ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರವಾಸಿ ತಾಣವಾಗಿರುವ ಗೋಕರ್ಣಕ್ಕೆ ಬೇಕಿದೆ ಅಗ್ನಿಶಾಮಕ ದಳ

ಡಿಸೆಂಬರ್, ಜನವರಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಕೆಲವೊಮ್ಮೆ-- ಒಂದು ದಿನಕ್ಕೆ ಲಕ್ಷಾಂತರ ಜನ ಬರುತ್ತಾರೆ. ಗೋಕರ್ಣಕ್ಕೆ ಪೊಲೀಸ್ ಠಾಣೆ ಯಿದ್ದು, ಒಬ್ಬ ಪಿಐ, ಇಬ್ಬರು ಪಿಎಸ್‌ಐ, ಎಎಸ್‌ಐ ಹಾಗೂ ಸಿಬ್ಬಂದಿಗಳಿದ್ದಾರೆ. ಹಾಗೇ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಹೀಗಾಗಿ ಇಲ್ಲಿಯೂ ಕೂಡ ಅಗ್ನಿಶಾಮಕ ದಳ ಬೇಕು ಎನ್ನುವುದು ಎಲ್ಲರ ಅಪೇಕ್ಷೆಯಾಗಿದೆ.

ನಾಗರಾಜ ನಾಯ್ಕ

ಗೋಕರ್ಣ: ಧಾರ್ಮಿಕ ತಾಣವಾಗಿ ಹಾಗೂ ಪ್ರವಾಸಿ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಗೋಕರ್ಣ ಸಾಕಷ್ಟು ಜನಸಂಖ್ಯೆಯನ್ನು ಹೊಂದಿದೆ. ಅದಕ್ಕೆ ಅನುಗುಣವಾಗಿ ನೂರಾರು ರೆಸಾರ್ಟ್, ಹೋಮ್ ಸ್ಟೇ, ಹೋಟೆಲ್ ಗಳು ತಲೆ ಎತ್ತಿವೆ. ಆದರೆ ಇಲ್ಲಿ ಬೆಂಕಿಯ ಅವಘಡವಾದಾಗ ಅದನ್ನು ಸಮನಗೊಳಿಸಲು ಅಗ್ನಿಶಾಮಕದಳ ಇಲ್ಲದಿರುವುದು ಈಗ ಸ್ಥಳೀಯರಲ್ಲಿ ಕಾಡುತ್ತಿರುವ ಆತಂಕವಾಗಿದೆ.

ಇತ್ತೀಚಿಗಷ್ಟೇ ಇಲ್ಲಿಯ ಬಂಗ್ಲೆಗುಡ್ಡದಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಸಿಲೆಂಡರ್ ಬ್ಲಾಸ್ಟ್ ಆಗಿದ್ದರಿಂದ ಇಡೀ ಮನೆಯೇ ಸುಟ್ಟು ಕರಕಲಾಗಿದೆ. ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ಬಹುದೊಡ್ಡ ದುರಂತ ತಪ್ಪಿ ಹೋದಂತಾಗಿದೆ. ಇದರ ಬೆನ್ನಲ್ಲೇ ಇಲ್ಲಿಯ ಸಮೀಪದ ಹೊಸ್ಕೇರಿಯಲ್ಲಿ ಕಟ್ಟಿಗೆ ಮಿಲ್ಲಿಗೆ ಬೆಂಕಿ ತಗುಲಿ ಲಕ್ಷಾಂತರ ರು. ಕಟ್ಟಿಗೆ ಸುಟ್ಟು ಹೋಗಿದೆ. ಈ ಬೆಂಕಿಯನ್ನು ಆರಿಸಲು ದೂರದ ಕುಮಟಾ ಹಾಗೂ ಅಂಕೋಲಾದಿಂದ ಅಗ್ನಿಶಾಮಕ ದಳ ಆಗಮಿಸಬೇಕಾಗಿತ್ತು.

