳಸಲು ಯಾವುದೇ ಶುಲ್ಕ ನೀಡಬೇಕಿಲ್ಲ ಎನ್ನುವ ಬೋರ್ಡ್ ಸಾರ್ವಜನಿಕ ಶೌಚಾಲಯಗಳ ಹೊರಗೆ ಹಾಕಿದ್ದರೂ, ಶುಲ್ಕ ಸಂಗ್ರಹಿಸಲು ಇರುವ ಸಿಬ್ಬಂದಿಗಳು ಹಣ ಪೀಕುವುದನ್ನು ಮಾತ್ರ ಬಿಡುವುದಿಲ್ಲ ಎನ್ನುವ ಆರೋಪವಿದೆ.

ಇದನ್ನೂ ಓದಿ; Toilet cleaning: ಶಾಲೆಗಳಲ್ಲಿ ಮಕ್ಕಳಿಂದ ಶೌಚಗೃಹ ಸ್ವಚ್ಛ ಮಾಡಿಸಿದ್ರೆ ಬೀಳುತ್ತೆ ಎಫ್‌ಐಆರ್‌; ಶಿಕ್ಷಣ ಇಲಾಖೆ ಎಚ್ಚರಿಕೆ

ನಗರದಲ್ಲಿರುವ ಅನೇಕ ಭಾಗದಲ್ಲಿ ಉಚಿತ ಸಾರ್ವಜನಿಕ ಶೌಚಾಲಯ ಎಂಬ ಬರಹವಿದ್ದರೂ, ಕೆಳಭಾಗದಲ್ಲಿ ಪೇ ಅಂಡ್ ಯೂಸ್, ನೀಟ್ ಅಂಡ್ ಕ್ಲೀನ್ ಎಂಬ ಸ್ಟಿಕರ್ ಅಂಟಿಸಿ ಮೂತ್ರ ವಿಸರ್ಜನೆಗೆ 5 ರು. ಹಾಗೂ ಮಲ ವಿಸರ್ಜನೆಗೆ 10 ರು. ಶುಲ್ಕ ವಿಧಿಸಲಾಗುತ್ತಿದೆ. ಇದರಿಂದ ಬಡವರು, ದಿನಗೂಲಿ ಕಾರ್ಮಿಕರು ಹಾಗೂ ಸಾಮಾನ್ಯ ಜನರು ಪ್ರತಿ ಸಲ ಶುಲ್ಕವನ್ನು ಕೊಟ್ಟು ಹೋಗಬೇಕಾದ ಪರಿಸ್ಥಿತಿ ಬಂದಿದೆ. ಅನೇಕ ಸಮಯದಲ್ಲಿ ಐದು ರುಪಾಯಿ ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹಲವರು ರಸ್ತೆಬದಿಯಲ್ಲಿಯೇ ಮಾಡುತ್ತಿದ್ದಾರೆ. ಇದರಿಂದ ನಗರದ ಸ್ವಚ್ಛತೆ ಹಾಗೂ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಇನ್ನು ಕೆಲವರು ಶುಲ್ಕ ಪಾವತಿಸಿ ಹೋಗುವ ಬದಲು ಮನೆಗೆ ಹೋಗೋಣ ಎಂದು ಮೂತ್ರ ವಿಸರ್ಜನೆಯನ್ನು ತಡೆಹಿಡಿಯುತ್ತಿದ್ದಾರೆ. ಇದರಿಂದ ಕಿಡ್ನಿ ಸ್ಟೋನ್, ಮೂತ್ರನಾಳದ ಸೋಂಕು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

250 ಮಹಿಳಾ ಶೌಚಾಲಯ

ಮಹಿಳಾ ಶೌಚಾಲಯಗಳ ಕೊರತೆ ಮತ್ತಷ್ಟು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಸುಮಾರು 1.25 ಕೋಟಿ ಜನಸಂಖ್ಯೆ ಹೊಂದಿರುವ ಐಟಿ ನಗರ ಬೆಂಗಳೂರಿನಲ್ಲಿ ಮಹಿಳೆಯರಿಗಾಗಿ ಅಂದಾಜು 250 ರಷ್ಟು ಸಾರ್ವಜನಿಕ ಶೌಚಾಲಯಗಳಷ್ಟೇ ಇರುವುದಾಗಿ ಹೇಳಲಾಗುತ್ತಿದ್ದು, ಇದು ಮಹಿಳೆಯ ರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದೆ. ಪ್ರಮುಖ ಬಸ್ ನಿಲ್ದಾಣಗಳು ಹಾಗೂ ಜನಸಂದಣಿ ಪ್ರದೇಶಗಳನ್ನು ಹೊರತುಪಡಿಸಿದರೆ, ನಗರದ ಬಹುತೇಕ ಭಾಗಗಳಲ್ಲಿ ಮಹಿಳಾ ಶೌಚಾಲಯಗಳ ಲಭ್ಯತೆ ಅತ್ಯಂತ ಕಡಿಮೆಯಾಗಿದೆ.ಪುರುಷರಿಗೆ ತುರ್ತು ಸಂದರ್ಭಗಳಲ್ಲಿ ಪರ್ಯಾಯ ವ್ಯವಸ್ಥೆಗಳು ದೊರೆಯುತ್ತಿದ್ದರೂ, ಮಹಿಳೆಯರಿಗೆ ಅಂತಹ ಅವಕಾಶಗಳಿಲ್ಲದ ಕಾರಣ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಿದೆ. ಸರಕಾರವು ಸಿಎಸ್ಆರ್ ಯೋಜನೆಗಳ ಮೂಲಕ ಹೊಸ ಶೌಚಾಲಯ ನಿರ್ಮಾಣದ ಭರವಸೆ ನೀಡಿದ್ದರೂ, ನೆಲಮಟ್ಟದಲ್ಲಿ ಅದರ ಪರಿಣಾಮ ಕಾಣಿಸುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

