ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

PM Kisan: ಕಲ್ಯಾಣ ಕರ್ನಾಟಕದ ರೈತರಿಗೆ ʼಪಿಎಂ ಕಿಸಾನ್ʼ ಆಸರೆ

2026-27ನೇ ಸಾಲಿನ 23ನೇ ಕಂತಿನಡಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಒಟ್ಟು 8,92,260 ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗೆ 178.45 ಕೋಟಿ ನಗದು ನೇರವಾಗಿ ಜಮೆಯಾಗಿದೆ. ಈ ಭಾಗದ ಬಹುತೇಕ ರೈತರು ಮಳೆ ಆಧಾರಿತ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಪ್ರಸ್ತುತ ಎಲ್‌ನಿನೋ ಪರಿಣಾಮ ದಿಂದಾಗಿ ಮುಂಗಾರು ಮಳೆ ವಿಳಂಬವಾಗಿದ್ದು, ಬಿತ್ತನೆಯ ಈ ಸಂದರ್ಭದಲ್ಲಿ ಹೆಚ್ಚುತ್ತಿರುವ ಕೃಷಿ ವೆಚ್ಚ ರೈತರಿಗೆ ಹೊರೆಯಾಗಿತ್ತು

ದೇವೇಂದ್ರ ಜಾಡಿ ಕಲಬುರಗಿ

ವೆಚ್ಚದ ಸಂಕಷ್ಟದ ನಡುವೆ ಅನ್ನದಾತನಿಗೆ ವರವಾದ ಕೇಂದ್ರದ ಆರ್ಥಿಕ ಭದ್ರತೆ

8.92 ಲಕ್ಷ ರೈತರಿಗೆ 178.45 ಕೋಟಿ ಜಮೆ

ಕೃಷಿಯನ್ನೇ ಬದುಕಿನ ಮುಖ್ಯ ಆಧಾರವಾಗಿಸಿಕೊಂಡಿರುವ ಕಲ್ಯಾಣ ಕರ್ನಾಟಕ ಭಾಗದ ಲಕ್ಷಾಂತರ ರೈತ ಕುಟುಂಬಗಳಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ (ಪಿಎಂ-ಕಿಸಾನ್) ಯೋಜನೆ ಈ ಬಾರಿಯ ಮುಂಗಾರು ವಿಳಂಬದ ಪರಿಸ್ಥಿತಿಯಲ್ಲಿ ಪ್ರಮುಖ ಆರ್ಥಿಕ ಆಸರೆಯಾಗಿ ಪರಿಣಮಿಸಿದೆ.

Pm- kisan 2 ojk

2026-27ನೇ ಸಾಲಿನ 23ನೇ ಕಂತಿನಡಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಒಟ್ಟು 8,92,260 ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗೆ 178.45 ಕೋಟಿ ನಗದು ನೇರವಾಗಿ ಜಮೆಯಾಗಿದೆ. ಈ ಭಾಗದ ಬಹುತೇಕ ರೈತರು ಮಳೆ ಆಧಾರಿತ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಪ್ರಸ್ತುತ ಎಲ್‌ನಿನೋ ಪರಿಣಾಮದಿಂದಾಗಿ ಮುಂಗಾರು ಮಳೆ ವಿಳಂಬವಾಗಿದ್ದು, ಬಿತ್ತನೆಯ ಈ ಸಂದರ್ಭದಲ್ಲಿ ಹೆಚ್ಚು ತ್ತಿರುವ ಕೃಷಿ ವೆಚ್ಚ ರೈತರಿಗೆ ಹೊರೆಯಾಗಿತ್ತು.

ಇದನ್ನೂ ಓದಿ: PM Kisan 23rd Installment: 9.44 ಕೋಟಿ ರೈತರ ಖಾತೆಗಳಿಗೆ 18,880 ಕೋಟಿ ರುಪಾಯಿ ವಿತರಿಸಿದ ಪ್ರಧಾನಿ ನರೇಂದ್ರ ಮೋದಿ

ಇಂತಹ ಸನ್ನಿವೇಶದಲ್ಲಿ ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ರೈತರ ಖಾತೆ ಗಳಿಗೆ ತಲುಪಿರುವ 2000 ನಗದು ಕಂತು, ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಖರೀದಿಗೆ ಸಕಾಲಿಕ ನೆರವಾಗಿದೆ. ಕಲ್ಯಾಣ ಕರ್ನಾಟಕ ಭಾಗ ದಲ್ಲಿ ಕಲಬುರಗಿ ಜಿಲ್ಲೆಯೇ ಅತಿ ಹೆಚ್ಚು ಫಲಾನು ಭವಿಗಳನ್ನು ಹೊಂದಿದ್ದು, ಇಲ್ಲಿನ 1.85 ಲಕ್ಷಕ್ಕೂ ಹೆಚ್ಚು ರೈತರಿಗೆ 37.17 ಕೋಟಿ ವರ್ಗಾವಣೆ ಯಾಗಿದೆ. ನಂತರದ ಸ್ಥಾನದಲ್ಲಿ ರಾಯಚೂರು ಜಿಲ್ಲೆ 31.84 ಕೋಟಿ ಹಾಗೂ ಬೀದರ್ ಜಿಲ್ಲೆ 25.35 ಕೋಟಿ ಅನುದಾನ ಪಡೆದುಕೊಂಡಿವೆ.

pm- kisan 3 ok

ಮಧ್ಯವರ್ತಿಗಳಿಲ್ಲದ ನೇರ ನಗದು ವರ್ಗಾವಣೆ: ಪಿಎಂ ಕಿಸಾನ್ ಯೋಜನೆಯ ಅತ್ಯಂತ ದೊಡ್ಡ ಸಫಲತೆಯೆಂದರೆ ಹಣದ ನೇರ ವರ್ಗಾವಣೆ (ಡಿಬಿಟಿ). ರೈತರ ಬ್ಯಾಂಕ್ ಖಾತೆಗಳಿಗೆ ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪ ಹಾಗೂ ಕಮಿಷನ್ ದಂಧೆಯಿಲ್ಲದೆ ಪೂರ್ಣ ಹಣ ತಲುಪುತ್ತಿದೆ.

2018-19ರಿಂದ 2025-26ರವರೆಗೆ ಕರ್ನಾಟಕದ ರೈತರಿಗೆ ಒಟ್ಟು 20,246.53 ಕೋಟಿ ಹಣ ವರ್ಗಾವಣೆ ಯಾಗಿದ್ದು, ಪ್ರಸ್ತುತ ಬರಗಾಲದ ಸಂದರ್ಭದಲ್ಲಿ ರೈತರಿಗೆ ಸಾಲದ ಸುಳಿಗೆ ಸಿಲುಕದಂತೆ ಇದು ನೆರವಾಗಿದೆ.

image

ಈ ಬಾರಿ ಮುಂಗಾರು ಮಳೆ ಎಲ್ ನಿನೋ ಪರಿಣಾಮದಿಂದಾಗಿ ಚೂರು ವಿಳಂಬವಾಗಿದ್ದು, ಇಂತಹ ಸಂಕಷ್ಟಗಳ ನಡುವೆಯೂ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ರೈತರಿಗೆ ಮೋದಿ ಸರಕಾರದ ಪಿಎಂ-ಕಿಸಾನ್ ಯೋಜನೆ ಆರ್ಥಿಕ ಭದ್ರತೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಲಕ್ಷಾಂತರ ರೈತ ಕುಟುಂಬಗಳ ಬದುಕಿಗೆ ಬಲ ತುಂಬುತ್ತಿರುವ ಈ ಆರ್ಥಿಕ ನೆರವಿನಿಂದ ನಮಗೆ ಬೀಜ, ಗೊಬ್ಬರ ಇತ್ಯಾದಿ ಖರೀದಿಗೆ ಅನುಕೂಲವಾಗಲಿದೆ.

-ಸೂರ್ಯಕಾಂತ ಡೆಂಗಿ, ಫಲಾನುಭವಿ, ಕಲಬುರಗಿ
image

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಬುರಗಿ ಜಿಲ್ಲೆ ಅತಿ ಹೆಚ್ಚು ಫಲಾನುಭವಿಗಳನ್ನು ಹೊಂದಿದೆ. ಜಿಲ್ಲೆಯ 1.85 ಲಕ್ಷಕ್ಕೂ ಹೆಚ್ಚು ರೈತರಿಗೆ 37.17 ಕೋಟಿ ರು.ಜಮೆಯಾಗಿದ್ದು, ಭಾಗದ ರೈತರಿಗೆ ಇದು ದೊಡ್ಡ ಆರ್ಥಿಕ ನೆರವಾಗಿದೆ. ಮುಂಗಾರು ವಿಳಂಬ, ಬೆಳೆ ನಷ್ಟ ಹಾಗೂ ಹೆಚ್ಚುತ್ತಿರುವ ಕೃಷಿ ವೆಚ್ಚದ ನಡುವೆಯೂ ಪಿಎಂ-ಕಿಸಾನ್ ಯೋಜನೆಯ 2000 ಕಂತು ರೈತರಿಗೆ ಸಮಯೋಚಿತ ನೆರವಾಗುತ್ತಿದೆ.

-ಸಮದ್ ಪಟೇಲ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಕಲಬುರಗಿ