ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕನಸಿನ ಮನೆಗೆ ಎಂ.ಬಿ.ಪಾಟೀಲ್ ಹೆಸರಿಟ್ಟ ರೈತ

ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಗ್ರಾಮದ ಹಿರೇಮಠ ಕುಟುಂಬದ ಸಿದ್ದಯ್ಯ, ಸಾತಯ್ಯ, ಮಲ್ಲಯ್ಯ, ಬಸಯ್ಯ ಹಾಗೂ ಚಂದ್ರವ್ವ ಎಂಬ 30ಕ್ಕೂ ಹೆಚ್ಚು ಜನ ಇರುವ ಅವಿಭಕ್ತ ಕುಟುಂಬವು ವಿಜಯಪುರದ ರಾಜಕುಮಾರ್ ಬಡಾವಣೆಯಲ್ಲಿ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸ್ವಂತ ಮನೆಗೆ ಸಚಿವ ಎಂ.ಬಿ.ಪಾಟೀಲರ ಹೆಸರನ್ನು ಇಡುವ ಮೂಲಕ ತಮ್ಮ ಭೂಮಿಗೆ ನೀರುಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮಂಜುನಾಥ ಕಲಾಲ ವಿಜಯಪುರ

ರೈತರ ಬದುಕು ಬೆಳಗಿಸಿದ ಸಚಿವ ಡಾ.ಎಂ.ಬಿ.ಪಾಟೀಲ್

ಆಧುನಿಕ ಭಗಿರಥನಿಗೆ ಕೃತಜ್ಞತೆ ಸಲ್ಲಿಸಿದ ರೈತ

ರಾಜಕಾರಣಿಗಳೆಂದರೆ ದೂರ ಓಡುವ ಈಗಿನ ಕಾಲಘಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಜನರ ಹೃದಯ ಮಂದಿರದಲ್ಲಿ ನೆಲೆಸಬಹುದು ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ. ಹೌದು..! ಬರದ ಭೂಮಿಯಲ್ಲಿ ನೀರು ಹರಿಸುವ ಮೂಲಕ ರೈತರ ಬದುಕು ಬೆಳಗಿಸಿದ ಸಚಿವ ಡಾ.ಎಂ.ಬಿ.ಪಾಟೀಲ್‌ರ ಹೆಸರನ್ನು ಅಭಿಮಾನಿ ರೈತರೊಬ್ಬರು ತಮ್ಮ ಮನೆಗೆ ಇರಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.

ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಗ್ರಾಮದ ಹಿರೇಮಠ ಕುಟುಂಬದ ಸಿದ್ದಯ್ಯ, ಸಾತಯ್ಯ, ಮಲ್ಲಯ್ಯ, ಬಸಯ್ಯ ಹಾಗೂ ಚಂದ್ರವ್ವ ಎಂಬ 30ಕ್ಕೂ ಹೆಚ್ಚು ಜನ ಇರುವ ಅವಿಭಕ್ತ ಕುಟುಂಬವು ವಿಜಯಪುರದ ರಾಜಕುಮಾರ್ ಬಡಾವಣೆಯಲ್ಲಿ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸ್ವಂತ ಮನೆಗೆ ಸಚಿವ ಎಂ.ಬಿ.ಪಾಟೀಲರ ಹೆಸರನ್ನು ಇಡುವ ಮೂಲಕ ತಮ್ಮ ಭೂಮಿಗೆ ನೀರುಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Vijayapura Airport: ವಿಜಯಪುರ ಏರ್‌ಪೋರ್ಟ್‌ಗಿದ್ದ ಅಡ್ಡಿ ನಿವಾರಣೆ: ಸುಪ್ರೀಂಕೋರ್ಟ್ ನಿಲುವಿಗೆ ಎಂ.ಬಿ. ಪಾಟೀಲ್‌ ಸ್ವಾಗತ

ಸಚಿವ ಎಂ.ಬಿ.ಪಾಟೀಲ್ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ನಿರ್ವಹಿಸಿದ್ದರಿಂದ ಕಾಲುವೆ ಮೂಲಕ ಹರಿದ ನೀರು ಈ ಭಾಗದ ಕೆರೆ ಕಟ್ಟೆ, ಹಳ್ಳ ಕೊಳ್ಳ ಹಾಗೂ ಬಾಂದಾರಗಳ ಮೂಲಕ ನೀರು ಹರಿದಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಬೊರವೆಲ್‌ಗಳು ಮರುಪುರಣಗೊಂಡವು. ಸಮರ್ಪಕ ನೀರಾವರಿ ಅನುಷ್ಠಾಣದಿಂದ ರೈತರ ಬದುಕು ಬಂಗಾರವಾಗಿದೆ.

ಸಚಿವ ಎಂ.ಬಿ.ಪಾಟೀಲ್ ಅವರ ಯೋಜನೆಯ ಫಲವಾಗಿ ಬೆಳೆ ಸಮೃದ್ದವಾಗಿ ಬೆಳೆದು ಆದಾಯ ದ್ವಿಗುಣವಾಗಿದೆ. ಈ ಹಿನ್ನಲೆಯಲ್ಲಿ ಕನಸಿನ ಮನೆ ನಿರ್ಮಿಸಿಕೊಂಡಿದ್ದ ರೈತನೊರ್ವ ತಮ್ಮ ನೂತನ ಮನೆಗೆ ಎಂ.ಬಿ.ಪಾಟೀಲ್ ನಿಲಯ ಎಂದು ಹೆಸರಿಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಒಂದು ಕಾಲದಲ್ಲಿ ಬರಗಾಲಕ್ಕೆ ತುತ್ತಾಗಿ ಹನಿ ನೀರಿಗೂ ಪರದಾಡಿದ ಈ ಭಾಗಕ್ಕೆ ಸಚಿವ ಎಂ.ಬಿ.ಪಾಟೀಲ್‌ರ ನೀರಾವರಿ ಯೋಜನೆ ಆಸರೆಯಾಗಿವೆ, ಜಿಲ್ಲೆಗೆ ನೀರಾವರಿ ಯೋಜನೆ ಕೊಡುವ ಮೂಲಕ ಅಧುನಿಕ ಭಗೀರಥ ಎಂದು ಖ್ಯಾತಿ ಪಡೆದ ಎಂ.ಬಿ.ಪಾಟೀಲ್‌ರ ಕಾರ್ಯವನ್ನು ಈ ಭಾಗದ ರೈತರು ಸ್ಮರಿಸುತ್ತಿದ್ದಾರೆ.

ಮನೆಗೆ ಹಿರಿಯರ ಹೆಸರು, ದೇವರ ಹೆಸರು ಇರಿಸುವುದು ವಾಡಿಕೆ. ಆದರೆ ಈ ಬಾರಿ ನೀರಾವರಿ ಯೋಜನೆಯ ಮೂಲಕ ಬದುಕು ಬೆಳಗಿಸಿದವರ ಹೆಸರು ಇರಿಸುವ ಮೂಲಕ ಮೌಲ್ಯಾಧಾರಿತ ರಾಜಕಾರಣ ಇಂದಿಗೂ ಜೀವಂತವಾಗಿದೆ ಎಂಬುದು ಸಾಬೀತಾಗಿದೆ. ಒಟ್ಟಾರೆಯಾಗಿ ಸಚಿವ ಎಂ.ಬಿ.ಪಾಟೀಲ್ ಅವರ ಹೆಸರಿನಲ್ಲಿ ರೈತ ನಿರ್ಮಿಸಿದ ಕನಸಿನ ಮನೆ ಭಾನುವಾರ ಗೃಹಪ್ರವೇಶಕ್ಕೆ ಸಜ್ಜಾಗಿದೆ.

image

ಒಂದು ಕಾಲದಲ್ಲಿ ಬರಗಾಲದಿಂದ ತತ್ತರಿಸಿದ್ದ ಈ ನೆಲದಲ್ಲಿ, ಇಂದು ರೈತರು ಕೋಟಿ ಕೋಟಿ ಆದಾಯ ಗಳಿಸುವ ಮಟ್ಟಿಗೆ ಬೆಳೆದಿದ್ದಾನೆ. ಇದಕ್ಕೆಲ್ಲ ಕಾರಣ ನಮ್ಮ ನೀರಾವರಿ ಯೋಜನೆಗಳು. ಇದು ಕೇವಲ ಒಬ್ಬ ರೈತನ ಯಶಸ್ಸಲ್ಲ ನೀರಾವರಿ, ಶ್ರಮ, ಸಂಕಲ್ಪ ಮತ್ತು ವಿಶ್ವಾಸ ಒಂದಾದಾಗ ಸಾಧ್ಯವಾಗುವ ಪರಿವರ್ತನೆಗೆ ಜೀವಂತ ಸಾಕ್ಷಿಯಾಗಿದೆ. ಅನ್ನದಾತನ ಈ ಯಶಸ್ಸು ಮತ್ತು ಕೃತಜ್ಞತೆ ಯ ಭಾವನೆ ಇನ್ನಷ್ಟು ಸೇವೆ ಮಾಡುವ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಾವು ಮಾಡಿದ ಕಾರ್ಯ ವನ್ನು ಗುರುತಿಸುತ್ತಿದ್ದಾರೆ ಎನ್ನುವುದು ಖುಷಿ ತಂದಿದೆ ಜತೆಗೆ ರೈತನ ಈ ಸಾಧನೆ ಹೆಮ್ಮೆಯ ವಿಷಯ ವಾಗಿದೆ.

- ಎಂ.ಬಿ.ಪಾಟೀಲ್, ಸಚಿವ
image

ಬದುಕನ್ನೆ ಬಂಗಾರವಾಗಿಸಿ ಆರ್ಥಿಕವಾಗಿ ನಮ್ಮನ್ನ ನೀರಾವರಿ ಯೋಜನೆ ಮೂಲಕ ಸಬಲರಾಗಿ ಮಾಡಿದಕ್ಕಾಗಿ ಸಚಿವ ಎಂ.ಬಿ.ಪಾಟೀಲ್ ಅವರ ಹೆಸರು ನಮ್ಮ ನಿಲಯಕ್ಕೆ ಇಟ್ಟಿದ್ದೇವೆ.

- ಸಾತಯ್ಯ ಹಿರೇಮಠ, ರೈತ