BBMP Toilet 2

ಸ್ವಚ್ಛತೆ ಕಾಣದ ಶೌಚಾಲಯಗಳು

ಇನ್ನು ಸಾರ್ವಜನಿಕರಿಂದ ಶುಲ್ಕ ವಸೂಲಿ ಮಾಡುತ್ತಿದ್ದರೂ ಸುಲಭ ಶೌಚಾಲಯಗಳ ಸ್ಥಿತಿಯೇನು ಉತ್ತಮವಾಗಿಲ್ಲ. ಸ್ವಚ್ಛತೆ ಕೊರತೆ, ನೀರಿನ ಅಭಾವ ಹಾಗೂ ಸಮರ್ಪಕ ನಿರ್ವಹಣೆಯಿಲ್ಲದ ಕಾರಣ ಜನರು ಶೌಚಾಲಯ ಬಳಸಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಣ ಕೊಟ್ಟು ಒಳಗೆ ಹೋಗಲು ಅಸಹ್ಯವಾಗುತ್ತದೆ. ಜತೆಗೆ ಶೌಚಾಲಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲೂ ಸಮರ್ಪಕ ಸ್ವಚ್ಛತೆ ಇಲ್ಲದಿರುವುದು, ಶುಲ್ಕ ವಿತರಣೆ ಸಮಸ್ಯೆಯಿಂದ ಜನರು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ದುರ್ವಾಸನೆ, ಸೊಳ್ಳೆಗಳ ಹೆಚ್ಚಳ ಮತ್ತು ಆರೋಗ್ಯ ಸಮಸ್ಯೆ ಗಳು ಉಂಟಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸು ತ್ತಿದ್ದಾರೆ.

image

ಮೂಲಭೂತ ಸೌಲಭ್ಯವಾಗಿರುವ ಸಾರ್ವಜನಿಕ ಶೌಚಾಲಯಕ್ಕೆ ಹಣ ವಸೂಲಿ ಮಾಡುತ್ತಿರುವುದು ಸರಿಯಲ್ಲ. ದಿನಗೂಲಿ ಕಾರ್ಮಿಕರು, ವೃದ್ಧರು ಹಾಗೂ ಬಡವರಿಗೆ ಪ್ರತಿದಿನ ಹಣ ಕೊಟ್ಟು ಶೌಚಾ ಲಯ ಬಳಸುವುದು ಕಷ್ಟವಾಗುತ್ತಿದೆ. ನಗರ ಪಾಲಿಕೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಉಚಿತ ಅಥವಾ ಕಡಿಮೆ ಶುಲ್ಕದಲ್ಲಿ ಉತ್ತಮ ಸೌಲಭ್ಯ ಒದಗಿಸಬೇಕು.

- ರಮೇಶ್, ಕೂಲಿ ಕಾರ್ಮಿಕ
image

ಈಗ ಯಾವ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಯಾವ ಶೌಚಾಲಯ ಬರುತ್ತದೆಯೋ ಅದರ ಸಂಪೂರ್ಣ ಜವಾಬ್ದಾರಿ ಆ ಕಾರ್ಪೊರೇಷನ್‌ದ್ದಾಗಿದೆ. ಹೊಸ ಶೌಚಾಲಯ ನಿರ್ಮಾಣ, ನಿರ್ವಹಣೆ, ಟೆಂಡರ್ ಪ್ರಕ್ರಿಯೆ, ಏಜೆನ್ಸಿ ಬದಲಾವಣೆ, ಪೇ ಅಂಡ್ ಯೂಸ್ ವ್ಯವಸ್ಥೆ ಜಾರಿಗೆ ತರುವುದು ಅಥವಾ ಉಚಿತ ಸೇವೆ ನೀಡುವುದು ಸೇರಿದಂತೆ ಎಲ್ಲಾ ನಿರ್ಧಾರಗಳನ್ನು ಸ್ಥಳೀಯ ಆಯುಕ್ತರೇ ಕೈಗೊಳ್ಳು ತ್ತಾರೆ.

- ಭೀಮೇಶ್ ಎಚ್. ಉಪಪ್ರಧಾನ ವ್ಯವಸ್ಥಾಪಕ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್.