ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kalaburagi Transport App: ಕೈಕೊಟ್ಟ ನಮ್ಮ ಕಲಬುರಗಿ ಸಾರಿಗೆ App

ಸಾರ್ವಜನಿಕರಿಗೆ ನಿಖರ ಮಾರ್ಗಸೂಚಿಯಾಗಿದ್ದ ಈ ಹೈಟೆಕ್ ಆಪ್ ತಾಂತ್ರಿಕ ದೋಷ ಹಾಗೂ ಅಧಿಕಾರಿ ಗಳ ಬೇಜವಾಬ್ದಾರಿಯಿಂದಾಗಿ ಸ್ಥಗಿತಗೊಂಡಿದ್ದು, ಪ್ರತಿನಿತ್ಯ ಬಸ್‌ಗಳನ್ನೇ ನೆಚ್ಚಿಕೊಂಡಿರುವ ಸಾವಿ ರಾರು ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ತೀವ್ರ ತೊಂದರೆ ಅನುಭವಿಸು ವಂತಾಗಿದೆ.

ದೇವೇಂದ್ರ ಜಾಡಿ, ಕಲಬುರಗಿ

ದಾರಿ ತೋರಬೇಕಿದ್ದ ಡಿಜಿಟಲ್ ವ್ಯವಸ್ಥೆ ನಿಷ್ಕ್ರಿಯ

App ರೀಚಾರ್ಜ್ ಆಗಿಲ್ಲ, ಸರ್ವರ್‌ಡೌನ್ ಆಗಿದೆ

ನಗರದ ಸಾರ್ವಜನಿಕ ಸಾರಿಗೆಯನ್ನು ಆಧುನೀಕರಿಸಿ, ಪ್ರಯಾಣಿಕರ ಪ್ರಯಾಣವನ್ನು ಸುಗಮ ಗೊಳಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ‘ನಮ್ಮ ಕಲಬುರಗಿ ಸಾರಿಗೆ’ ಆಪ್ ಕಳೆದ ಕೆಲವು ದಿನಗಳಿಂದ ಸಂಪೂರ್ಣ ವಾಗಿ ನಿಷ್ಕ್ರಿಯಗೊಂಡಿದೆ.

ಸಾರ್ವಜನಿಕರಿಗೆ ನಿಖರ ಮಾರ್ಗಸೂಚಿಯಾಗಿದ್ದ ಈ ಹೈಟೆಕ್ ಆಪ್ ತಾಂತ್ರಿಕ ದೋಷ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸ್ಥಗಿತಗೊಂಡಿದ್ದು, ಪ್ರತಿನಿತ್ಯ ಬಸ್‌ಗಳನ್ನೇ ನೆಚ್ಚಿಕೊಂಡಿ ರುವ ಸಾವಿರಾರು ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಮಾಹಿತಿ ಸಿಗದೆ ಸಾರ್ವಜನಿಕರ ಅಲೆದಾಟ: ನಗರ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವ ಜನರಿಗೆ ಈ App ಅತ್ಯಂತ ಉಪಯುಕ್ತವಾಗಿತ್ತು. ಹತ್ತಿರದ ಬಸ್ ನಿಲ್ದಾಣ ಯಾವುದು? ತಮಗೆ ಬೇಕಾದ ಬಸ್ ಪ್ರಸ್ತುತ ಎಲ್ಲಿ ಸಂಚರಿಸುತ್ತಿದೆ (ಲೈವ್ ಲೊಕೇಶನ್)? ಬಸ್ ನಿಲ್ದಾಣಕ್ಕೆ ಬರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಹಾಗೂ ಬಸ್‌ನ ಚಾಲಕ ಮತ್ತು ನಿರ್ವಾಹಕರ ವಿವರಗಳು ಇದರಲ್ಲಿ ಲಭ್ಯ ವಾಗುತ್ತಿದ್ದವು. ಇದರಿಂದಾಗಿ ಸಾರ್ವಜನಿಕರು ಆಪ್ ನೋಡಿಯೇ ನಿಖರ ಸಮಯಕ್ಕೆ ನಿಲ್ದಾಣಕ್ಕೆ ತೆರಳುತ್ತಿದ್ದರು.

ಇದನ್ನೂ ಓದಿ:

ಆದರೆ, ಕಳೆದ ಕೆಲವು ದಿನಗಳಿಂದ ಆಪ್ ತೆರೆದರೆ ‘ಸರ್ವರ್ ಬ್ಯುಸಿ’ ಎಂಬ ಸಂದೇಶ ಮಾತ್ರ ಬರು ತ್ತಿದ್ದು, ಬಸ್‌ಗಳ ಜಿಪಿಎಸ್ ಆಧಾರಿತ ಯಾವುದೇ ಮಾಹಿತಿ ಸಿಗುತ್ತಿಲ್ಲ. ಸರಿಯಾದ ಮಾಹಿತಿ ಇಲ್ಲದ ಕಾರಣ ಪ್ರಯಾಣಿಕರು ಬಸ್‌ಗಳಿಗಾಗಿ ಗಂಟೆಗಟ್ಟಲೆ ಮುಂಚಿತವಾಗಿ ಬಂದು ಕಾಯುವ ಅಥವಾ ತಡವಾಗಿ ಬಂದು ಬಸ್ ತಪ್ಪಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರಿಂದ ಕಾಲೇಜು, ಕಚೇರಿಗಳಿಗೆ ಸಕಾಲಕ್ಕೆ ತಲುಪಲಾಗದೆ ನಿತ್ಯ ನರಕ ಯಾತನೆ ಅನುಭವಿಸು ತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದಿಂದ ನಗರದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿ ನಿಯರು ಮತ್ತು ಹಿರಿಯ ನಾಗರಿಕರು ತೀವ್ರ ಗೊಂದಲಕ್ಕೆ ಈಡಾಗಿದ್ದಾರೆ.

ಆಪ್ ಕೆಲಸ ಮಾಡದ ಹಿನ್ನೆಲೆ ಜವಾಬ್ದಾರಿಯುತ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಸಾರ್ವಜನಿಕರು ಕರೆ ಮಾಡಿ ವಿಚಾರಿಸಿದರೆ, ಅತ್ಯಂತ ಬೇಜವಾಬ್ದಾರಿಯ ಉತ್ತರಗಳು ಕೇಳಿ ಬರುತ್ತಿವೆ. ‘ಆಮೇಲೆ ಮಾಹಿತಿ ಹೇಳುತ್ತೇವೆ’ ಎಂದು ನುಣುಚಿಕೊಳ್ಳುವ ಅಧಿಕಾರಿಗಳು, ‘ಆಪ್ ಗೆ ರಿಚಾರ್ಜ್ ಆಗಿಲ್ಲ, ಅದಕ್ಕೆ ಸರ್ವರ್ ಡೌನ್ ಆಗಿದೆ’ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಹೈಟೆಕ್ ಸೌಲಭ್ಯ ನೀಡಿ, ಅದರ ಸಣ್ಣ ನಿರ್ವಹಣೆಯಲ್ಲೂ ವಿಫಲವಾಗಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಧೋರಣೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನಾದರೂ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ತಾಂತ್ರಿಕ ಸಮಸ್ಯೆಯನ್ನು ಬೇರು ಸಮೇತ ಸರಿಪಡಿಸಿ, App ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಸಾರ್ವಜನಿಕರ ಹಣ ನೀರಿನಲ್ಲಿ ಹೋಮ: ಲಕ್ಷಾಂತರ ರುಪಾಯಿ ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿ, ಸರಣಿ ಪ್ರಚಾರ ನೀಡಿ ಆರಂಭಿಸಲಾಗಿದ್ದ ಈ ಹೈಟೆಕ್ App ಈಗ ನಿರ್ವಹಣೆ ಯಿಲ್ಲದೆ ಧೂಳು ಹಿಡಿಯುತ್ತಿದೆ. ಇಂತಹ ಜನೋಪಯೋಗಿ ಡಿಜಿಟಲ್ ಯೋಜನೆಗಳನ್ನು ಸಮರ್ಪಕವಾಗಿ ಮುನ್ನಡೆಸಲು ಕೆಕೆಆರ್‌ಟಿಸಿ ಮತ್ತು ಸರಕಾರ ವಿಫಲವಾಗಿರುವುದು ಸಾರ್ವಜನಿಕ ಹಣವನ್ನು ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಸ್ಮಾರ್ಟ್ ಸಿಟಿಗೆ ತಕ್ಕುದಲ್ಲದ ನಿರ್ಲಕ್ಷ್ಯ!

ಕಲಬುರಗಿ ನಗರದ ಜನಸಾಮಾನ್ಯರಿಗೆ ಅತ್ಯಂತ ಅನುಕೂಲಕರವಾಗಿದ್ದ ‘ನಮ್ಮ ಕಲಬುರಗಿ ಸಾರಿಗೆ’ ಆಪ್ ಸ್ಥಗಿತಗೊಂಡಿರುವುದು ಕೆಕೆಆರ್‌ಟಿಸಿಯ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಯಾಗಿದೆ. ಆಪ್ ಸರ್ವರ್‌ಗೆ ಸಣ್ಣ ರೀಚಾರ್ಜ್ ಮಾಡಿಸಲೂ ನಿಗಮದ ಬಳಿ ಹಣವಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ತಂತ್ರಜ್ಞಾನ ಯುಗದಲ್ಲಿ ಇಂತಹ ನಿರ್ಲಕ್ಷ್ಯ ಸಾರ್ವಜನಿಕರನ್ನು ಸಾರಿಗೆ ಸಂಸ್ಥೆ ಯಿಂದ ದೂರ ನಿಲ್ಲುವಂತೆ ಮಾಡುತ್ತಿದೆ. ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಈ ತಾಂತ್ರಿಕ ಅಡಚಣೆಯನ್ನು ನಿವಾರಿಸಬೇಕಿದೆ.

ಅಧ್ಯಕ್ಷರಿಗೆ ಮಾಹಿತಿ ಕೊರತೆ!

‘ನಮ್ಮ ಕಲಬುರಗಿ ಸಾರಿಗೆ’ App ಸ್ಥಗಿತದ ಬಗ್ಗೆ ಕೆಕೆಆರ್‌ಟಿಸಿ ಅಧ್ಯಕ್ಷರನ್ನು ಕೇಳಿದರೆ ತಮಗೆ ಮಾಹಿತಿಯೇ ಇಲ್ಲ ಎನ್ನುತ್ತಾರೆ. ಇತ್ತ ಅಧಿಕಾರಿಗಳು ಸಾರ್ವಜನಿಕರ ಕರೆಗಳಿಗೆ ಸಿಗುತ್ತಿಲ್ಲ. ವಾಹನ ಸಿಬ್ಬಂದಿ ಬಳಿ ವಿಚಾರಿಸಿದರೆ, ‘ಮೇಲಧಿಕಾರಿಗಳೇ App ಬಂದ್ ಆಗಿದೆ ಎಂದು ಹೇಳಿದ್ದಾರೆ, ನಮಗೇನೂ ಅದರ ಬಗ್ಗೆ ತಿಳಿಯದು’ ಎಂದು ಕೈ ತೊಳೆದುಕೊಳ್ಳುತ್ತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

image

App ನಂಬಿ ಕಾಲೇಜಿಗೆ ಹೊರಡುತ್ತಿದ್ದೆವು. ಈಗ ಬಸ್ ಎಲ್ಲಿದೆ ಎಂದೇ ತಿಳಿಯುತ್ತಿಲ್ಲ. ಬಸ್ ತಪ್ಪಿದರೆ ಕ್ಲಾಸ್ ಮಿಸ್ ಆಗುತ್ತದೆ. ಬಸ್ ಯಾವಾಗ ಬರುತ್ತದೆ ಎಂಬ ಗೊಂದಲದಲ್ಲೇ ನಿಲ್ಲುವಂತಾಗಿದೆ. ಅಧಿಕಾರಿಗಳು ರೀಚಾರ್ಜ್ ಆಗಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿರುವುದು ನಾಚಿಕೆಗೇಡು. ಜನಸಾಮಾನ್ಯರ ಕಷ್ಟ ಇವರಿಗೆ ಅರ್ಥವಾಗುತ್ತಿಲ್ಲ. ತಕ್ಷಣ ಆಪ್ ಸರಿಪಡಿಸಲಿ.

- ಮಲ್ಲಿಕಾರ್ಜುನ ನಾಟಿಕರ, ಬಸ್ʼನಲ್ಲಿ ಪ್ರಯಾಣಿಸುವ ವಿದ್ಯಾರ್ಥಿ
image

ಕಾಂಗ್ರೆಸ್ ಸರಕಾರದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಒಂದು ಸಾರಿಗೆ Appಗೆ ರೀಚಾರ್ಜ್ ಮಾಡಲು ಯೋಗ್ಯತೆಯಿಲ್ಲದ ಕೆಕೆಆರ್‌ಟಿಸಿ ಅಧಿಕಾರಿಗಳು ಸಾರ್ವಜನಿಕರನ್ನು ಅಲೆ ದಾಡಿಸುತ್ತಿದ್ದಾರೆ. ಉನ್ನತ ಮಟ್ಟದ ತನಿಖೆಯಾಗಿ, ತಕ್ಷಣವೇ App ಸಾರ್ವಜನಿಕರಿಗೆ ಸಿಗುವಂತಾಗ ಬೇಕು.

- ದೇವೇಂದ್ರ ದೇಸಾಯಿ ಕಲ್ಲೂರು, ನಗರಾಧ್ಯಕ್ಷ, ಬಿಜೆಪಿ ಒಬಿಸಿ ಮೋರ್ಚಾ