ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kalyana Karnataka: ಕಲ್ಯಾಣ ಕರ್ನಾಟಕದ ಫಲಿತಾಂಶ 19.9% ಏರಿಕೆ

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪೈಕಿ ರಾಯಚೂರು ಶೇ.94.4ರಷ್ಟು ಫಲಿತಾಂಶದೊಂದಿಗೆ ಮುಂಚೂಣಿಯಲ್ಲಿದೆ. ಯಾದಗಿರಿ ಜಿಲ್ಲೆಯು ಕಳೆದ ಬಾರಿಗಿಂತ ಶೇ.29.8ರಷ್ಟು ಹೆಚ್ಚಿನ ಪ್ರಗತಿ ತೋರಿದೆ. ಆದರೆ, ಕಲಬುರಗಿ ಜಿಲ್ಲೆಯು ಶೇ. 85.1ರಷ್ಟು ಫಲಿತಾಂಶ ಪಡೆದಿದ್ದು, ಕಳೆದ ವರ್ಷಕ್ಕಿಂತ ಶೇ.28.2 ರಷ್ಟು ಸುಧಾರಣೆ ಕಂಡಿದ್ದರೂ ಸಹ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಇನ್ನೂ ಕೆಳಮಟ್ಟದಲ್ಲೇ ಉಳಿದುಕೊಂಡಿದೆ.

ದೇವೇಂದ್ರ ಜಾಡಿ ಕಲಬುರಗಿ

ರಾಜ್ಯದ ಸರಾಸರಿಗಿಂತ ಕಲ್ಯಾಣ ಕರ್ನಾಟಕ ಈಗಲೂ ಹಿಂದೆ ಗುಣಮಟ್ಟದ ಶಿಕ ಣಕ್ಕೆ ಇಲಾಖೆ ಇನ್ನಷ್ಟು ಪ್ರಯತ್ನ ಬೇಕು

ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಗಮನಾರ್ಹ ಸುಧಾರಣೆ ಕಂಡಿವೆ. ಕಳೆದ ಬಾರಿಯ ಎಲ್ಲಾ ಮೂರು ಪರೀಕ್ಷೆಗಳ ಒಟ್ಟು ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಕಲ್ಯಾಣ ಕರ್ನಾಟಕ ಒಟ್ಟಾರೆಯಾಗಿ ಶೇ.19.9ರಷ್ಟು ಪ್ರಗತಿ ಸಾಧಿಸಿದೆ. ಆದರೆ, ರಾಜ್ಯದ ಒಟ್ಟಾರೆ ಸರಾಸರಿ ಫಲಿತಾಂಶ ಶೇ. 94.1ರಷ್ಟಿದ್ದರೆ, ಈ ಭಾಗದ ಸರಾಸರಿ ಶೇ. 91.6ರಷ್ಟಿದ್ದು, ಶೈಕ್ಷಣಿಕವಾಗಿ ರಾಜ್ಯದ ಇತರ ಜಿಲ್ಲೆಗಳ ಮಟ್ಟಕ್ಕೆ ಏರಲು ಈ ಭಾಗವು ಇಂದಿಗೂ ಹೆಣಗಾಡುತ್ತಿದೆ.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪೈಕಿ ರಾಯಚೂರು ಶೇ.94.4ರಷ್ಟು ಫಲಿತಾಂಶದೊಂದಿಗೆ ಮುಂಚೂಣಿಯಲ್ಲಿದೆ. ಯಾದಗಿರಿ ಜಿಲ್ಲೆಯು ಕಳೆದ ಬಾರಿಗಿಂತ ಶೇ.29.8ರಷ್ಟು ಹೆಚ್ಚಿನ ಪ್ರಗತಿ ತೋರಿದೆ. ಆದರೆ, ಕಲಬುರಗಿ ಜಿಲ್ಲೆಯು ಶೇ. 85.1ರಷ್ಟು ಫಲಿತಾಂಶ ಪಡೆದಿದ್ದು, ಕಳೆದ ವರ್ಷಕ್ಕಿಂತ ಶೇ.28.2 ರಷ್ಟು ಸುಧಾರಣೆ ಕಂಡಿದ್ದರೂ ಸಹ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಇನ್ನೂ ಕೆಳಮಟ್ಟದಲ್ಲೇ ಉಳಿದುಕೊಂಡಿದೆ.

ಇದು ಈ ಭಾಗದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹೆಚ್ಚಿನ ಗಮನಹರಿಸುವ ಅಗತ್ಯವನ್ನು ಎತ್ತಿ ತೋರಿಸುತ್ತಿದೆ.

ಇದನ್ನೂ ಓದಿ: Ministry for Kalyana Karnataka: ಕಲ್ಯಾಣದ ಸಚಿವಾಲಯ ಅನುಷ್ಠಾನ ಯಾವಾಗ ?

ಸರಕಾರಿ ಶಾಲೆಗಳ ಸಾಧನೆ: ಸಮಾಧಾನಕರ ವಿಷಯವೆಂದರೆ ಕಲ್ಯಾಣ ಕರ್ನಾಟಕದ ಯಾವುದೇ ಸರಕಾರಿ ಶಾಲೆಯು ಶೂನ್ಯ ಫಲಿತಾಂಶವನ್ನು ಪಡೆದಿಲ್ಲ. ಸರಕಾರಿ ಶಾಲೆಗಳಲ್ಲಿ ಶೇ.92ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ಬಾರಿಗಿಂತ ಶೇ. 22.58 ರಷ್ಟು ಸುಧಾರಣೆ ಕಂಡು ಬಂದಿದೆ. ಆದರೂ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಒಟ್ಟು 14 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿರುವುದು ಕಳವಳಕ್ಕೆ ಕಾರಣವಾಗಿದೆ.

