ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಚ್ಛಾಶಕ್ತಿ ಕೊರತೆ: ಕಾರಂಜಾ ಸಂತ್ರಸ್ಥರಿಗಿನ್ನೂ ಸಿಕ್ಕಿಲ್ಲ ನ್ಯಾಯ

ಕಾರಂಜಾ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಸದಸ್ಯರ ಸಾಮೂಹಿಕ ಆತ್ಮಹತ್ಯೆಯತ್ನಕ್ಕೂ ಸರಕಾರ ಮಣಿದಿಲ್ಲ. ಇಲ್ಲಿನ ಸಂತ್ರಸ್ತರ ಪಾಲಿಗೆ ಪರಿಹಾರ ಗಗನಕುಸುಮವಾಗಿದೆ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಇದುವರೆಗೂ ಸೂಕ್ತ ಪರಿಹಾರ ಬಂದಿಲ್ಲ. ಈ ವಿಚಾರದಲ್ಲಿ ಕಾಲಕ್ಕೆ ತಕ್ಕಂತೆ ರಾಜಕಾರಣ ಮಾಡಲಾಗುತ್ತಿದೆ ಎಂಬುದು ರೈತರ ಅಳಲು. ಯಾವುದೇ ಷರತ್ತು ಇಲ್ಲದೆ 4 ದಶಕಗಳ ಹಿಂದೆ ಭೂಮಿ ನೀಡಿದ ರೈತರ ಬದುಕು ದುಸ್ತರ ಆಗಿದೆ.

ಚನ್ನಬಸವ ಮೊಕ್ತೆದಾರ ಬೀದರ್

ಸೂಕ್ತ ಪರಿಹಾರಕ್ಕಾಗಿ 4 ದಶಕಗಳಿಂದ ಭೂ ಸಂತ್ರಸ್ಥರ ಹೋರಾಟ

ಕಡತದಲ್ಲೇ ಉಳಿದ ತಾಂತ್ರಿಕ ಸಮಿತಿ ವರದಿ

ಕಾರಂಜಾ ನದಿಗೆ ಅಡ್ಡಲಾಗಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಬಳಿಯ ಅಣೆಕಟ್ಟೆ ನಿರ್ಮಾ ಣದ ವೇಳೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಇನ್ನೂ ಸರಕಾರ ಸೂಕ್ತ ಪರಿಹಾರ ನೀಡಿಲ್ಲ. ನಾಲ್ಕು ದಶಕಗಳಿಂದಲೂ ಸಂತ್ರಸ್ತರು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿ ದ್ದಾರೆ. ಪರಿಹಾರದ ಹಕ್ಕಿಗಾಗಿ ಮಳೆ, ಚಳಿ,ಬಿಸಿಲು ಲೆಕ್ಕಿಸದೆ ಸತ್ಯಾಗ್ರಹ, ಅಹೋರಾತ್ರಿ ಧರಣಿ ಸೇರಿದಂತೆ ವಿಭಿನ್ನ ರೀತಿಯಲ್ಲಿ ಮಾನವ ಸರಪಳಿ, ಕೇಶ ಮುಂಡನ, ಉರುಳು ಸೇವೆ ಹೀಗೆ ನಾನಾ ರೀತಿಯ ಪ್ರತಿಭಟನೆ ನಡೆಸಿಕೊಂಡು ಬಂದಿರುವ ಉದಾಹರಣೆ ಇದೆ.

ಕಾರಂಜಾ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಸದಸ್ಯರ ಸಾಮೂಹಿಕ ಆತ್ಮಹತ್ಯೆಯತ್ನಕ್ಕೂ ಸರಕಾರ ಮಣಿದಿಲ್ಲ. ಇಲ್ಲಿನ ಸಂತ್ರಸ್ತರ ಪಾಲಿಗೆ ಪರಿಹಾರ ಗಗನಕುಸುಮವಾಗಿದೆ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಇದುವರೆಗೂ ಸೂಕ್ತ ಪರಿಹಾರ ಬಂದಿಲ್ಲ. ಈ ವಿಚಾರದಲ್ಲಿ ಕಾಲಕ್ಕೆ ತಕ್ಕಂತೆ ರಾಜಕಾರಣ ಮಾಡಲಾಗುತ್ತಿದೆ ಎಂಬುದು ರೈತರ ಅಳಲು. ಯಾವುದೇ ಷರತ್ತು ಇಲ್ಲದೆ 4 ದಶಕಗಳ ಹಿಂದೆ ಭೂಮಿ ನೀಡಿದ ರೈತರ ಬದುಕು ದುಸ್ತರ ಆಗಿದೆ.

ಇದನ್ನೂ ಓದಿ: Bidar News: ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ; ಬೀದರ್‌ನಲ್ಲಿ ಕೃಷಿ ಅಧಿಕಾರಿಗಳಿಂದ 9.35 ಲಕ್ಷ ಮೌಲ್ಯದ 1,539 ಚೀಲ ಜಪ್ತಿ

ನೀರಿನ ಯೋಜನೆಗಳ ಮೂಲಾಧಾರ: ಜಿಲ್ಲೆಯಾದ್ಯಂತ ಕುಡಿಯುವ ನೀರು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಾಧಾರ ಕಾರಂಜಾ ಜಲಾಶಯವಾಗಿದೆ. ನಿರ್ಮಾಣದ ವೇಳೆ 26 ಹಳ್ಳಿಯ ರೈತರು ತಮ್ಮ ಫಲವತ್ತಾದ 17 ಸಾವಿರ ಎಕರೆ ಭೂಮಿಯನ್ನು ಕಳೆದುಕೊಂಡಿ ದ್ದರು. ಭೂಮಿ ಕಳೆದುಕೊಂಡ ರೈತರು ಸೂಕ್ತ ಪರಿಹಾರ ಕೊಡುವಂತೆ ಆಗ್ರಹಿಸಿ ಹೋರಾಟ ಮುಂದುವರಿಸಿದ್ದಾರೆ.

ರೈತರ ಜೀವನಾಡಿ ಅಣೆಕಟ್ಟು: ಕಾರಂಜಾ ಅಣೆಕಟ್ಟು ನಿರ್ಮಾಣಕ್ಕಾಗಿ 1981-82 ರಲ್ಲಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತು. 29.227 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿತ್ತು. ಬೀದರ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಸಾವಿರಾರು ಹೆಕ್ಟೇರ್ ಜಮೀನಿಗೆ ನೀರು ಬರುತ್ತಿದ್ದು. ರೈತರ ಆರ್ಥಿಕತೆ ಹೆಚ್ಚಿಸಿದೆ. ಉತ್ತಮ ಇಳುವರಿ ಬೆಳೆ ಬೆಳೆಯಲು ಅನುಕೂಲವಾಗಿದೆ. 131 ಕಿ.ಮಿ. ಬಲ ದಂಡೆ. 31 ಕಿ.ಮಿ.ಎಡದಂಡೆ ಕಾಲುವೆ ನಿರ್ಮಾಣದಿಂದ ರೈತರಿಗೆ ಅನುಕೂಲವಾಗಿದೆ.

8 ಹಳ್ಳಿ ಸಂಪೂರ್ಣ ಮುಳುಗಡೆ: ಜಲಾಶಯ ನಿರ್ಮಾಣದಿಂದ ಸಂಗುಳಗಿ, ಅತಿವಾಳ, ಕಮಲಾ ಪೂರ ಸೇರಿ ಒಟ್ಟು 8 ಹಳ್ಳಿಗಳು ಮುಳುಗಡೆಯಾಗಿ ಸುಮಾರು ಕುಟುಂಬಗಳು ಬೀದಿಗೆ ಬಿದ್ದಿವೆ.

ವರದಿ ಸಲ್ಲಿಕೆ: ಇನ್ನೂ ಬಂದಿಲ್ಲ ಪ್ರತಿಕ್ರಿಯೆ ಕಾರಂಜಾ ಅಣೆಕಟ್ಟಿನಿಂದ ನಿರಾಶ್ರಿತರಾದ ರೈತರ ಬೇಡಿಕೆಗಳನ್ನು ಅಧ್ಯಯನ ಮಾಡಲು ಈ ಹಿಂದಿನ ಸಿಎಂ ಸಿದ್ದರಾಮಯ್ಯ ಅವರು ತಾಂತ್ರಿಕ ಸಮಿತಿ ರಚನೆ ಮಾಡಿದ್ದರು. ಈ ಸಮಿತಿಯೂ ಬೆಳಗಾವಿಯ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವ ಈಶ್ವರ ಖಂಡ್ರೆ, ರಹೀಂಖಾನ್ ಮತ್ತು ಕಾರಂಜಾ ಅಣೆಕಟ್ಟು ನಿರಾಶ್ರಿತರ ರೈತರ ಅಂದೋಲನ ಸಮಿತಿಯ ಸದಸ್ಯರ ಜತೆ ಸಭೆ ನಡೆಸಿ ಹಾಗೂ ಕ್ಷೇತ್ರ ಅಧ್ಯಯನವನ್ನು ನಡೆಸಿ ರೈತರ ಹೆಚ್ಚಿನ ಪರಿಹಾರ ನೀಡುವ ಸಂಬಂಧ ಸರಕಾರಕ್ಕ ವರದಿ ಸಲ್ಲಿಸಿತ್ತು. ವರದಿ ಸಲ್ಲಿಸಿ 4 ತಿಂಗಳು ಕಳೆದರೂ ಇನ್ನು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಿಎಂ ಡಿ.ಕೆ.ಶಿವಕುಮಾರ್ ಅವರು ಸಮಿತಿ ವರದಿ ಆಧರಿಸಿ ಕೂಡಲೇ ಕಾರಂಜಾ ಸಂತ್ರಸ್ತರಿಗೆ ಸೂಕ್ತ ಪರಿಹಾರ ಬಿಡುಗಡೆ ಮಾಡಲಿ ಎಂಬುದು ರೈತರ ಆಗ್ರಹವಾಗಿದೆ.

image

ಅಣೆಕಟ್ಟು ನಿರ್ಮಾಣಕ್ಕಾಗಿ ಫಲವತ್ತಾದ ಭೂಮಿ ಕಳೆದುಕೊಂಡ ರೈತರಿಗೆ ಅಂದಿನ ಕಾಲದಲ್ಲಿ ಎಕರೆಗೆ 3 ಸಾವಿರ ಪರಿಹಾರ ನೀಡಲಾಗಿದೆ. ಸೂಕ್ತ ಪರಿಹಾರ ಒದಗಿಸಲು ಹೋರಾಟ ನಡೆಸಲಾಗಿದೆ. ಈಗಾಗಲೇ ತಾಂತ್ರಿಕ ಸಮಿತಿ ರಚಿಸಿ ಅಧ್ಯಯನ ವರದಿ ಸರಕಾರಕ್ಕೆ ಸಲ್ಲಿಸಿದೆ. ಸರಕಾರ ವರದಿ ಅಧ್ಯಯನ ಮಾಡುವ ಮೂಲಕ ಪರಿಹಾರ ಕೊಡಬೇಕು. ರೈತರ ರಕ್ಷಣೆಗೆ ಮುಂದಾಗಬೇಕು.

-ಚಂದ್ರಶೇಖರ ಪಾಟೀಲ್, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