ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Edible Oil Price Rise: ಇರಾನ್ ಇಸ್ರೇಲ್ ಯುದ್ಧ ಎಫೆಕ್ಟ್: ಅಡುಗೆ ಎಣ್ಣೆ ಬೆಲೆ ತೀವ್ರ ಏರಿಕೆ, ಗ್ರಾಹಕರಿಗೆ ಬರೆ

ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಯ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಸರಾಸರಿ ಲೀ, ಸಗಟು 10 ರಿಂದ 12 ರು. ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು 15 ಏರಿಕೆಯಾಗಿತ್ತು. ಹಿಂದಿನ ದರಕ್ಕೆ ಹೋಲಿಸಿದರೆ ಒಟ್ಟು 25 ರು. ಏರಿಕೆಯಾ ದಂತಾಯಿತು. ಮಾರುಕಟ್ಟೆಯಲ್ಲಿ ಸದ್ಯ ಕಂಡು ಬರುತ್ತಿರುವ ಪ್ರಕರಣ ಮುಂದಿನ ದಿನ ಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಅಡುಗೆ ಎಣ್ಣೆ ವ್ಯಾಪಾರಿಗಳು.

ಹೂವಪ್ಪಐ ಹೆಚ್.

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಸಂಘರ್ಷದ ಪರಿಣಾಮ ಇದೀಗ ಸಾಮಾನ್ಯ ಜನರ ಅಡುಗೆ ಮನೆಗಳವರೆಗೂ ತಲುಪಿದೆ. ಕಳೆದ ಒಂದು ವಾರದಿಂದ ಯಾವುದೇ ದೊಡ್ಡ ಘೋಷಣೆ ಇಲ್ಲದೆ ಅಡುಗೆ ಎಣ್ಣೆಯ ಬೆಲೆ ದಿಡೀರ್ ಏರಿಕೆಯಾಗುತ್ತಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಇದೇ ಸಮಯದಲ್ಲಿ ಹಿಂದುಗಳ ಪ್ರಮುಖ ಹಬ್ಬವಾದ ಯುಗಾದಿ ಹಾಗೂ ಮುಸ್ಲಿಮರ ಪವಿತ್ರ ರಂಜಾನ್ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಲೆ ಏರಿಕೆ ಮನೆಮಂದಿಯ ಖರ್ಚಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಮಾರುಕಟ್ಟೆ ಮೂಲಗಳ ಪ್ರಕಾರ, ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಯ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಸರಾಸರಿ ಲೀ, ಸಗಟು 10 ರಿಂದ 12 ರು. ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು 15 ಏರಿಕೆಯಾಗಿತ್ತು. ಹಿಂದಿನ ದರಕ್ಕೆ ಹೋಲಿಸಿದರೆ ಒಟ್ಟು 25 ರು. ಏರಿಕೆಯಾ ದಂತಾಯಿತು. ಮಾರುಕಟ್ಟೆಯಲ್ಲಿ ಸದ್ಯ ಕಂಡುಬರುತ್ತಿರುವ ಪ್ರಕರಣ ಮುಂದಿನ ದಿನ ಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಅಡುಗೆ ಎಣ್ಣೆ ವ್ಯಾಪಾರಿ ಗಳು.

ಮಾರುಕಟ್ಟೆಯಲ್ಲಿ ಹೆಚ್ಚು ಬಳಕೆಯಾಗುವ ಕೆಲವು ಪ್ರಮುಖ ಅಡುಗೆ ಎಣ್ಣೆ ಬ್ರ್ಯಾಂಡ್‌ಗಳ ಜನಪ್ರಿಯ ಬ್ರ್ಯಾಂಡುಗಳ ಸೂರ್ಯಕಾಂತಿ ಎಣ್ಣೆಯ ಬೆಲೆ ಕಳೆದ ವಾರ ಒಂದು ಲೀಟರ್‌ಗೆ ಸಗಟು ದರ ರು. 160-165 ಇದ್ದು, ಈಗ ಅದು 170-175 ರು. ಗೆ ಏರಿಕೆಯಾಗಿದೆ. ಇನ್ನು ಚಿಲ್ಲರೆ 175-180 ರು. ಗೆ ಮಾರಾಟಮಾಡಬೇಕಾಗುತ್ತದೆ.

ಇದನ್ನೂ ಓದಿ: Cooking Oils: ಖಾದ್ಯ ತೈಲ ಮಿಶ್ರ ಮಾಡಿ ಬಳಸುತ್ತಿದ್ದೀರಾ? ಈ ಬಗ್ಗೆ ಆಹಾರ ತಜ್ಞರು ಹೇಳೋದೇನು?

ಇನ್ನೊಂದೆಡೆ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ದೊರೆಯುತ್ತಿದ್ದ ಪಾಮ್ ಆಯಿಲ್ ಬ್ರ್ಯಾಂಡ್‌ನಲ್ಲೂ ಬೆಲೆ ಏರಿಕೆ ದಾಖಲಾಗಿದೆ. ಕಳೆದ ವಾರ 125 ಇದ್ದ ಒಂದು ಲೀಟರ್ ಬೆಲೆ ಈಗ ರು. 130 ರು. ಗೆ ಏರಿಕೆಯಾಗಿದೆ. ಚಿಲ್ಲರೆ ದರ 136 ರುಗೆ ರು. ಗೆ ಮಾರಾತವಾಗುತ್ತಿದೆ.

ಇನ್ನು ಹೋಟೆಲ್ ಉದ್ಯಮದವರು ಬಳಸುವ 15 ಕೆಜಿ ತುಂಬಿದ ಒಂದು ಟಿನ್ ಸನ್ ಫ್ಲೆರ್ ಆಯಿಲ್ 2,600-2650 ರು. ಇದ್ದ ಬೆಲೆ ಈಗ 2,750-2,800 ರು. ಆಗಿದೆ.

ಮುಂದಿನ ವಾರದಲ್ಲಿ ಇನ್ನಷ್ಟು ಏರಿಕೆ ಸಾಧ್ಯತೆ: ವ್ಯಾಪಾರ ವಲಯಗಳ ಮಾಹಿತಿಯ ಪ್ರಕಾರ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಣ್ಣೆ ಬೀಜಗಳ ಬೆಲೆ ಹಾಗೂ ಸಾಗಣೆ ವೆಚ್ಚಗಳು ಯುದ್ಧದ ಪರಿಣಾಮದಿಂದ ಅಸ್ಥಿರವಾಗಿವೆ. ಈ ಪರಿಸ್ಥಿತಿ ಮುಂದುವರಿದರೆ, ಮುಂದಿನ ವಾರದಲ್ಲಿ ಅಡುಗೆ ಎಣ್ಣೆಯ ಬೆಲೆ ಲೀಟರ್‌ಗೆ ರು. 10 ರಿಂದ 12 ರಷ್ಟು ಹೆಚ್ಚಾ ಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಸಾಮಾನ್ಯ ಗ್ರಾಹಕರಿಗೆ ಇನ್ನಷ್ಟು ಹೊರೆ ಬೀಳುವ ಸಾಧ್ಯತೆ ಇದೆ.

ಹಬ್ಬಗಳ ಸಮಯದಲ್ಲಿ ಖರ್ಚು ಹೆಚ್ಚಳದ ಆತಂಕ: ಮದುವೆಗಳು, ಯುಗಾದಿ, ಮತ್ತು ಊರು ಜಾತ್ರಿಗಳು ಸಮೀಪಿಸುತ್ತಿರುವುದರಿಂದ ಮನೆಗಳಲ್ಲಿ ವಿಶೇಷ ಅಡುಗೆಗಳ ಸಿದ್ಧತೆ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರಲ್ಲಿ ಆತಂಕ ಮೂಡಿಸಿದೆ ಎನ್ನುತ್ತಾರೆ ಗ್ರಾಹಕರು.

ಇಶ್ರೀಲ್ ಇರಾನ್ ಉದ್ದದ ಪರಿಣಾಮವಾಗಿ ಆಮದುದಾರರು ಬುಕಿಂಗ್ ಮಾಡಿದ ಅಡುಗೆ ಎಣ್ಣೆ ಹೊತ್ತು ತರುವ ಸೀಫ್ ಗಳು ಕೆಲವೊಮ್ಮೆ ಮಾರ್ಗ ಬದಲಾವಣೆ ಮುಖಾಂತರ ಬರುತ್ತಿರುವುದರಿಂದ ವಿಳಂಬ ಆಗುತ್ತಿದೆ. ಇದರ ವೆಚ್ಚ ಕೂಡಾ ಹೆಚ್ಚಾಗಿದೆ ಹೀಗಾಗಿ ಪ್ರಸ್ತುತ ದಾಸ್ತಾನು ಸಾಕಾಗುತ್ತಿಲ್ಲ ಇದು ಸಹಜವಾಗಿ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನು ತ್ತಾರೆ ಆಡುಗ ಎಣ್ಣೆ ವ್ಯಾಪಾರಿಗಳು.

ಗೋದಾಮುಗಳಲ್ಲಿ ಕನಿಷ್ಠ ಒಂದು ತಿಂಗಳಿಗೆ ಆಗುವಷ್ಟು ಅಡುಗೆ ಎಣ್ಣೆಯ ದಾಸ್ತಾನು ಲಭ್ಯವಿದೆ. ಹೀಗೆ ಸಾಕಷ್ಟು ಪ್ರಮಾಣದ ಎಣ್ಣೆ ದಾಸ್ತಾನು ಇದ್ದರೂ ಸಹ, ಕೆಲವು ದಾಸ್ತಾನು ದಾರರು ಯುದ್ಧದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕೃತಕವಾಗಿ ಬೆಲೆ ಏರಿಸುತ್ತಿದ್ದಾರೆ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎನ್ನುವ ಮಾತು ಸುಳ್ಳು ಎಂದು ಹೇಳುತ್ತಾರೆ ಮಂಡಿಪೇಟೆ ವರ್ತಕರು.

ಆಮದು ಕೊರತೆ ದೇಸಿಯ ಉತ್ಪಾದನೆ ಕುಸಿತ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ವಿವಿಧ ಬ್ರಾಂಡ್‌ಗಳ ಅಡುಗೆ ಎಣ್ಣೆ ಲೀಟರಿಗೆ 15 ರು. ನಷ್ಟು ಏರಿಕೆಯಾಗಿತ್ತು. ಈಗ ಮತ್ತೆ 6-7 ರು ನಷ್ಟು ಏರಿಕೆಯಾಗಿದೆ. ಗ್ರಾಹಕರು ಹೆಚ್ಚಾಗಿ ಬಳಸುವ ಸೂರ್ಯಕಾಂತಿ ಎಣ್ಣೆ ಸಗಟು 10 ಲೀ, ಬಾಕ್ಸ್ ಒಂದಕ್ಕೆ ಈ ಹಿಂದೆ 1580-1600 ರೂ. ಇದ್ದದ್ದು ಈಗ 1660-1670 ರು. ಪಾಮ್ ಎಣ್ಣೆ 1240 ರೂ ಇದ್ದದ್ದು, 1260 ರು. ಏರಿಕೆಯಾಗಿದೆ. ಅಂದರೆ ಈ ಹಿಂದಿನ ಬೆಲೆಗೆ ಹೋಲಿಸಿದರೆ ಸೂರ್ಯಕಾಂತಿ ಎಣ್ಣೆ ಲೀ,ಗೆ 21 ರು. ಏರಿಕೆಯಾಗಿದೆ. ಇನ್ನು ಸೋಯಾ, ಕಡಲೆಕಾಯಿ, ರೈಸ್ ಬ್ರಾನ್ ಆಯಿಲ್ ಸಾಸುವೆ ಎಣ್ಣೆ ತಲಾ 8-9 ಏರಿಕೆಯಾಗಿದೆ. ಚಿಲ್ಲರೆ ದರದಲ್ಲಿ 10-12 ರೂ. ನಷ್ಟು ಏರಿಕೆಯಾಗಿದೆ.

image

ಇರಾನ್ ಇರಾಕ್ ಯುದ್ಧ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಹಾಗೂ ಖಾದ್ಯತೈಲ ಪೂರೈಕೆ ಕಡಿಮೆಯಾಗಿರುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದೆ ಎಂದು ಹೇಳುತ್ತಾರೆ.

ಜಿ ಆರ್ ಎನ್ ನಾಗರಾಜು, ಬೆಂಗಳೂರಿನ ಹೊಸ ತರಗುಪೇಟೆ ಅಡುಗೆ ಎಣ್ಣೆ ವ್ಯಾಪಾರಿ
image

ಈಗಾಗಲೇ ಎಲ್'ಪಿಜಿ ತೊಗರಿಬೇಳೆ ಕಡ್ಲೆಬೇಳೆ ದರ ಈಗಾಗಲೇ ಏರಿಕೆಯಾಗಿವೆ. ಈಗ ಸನ್ ಫ್ಲವರ್ ಎಣ್ಣೆ ಲೀ, ಗೆ 175 ಹೇಳುತ್ತಾರೆ. ಯುಗಾದಿ ಹಬ್ಬ ಮಾಡುವುದಿರಲಿ ದಿನನಿತ್ಯ ಅಡುಗೆಗೆ ಎಣ್ಣೆ ಬಳಸುವುದು ಹೇಗಪ್ಪಾ ಎಂಬ ಚಿಂತೆಯಾಗಿದೆ.

ಅರ್ಪಿತಾ ಎಸ್.,ಬೆಂಗಳೂರು. ಗ್ರಾಹಕಿ.