ಇದೀಗ ಹಸಿರು ಪಟಾಕಿಯದ್ದೇ ಸದ್ದು
ಸಾಂಪ್ರದಾಯಿಕ ಪಟಾಕಿಗಳಿಗೆ ಹೋಲಿಸಿದರೆ ಕಡಿಮೆ ವಾಯು ಮಾಲಿನ್ಯ ಮತ್ತು ಶಬ್ದಮಾಲಿನ್ಯ ವನ್ನು ಉಂಟು ಮಾಡುವ ಪರಿಸರಸ್ನೇಹಿ ಪಟಾಕಿಗಳನ್ನು ‘ಹಸಿರು ಪಟಾಕಿ’ ಎನ್ನುತ್ತೇವೆ. ಈ ಪಟಾಕಿಗಳು ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರು ತ್ತವೆ, ಹಾಗೆಯೇ ಅವುಗಳನ್ನು ಸುಟ್ಟಾಗ ಕಡಿಮೆ ಹೊಗೆ ಮತ್ತು ಕಡಿಮೆ ಶಬ್ದ ಹೊರಬರುತ್ತದೆ.

-

ನರೇಂದ್ರ ಪಾರೆಕಟ್
ವಾಯು ಮಾಲಿನ್ಯ ಕಡಿತಗೊಳಿಸುವ ನಿಟ್ಟಿನಲ್ಲೊಂದು ಪ್ರಯತ್ನ
ಹಸಿರು ಪಟಾಕಿ ಬಳಕೆಯತ್ತ ನಗರಗಳ ಒಲವು
ದೀಪಾವಳಿ ಎಂದರೆ ಅದು ದೀಪಗಳ ಹಾಗೂ ಪಟಾಕಿಗಳ ಹಬ್ಬ. ಹಾಗಾಗಿ ದೀಪಾವಳಿ ಹಬ್ಬದ ದಿನಗಳಲ್ಲಿ ದೀಪಗಳಿಗೆ ಎಷ್ಟು ಮಹತ್ವ ಇರುತ್ತದೆಯೋ, ಅಷ್ಟೇ ಮಹತ್ವವನ್ನು ಪಟಾಕಿಗಳಿಗೂ ಕೂಡ ಕೊಡುವುದು ಅದೆಷ್ಟೋ ವರ್ಷಗಳಿಂದಲೂ ಬಂದಿರುವ ರೂಢಿ. ಎಷ್ಟೇ ದುಬಾರಿಯಾದರೂ ಕೂಡ ಪಟಾಕಿಗಳನ್ನು ಸಿಡಿಸಿ ಸಂಭ್ರಮ ಪಡುವುದು ದೀಪಾವಳಿ ಹಬ್ಬದ ವಾಡಿಕೆ,
ಅದರಲ್ಲೂ ಮಕ್ಕಳಿಗೆ ಪಟಾಕಿ ಸಿಡಿಸುವುದೆಂದರೆ ತುಂಬಾನೇ ಅಚ್ಚುಮೆಚ್ಚು. ದೀಪಾವಳಿಯ ಪಟಾಕಿ ಸದ್ದು ಒಂದೆಡೆ ಅದನ್ನು ಸಿಡಿಸುವವರ ಮನಸ್ಸಿನ ಖುಷಿಗೆ ಕಾರಣವಾದರೆ, ಮತ್ತೊಂದೆಡೆ ದೀಪಾವಳಿ ಹಬ್ಬದ ವೇಳೆಗೆ ಪಟಾಕಿ ಅನಾಹುತ ಆಗುತ್ತಿರುವ ಸುದ್ದಿಯನ್ನು ನಾವು ಓದುತ್ತಿರುತ್ತೇವೆ.
