ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾನ್‌ ಸ್ಟಾಪ್‌ ಓಟ, ಪ್ರಯಾಣಿಕರ ಪರದಾಟ ?

ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ಸಾರಿಗೆ ಘಟಕಗಳ ಬಸ್ ಗಳು ಈ ಮಾರ್ಗದಲ್ಲಿ ಕಾರ್ಯಾ ಚರಣೆ ಮಾಡುತ್ತವೆ. ಜೊತೆಗೆ ಕೊಪ್ಪಳ ಜಿಲ್ಲೆಯ ಹೊರತಾಗಿ ಬೇರೆ ಘಟಕದ ಬಸ್ ಕೂಡ ಈ ಮಾರ್ಗ ದಲ್ಲಿ ಓಡಾಡುತ್ತವೆ. ಇದರಿಂದ ಕೊಪ್ಪಳ- ಯಲಬುರ್ಗಾ ಮಾರ್ಗದಲ್ಲಿ ಬಸ್ ಕೊರತೆ ಇಲ್ಲ. ಆದರೆ, ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ ಬಹುತೇಕ ಬಸ್ ಗಳು ನಾನ್ ಸ್ಟಾಪ್ ಬೋರ್ಡ್ ಹಾಕಿಕೊಂಡೇ ಓಡಾಡುತ್ತವೆ. ಇದರಿಂದ ಹಲಗೇರಿ, ಭಾನಾಪೂರ ಮಸಬಹಂಚಿನಾಳ ಸೇರಿ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ.

ಶರಣಬಸವ ಹುಲಿಹೈದರ, ಕೊಪ್ಪಳ

ಯಲಬುರ್ಗಾ- ಕೊಪ್ಪಳ ಮಾರ್ಗದಲ್ಲಿ ಬರೀ ನಾನ್ ಸ್ಟಾಪ್ ಬಸ್

ಗ್ರಾಮೀಣ ಭಾಗದ ಜನ, ವಿದ್ಯಾರ್ಥಿಗಳಿಗೆ ತೊಂದರೆ

ಪ್ರಯಾಣಿಕರ ಅನುಕೂಲಕ್ಕೆ ತಡೆ ರಹಿತ ಬಸ್ ಓಡಿಸಲಾಗುತ್ತದೆ. ಆದರೆ, ಯಲಬುರ್ಗಾ- ಕೊಪ್ಪಳ ಮಾರ್ಗದಲ್ಲಿ ಈ ನಾನ್ ಸ್ಟಾಪ್ ಬಸ್ ಗಳ ಸಂಖ್ಯೆಯೇ ಹೆಚ್ಚಾಗಿ ಪ್ರಯಾಣಿಕರಿಗೆ ಕಿರಿಕಿರಿ ಉಂಟಾ ಗಿದೆ. ಪ್ರಯಾಣಿಕರಿಗೆ ಅನುಕೂಲ ಆಗಬೇಕಿದ್ದ ವ್ಯವಸ್ಥೆ ಕಿರಿಕಿರಿಯಾಗಿ ಪರಿಣಮಿಸಿದೆ. ಕೊಪ್ಪಳ- ಯಲಬುರ್ಗಾ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ ಬಹುತೇಕ ಬಸ್ ಗಳು ನಾನ್ ಸ್ಟಾಪ್ ಫಲಕ ಹಾಕಿಕೊಂಡೆ ಓಡಾಡುತ್ತಿವೆ. ಇದರಿಂದ ಯಲಬುರ್ಗಾ- ಕೊಪ್ಪಳ ನಡುವಿನ ಗ್ರಾಮೀಣ ಪ್ರದೇಶದ ಪ್ರಯಾಣಿಕರು ಮತ್ತು ಕೊಪ್ಪಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.

ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ಸಾರಿಗೆ ಘಟಕಗಳ ಬಸ್ ಗಳು ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತವೆ. ಜೊತೆಗೆ ಕೊಪ್ಪಳ ಜಿಲ್ಲೆಯ ಹೊರತಾಗಿ ಬೇರೆ ಘಟಕದ ಬಸ್ ಕೂಡ ಈ ಮಾರ್ಗದಲ್ಲಿ ಓಡಾಡುತ್ತವೆ. ಇದರಿಂದ ಕೊಪ್ಪಳ- ಯಲಬುರ್ಗಾ ಮಾರ್ಗದಲ್ಲಿ ಬಸ್ ಕೊರತೆ ಇಲ್ಲ. ಆದರೆ, ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ ಬಹುತೇಕ ಬಸ್ ಗಳು ನಾನ್ ಸ್ಟಾಪ್ ಬೋರ್ಡ್ ಹಾಕಿಕೊಂಡೇ ಓಡಾಡುತ್ತವೆ. ಇದರಿಂದ ಹಲಗೇರಿ, ಭಾನಾಪೂರ ಮಸಬಹಂಚಿನಾಳ ಸೇರಿ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ.

ಇದನ್ನೂ ಓದಿ: Koppal Love Jihad case: ಹುಬ್ಬಳ್ಳಿ ಬಳಿಕ ಕೊಪ್ಪಳದಲ್ಲಿ ಲವ್ ಜಿಹಾದ್ ಪ್ರಕರಣ; ಮುಸ್ತಫಾ ಮೊಬೈಲ್‌ನಲ್ಲಿ ಹಲವು ಹಿಂದೂ ಯುವತಿಯರ ಫೋಟೊ, ವಿಡಿಯೊಗಳು!

ಪ್ರಮುಖವಾಗಿ ಕೊಪ್ಪಳ ಮತ್ತು ಯಲಬುರ್ಗಾ ಮಾರ್ಗದಿಂದ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಬರುವ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಕೇಳಿ ಬಂದಿವೆ.

ಸಿಬ್ಬಂದಿ ಕೊರತೆ ನೆಪ: ಇಲ್ಲಿನ ಸಮಸ್ಯೆ ಬಗ್ಗೆ ಈ ಮಾರ್ಗದಲ್ಲಿ ಓಡಾಡುವ ವಿದ್ಯಾರ್ಥಿಗಳುಗಳು ಮತ್ತು ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಭಾಗದಲ್ಲಿ ಕಾರ್ಯಾಚರಣೆ ಮಾಡುವ ಬಹುತೇಕ ಬಸ್ ಗಳಿಗೆ ಚಾಲಕ ಮತ್ತು ನಿರ್ವಾಹಕ ಒಬ್ಬರೇ ಇರುತ್ತಾರೆ. ಈ ಹಿನ್ನೆಲೆ ನಾನ್ ಸ್ಟಾಪ್ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. ಸಮಜಾಯಿಷಿ ನೀಡುವ ಬದಲಿಗೆ ಪ್ರಯಾಣಿಕರಿಗೆ ಆಗುವ ತೊಂದರೆ ಬಗ್ಗೆಯೂ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂಬುದು ಪ್ರಯಾಣಿಕರ ಆಗ್ರಹ.

35 ಕಿ.ಮೀ- 3 ಘಟಕ

ಕೊಪ್ಪಳ ದಿಂದ ಯಲಬುರ್ಗಾ ಕೇವಲ 35 ಕಿ.ಮೀ ಅಂತರವಿದೆ. ಈ ನಡುವೆ ಬರೋಬ್ಬರಿ 3 ಸಾರಿಗೆ ಘಟಕಗಳಿವೆ. ಈ ಮೂರು ಘಟಕಗಳು ಸೇರಿ ಸುಮಾರು 10ಕ್ಕೂ ಹೆಚ್ಚು ಬಸ್ ಕಾರ್ಯಾಚರಣೆ ಮಾಡುತ್ತಿವೆ. ಆದರೂ ಈ ಮಾರ್ಗದಲ್ಲಿ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂಬುದು ತೀರಾ ನಾಚಿಕೆಗೇಡಿನ ವಿಷಯ. ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ ಬಸ್ ಗಳ ಮಾಹಿತಿ ನೀಡುವುದಕ್ಕೂ ಕೊಪ್ಪಳ ಡಿಟಿಒ ಹಿಂದೇಟು ಹಾಕುತ್ತಿರುವುದು ಇವರ ಕಾರ್ಯ ವೈಖರಿ ಪ್ರಶ್ನಿಸು ವಂತಿದೆ.

image

ಚಾಲಕ ಮತ್ತು ನಿರ್ವಾಹಕ ಒಬ್ಬರೇ ಇದ್ದರೆ ಮಾತ್ರ ನಾನ್ ಸ್ಟಾಪ್ ಕಾರ್ಯಾಚರಣೆ ಮಾಡಲು ಅವಕಾಶ ಇದೆ. ಚಾಲಕ- ನಿರ್ವಾಹಕ ಇಬ್ಬರೂ ಇದ್ದರೆ ಹೀಗೆ ಆಗಬಾರದು. ಪ್ರಯಾಣಿಕರ ಸಮಸ್ಯೆ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಅಗತ್ಯ ಕ್ರಮ ಕೈಗೊಳ್ಳುತ್ತೇನೆ.

- ಜಿ.ಸೀನಯ್ಯ, ವಿಭಾಗೀಯ ನಿಯಂತ್ರಣಾಧಿಕಾರಿ
image

ಯಲಬುರ್ಗಾ- ಕೊಪ್ಪಳ ಮಾರ್ಗದಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಷ್ಟು ಬಸ್ ಆಪರೇಟ್ ಆಗುತ್ತಿದೆ ಎಂಬ ಬಗ್ಗೆ ನಂತರ ಮಾಹಿತಿ ನೀಡುತ್ತೇನೆ.

- ಭದ್ರಪ್ಪ, ಡಿಟಿಒ, ಕೊಪ್ಪ
image

ಯಲಬುರ್ಗಾ- ಕೊಪ್ಪಳ ಮಾರ್ಗದಲ್ಲಿ ಸಂಚರಿಸುವ ಬಹುತೇಕ ಬಸ್ ನಾನ್ ಸ್ಟಾಪ್ ಬಸ್ ಓಡಾಡುತ್ತವೆ. ಯಲಬುರ್ಗಾ- ಕುಕನೂರು- ಕೊಪ್ಪಳ ಮಾತ್ರ ನಿಲುಗಡೆ ಮಾಡುತ್ತವೆ. ಇದರಿಂದ ಭಾನಾಪೂರ, ಕೊಪ್ಪಳ ವಿಶ್ವವಿದ್ಯಾಲಯ ಸೇರಿ ವಿವಿಧ ಗ್ರಾಮಕ್ಕೆ ಹೋಗುವ ಪ್ರಯಾಣಿಕರಿಗೆ ತುಂಬಾ ಸಮಸ್ಯೆ ಆಗುತ್ತಿದೆ. ಕುಕನೂರು ಬಸ್ ನಿಲ್ದಾಣದಲ್ಲಿ ಎರಡು ಬಸ್ ನಷ್ಟು ಪ್ರಯಾಣಿಕರು ಇರುತ್ತಾರೆ. ಆದರೆ, ಮೇಲಿಂದ ಮೇಲೆ ನಾನ್ ಸ್ಟಾಪ್ ಬಸ್ ಖಾಲಿ- ಖಾಲಿಯಾಗಿ ಸಂಚಾರ ಮಾಡುತ್ತವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ.

- ಗೀತಾ ಪಾಟೀಲ್, ಉಪನ್ಯಾಸಕಿ, ಕೊಪ್ಪಳ ವಿವಿ