ಶರಣ ಬಸಪ್ಪಾ.ಎನ್ ಕಾಂಬಳೆ ಇಂಡಿ
30 ಕೋಟಿ ರು.ವೆಚ್ಚದಲ್ಲಿ ನಿರ್ಮಾಣ
ಮೂರು ವರ್ಷ ಗತಿಸಿದರೂ ಆರಂಭವಾಗಿಲ್ಲ
ನಗರದ ಹೃದಯ ಭಾಗದಲ್ಲಿರುವ ನಿರ್ಮಿಸಿರುವ ಶ್ರೀಸಿದ್ದೇಶ್ವರ ಮೆಗಾ ಮಾರುಕಟ್ಟೆ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಂಡು ಮೂರು ವರ್ಷ ಗತಿಸಿದರೂ ಪ್ರಾರಂಭ ವಾಗದೆ ಗೃಹಣ ಹಿಡಿದಂತಾಗಿದೆ.
ಹೌದು..!. ಒಟ್ಟು 1.6 ಎಕರೆ ಜಾಗದಲ್ಲಿ ನಿಯೋಜಿತ ಮೆಗಾ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ ಕೆಳ ಅಂತಸ್ತಿನಲ್ಲಿ ಕಾರ್ ಪಾರ್ಕಿಂಗ್. 104 ಮಳಿಗೆಗಳಿದ್ದು. ಮೊದಲ ಮಹಡಿ ಯಲ್ಲಿ 112 ಅಂಗಡಿಗಳು, ಎರಡನೆ ಮಹಡಿ ಬೆಸ್ ಗಾತ್ರ 28 ಅಂಗಡಿಗಳು ಹೀಗೆ ಒಟ್ಟು 244 ಅಂಗಡಿಗಳು ಮುಂಭಾಗ ಪ್ರಾಂಗಣ ಸರಕು ಸಾಕಾಣಿಕೆಗೆ ಗುಣಮಟ್ಟದ ರಸ್ತೆಗಳು ಹೀಗೆ ಅಂದಾಜು 30 ಕೋಟಿ, ವೆಚ್ಚದಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ಇನ್ನೂ ಕೆಲ ಮಳಿಗೆಗಳು ಲೀಲಾವು ಮಾಡಿದಾಗ 3 -4 ಲಕ್ಷ ಡಿಫಾಸಿಟ್ ಕಟ್ಟಿ ವ್ಯಾಪಾರಸ್ಥರು ಮಳಿಗೆಗಳು ಹಿಡಿದಿದ್ದಾರೆ.
ಕಳೆದ 3 ವರ್ಷಗಳಿಂದ 4 ರಿಂದ 3 ಲಕ್ಷ ಡಿಫಾಜಿಟ್, 5 ನೂರು ರೂ ಚಲನ್, 50 ಸಾವಿರ ಡಿ.ಡಿ ತುಂಬಿದ ಬಡ ವ್ಯಾಪಾರಸ್ಥರು ಮಾರುಕಟ್ಟೆ ಪ್ರಾರಂಭವಾಗದೆ ಸುಖಾ ಸುಮ್ಮನೆ ಕಾಲ ಕಳೆಯುತ್ತಿರುವುದರಿಂದ್ದ ವ್ಯಾಪಾರ ವೈವಾಟು ಮಾಡಲು ಮಳಿಗೆ ಕೊಡುತ್ತಿಲ್ಲ ಈ ಕಡೆ ನಾವು ಕೊಟ್ಟ ಡಿಫಾಜಿಟ್,ಡಿ.ಡಿ, ಚಲನ್ ಹಣ ಕೂಡಾ ಮರಳಿ ನೀಡುತ್ತಿಲ್ಲ ಎಂದು ವ್ಯಾಪಾರಸ್ಥರು ನಗರಸಭೆ ನಡೆಗೆ ಬೇಸತ್ತು ಹೋಗಿದ್ದಾರೆ.
ಶಾಸಕ ಯಶವಂತರಾಯಗೌಡ ಪಾಟೀಲ ಅವರು ಅಭಿವೃದ್ದಿಯ ದೂರದೃಷ್ಟಿಯಿಂದ ಪುರಸಭೆ ಆದಾಯ ಹೆಚ್ಚಿಸಲು 30 ಕೋಟಿ ವೆಚ್ಚದಲ್ಲಿ ಮೆಗಾ ಮಾರುಕಟ್ಟೆ ನಿರ್ಮಿಸಿದ್ದಾರೆ ಆದರೆ ಮೆಗಾ ಮಾರುಕಟ್ಟೆ ಆರಂಭವಾಗದಿರುವುದು ಸ್ಥಳೀಯಲ್ಲಿ ನಿರಾಸೆ ಮೂಡಿಸಿದೆ.
![]()
ಮೆಗಾ ಮಾರುಕಟ್ಟೆ ಪ್ರಾರಂಭಕ್ಕೆ ಯಾವುದೇ ಅಡತಡೆ ಇರುವುದಿಲ್ಲ. ಟೆಕ್ನಿಕಲ್ ಸಮಸ್ಯೆ ಗಳು ಇದ್ದವು ಈಗ ಪರಿಹಾರವಾಗಿದೆ ಕೇವಲ ಒಂದೆರಡು ವಾರದಲ್ಲಿ ವ್ಯಾಪಾರಸ್ಥರಿಗೆ ವ್ಯಾಪಾರ ವಹಿವಾಟು ಪ್ರಾರಂಭಿಸಲು ಮಳಿಗೆ ಕೊಡಲಾಗುವುದು.
- ಶಿವಾನಂದ ಪೂಜಾರಿ, ಪೌರಾಯುಕ್ತ
![]()
ಮೆಗಾ ಮಾರುಟ್ಟೆ ಒಂದು ಮಳಿಗೆ ಡಿಫಾಸಿಟ್ 4 ಲಕ್ಷ ಇನ್ನೊಂದು 3 ಲಕ್ಷ ಮತ್ತೊಂದು 3 ಲಕ್ಷ ಹೀಗೆ 10 ಲಕ್ಷ ಡಿಫಾಸಿಟ್, 3 ಅಂಗಡಿಗಳಿಗೆ ತಲಾ 50 ಸಾವಿರ ಡಿ.ಡಿ. ಚಲನ್ 15 ನೂರು ಕಟ್ಟಿ 3 ವರ್ಷಗಳು ಗತಿಸಿದರೂ ಇನ್ನು ವ್ಯಾಪಾರ ಮಾಡಲು ಮಳಿಗೆಗಳು ಹಸ್ತಾಂತರ ಮಾಡುತ್ತಿಲ್ಲ, ನನ್ನಂತೆ ಅನೇಕ ವ್ಯಾಪಾರಸ್ಥರು ಸಾಲ- ಸೋಲ ಮಾಡಿ ಹಣ ಕಟ್ಟಿದ್ದಾರೆ. ಕೂಡಲೆ ಕ್ರಮ ಕೈಗೊಳ್ಳಿ ಅಥವಾ ಮರಳಿ ಹಣ ಹಿಂದಿರುಗಿಸಿ .
- ಬಸವರಾಜ ಕಟ್ಟಿಮನಿ, ಪುಟ್ ವೇರ್‌ಅಂಗಡಿ ಮಾಲೀಕ, ಇಂಡಿ