ಇದನ್ನೂ ಓದಿ: Goa Night Club Fire: ಲೂಥ್ರಾ ಸಹೋದರರು ಇಂದು ಭಾರತಕ್ಕೆ; ವಶಕ್ಕೆ ಪಡೆಯಲು ಗೋವಾ ಪೊಲೀಸರು ಸಿದ್ಧ

ಅಷ್ಟರಲ್ಲಿ ಸಾಕಷ್ಟು ಹಾನಿ ನಡೆದುಹೋಗಿತ್ತು. ಒಂದು ವೇಳೆ ಗೋಕರ್ಣದಲ್ಲಿಯೇ ಅಗ್ನಿಶಾ ಮಕ ದಳ ಇದ್ದರೆ ತಕ್ಷಣ ಕಾರ್ಯಾಚರಣೆ ಮಾಡಿದ್ದರೆ ಬಹುದೊಡ್ಡ ಹಾನಿಯನ್ನು ತಪ್ಪಿಸ ಬಹುದಿತ್ತು. ಆದರೆ ಅಂಕೋಲಾ, ಕುಮಟಾದಿಂದ ಅಗ್ನಿಶಾಮಕ ದಳ ಬರುವುದನ್ನು ಕಾಯುತ್ತ ಅಲ್ಲಿದ್ದವರು ಕೈಚೆಲ್ಲಿ ನಿಲ್ಲಬೇಕಾಯಿತು.

ಕೆಲ ದಿನಗಳ ಹಿಂದೆ ಗೋವಾದಲ್ಲಿ ನೈಟ್ ಕ್ಲಬ್ನಲ್ಲಿ ಬೆಂಕಿ ಉಂಟಾಗಿ ಹಲವರು ಸಾವನ್ನಪ್ಪಿ ರುವ ಘಟನೆ ಕಣ್ಮುಂದಿದೆ. ಗೋಕರ್ಣವೂ ಕೂಡ ಐಶಾರಾಮಿ ರೆಸಾರ್ಟ್, ಹೋಮ್‌ಸ್ಟೇ, ರೆಸ್ಟಾರೆಂಟ್ಗಳು ಹೊಂದಿದೆ. ಇಲ್ಲಿ ದೇಸಿ ಪ್ರವಾಸಿಗರಿಂದ ಹಿಡಿದು ವಿದೇಶಿ ಪ್ರವಾಸಿಗರವರೆಗೆ ಬಂದು ಉಳಿಯುತ್ತಾರೆ. ಇಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಹೋಗುತ್ತಾರೆ.

ಡಿಸೆಂಬರ್, ಜನವರಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಕೆಲವೊಮ್ಮೆ-- ಒಂದು ದಿನಕ್ಕೆ ಲಕ್ಷಾಂತರ ಜನ ಬರುತ್ತಾರೆ. ಗೋಕರ್ಣಕ್ಕೆ ಪೊಲೀಸ್ ಠಾಣೆ ಯಿದ್ದು, ಒಬ್ಬ ಪಿಐ, ಇಬ್ಬರು ಪಿಎಸ್‌ಐ, ಎಎಸ್‌ಐ ಹಾಗೂ ಸಿಬ್ಬಂದಿಗಳಿದ್ದಾರೆ. ಹಾಗೇ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಹೀಗಾಗಿ ಇಲ್ಲಿಯೂ ಕೂಡ ಅಗ್ನಿಶಾಮಕ ದಳ ಬೇಕು ಎನ್ನುವುದು ಎಲ್ಲರ ಅಪೇಕ್ಷೆಯಾಗಿದೆ. ದೊಡ್ಡ ದುರಂತ ಮತ್ತು ಪ್ರಾಣಹಾನಿ ನಡೆಯುವ ಮುನ್ನ ಶಾಸಕ ದಿನಕರ ಶೆಟ್ಟಿ ಹಾಗೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.

ಅಧಿಕಾರಿಗಳು ಕ್ರಮ ಕೈಗೊಳ್ಳಲಿ

ಗೋಕರ್ಣಕ್ಕೆ ಅಗ್ನಿಶಾಮಕ ದಳ ಬೇಕು ಎನ್ನುವುದು ಎಲ್ಲರ ಅಪೇಕ್ಷೆಯಾಗಿದೆ. ದೊಡ್ಡ ದುರಂತ ಮತ್ತು ಪ್ರಾಣಹಾನಿ ನಡೆಯುವ ಮುನ್ನ ಶಾಸಕ ದಿನಕರ ಶೆಟ್ಟಿ ಹಾಗೂ ಅಧಿಕಾರಿ ಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.