ದೈಹಿಕ ಗಾಯಗಳಷ್ಟೇ ಅಲ್ಲದೇ ಪಟಾಕಿಯಲ್ಲಿ ತುಂಬಿಸಿರುವ ರಾಸಾಯನಿಕ ಮದ್ದಿನಿಂದಾಗಿ ಅವುಗಳಿಂದ ಹೊರ ಹೊಮ್ಮುವ ಹೊಗೆ ಪರಿಸರಕ್ಕೆ ಬಹಳ ಹಾನಿಯನ್ನುಂಟು ಮಾಡುತ್ತದೆ ಎಂಬುವುದು ಹೆಚ್ಚಿನವರಿಗೆ ತಿಳಿದಿರುವ ವಿಚಾರ. ಹಾಗೆಯೇ ಪಟಾಕಿ ಸಿಡಿಯುವಾಗ ಅದರಿಂದ ಬರುವ ದೊಡ್ಡ ಶಬ್ದವು, ತಾತ್ಕಾಲಿಕ ಶ್ರವಣದೋಷ ಅಂದರೆ, ಕಿವಿಗೆ ಸಂಬಂಧಪಟ್ಟ ಸಮಸ್ಯೆ ಮತ್ತು ಶಾಶ್ವತ ಕಿವುಡುತನದಂತಹ ಸಮಸ್ಯೆಗಳನ್ನೂ ಕೆಲವೊಮ್ಮೆ ಉಂಟುಮಾಡಬಲ್ಲದು.
ಇದನ್ನೂ ಓದಿ: Vishweshwar Bhat Column: ಲ್ಯಾಂಡಿಂಗ್ ಗೇರ್ ಮಹತ್ವ
ಹೀಗಾಗಿ ಇವೆಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪಟಾಕಿ ಮಾರುಕಟ್ಟೆಯಲ್ಲಿ ಹೊಸತೊಂದು ಹೆಸರು ಕೇಳಿ ಬರುತ್ತಿದೆ, ಅದೇ ಹಸಿರು ಪಟಾಕಿ. ಹಸಿರು ಪಟಾಕಿ ಎಂದರೆ ಅದರ ಬಗ್ಗೆ ತಪ್ಪಾಗಿ ಅರ್ಥೈಸುವವರೇ ಹೆಚ್ಚು, ಅದರ ಹೊರಭಾಗಕ್ಕೆ ಸುತ್ತಿದ ಹಾಳೆ ಹಸಿರು ಬಣ್ಣದ್ದು ಎಂದರ್ಥವಲ್ಲ.
ಸಾಂಪ್ರದಾಯಿಕ ಪಟಾಕಿಗಳಿಗೆ ಹೋಲಿಸಿದರೆ ಕಡಿಮೆ ವಾಯು ಮಾಲಿನ್ಯ ಮತ್ತು ಶಬ್ದಮಾಲಿನ್ಯ ವನ್ನು ಉಂಟು ಮಾಡುವ ಪರಿಸರಸ್ನೇಹಿ ಪಟಾಕಿಗಳನ್ನು ‘ಹಸಿರು ಪಟಾಕಿ’ ಎನ್ನುತ್ತೇವೆ. ಈ ಪಟಾಕಿಗಳು ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರು ತ್ತವೆ, ಹಾಗೆಯೇ ಅವುಗಳನ್ನು ಸುಟ್ಟಾಗ ಕಡಿಮೆ ಹೊಗೆ ಮತ್ತು ಕಡಿಮೆ ಶಬ್ದ ಹೊರಬರುತ್ತದೆ. ಬೇರಿಯಂ ನೈಟ್ರೇಟ್, ಸಲ್ಫರ್ ಮತ್ತು ಪೊಟ್ಯಾಸಿಯಮ್ ನೈಟ್ರೇಟ್‌ನಂತಹ ಹಾನಿಕಾರಕ ರಾಸಾಯನಿಕಗಳನ್ನು ಅಂತಹ ಪಟಾಕಿಗಳು ಹೊಂದಿರುವುದಿಲ್ಲ, ಇಲ್ಲವೇ ಅವು ಬಹಳ ಕಡಿಮೆ ಪ್ರಮಾಣದಲ್ಲಿರುತ್ತವೆ.
ಹಾಗಾಗಿ ಅವು ಇತರ ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಗಾಳಿಯಲ್ಲಿ ಹಾನಿಕಾರಕ ಅಂಶ ಗಳನ್ನು ಕಡಿಮೆ ಪ್ರಮಾಣದಲ್ಲಿ ಸೃಷ್ಟಿಸುತ್ತದೆ ಎಂಬುದಂತೂ ಒಪ್ಪಬೇಕಾದ ವಿಚಾರ. ಹಸಿರು ಪಟಾಕಿಗಳು ಉರಿಯುವಾಗ ಅವು ನೀರಿನ ಆವಿ ಅಥವಾ ಗಾಳಿಯಂತಹ ಅನಿಲಗಳನ್ನು ಬಿಡುಗಡೆ ಮಾಡುತ್ತವೆ,
ಹಾಗೆಯೇ ಅವು ಹೊರಸೂಸುವ ಶಬ್ದವು ಸೀಮಿತವಾಗಿದ್ದು, ಸರಿಸುಮಾರು 110ರಿಂದ 125 ಡೆಸಿಬಲ್‌ಗಳಾಗಿವೆ. ಆದರೆ ಸಾಂಪ್ರದಾಯಿಕ ಪಟಾಕಿಗಳು 160 ಡೆಸಿಬಲ್‌ಗಳವರೆಗಿನ ಶಬ್ದವನ್ನೂ ಉತ್ಪಾದಿಸಬಹುದು.
ಬೊಟ್ಟು ಮಾಡಬಹುದಾದ ವ್ಯತ್ಯಾಸ: ಸಾಮಾನ್ಯ ಪಟಾಕಿಗಳು ಭಾರ ಲೋಹಗಳ ಸಂಯುಕ್ತ ಗಳನ್ನು (ಸೀಸ, ಅಲ್ಯೂಮಿನಿಯಂ, ಬೇರಿಯಂ ಇತ್ಯಾದಿ) ಹೊಂದಿರುತ್ತವೆ, ಅವುಗಳನ್ನು ಸಿಡಿಸಿದರೆ ಗಾಳಿ ಮತ್ತು ಆರೋಗ್ಯ ಎರಡಕ್ಕೂ ಅತ್ಯಂತ ಹಾನಿಕಾರಕ.
ಜಿಯೋಲೈಟ್ ಮತ್ತು ಕಬ್ಬಿಣದ ಆಕ್ಸೈಡ್‌ನಂತಹ ಬಹುಕ್ರಿಯಾತ್ಮಕ ವಸ್ತುಗಳನ್ನು ಹಸಿರು ಪಟಾಕಿ ಗಳಿಗೆ ಸೇರಿಸಲಾಗುತ್ತದೆ, ಹಾಗಾಗಿ ಅದು ರಾಸಾಯನಿಕ ಅಂಶವನ್ನು ಕಡಿಮೆ ಮಾಡುವ ಮೂಲಕ ವಿಷಕಾರಿ ಅಂಶವನ್ನು ಹೊರ ಸೂಸುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ, ಹಸಿರು ಪಟಾಕಿಗಳು ಕಡಿಮೆ ಮಾಲಿನ್ಯವನ್ನು ಹರಡುವ ಕಾರಣ ಆರೋಗ್ಯಕ್ಕೂ ಬಹಳಷ್ಟು ಮಟ್ಟಿಗೆ ಸುರಕ್ಷಿತ ಆಯ್ಕೆಯೆಂದು ಪರಿಗಣಿಸಲಾಗುತ್ತದೆ.
ಕಡಿಮೆ ಮಾಲಿನ್ಯಮುಕ್ತ ಗುಣ: ಹಸಿರು ಪಟಾಕಿಗಳು ಸಂಪೂರ್ಣವಾಗಿ ಮಾಲಿನ್ಯ ಮುಕ್ತವಲ್ಲ, ಆದರೆ ಅವು ಸಾಮಾನ್ಯ ಪಟಾಕಿಗಳಿಗಿಂತ ಸುಮಾರು 30 ಪ್ರತಿಶತ ಕಡಿಮೆ ವಾಯುಮಾಲಿನ್ಯ ವನ್ನಷ್ಟೇ ಉಂಟುಮಾಡುತ್ತವೆ ಎಂಬುವುದು ಗಮನಾರ್ಹ ವಿಷಯ.
ಈ ಮಾಲಿನ್ಯವು ಮುಖ್ಯವಾಗಿ ಕಣಗಳಿಂದ ಉಂಟಾಗುತ್ತದೆ, ಅಂದರೆ ಅವು ಗಾಳಿಯಲ್ಲಿ ತೇಲು ತ್ತಿರುವ ಸಣ್ಣ ಧೂಳಿನ ಕಣಗಳಾಗಿವೆ, ಗಾತ್ರವನ್ನು ಆಧರಿಸಿ ದೇಹದೊಳಕ್ಕೆ ಸೇರಿದಾಗ ಉಸಿರಾಟದ ಸಮಸ್ಯೆಗಳನ್ನು ಹೆಚ್ಚಿಸಬಲ್ಲದು. ಹಾಗಾಗಿ ವಾತಾವರಣಗಳಲ್ಲಿ ಕಡಿಮೆ ಧೂಳಿನ ಕಣಗಳನ್ನು ಸೃಷ್ಟಿಸುವ ಹಸಿರು ಪಟಾಕಿ ಬಳಕೆ ಸ್ವಲ್ಪ ಮಟ್ಟಿಗಾದರೂ ಸುರಕ್ಷಿತ ಎಂಬುದನ್ನು ಎಲ್ಲರೂ ಮನಗಾಣುವುದು ಉತ್ತಮ. ಆ ಕಾರಣಕ್ಕಾಗಿ ಬೆಂಗಳೂರು ಮಹಾನಗರವೂ ಸೇರಿದಂತೆ ದೇಶದ ಇತರ ನಗರಗಳಾದ ದೆಹಲಿ, ಕೋಲ್ಕತ್ತಾ, ಮುಂಬೈಯಲ್ಲೂ ಕಳೆದ ವರ್ಷಗಳಿಗೆ ಹೋಲಿಸಿ ದರೆ ಸಾಮಾನ್ಯ ಪಟಾಕಿಯ ಸದ್ದಂತೂ ಕಮ್ಮಿ ಆಗಿರುವುದು ಸ್ವಲ್ಪ ಮಟ್ಟಿಗಿನ ಸಮಾಧಾನಕರ ಸಂಗತಿ.
ರಾಜ್ಯದಲ್ಲೂ ಹಸಿರು ಪಟಾಕಿಗೇ ಒತ್ತು
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಟಾಕಿ ಬಳಕೆಗೆ ಸಂಬಂಽಸಿದಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ. ಪರಿಸರಸ್ನೇಹಿ ಆಚರಣೆಗೆ ಒತ್ತು ನೀಡುವ ಸಲುವಾಗಿ, ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ಮಂಡಳಿಯು ರಾಜ್ಯದ ಜನತೆಗೆ ಈ ಬಾರಿ ಸೂಚನೆ ನೀಡಿದೆ.
ರಾಜ್ಯದಲ್ಲೂ ಹಸಿರು ಪಟಾಕಿಗೇ ಒತ್ತು
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಟಾಕಿ ಬಳಕೆಗೆ ಸಂಬಂಧಿಸಿದಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ. ಪರಿಸರಸ್ನೇಹಿ ಆಚರಣೆಗೆ ಒತ್ತು ನೀಡುವ ಸಲುವಾಗಿ, ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ಮಂಡಳಿಯು ರಾಜ್ಯದ ಜನತೆಗೆ ಈ ಬಾರಿ ಸೂಚನೆ ನೀಡಿದೆ.
ಹಸಿರು ಪಟಾಕಿಗಳ ಪತ್ತೆ ಹೇಗೆ?
ಪಟಾಕಿ ಬಾಕ್ಸ್‌ನಲ್ಲಿ ಬಾರ್‌ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅದು ಹಸಿರು ಪಟಾಕಿಯೇ, ಅಲ್ಲವೇ ಎಂದು ತಿಳಿಯಲು ಸಾಧ್ಯ.
ಪಟಾಕಿ ಬಾಕ್ಸ್ ತೆರೆದು ಅದರೊಳಗೆ ಇರುವ ಲೇಬಲ್ ಅನ್ನು ನೋಡಿ ಅದು ಯಾವ ವಸ್ತುಗಳಿಂದ (ಬ್ಯಾರಿಯಮ್ ನೈಟ್ರೇಟ್ ಮುಂತಾದವುಗಳ ಬದಲಿಗೆ ಇತರ ಸುರಕ್ಷಿತ ವಸ್ತುಗಳು) ತಯಾರಿಸ ಲ್ಪಟ್ಟಿದೆ ಎಂಬುದನ್ನು ಪರಿಶೀಲಿಸಬಹುದು. ಅದರ ಮೇಲೆ ಹಸಿರು ಪಟಾಕಿಯ ಬಗ್ಗೆ ಇತರ ಮಾಹಿತಿಯೂ ಲಭ್ಯ. ಪಟಾಕಿ ಕಂಪನಿಯ ಹೆಸರನ್ನು ಗೂಗಲ್ ನಲ್ಲಿ ಹುಡುಕಿದರೆ ಹಸಿರು ಪಟಾಕಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯ.