ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kuntoji Basavanna Jatra: ಇಂದಿನಿಂದ ಕುಂಟೋಜಿ ಬಸವಣ್ಣನ ಜಾತ್ರೆ: ನಾಳೆ ಎರಡನೇ ವರ್ಷದ ರಥೋತ್ಸವ

ನಾಡಿನ ಹರಗುರು ಚರಮೂರ್ತಿಗಳನ್ನು ಕರೆಸಿ ಅವರ ಅಮೃತ ಹಸ್ತದಿಂದ ಮೊಟ್ಟ ಮೊದಲ ತೇರೆಳೆದು ಸಂಭ್ರಮಿಸಿದರು. ತಮ್ಮ ಊರಿನಿಂದ ಸಾವಿರಾರು ಕಿ.ಮೀ.ಗಳ ದೂರ ಇದ್ದವರು ಕೂಡಾ ಕಳೆದ ವರ್ಷ ತಮ್ಮ ಆರಾಧ್ಯ ದೈವದ ಪ್ರಥಮ ತೇರೆಳೆದು ಕೃತಾರ್ಥ ರಾಗಿದ್ದರು. ಈಗ ಎರಡನೇ ವರ್ಷದ ತೇರೆಳೆಯುವ ಸಂಭ್ರಮದಲ್ಲಿದಾರೆ. ಇಂದು ಶ್ರಾವಣ ಮಾಸದ ಕಡೆಯ ಸೋಮವಾ ರದಂದು ಬಸವಣ್ಣನ ಜಾತ್ರೆ ಆರಂಭವಾಗಲಿದೆ. ಅದರ ನಿಮಿತ್ಯವಾಗಿ ಇಂದು ನಸುಕಿನಲ್ಲಿ ಮಹಾ ಪೂಜೆ ರುದ್ರಾಭಿಷೇಕ ನೆರವೇರಲಿದೆ.

ಬಸವರಾಜ ಹುಲಗಣ್ಣಿ

ಮುದ್ದೇಬಿಹಾಳ: ಅಮರ ಶಿಲ್ಪಿ ಜಕಣಾಚಾರಿಯವರಿಂದ ನಿರ್ಮಿ ಸಲಾಗಿದೆ ಎಂಬ ಪ್ರತೀತಿ ಹೊಂದಿರುವ 120 ಕಂಬಗಳ ಶ್ರೀ ಬಸವೇಶ್ವರ ದೇವಸ್ಥಾನದ ‘ಕುಂಟೋಜಿ ಬಸವಣ್ಣನ’ ಜಾತ್ರೆ(Kuntoji Basavanna Jatra) ಇಂದಿನಿಂದ ಐದು ದಿನಗಳವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಸಾಕ್ಷಾತ ಪರಮೇಶ್ವರನೇ ನೆಲೆ ನಿಂತಿದ್ದ ಕುಂಟೋಜಿ ಗ್ರಾಮದ ಹೊರವಲಯದಲ್ಲಿ ದಟ್ಟ ಅಡವಿಯಲ್ಲಿದ್ದ ಶಿವನ ದೇವಾಲಯಕ್ಕೆ ಬೆಳಗಿನ ಜಾವ ಊರಿನ ಪೂಜಾರಿ ಬಂದು ಶಿವನಿಗೆ ಪೂಜೆ ಸಲ್ಲಿಸಿ ಹೋಗುತ್ತಿದ್ದರು. ನಂತರ ಆ ದೇವಾಲಯದ ಕಡೆಗೆ ಯಾರೂ ಬರುತ್ತಿರಲಿಲ್ಲವಂತೆ. ಒಂದು ದಿನ ಮಟಮಟ ಮದ್ಯಾಹ್ನದ ಹೊತ್ತಿನಲ್ಲಿ ದನಗಾಹಿಗಳು ದನಗಳನ್ನು ಮೇಯಿಸಲು ಈ ದೇವಸ್ಥಾನದ ಹತ್ತಿರ ಮಳೆ ಬಂದಿತು. ಮಳೆ ನಿಂತ ನಂತರ ಅಲ್ಲಿನ ತಗ್ಗಿನಲ್ಲಿನ ಕೆಸರಿನಲ್ಲಿ ಮಕ್ಕಳು ಆಟವಾಡುವಾಗ ನೆಲದೊಳಗೆ ಎತ್ತಿನ ಕೋಡುಗಳು ಕಾಣಿಸಿದವಂತೆ. ಮಕ್ಕಳಿಂದ ಈ ವಿಷಯ ತಿಳಿದು ಅಲ್ಲಿಗೆ ಬಂದ ಊರ ಜನರು ನೆಲ ಅಗೆದಾಗ ಕಂಡು ಬಂದ ಬಸವಣ್ಣನೇ ಇಂದು ಎಲ್ಲರೂ ಪೂಜಿಸುವ ‘ಕುಂಟೋಜಿ ಬಸವಣ್ಣ’ ಶತ ಮಾನಗಳಿಂದ ಪೂಜಿಕೊಂಡು ಬಂದಿದ್ದ ಇಲ್ಲಿನ ಬಸ ವಣ್ಣನಿಗೆ ಕಳೆದ ವರ್ಷ ಭಕ್ತರೆಲ್ಲರೂ ಕೂಡಿಕೊಂಡು ಕಟ್ಟಿಗೆಯ ತೇರು ಮಾಡಿಸಿದರು.

