ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಣ್ಣಿನಲ್ಲೇ ಬದುಕು, ಕಲೆಯಲ್ಲೇ ಭಕ್ತಿ: ಜೀವನೋಪಾಯಕ್ಕೆ ನಾನಾವೇಶ ನಾನಾ ಪ್ರದೇಶ

ಈಗಾಗಲೇ ನಗರ ಹೊಲಯ ಅಗಲಗುರ್ಕಿಗೆ ಹೋಗುವ ರೈಲ್ವೆ ಟ್ರ್ಯಾಕ್ ಸಮೀಪ ನೆಲೆ ನಿಂತಿರುವ ಇವರು ಗಣಪತಿ  ಹಬ್ಬಕ್ಕೂ ಪೂರ್ವದಲ್ಲಿಯೇ ನರಸಿಂಹ ಅವತಾರ, ವರಾಹ ಅವತಾರ ಗಣಪತಿ, ದರ್ಬಾರ್ ಗಣಪತಿ, ಶಿವ ಗಣಪತಿ, ಆಂಜನೇಯ ಗಣಪತಿ, ರಥಾರೂಢ, ಗರುಡವಾಹನ, ಸಿಂಹಾ ರೂಢ, ಗಜಾರೂಢ, ಬಸವಾರೂಡ, ಇಲಿವಾಹನ, ಸರ್ಪಾರೂಢ, ಕೃಷ್ಣ ಗಣಪತಿ ಸೇರಿದಂತೆ ನೂರಕ್ಕೂ ಹೆಚ್ಚು ವಿನ್ಯಾಸಗಳ ಮಾದರಿಗಳನ್ನು ಸಿದ್ಧಪಡಿಸಿರುವ ಇವರ ಕಲಾನೈಪುಣ್ಯ ನೋಡು ಗರ ಗಮನ ಸೆಳೆಯುತ್ತದೆ.

ಮುನಿರಾಜು ಎಂ ಅರಿಕೆರೆ 

ಚಿಕ್ಕಬಳ್ಳಾಪುರ: ಯಂತ್ರ ನಾಗರೀಕತೆಯ ಇಂದಿನ ದಿನಗಳಲ್ಲಿ ದಿಢೀರ್ ಸಿದ್ಧವಾಗಿ ದೊರೆಯುವ ವಸ್ತುಗಳ ಖರೀದಿಗೆ ಮುಗಿಬೀಳುವವರ ನಡುವೆ, ತಮ್ಮ ಕೈಯಾರೆ ಮಣ್ಣಿಗೆ ಜೀವ ತುಂಬುವ ಕುಲ ಕಸುವನ್ನು ಕಾಪಿಟ್ಟುಕೊಳ್ಳುವ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. 

ಇದಕ್ಕೆ ಅಪವಾದವೆಂಬಂತೆ, ಬಾಡಿ ಟಚ್ ಮಾಡಬಾರದು ಪಶ್ಚಿಮ ಬಂಗಾಳದ ಕೊಲ್ಕತ್ತಾ ಸಮೀಪದ ನೋದಿಯಾ ಜಿಲ್ಲೆಯ ಲಕ್ಷ್ಮೀ ಕಾಂತ್ ಹಾಗೂ ಅವರ ತಂಡ ಕಳೆದ 18 ವರ್ಷಗಳಿಂದ ಚಿಕ್ಕಬಳ್ಳಾಪುರದಲ್ಲಿ  ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು  ಸ್ಥಳದಲ್ಲಿಯೇ ರೂಪಿಸುವ ಮೂಲಕ ಕಾಯಕವೇ ಕೈಲಾಸ ಎಂಬ ಸಂದೇಶವನ್ನು ಸಾರುತ್ತಿದ್ದಾರೆ.

ಹೌದು ಜೂನ್, ಜುಲೈ ಹಾಗೂ ಆಗಸ್ಟ್ ಮೂರು ತಿಂಗಳ ಕಾಲ ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ದಲ್ಲಿ ನೆಲೆ ನಿಲ್ಲುವ ಈ ಕಲಾವಿದರ ಕುಟುಂಬ ಗಂಗಾ ನದಿಯ ಮಣ್ಣನ್ನೇ ಬಳಸಿ ವಿವಿಧ ವಿನ್ಯಾಸ ಗಳ ಗಣಪತಿ ಮೂರ್ತಿಗಳನ್ನು ಕೈಯಾರೆ ತಯಾರಿಸುವುದು ವಿಶೇಷ. 

ಇದನ್ನೂ ಓದಿ; Chikkaballapur News: ಗುರುಪೂಜೆ-ಸಂಗೀತೋತ್ಸವದ ಪೂರ್ವಭಾವಿ ಸಭೆ

ಮಣ್ಣಿನ ಪರಿಮಳ, ಕಲೆಯ ಸೊಬಗು ಮತ್ತು ಪರಿಸರದ ಮೇಲಿನ ಕಾಳಜಿಯನ್ನು ಒಟ್ಟುಗೂಡಿಸಿ ರುವ ಇವರ ಕಾಯಕ ಕೇವಲ ಉದ್ಯೋಗವಲ್ಲ; ಅದು ತಲೆಮಾರುಗಳಿಂದ ಬಂದಿರುವ ಸಾಂಪ್ರದಾಯಿಕ ಕುಲಕಸುಬಿನ ಸಂರಕ್ಷಣೆಯಾಗಿದೆ.

ಈ ವರ್ಷ ಮಳೆಯ ಕೊರತೆಯಿಂದ ಕೆರೆ ಕುಂಟೆ ತೊರೆಗಳಲ್ಲಿ ನೀರಿನ ಸಂಗ್ರಹದ ಕೊರತೆಯ ಕಾರಣವಾಗಿ ಗಣಪತಿ ಮೂರ್ತಿಗಳ ಎತ್ತರವನ್ನು ಕಡಿಮೆ ಮಾಡಿ ಪರಿಸ್ಥಿತಿಗೆ  ಅನುಗುಣವಾಗಿ ಹೊಂದಿಕೊಂಡು ಕೆಲಸ ಮಾಡುತ್ತಿರುವುದು ಇವರ ಬದುಕಿನ ಹೋರಾಟಕ್ಕೆ ಸಾಕ್ಷಿಯಾಗಿದೆ. 

ಈಗಾಗಲೇ ನಗರ ಹೊಲಯ ಅಗಲಗುರ್ಕಿಗೆ ಹೋಗುವ ರೈಲ್ವೆ ಟ್ರ್ಯಾಕ್ ಸಮೀಪ ನೆಲೆ ನಿಂತಿರುವ ಇವರು ಗಣಪತಿ  ಹಬ್ಬಕ್ಕೂ ಪೂರ್ವದಲ್ಲಿಯೇ ನರಸಿಂಹ ಅವತಾರ, ವರಾಹ ಅವತಾರ ಗಣಪತಿ, ದರ್ಬಾರ್ ಗಣಪತಿ, ಶಿವ ಗಣಪತಿ, ಆಂಜನೇಯ ಗಣಪತಿ, ರಥಾರೂಢ, ಗರುಡವಾಹನ, ಸಿಂಹಾ ರೂಢ, ಗಜಾರೂಢ, ಬಸವಾರೂಡ, ಇಲಿವಾಹನ, ಸರ್ಪಾರೂಢ, ಕೃಷ್ಣ ಗಣಪತಿ ಸೇರಿದಂತೆ ನೂರಕ್ಕೂ ಹೆಚ್ಚು ವಿನ್ಯಾಸಗಳ ಮಾದರಿಗಳನ್ನು ಸಿದ್ಧಪಡಿಸಿರುವ ಇವರ ಕಲಾನೈಪುಣ್ಯ ನೋಡು ಗರ ಗಮನ ಸೆಳೆಯುತ್ತದೆ.

Ganapa statue maker 2

ಕುಲಕಸುವನ್ನು ಮುಂದುವರಿಸಿಕೊಂಡು ಬಂದಿರುವ ಅಪ್ಪಟ ಕಲಾವಿದ ಕುಟುಂಬದ ಲಕ್ಷ್ಮಿಕಾಂತ್ ತಯಾರಿಸಿರುವ ಗಣಪತಿ ಗಳನ್ನು ಕೊಳ್ಳುವ ಮೂಲಕ ಕಲೆಗೆ ಬೆಲೆ ನೀಡಿದರೆ ಸಾಂಪ್ರದಾಯಿಕ ಕಲೆ ಇನ್ನಷ್ಟು ವರ್ಷಗಳ ಕಾಲ ಈ ಭೂಮಿಯ ಮೇಲೆ ಜೀವಂತವಾಗಿರಲಿದೆ.

ಹೀಗಾಗಿ ಗಣೇಶೋತ್ಸವ ಸಮಿತಿಗಳು ಹಾಗೂ ಭಕ್ತರು ತಮ್ಮ ಇಚ್ಛೆಯ ಆಕೃತಿ ಮತ್ತು ಗಾತ್ರದಲ್ಲಿ ಮೂರ್ತಿಗಳನ್ನು ಆರ್ಡರ್ ಮಾಡಿದರೆ, ಕೈಗೆಟುಕುವ ದರದಲ್ಲಿ ತಯಾರಿಸಿ ನೀಡುವುದು ಇವರ ವಿಶೇಷತೆ. 

ಕೊಲ್ಕತ್ತಾದಲ್ಲಿ ದುರ್ಗಾ ಮತ್ತು ಕಾಳಿ ಮಾತೆಯ ಮೂರ್ತಿಗಳ ನಿರ್ಮಾಣದಲ್ಲಿ ಪರಿಣತಿ ಹೊಂದಿ ರುವ ಈ ಕುಟುಂಬ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಪ್ರತಿವರ್ಷ ದುರ್ಗಾದೇವಿಯ ಮೂರ್ತಿ ಗಳನ್ನು ನಿರ್ಮಿಸಿ ತಮ್ಮ ಕಲಾಪರಂಪರೆಯನ್ನು ಮುಂದುವರಿಸುತ್ತಿದೆ.

ಇಂತಹ ಕಾಯಕ ಸಮುದಾಯಗಳ ಕೈಚಳಕಕ್ಕೆ ನಮ್ಮ ಸಮಾಜದ ಬೆಂಬಲ ಅತ್ಯಗತ್ಯ. ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವುದು ಎಂದರೆ ಕೇವಲ ಒಂದು ಮೂರ್ತಿಯನ್ನು ಖರೀದಿಸುವುದಲ್ಲ; ಶತಮಾನಗಳ ಕಲಾಪರಂಪರೆ, ಪರಿಸರ ಸ್ನೇಹಿ ಸಂಸ್ಕೃತಿ ಮತ್ತು ಸಾವಿರಾರು ಕುಟುಂಬಗಳ ಬದುಕಿಗೆ ಆಸರೆಯಾಗುವುದಾಗಿದೆ.

ಈ ಗಣೇಶೋತ್ಸವದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಆಯ್ಕೆ ಮಾಡಿ, ಕಾಯಕ ಸಮುದಾಯದ ಕಲಾವಿದರ ಶ್ರಮಕ್ಕೆ ಗೌರವ ಸಲ್ಲಿಸೋಣ. ಸಮಾಜದ ಸಹಕಾರದಿಂದ ಇಂತಹ ಪಾರಂಪರಿಕ ಕಲೆಗಳು ಮುಂದಿನ ತಲೆಮಾರಿಗೆ ಉಳಿಯಲಿ ಎಂಬುದು ನಮ್ಮೆಲ್ಲರ ಆಶಯ.

ಗಣಪತಿ ಮೂರ್ತಿಗಳಿಗಾಗಿ ಸಂಪರ್ಕ:

ಲಕ್ಷ್ಮೀ ಕಾಂತ್ – 7908400244