ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪೊನ್ನಣ್ಣನಿಗೆ ರಾಜಕೀಯ ಕಾರ್ಯದರ್ಶಿ ಸ್ಥಾನ

ಕೊಡಗು ಜಿಲ್ಲೆಗೆ ಈ ಅವಧಿಯಲ್ಲಾದರೂ ಸಚಿವ ಸ್ಥಾನ ದೊರಕೀತು ಎಂಬ ನಿರೀಕ್ಷೆಯಲ್ಲಿದ್ದ ಕೊಡಗಿನ ಜನತೆಗೆ ನಿರಾಸೆ ಉಂಟು ಮಾಡಿದ್ದ ಹೈಕಮಾಂಡ್ ಇದೀಗ ಸಿ.ಎಂ. ರಾಜಕೀಯ ಕಾರ್ಯದರ್ಶಿ ಸ್ಥಾನದ ಮೂಲಕ ಕೊಡಗಿನ ಜನತೆಯ ಅಸಮಧಾನವನ್ನು ನಿವಾರಿಸುವಲ್ಲಿ ಕೊಂಚ ಮಟ್ಟಿಗಿನ ಪ್ರಯತ್ನ ಮಾಡಿದಂತಿದೆ.

ಹಿಂದಿನ 3 ವರ್ಷ ಸಿದ್ದರಾಮಯ್ಯಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಣೆ

ಅನಿಲ್ ಹೆಚ್.ಟಿ. ಮಡಿಕೇರಿ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ನೇಮಕ ವಾಗಿದ್ದು, ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ರಾಜಕೀಯ ಕಾರ್ಯದರ್ಶಿ ಹುದ್ದೆ ಸಂದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಳೆದ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಾ ನೂನು ಸಲಹೆಗಾರರಾಗಿ ಸಮರ್ಪಕ ಕಾರ್ಯ ನಿರ್ವಹಣೆಯ ಮೂಲಕ ಸರಕಾರ ಮತ್ತು ಅನೇಕ ಸಚಿವರ ಪಾಲಿಗೆ ಟ್ರಬಲ್ ಶೂಟರ್ ಎಂಬ ಹೆಗ್ಗಳಿಕೆಯನ್ನೂ ಪೊನ್ನಣ್ಣ ಸಂಪಾದಿಸಿದ್ದರು.

ಡಿ.ಕೆ. ಶಿವಕುಮಾರ್‌ ಆಡಳಿತದಲ್ಲಿ ಪೊನ್ನಣ್ಣ ಅವರಿಗೆ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್‌ ಸ್ಥಾನ ನೀಡಲಾಗಿತ್ತು. ಆದರೆ ಈ ಸ್ಥಾನದ ಬಗ್ಗೆ ಪೊನ್ನಣ್ಣ ಅವರಲ್ಲಿ ಅಸಮಧಾನವಿತ್ತು. ಡೆಪ್ಯೂಟಿ ಸ್ಪೀಕರ್‌ಹುದ್ದೆ ಸ್ವೀಕರಿಸಿ ದರೆ ರಾಜಕೀಯವಾಗಿ ಯಾವುದೇ ಕಾರ್ಯ ನಿರ್ವಹಿಸುವಂತಿಲ್ಲ. ಅದರಲ್ಲಿಯೂ ಕೊಡಗು ಜಿಲ್ಲೆ ಯಲ್ಲಿ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯ ವಾಗದಿದ್ದರೆ ಕಾಂಗ್ರೆಸ್ ಪ್ರಬಲ ಗೊಳಿಸಲು ಕಷ್ಟಸಾಧ್ಯ ಎಂಬ ಅಭಿಪ್ರಾಯ ಪೊನ್ನಣ್ಣ ಅವರದ್ದಾಗಿತ್ತು.

ಇದನ್ನೂ ಓದಿ: Kodagu school Tragedy: ಮಡಿಕೇರಿ ಶಾಲೆ ಅಗ್ನಿ ದುರಂತ; 51 ಮಕ್ಕಳನ್ನು ರಕ್ಷಿಸಿದ ಇಬ್ಬರು ಧೈರ್ಯವಂತ ಬಾಲಕರು!

ಶಿವಕುಮಾರ್ ಸಂಪುಟದಲ್ಲಿ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಖಂಡಿತಾ ದೊರಕುತ್ತದೆ ಎಂದು ಬಹುತೇಕರು ನಂಬಿದ್ದರು. ಸಿದ್ದರಾಮಯ್ಯ ಕೂಡ ಪೊನ್ನಣ್ಣ ಅವರನ್ನು ಸಚಿವರನ್ನಾಗಿಸಲು ಸಾಕಷ್ಟು ಒತ್ತಡವನ್ನು ಹೈಕಮಾಂಡ್ ಮೇಲೆ ಹೇರಿದ್ದರು. ಆದರೆ ಕೊನೇ ಗಳಿಗೆಯಲ್ಲಿ ಸಚಿವರ ಹೆಸರಿನಲ್ಲಿ ಪೊನ್ನಣ್ಣ ಹೆಸರಿರದೇ ಅನೇಕರ ಅಚ್ಚರಿಗೆ ಕಾರಣವಾಗಿತ್ತು. ಹೈಕಮಾಂಡ್ ಮಟ್ಟ ದಲ್ಲಿಯೂ ಪವರ್‌ಫುಲ್ ಆಗಿರುವ ಪೊನ್ನಣ್ಣ ಅವರನ್ನೇ ಸಚಿವ ಸ್ಥಾನದಿಂದ ಕೈಬಿಟ್ಟಿರುವುದು ಕಾಂಗ್ರೆಸ್ಸಿಗರಿಗೇ ಸಮಧಾನ ತಂದಿರಲಿಲ್ಲ.

ದೆಹಲಿಗೆ ತೆರಳಿ ಹೈಕಮಾಂಡ್ ಮುಖಂಡರ ಮನವೊಲಿಸಿ ಇದೀಗ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹುದ್ದೆಯನ್ನು ಪಡೆಯುವಲ್ಲಿ ಪೊನ್ನಣ್ಣ ಯಶಸ್ವಿಯಾಗಿದ್ದಾರೆ. ಸಚಿವ ಸಂಪುಟ ದರ್ಜೆಯ ಸ್ಥಾನ ಇದಾಗಿರುವುದರಿಂದ ಪೊನ್ನಣ್ಣ ಪಾಲಿಗೆ ಇದು ಕೂಡ ಮಹತ್ವದ ಹುದ್ದೆಯಾಗಲಿದೆ. ಕರ್ನಾಟಕ ಹಿರಿಯ ರಾಜಕಾರಣಿಯಾಗಿದ್ದ ಎ.ಕೆ. ಸುಬ್ಬಯ್ಯ ಪುತ್ರರಾಗಿರುವ ಎ.ಎಸ್. ಪೊನ್ನಣ್ಣ ಯಾವುದೇ ಹುದ್ದೆಯನ್ನು ಒಪ್ಪಿಕೊಂಡರೂ ಆ ಹುದ್ದೆಯನ್ನು ತಮ್ಮದೇ ಶೈಲಿಯಲ್ಲಿ ಸಮಥ೯ವಾಗಿ ನಿರ್ವಹಿಸಬಲ್ಲ ಚಾಕಚಕ್ಯತೆ ಹೊಂದಿದ್ದು, ಹೀಗಾಗಿ ರಾಜಕೀಯ ಕಾರ್ಯದರ್ಶಿ ಹುದ್ದೆಗೂ ವರ್ಚಸ್ಸು ತರುತ್ತಾರೆ ಎಂಬ ನಿರೀಕ್ಷೆ ಅವರ ಬೆಂಬಲಿಗರಲ್ಲಿದೆ.

ಕೊಡಗು ಜಿಲ್ಲೆಗೆ ಈ ಅವಧಿಯಲ್ಲಾದರೂ ಸಚಿವ ಸ್ಥಾನ ದೊರಕೀತು ಎಂಬ ನಿರೀಕ್ಷೆಯಲ್ಲಿದ್ದ ಕೊಡಗಿನ ಜನತೆಗೆ ನಿರಾಸೆ ಉಂಟು ಮಾಡಿದ್ದ ಹೈಕಮಾಂಡ್ ಇದೀಗ ಸಿ.ಎಂ. ರಾಜಕೀಯ ಕಾರ್ಯದರ್ಶಿ ಸ್ಥಾನದ ಮೂಲಕ ಕೊಡಗಿನ ಜನತೆಯ ಅಸಮಧಾನವನ್ನು ನಿವಾರಿಸುವಲ್ಲಿ ಕೊಂಚ ಮಟ್ಟಿಗಿನ ಪ್ರಯತ್ನ ಮಾಡಿದಂತಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪೊನ್ನಣ್ಣ ಶ್ರಮ ಅಪಾರ

ಕೊಡಗಿನಲ್ಲಿ 25 ವರ್ಷಗಳ ನಂತರ ಬಿಜೆಪಿ ಮಣಿಸಿ ಕಾಂಗ್ರೆಸ್ ಗೆಲುವಿಗೆ ಪೊನ್ನಣ್ಣ ಶ್ರಮ ಅಪಾರ ವಾಗಿತ್ತು. ವಿರಾಜಪೇಟೆ ಕ್ಷೇತ್ರದಲ್ಲಿ ಪೊನ್ನಣ್ಣ ಕಳೆದ 3 ವರ್ಷಗಳಿಂದ ಸಕ್ರಿಯರಾಗಿ ಅಭಿವೃದ್ದಿ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸ್ನೇಹ ಸಂಪಾದಿಸಿ ತಮ್ಮದೇ ಛಾಪು ಬೀರಿದ್ದಾರೆ. ಹೀಗಿರುವಾಗ ಡೆಪ್ಯೂಟಿ ಸ್ಪೀಕರ್‌ ಹುದ್ದೆ ಒಪ್ಪಿಕೊಂಡದ್ದೇ ಆದಲ್ಲಿ ಮುಂದಿನ 21 ತಿಂಗಳು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಕೆಲಸ ಮಾಡಲಾಗದೇ ಪಕ್ಷದ ಕೆಲಸ ಬದಿಗಿಟ್ಟರೆ ಕಾಂಗ್ರೆಸ್ ಸಮಸ್ಯೆ ಎದುರಿಸಬೇಕಾದೀತು ಎಂಬ ನಿಟ್ಟಿನಲ್ಲಿ ಡೆಪ್ಯೂಟಿ ಸ್ಪೀಕರ್‌ ಹುದ್ದೆಯನ್ನು ಪೊನ್ನಣ್ಣ ಒಪ್ಪಿಕೊಳ್ಳಲಿಲ್ಲ.