ನಾಡಿನ ಹರಗುರು ಚರಮೂರ್ತಿಗಳನ್ನು ಕರೆಸಿ ಅವರ ಅಮೃತ ಹಸ್ತದಿಂದ ಮೊಟ್ಟ ಮೊದಲ ತೇರೆಳೆದು ಸಂಭ್ರಮಿಸಿದರು. ತಮ್ಮ ಊರಿನಿಂದ ಸಾವಿರಾರು ಕಿ.ಮೀ.ಗಳ ದೂರ ಇದ್ದವರು ಕೂಡಾ ಕಳೆದ ವರ್ಷ ತಮ್ಮ ಆರಾಧ್ಯ ದೈವದ ಪ್ರಥಮ ತೇರೆಳೆದು ಕೃತಾರ್ಥ ರಾಗಿದ್ದರು. ಈಗ ಎರಡನೇ ವರ್ಷದ ತೇರೆಳೆಯುವ ಸಂಭ್ರಮದಲ್ಲಿದಾರೆ. ಇಂದು ಶ್ರಾವಣ ಮಾಸದ ಕಡೆಯ ಸೋಮವಾ ರದಂದು ಬಸವಣ್ಣನ ಜಾತ್ರೆ ಆರಂಭವಾಗಲಿದೆ. ಅದರ ನಿಮಿತ್ಯವಾಗಿ ಇಂದು ನಸುಕಿನಲ್ಲಿ ಮಹಾ ಪೂಜೆ ರುದ್ರಾಭಿಷೇಕ ನೆರವೇರಲಿದೆ.

ಇದನ್ನೂ ಓದಿ: Cricket Betting: ಕ್ರಿಕೆಟ್ ಬೆಟ್ಟಿಂಗ್ ದಂಧೆ ಬೇಧಿಸಿದ ಗ್ರಾಮಾಂತರ ಠಾಣೆಯ ಪೊಲೀಸರು

ನಂತರ ಭಕ್ತರ ದರ್ಶನಕ್ಕೆ ದೇವಾಲಯದ ಬಾಗಿಲು ತೆರೆಯಲಿದೆ. ಬೆಳಿಗ್ಗೆಯಿಂದಲೇ ಭಕ್ತರಿಗೆ ಅನ್ನಸಂತರ್ಪಣೆ ಆರಂಭವಾಗಲಿದೆ. ಮದ್ಯಾಹ್ನ 3.00 ಕ್ಕೆ ಪಲ್ಲಕ್ಕಿ ಮತ್ತು ಕಳಸದ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಕೊಣ್ಣೂರಿನ ಕನಕಶ್ರೀ ಮಹಿಳಾ ಡೊಳ್ಳು ಕುಣಿತ ಹಾಗೂ ಕುದುರೆ ನಡೆಯಲಿದೆ.

ಕುಂಟೋಜಿಯ ಸಿದ್ಧಿವಿನಾಯಕ ಕೋಲಾಟ ತಂಡದಿಅದ ಕೋಲಾಟ, ಕರಡಿಮಜಲು ಸೇರಿದಂತೆ ಸಕಲ ವಾದ್ಯಗಳ ತಂಡಗಳು ಭಾಗವಹಿ ಸಲಿವೆ. ರಾತ್ರಿ 10 ದೇವಾಲಯದ ಶಿಖರದಲ್ಲಿ ಕಳಸಾ ರೋಹಣ ನಡೆ ಯಲಿದೆ. ನಂತರ ರಾತ್ರಿ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10-30 ನಾಲತವಾಡದ ಶ್ರೀ ಸಿದ್ದು ನಾಲತವಾಡ ಇವರ ಕಲಾ ತಂಡ ಶ್ರಿ ವಿರೇಶ್ವರ ನಾಟ್ಯ ಸಂಘದಿಂದ ‘ಬಂಜೆ ತೊಟ್ಟಿಲು’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಇದರ ಸಾನಿಧ್ಯವನ್ನು ಕುಂಟೋಜಿ ಭಾವೈಕ್ಯತೆ ಮಠದ ಗುರು ಶ್ರೀ ಚನ್ನವೀರ ಶಿವಾಚಾರ್ಯರು ವಹಿಸಲಿದ್ದು, ಕರ್ನಾಟಕ ಸರಕಾರದ ಸಾಬೂನು ಮತ್ತು ಮಾರ್ಜಕ ಮಂಡಳಿ ಇದರ ಅಧ್ಯಕ್ಷರು ಮತ್ತು ಮುದ್ದೇಬಿಹಾಳದ ಶಾಸಕರಾ ಶ್ರೀ.ಸಿ.ಎಸ್.ನಾಡಗೌಡರು ಉದ್ಘಾಟಿಸಲಿದ್ದಾರೆ.

kuntoji 2

ಜಾತ್ರಾ ಕುಂಟೋಜಿ ಬಸವೇಶ್ವರ ದೇವಾಲಯ ಕಮೀಟಿಯ ಅಧ್ಯಕ್ಷರಾದ ಗುರುಲಿಂಗಪ್ಪ ಸುಲ್ಲಳ್ಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅಥಿತಿಗಳಾಗಿ ಬಸಯ್ಯ ಸ್ವಾಮಿ ಅಬ್ಬಿಹಾಳಮಠ, ರುದ್ರಯ್ಯ ಮಠ, ಕಾಮರಾಜ ಬಿರಾದಾರ, ಎಸ್.ಆಯ್.ಗೂಳಿ, ಸತೀಶ ಓಸ್ವಾಲ, ಸಿ.ಬಿ.ಅಸ್ಕಿ, ಸಂಗನಗೌಡ ಪಾಟೀಲ, ಶಿವಲಿಂಗಪ್ಪ ಗಸ್ತಿಗಾರ, ಪ್ರಕಾಶ ಇಲ್ಲೂರ, ಬಿ.ಎಸ್.ಹೂಗಾರ, ಯಲ್ಲಪ್ಪ ಪಾಟೀಲ, ಶಿವಕುಮಾರ ಮುರಾಳ, ಅರವಿಂದ ಕವಲಗಿ, ರಾಮನಗೌಡ ಹಂಪ ನಗೌಡರ, ಪಿ.ಕೆ.ಹೂಗಾರ, ಅಮರಪ್ಪ ಹಂಪನ ಗೌಡರ, ಸಂಗಣ್ಣ ಡಮನಾಳ, ಕಲ್ಪನಾ ದೇಸಾಯಿ, ಶಿವಾನಂದ ಬಿರಾದಾರ, ಸದಾಶಿವ ಹೊಸಮನಿ, ಜೆ.ವಿ.ಕೋಳೂರ, ಭೀಮರಾಯ ಹೆಬ್ಬಾಳ, ಅರುಣಕುಮಾರ ಹಿರೇಮಠ, ನೀಲಕಂಠ ರಡ್ಡಿ ಚಿಂಚೋಳಿ, ಮೋಹನ ಹುಲ್ಲೂರ, ಮುಂತಾದವರು ಭಾಗವಹಿಸಲಿದ್ದಾರೆ.

ಮರುದಿನ 2026ರ ಸೆ.8ರಂದು ಸಂಜೆ 5 ಗಂಟೆಗೆ ಎರಡನೆ ವರ್ಷದ ರತೋಥ್ಸವವು ಅದ್ದೂರಿಯಾಗಿ ನಡೆಯಲಿದೆ. ರಾತ್ರಿ 8ಕ್ಕೆ ಕಲಾ ಸಿಂಚನ ಮೆಲೋ ಡೀಸ್ ಮುದ್ದೇಬಿಹಾಳ ಇವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಸಿದ್ಧಿವಿನಾಯಕ ತಂಡದಿಂದ ಕೋಲಾಟ ಕುಂಟೋಜಿಯ ಸಿದ್ಧಿವಿನಾಯಕ ಕೋಲಾಟ ತಂಡದಿಂದ ಕೋಲಾಟ, ಕರಡಿಮಜಲು ಸೇರಿದಂತೆ ಸಕಲ ವಾದ್ಯಗಳ ತಂಡಗಳು ಭಾಗವಹಿಸಲಿವೆ. ರಾತ್ರಿ ೧೦ ದೇವಾಲಯದ ಶಿಖರದಲ್ಲಿ ಕಳಸಾರೋಹಣ ನಡೆಯಲಿದೆ. ನಂತರ ರಾತ್ರಿ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ.