ಅಪರ್ಣಾ ಎ.ಎಸ್ ಬೆಂಗಳೂರು
24 ನಿಗಮಗಳಿಂದಲೇ ಸರಕಾರಕ್ಕೆ 11 ಸಾವಿರ ಕೋಟಿ ನಷ್ಟ
ಅನುದಾನ ನೀಡಿದರೂ ನಷ್ಟದಿಂದ ಹೊರಬಾರದ ಸಾರಿಗೆ, ವಿದ್ಯುತ್ ಕಂಪನಿ
ಗ್ಯಾರಂಟಿ ಭಾರಕ್ಕೆ ಸಿಲುಕಿರುವ ವಿದ್ಯುತ್ ಕಂಪನಿ ಹಾಗೂ ಸಾರಿಗೆ ನಿಗಮಗಳ ನಷ್ಟ ನಿರ್ವಹಣೆಯೇ ಸರಕಾರಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎನ್ನುವುದು ಸ್ಪಷ್ಟವಾಗಿದೆ. ಸರಕಾರ ಸ್ಥಾಪಿಸಿರುವ ಸರಕಾರಿ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಕೇಳಲಾಗಿರುವ ಪ್ರಶ್ನೆಗೆ ಸರಕಾರ ನೀಡಿರುವ ಉತ್ತರದಲ್ಲಿ ಈ ಅಂಶ ಸ್ಪಷ್ಟವಾಗಿದೆ.
ನಷ್ಟದಲ್ಲಿರುವ ಸರಕಾರಿ ಉದ್ದಿಮೆಗಳಲ್ಲಿ ಸಿಂಹಪಾಲು ಸಾರಿಗೆ ಹಾಗೂ ಇಂಧನ ಇಲಾಖೆಗೆ ಸೇರಿಸುವ ಸಂಸ್ಥೆಗಳದೇ ಆಗಿದ್ದು, ಒಟ್ಟು ನಷ್ಟದ ಶೇ.60ಕ್ಕೂ ಅಧಿಕ ಭಾಗ ಈ ನಿಗಮ ಅಥವಾ ಉದ್ದಿಮೆಗಳೇ ಹೊತ್ತಿವೆ ಎನ್ನುವುದು ಅಂಕಿ-ಅಂಶದಲ್ಲಿ ಸ್ಪಷ್ಟವಾಗಿದೆ.
ವಿದ್ಯುತ್, ಸಾರಿಗೆ, ನೀರಾವರಿ ಇಲಾಖೆಯ ಹೊರತಾಗಿ ವಿವಿಧ ಸಮುದಾಯ, ವಿವಿಧ ಉದ್ದೇಶಗಳಿಗೆ ಒಟ್ಟು 128 ಸರಕಾರಿ ಉದ್ದಿಮೆಗಳನ್ನು ಸ್ಥಾಪಿಸಿರುವುದಾಗಿ ಹೇಳಲಾಗಿದ್ದು, ಇವುಗಳ ಪೈಕಿ ಒಟ್ಟು 24 ಉದ್ದಿಮೆಗಳು ನಷ್ಟದ ಸುಳಿಯಲ್ಲಿವೆ. ಈ 24 ಸರಕಾರಿ ಉದ್ದಿಮೆಗಳ ಪೈಕಿ ಸಾರಿಗೆ ಸಂಸ್ಥೆಗೆ ಸೇರಿರುವ ನಾಲ್ಕು, ಇಂಧನ ಇಲಾಖೆಯ ಐದಾರು ಎಸ್ಕಾಂಗಳ ನಷ್ಟ ಬಹುಪಾಲು ಹೊಂದಿದೆ.
ಇದನ್ನೂ ಓದಿ: KSRTC buses: ಪ್ರಯಾಣಿಕರಿಗೆ ಗುಡ್ ನ್ಯೂಸ್: ಕೆಎಸ್‌ಆರ್‌ಟಿಸಿಯ ಹೊಸ 115 ಬಸ್‌ಗಳಿಗೆ ಹಸಿರು ನಿಶಾನೆ
ಪ್ರಮುಖವಾಗಿ ಶಕ್ತಿ ಹಾಗೂ ಗೃಹಜ್ಯೋತಿ ಜಾರಿ ಹಾಗೂ ಈ ನಿಗಮಗಳಲ್ಲಿರುವ ಸಿಬ್ಬಂದಿ ಯ ಸಂಖ್ಯೆಯೇ ಈ ಪ್ರಮಾಣದಲ್ಲಿ ನಷ್ಟ ಏರಿಕೆಯಾಗಲು ಕಾರಣ ಎನ್ನುವ ಮಾತುಗಳು ಸದ್ಯ ಕೇಳಿ ಬರುತ್ತಿದೆ.
ನಿಗಮಗಳಲ್ಲಿಯೇ ಲಕ್ಷಾಂತರ ಸಿಬ್ಬಂದಿ: ಇನ್ನು ರಾಜ್ಯ ಸರಕಾರದ 128 ಉದ್ದಿಮೆಗಳಲ್ಲಿ ಸುಮಾರು ಎರಡುವರೆ ಲಕ್ಷಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಯೂ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರೆ, ಎಸ್ಕಾಂಗಳಲ್ಲಿ 55 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡು ತ್ತಿದ್ದಾರೆ. ಒಟ್ಟು ಒಂಬತ್ತು ನಿಗಮಗಳಿಂದಲೇ ಒಂದುವರೆ ಲಕ್ಷ ಸಿಬ್ಬಂದಿಯಿದ್ದಾರೆ.
ಈ ಪ್ರಮಾಣದಲ್ಲಿ ಸಿಬ್ಬಂದಿ ಯಿರುವುದರಿಂದಲೇ ಈ ಉದ್ದಿಮೆಗಳು ನಷ್ಟಕ್ಕೆ ಜಾರಲು ಕಾರಣವಾಗಿದೆ ಎನ್ನಲಾಗುತ್ತಿದೆ. ಇದರೊಂದಿಗೆ ಗ್ಯಾರಂಟಿಗಳಲ್ಲಿ ಶಕ್ತಿ ಹಾಗೂ ಗೃಹಜ್ಯೋತಿ ಯೋಜನೆಗಳಿಗೆ ಸರಕಾರದಿಂದ ಪಾವತಿಯಾಗ ಬೇಕಿರುವ ಹಣ ಪಾವತಿಯೂ ವಿಳಂಬ ವಾಗುತ್ತಿರುವುದರಿಂದ ನಷ್ಟ ಈ ಪ್ರಮಾಣದಲ್ಲಿ ಏರಿಕೆಯಾಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಸರಕಾರದಿಂದ ಅನುದಾನದ ನೆರವು: ನಿಗಮಗಳಿಗೆ ಆರ್ಥಿಕ ಬಲ ನೀಡುವ ನಿಟ್ಟಿನಲ್ಲಿ ಹಾಗೂ ದೈನಂದಿನ ಚಟುವಟಿಕೆಗಳ ನಿರ್ವಹಣೆಗಾಗಿ ರಾಜ್ಯ ಸರಕಾರ ದಿಂದ ಕಳೆದ ಆರ್ಥಿಕ ವರ್ಷದಲ್ಲಿ 128 ಉದ್ದಿಮೆಗಳಿಗೆ 42,824.23 ಕೋಟಿ ರು.ಗಳನ್ನು ಅನುದಾನ ಹಾಗೂ ಸಹಾಯಧನದ ರೂಪದಲ್ಲಿ ನೀಡಲಾಗಿದೆ. ಪ್ರಮುಖವಾಗಿ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಸಾರಿಗೆ ಸಂಸ್ಥೆಗಳಿಗೆ ಹಾಗೂ ವಿವಿಧ ಎಸ್ಕಾಂಗಳಿಗೆ ಬಹುಪಾಲು ಅನುದಾನ ವನ್ನು ನೀಡಲಾಗಿದೆ.
ಗ್ಯಾರಂಟಿ ಯೋಜನೆಯಾಗಿರುವ ಗೃಹಜ್ಯೋತಿ ಯೋಜನೆಗೆ ಮರು ಪಾವತಿಗೆ ಶೇ.60ರಷ್ಟು ಅನುದಾನ ಹೋಗಿದ್ದರೆ, ಸಂಕಷ್ಟದಲ್ಲಿರುವ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಶಕ್ತಿ ಯೋಜನೆ ಯ ಬಾಕಿಯೂ ಸೇರಿದಂತೆ ಒಟ್ಟು 4611 ಕೋಟಿ ರು. ಆರ್ಥಿಕ ನೆರವು ನೀಡಲಾಗಿದೆ. ಇದರೊಂದಿಗೆ ನೀರಾವರಿ ನಿಗಮಗಳಿಂದ ಕೈಗೆತ್ತಿಕೊಂಡಿರುವ ಯೋಜನೆ ಹಾಗೂ ಗ್ರಾಮೀಣ ವಸತಿ ಯೋಜನೆಗಳಿಗೆ 8700 ಕೋಟಿ ರು. ಅನುದಾನ ನೀಡಲಾಗಿದೆ ಎಂದು ಅಂಕಿ-ಅಂಶದಲ್ಲಿ ಹೇಳಲಾಗಿದೆ.
ಹಲವು ನಿಗಮಗಳ ಆಡಿಟ್ ಮುಗಿದಿಲ್ಲ
128 ಸರಕಾರಿ ಉದ್ದಿಮೆಗಳ ಪೈಕಿ ಮೈಸೂರು ಸಕ್ಕರೆ ಕಂಪನಿ, ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ʼ ನ ಲೆಕ್ಕಪರಿಶೋಧನೆ ಪ್ರಕ್ರಿಯೆ ಬಾಕಿ ಉಳಿದಿದೆ ಎಂದು ಹೇಳಿದ್ದರೆ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ, ಕರ್ನಾಟಕ ರಾಜ್ಯ ನಿರ್ಮಾಣ ನಿಗಮ ಆಡಿಟ್ ಅಂತಿಮ ವಾಗಿಲ್ಲ. ಇನ್ನುಳಿದಂತೆ ಮೈಸೂರು ಕಾಗದ ಕಾರ್ಖಾನೆ ಹಾಗೂ ಅರಣ್ಯ ಕೈಗಾರಿಕಾ ನಿಗಮ ಗಳ ನಷ್ಟದ ಅಂಕಿ-ಅಂಶದ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ ಎನ್ನುವ ಉತ್ತರವನ್ನು ಸರಕಾರ ನೀಡಿದೆ.
![]()
128 ಸರಕಾರಿ ಉದ್ದಿಮೆಗಳ ಉದ್ದೇಶ ಸ್ವಾತಂತ್ರ್ಯವಾಗಿ ಕಾರ್ಯನಿರ್ವಹಿಸಬೇಕು ಎನ್ನುವು ದಾಗಿದೆ. ಆದರೆ ಬಹುತೇಕ ನಿಗಮ ಮಂಡಳಿಗಳು ಸರಕಾರದ ಅನುದಾನದಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ನಷ್ಟದಲ್ಲಿ ರುವ ಸರಕಾರಿ ಉದ್ದಿಮೆಗಳ ವಿಷಯದಲ್ಲಿ ಕೇಂದ್ರ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ರಾಜ್ಯ ಸರಕಾರವೂ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದರೆ ಮುಂದೊಂದು ದಿನ ಬಿಳಿಯಾನೆಗಳಾಗಿ ಸಿಬ್ಬಂದಿಗಳಿಗೆ ವೇತನ ನೀಡಲು ಪರದಾಡುವ ಸ್ಥಿತಿ ಎದುರಾಗಲಿದೆ.
- ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