ನಗರಕ್ಕಿಂತ ಗ್ರಾಮೀಣರ ಫಲಿತಾಂಶ ಉತ್ತಮ: ಕಲ್ಯಾಣ ಕರ್ನಾಟಕದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದವರಿಗಿಂತ ಉತ್ತಮ ಸಾಧನೆ ಮಾಡಿದ್ದಾರೆ. ಗ್ರಾಮೀಣ ಭಾಗದ ಶೇ.92.7ರಷ್ಟು ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದರೆ, ನಗರ ಪ್ರದೇಶದಲ್ಲಿ ಈ ಪ್ರಮಾಣ ಶೇ.89.9 ರಷ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಗ್ರಾಮೀಣ ವಲಯದಲ್ಲಿ ಶೇ.2.72 ರಷ್ಟು ಮತ್ತು ನಗರ ವಲಯದಲ್ಲಿ ಶೇ.0.8ರಷ್ಟು ಫಲಿತಾಂಶದಲ್ಲಿ ಸುಧಾರಣೆ ಕಂಡುಬಂದಿದೆ.

ಸರಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶವಿಲ್ಲ

ಪ್ರಸಕ್ತ ವರ್ಷ ಸರಕಾರಿ ಶಾಲೆಗಳು ಶೇ.92ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಗಮನಾರ್ಹ ಸುಧಾರಣೆ ಕಂಡಿವೆ. ಅನುದಾನಿತ ಶಾಲೆಗಳು ಶೇ.89.6ರಷ್ಟು ಮತ್ತು ಖಾಸಗಿ ಅನುದಾನರಹಿತ ಶಾಲೆಗಳು ಶೇ. 91.8ರಷ್ಟು ಸಾಧನೆ ಮಾಡಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಫಲಿತಾಂಶದಲ್ಲಿ ಶೇ. 22.58ರಷ್ಟು ಗರಿಷ್ಠ ಏರಿಕೆ ಕಂಡುಬಂದಿದೆ. ಒಟ್ಟು 844 ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಪಡೆದರೆ, ಕಲ್ಯಾಣ ಕರ್ನಾಟಕದ ಯಾವುದೇ ಸರಕಾರಿ ಶಾಲೆ ಈ ಬಾರಿ ಶೂನ್ಯ ಫಲಿತಾಂಶ ಪಡೆದಿಲ್ಲ.

ಮುಖ್ಯಾಂಶಗಳು

ಈ ಬಾರಿಯೂ ಬಾಲಕಿಯರು (ಶೇ. 94.4) ಬಾಲಕರಿಗಿಂತ (ಶೇ.88.6) ಹೆಚ್ಚಿನ ಅಂಕಗಳೊಂದಿಗೆ

ಉತ್ತೀರ್ಣ

ಗ್ರಾಮೀಣ ಭಾಗದಲ್ಲಿ ಶೇ.92.7ರಷ್ಟು ಫಲಿತಾಂಶ ಬಂದಿದ್ದರೆ, ನಗರ ಪ್ರದೇಶದಲ್ಲಿ ಶೇ.89.9ರಷ್ಟು ದಾಖಲು

ಕಲ್ಯಾಣ ಕರ್ನಾಕಟದ ಒಟ್ಟು 844 ಶಾಲೆಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿವೆ.

ಗಣಿತದಲ್ಲಿ ಶೇ.97.4 ಹಾಗೂ ವಿಜ್ಞಾನದಲ್ಲಿ ಶೇ.96.8ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ ಆಶಾದಾಯಕ.

image

ಕಲಬುರಗಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ರ‍್ಯಾಂಕಿಂಗ್‌ನಲ್ಲಿ ಬೇಸರ ತಂದಿದೆ. ಆದರೆ, ಪ್ರತೀಶತ ಅಂಕಿ ಅಂಶದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ಸಾಧನೆ ಮಾಡಿದೆ. 2024-25ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ-1 ಪರೀಕ್ಷೆಯಲ್ಲಿ 42.43% ಫಲಿತಾಂಶ ಇತ್ತು, ಆದರೆ 2025-26ನೇ ಸಾಲಿನ ಎಸ್ ಎಸ್ ಎಲ್ ಸಿ-1 ಪರೀಕ್ಷೆಯಲ್ಲಿ 85.06% ಗಳಿಸಿ 42.63% ಪ್ರಗತಿ ಸಾಧಿಸಿದ್ದೇವೆ. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕಲಬುರಗಿ ಉತ್ತಮ ಸಾಧನೆ ಮಾಡಿದೆ. ಕಳೆದ ಮೂರು ತಿಂಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ತುಂಬಾ ಶ್ರಮ ವಹಿಸಿದ್ದೇವೆ. ಮುಂದಿನ ವರುಷ ಟಾಪ್ 10ರಲ್ಲಿ ಬರುವ ಪ್ರಯತ್ನ ಮಾಡುತ್ತೇವೆ.

-ಶಂಕ್ರಮ್ಮ ಡವಳಗಿ, ಡಿಡಿಪಿಐ, ಕಲಬುರಗಿ