ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಲಬುರಗಿಗೆ ಸಿಗುವುದೇ ʼಸಿದ್ದುʼ ವಿಶೇಷ ಅನುಗ್ರಹ?

ಆರೋಗ್ಯ ಕ್ಷೇತ್ರದಲ್ಲಿ ಕಲಬುರಗಿಗೆ ತನ್ನದೇ ಆದ ಸ್ವಾಯತ್ತತೆ ಬೇಕಿದೆ. ಬೆಂಗಳೂರಿನ ಮೇಲಿನ ಅವಲಂಬನೆ ತಗ್ಗಿಸಲು ಇಲ್ಲಿ ನಿಮ್ಹಾನ್ಸ್ ಶಾಖೆ ಹಾಗೂ ಅಖಿಲ ಭಾರತೀಯ ವಾಕ್ ಮತ್ತು ಶ್ರವಣ ಸಂಸ್ಥೆಯ (ಅಐಐಖಏ) ಶಾಖೆಯನ್ನು ಆರಂಭಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ಕೌಶಲ್ಯಾಭಿ ವೃದ್ಧಿ ವಿಶ್ವವಿದ್ಯಾಲಯ ಹಾಗೂ ಅರಣ್ಯ ಕಾಲೇಜು ಸ್ಥಾಪನೆಯ ಮೂಲಕ ಹಿಂದುಳಿದ ಭಾಗದ ಶೈಕ್ಷಣಿಕ ಮಟ್ಟವನ್ನು ಎತ್ತರಿಸು ವಂತೆ ಸರಕಾರಕ್ಕೆ ಒತ್ತಾಯಿಸಲಾಗಿದೆ.

ದೇವೇಂದ್ರ ಜಾಡಿ ಕಲಬುರಗಿ

ಬಜೆಟ್ ಮೇಲೆ ಜಿಲ್ಲೆಯ ಎಲ್ಲರ ಕಣ್ಣು

ಕೈಗಾರಿಕಾ ಕ್ರಾಂತಿ, ಹೈಟೆಕ್ ಸ್ಫರ್ಶಕ್ಕೆ ಹಕ್ಕೊತ್ತಾಯ

ರಾಜ್ಯ ಸರಕಾರ ಮಂಡಿಸಲಿರುವ ಪ್ರಸಕ್ತ ಸಾಲಿನ ಬಜೆಟ್ ಮೇಲೆ ಕಲಬುರಗಿ ಜಿಲ್ಲೆ ಜನತೆ ಭಾರೀ ನಿರೀಕ್ಷೆ ಹೊಂದಿದ್ದಾರೆ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾಗಿರುವ ಈ ಭಾಗದ ಪ್ರಾದೇಶಿಕ ಅಸಮತೋಲನ ನೀಗಿಸಲು ಮತ್ತು ಸಮಗ್ರ ವಿಕಾಸದ ಹಾದಿ ಸುಗಮ ಗೊಳಿಸಲು ಸಿದ್ದ ರಾಮಯ್ಯನವರ ಸರಕಾರ ಈ ಬಾರಿ ‘ಅಭಿವೃದ್ಧಿಯ ಬಂಪರ್ ಕೊಡುಗೆ’ ನೀಡಲೇಬೇಕು ಎಂಬ ಒತ್ತಾಯ ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ.

ಕೈಗಾರಿಕಾ ಕ್ರಾಂತಿಗೆ ಆಗ್ರಹ: ಜಿಲ್ಲೆಯ ಬಹುದೊಡ್ಡ ಶಾಪವೆಂದರೆ ನಿರಂತರವಾಗಿ ನಡೆಯುತ್ತಿರುವ ‘ವಲಸೆ. ಉದ್ಯೋಗ ಅರಸಿ ಜನರು ಮುಂಬೈ, ಪುಣೆಯಂತಹ ನಗರಗಳಿಗೆ ಹೋಗುವುದನ್ನು ತಪ್ಪಿಸಲು ಸ್ಥಳೀಯವಾಗಿ ಬೃಹತ್ ಕೈಗಾರಿಕೆಗಳ ಸ್ಥಾಪನೆ ಅನಿವಾರ್ಯ ವಾಗಿದೆ. ಕೇಂದ್ರ ಘೋಷಿಸಿರುವ ಪಿ.ಎಂ.ಮಿತ್ರಾ ಜವಳಿ ಪಾರ್ಕ್‌ಗೆ ರಾಜ್ಯ ಸರಕಾರ ತುರ್ತಾಗಿ ಸೌಕರ್ಯ ಒದಗಿಸಬೇಕು. ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಹಬ್ ಹಾಗೂ ಸ್ಟಾರ್ಟಪ್ ಪಾರ್ಕ್‌ಗಳನ್ನು ನಿರ್ಮಿಸುವ ಮೂಲಕ ನಿರುದ್ಯೋಗ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ಯುವಕರ ಬಲವಾದ ಬೇಡಿಕೆಯಾಗಿದೆ.

ಆರೋಗ್ಯ ಮತ್ತು ಶಿಕ್ಷಣದ ಬೇಡಿಕೆ: ಆರೋಗ್ಯ ಕ್ಷೇತ್ರದಲ್ಲಿ ಕಲಬುರಗಿಗೆ ತನ್ನದೇ ಆದ ಸ್ವಾಯತ್ತತೆ ಬೇಕಿದೆ. ಬೆಂಗಳೂರಿನ ಮೇಲಿನ ಅವಲಂಬನೆ ತಗ್ಗಿಸಲು ಇಲ್ಲಿ ನಿಮ್ಹಾನ್ಸ್ ಶಾಖೆ ಹಾಗೂ ಅಖಿಲ ಭಾರತೀಯ ವಾಕ್ ಮತ್ತು ಶ್ರವಣ ಸಂಸ್ಥೆಯ (ಅಐಐಖಏ) ಶಾಖೆಯನ್ನು ಆರಂಭಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಹಾಗೂ ಅರಣ್ಯ ಕಾಲೇಜು ಸ್ಥಾಪನೆಯ ಮೂಲಕ ಹಿಂದುಳಿದ ಭಾಗದ ಶೈಕ್ಷಣಿಕ ಮಟ್ಟವನ್ನು ಎತ್ತರಿಸು ವಂತೆ ಸರಕಾರಕ್ಕೆ ಒತ್ತಾಯಿಸಲಾಗಿದೆ.

ಇದನ್ನೂ ಓದಿ: Kalaburagi News: ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಅಪರಿಚಿತರಿಂದ ಬಾಂಬ್ ಬೆದರಿಕೆ ಸಂದೇಶ

ಕೃಷಿ ಮತ್ತು ನೀರಾವರಿಗೆ ಬೇಕಿದೆ ಕಾಯಕಲ್ಪ: ತೊಗರಿ ನಾಡಿನ ರೈತರ ಬದುಕು ಹಸನಾಗಲು ಕೆ.ಎಂ.ಎಫ್ ಮಾದರಿಯಲ್ಲೇ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯನ್ನು ಬಲಪಡಿಸಬೇಕು. ಜಿಲ್ಲೆಯ 6 ಅಣೆಕಟ್ಟುಗಳ ಕಾಲುವೆಗಳನ್ನು ದುರಸ್ತಿಗೊಳಿಸಿ ರೈತರ ಹೊಲಗಳಿಗೆ ನೀರು ಹರಿಸಬೇಕು. ಬರಗಾಲ ಪೀಡಿತ ಜಿಲ್ಲೆಯ ಪ್ರತಿ ಹಳ್ಳಿಯ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸಲು ಈ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು.‌

ಸಿದ್ದರಾಮಯ್ಯನವರು ‘ಅನುಗ್ರಹ’ ತೋರಿ ಹಿಂದುಳಿದ ಹಣೆಪಟ್ಟಿ ಹೊತ್ತಿರುವ ಕಲಬುರಗಿ ಜಿಲ್ಲೆಗೆ ಬಜೆಟ್‌ನಲ್ಲಿ ಸಿಂಹಪಾಲು ನೀಡಬೇಕು. ಕೇವಲ ಘೋಷಣೆಗಳ ಬದಲಾಗಿ ಬಜೆಟ್‌ ನಲ್ಲಿ ಈ ಭಾಗದ ಯೋಜನೆಗಳಿಗೆ ಭರಪೂರ ಅನುದಾನ ಹಂಚಿಕೆಯಾಗಬೇಕು ಎಂಬುದು ಜಿಲ್ಲೆಯ ಜನರ ಹಕ್ಕೊತ್ತಾಯವಾಗಿದೆ.

ಕಲ್ಯಾಣಸೌಧಕ್ಕೆ ಬೇಕಿದೆ ಆಸರೆ!

ಕಲಬುರಗಿ ನಗರದ ಸಮಗ್ರ ವಿಕಾಸಕ್ಕೆ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಲಾದ 1600 ಕೋಟಿ ರು. ಅನುದಾನವನ್ನು ಈ ಬಾರಿಯ ಬಜೆಟ್‌ನಲ್ಲಿ ಬಿಡುಗಡೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸ್ಮಾರ್ಟ್‌ಸಿಟಿ ಯೋಜನೆಯಿಂದ ವಂಚಿತವಾಗಿರುವ ನಗರದ ಹಿತದೃಷ್ಟಿಯಿಂದ, ಎಲ್ಲಾ ವಿಭಾಗೀಯ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಬೃಹತ್ ‘ಕಲ್ಯಾಣ ಸೌಧ’ ನಿರ್ಮಾಣವಾಗಬೇಕು. ಈ ಮೂಲಕ ಆಡಳಿತಾತ್ಮಕ ದಕ್ಷತೆ ಹೆಚ್ಚಿಸಿ, ಮಹಾ ನಗರಕ್ಕೆ ಹೈಟೆಕ್ ಸ್ಪರ್ಶ ನೀಡಲು ಸರಕಾರ ಈ ಬಾರಿ ಬಜೆಟ್‌ನಲ್ಲಿ ಅನುಗ್ರಹ ತೋರ ಬೇಕಿದೆ.

ಕೋಟೆಗಳ ಅಭಿೃದ್ಧಿಗೆ ಆಗ್ರ ಹ

ಕಲಬುರಗಿ ಮತ್ತು ಮಳಖೇಡ ಕೋಟೆಗಳ ಸಮಗ್ರ ಪುನಶ್ಚೇತನಕ್ಕೆ ತಲಾ 100 ಕೋಟಿ ರು.ಅನುದಾನ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸನ್ನತಿ ಹಾಗೂ ನಾಗಾವಿ ಸ್ಮಾರಕಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಹಂಪಿ-ವಿಜಯಪುರ ಪ್ರವಾಸಿ ಸರ್ಕ್ಯೂಟ್ ಅನ್ನು ಕಲಬುರಗಿ-ಬೀದರ್‌ವರೆಗೂ ವಿಸ್ತರಿಸಿ, ಈ ಭಾಗದ ಐತಿಹಾಸಿಕ ತಾಣ ಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಬಜೆಟ್‌ನಲ್ಲಿ ಸರಕಾರಕ್ಕೆ ಆಗ್ರಹಿಸಲಾಗಿದೆ.

ಪ್ರಮುಖ ನಿರೀಕ್ಷೆಗಳು

ಕೈಗಾರಿಕೆ: ನಿರುದ್ಯೋಗ ನಿವಾರಣೆಗಾಗಿ ಬೃಹತ್ ಕೈಗಾರಿಕೆಗಳ ಸ್ಥಾಪನೆ.

ಉದ್ಯೋಗ: ವಲಸೆ ತಡೆಗೆ ಸ್ಥಳೀಯವಾಗಿ ಉದ್ಯೋಗಾವಕಾಶಗಳ ಸೃಜನೆ.

ಆರೋಗ್ಯ: ಕಲಬುರಗಿಯಲ್ಲಿ ನಿಮ್ಹಾನ್ಸ್ ಮತ್ತು ಎಐಐಎಸ್ ಎಚ್ ಶಾಖೆಗಳ ಆರಂಭ.

ಕೃಷಿ: ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಹಾಗೂ ಬಲವರ್ಧನೆ.

ಆಡಳಿತ: ‘ಕಲ್ಯಾಣ ಸೌಧ’ ನಿರ್ಮಾಣಕ್ಕೆ ಅಗತ್ಯ ಹಣ ಬಿಡುಗಡೆ.

ಪ್ರವಾಸೋದ್ಯಮ: ಸನ್ನತಿ, ಮಳಖೇಡ ಮತ್ತು ಕಲಬುರಗಿ ಕೋಟೆಗಳ ಪುನಶ್ಚೇತನ.

ಶಿಕ್ಷಣ: ಜಿಲ್ಲೆಯಲ್ಲಿ ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆ.

ನೀರಾವರಿ: ಕೆರೆ ತುಂಬಿಸುವ ಯೋಜನೆ ಮತ್ತು ಕಾಲುವೆಗಳ ದುರಸ್ತಿಗೆ ಆದ್ಯತೆ.

image

ಕಲಬುರಗಿ ಜಿಲ್ಲೆಗೆ ಪ್ರತಿ ಬಜೆಟ್‌ನಲ್ಲೂ ಭರವಸೆಗಳ ಮಹಾಪೂರವೇ ಹರಿಯುತ್ತದೆ, ಆದರೆ ಅನುಷ್ಠಾನ ಶೂನ್ಯ. ಈ ಬಾರಿಯಾದರೂ ಸಿದ್ದರಾಮಯ್ಯನವರ ಸರಕಾರ ವಲಸೆ ಮತ್ತು ನಿರುದ್ಯೋಗದಂತಹ ಜೀವಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಿ. ನಮ್ಮ ಭಾಗದ ದಶಕಗಳ ಬೇಡಿಕೆಗಳನ್ನು ಕಾಗದದ ಮೇಲಷ್ಟೇ ಉಳಿಸದೆ. ಅಭಿವೃದ್ಧಿಯ ಮೂಲಕ ಹಣೆ ಪಟ್ಟಿ ಬದಲಿಸಲಿ.

- ಸಂಗೀತಾ ಕಂತಿ, ಕಲಬುರಗಿ