ವೈಭವ್ ಸಿ. ಕೊಳ್ಳಿ ಬೆಂಗಳೂರು
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೆಲ್‌ನಲ್ಲಿ ಆಹಾರ ಮತ್ತು ಕುಡಿಯುವ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಪದೇಪದೆ ಸಮಸ್ಯೆಗಳು ಎದುರಾಗುತ್ತಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಆಹಾರ ಸೇವಿಸಿದ ಬಳಿಕ ಹಲವು ವಿದ್ಯಾರ್ಥಿನಿಯರಿಗೆ ಅನಾರೋಗ್ಯವಾಗಿದೆ. ಇದಕ್ಕೆ ನೀರೇ ಕಾರಣ ಎಂಬ ಅನುಮಾನವಿದೆ ಎಂದು ವಿದ್ಯಾರ್ಥಿನಿ ಯೊಬ್ಬರು ಹೇಳಿದ್ದಾರೆ.
ನೀರಿನ ಗುಣಮಟ್ಟ ಪರೀಕ್ಷೆಗೆ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವಿವಿ ಮುಖ್ಯಸ್ಥರು ಹೇಳಿದ್ದಾರೆ. ಆದರೆ ನೀರು ಕುಡಿಯಲು ಹೆದರಿಕೆಯಾಗುತ್ತಿದೆ. ಊಟದಲ್ಲೂ ಆಗಾಗ ಹುಳಗಳು ಸಿಗುತ್ತವೆ. ಈ ಬಗ್ಗೆ ದೂರು ನೀಡಿದಾಗ ಸರಿಯಾಗುತ್ತದೆ, ಮತ್ತೆ ಅದೇ ಸ್ಥಿತಿ ಶುರು ವಾಗುತ್ತದೆ ಎಂದು ವಿದ್ಯಾರ್ಥಿಗಳು ನೊಂದು ನುಡಿದಿದ್ದಾರೆ.
500 ಮಂದಿಗೆ ಒಂದೇ ಮೆಸ್‌ನಲ್ಲಿ ಅಡುಗೆ: ವಿವಿಯ ಯುಜಿ ಮೆಸ್‌ನಲ್ಲಿ ಸುಮಾರು 500 ವಿದ್ಯಾರ್ಥಿನಿ ಯರಿಗೆ ಆಹಾರ ತಯಾರಿಸಲಾ ಗುತ್ತಿದೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರಿಗೆ ಒಂದೇ ಕಡೆ ಅಡುಗೆ ಮಾಡುವುದರಿಂದ ನಿರ್ವಹಣೆಯಲ್ಲಿ ಸಮಸ್ಯೆಯಾಗುತ್ತಿದೆ. ಮೆಸ್‌ಗಳನ್ನು ಪ್ರತ್ಯೇಕಿಸುವ ಕುರಿತು ಆಡಳಿತದ ಗಮನಕ್ಕೆ ತರಲಾಗಿದ್ದು, ಕೆಲವು ಕಾರಣಗಳಿಂದ ತಕ್ಷಣ ಪ್ರತ್ಯೇಕಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲಾಗಿದೆ ಎನ್ನಲಾಗಿದೆ. ವಿದ್ಯಾರ್ಥಿನಿಯರು ಪಾವತಿಸುವ ಮೆಸ್ ಬಿಲ್ ತಿಂಗಳಿಗೆ ಸರಾಸರಿ 2500ರಿಂದ 3000ರವರೆಗೆ ಬರುತ್ತಿದ್ದು, ಅದಕ್ಕೆ ಅನುಗುಣವಾಗಿ ಆಹಾರ ಮತ್ತು ನೀರಿನ ಗುಣಮಟ್ಟ ಖಚಿತಪಡಿಸಬೇಕು ಎಂಬುದು ವಿದ್ಯಾರ್ಥಿನಿಯರ ಬೇಡಿಕೆಯಾಗಿದೆ.
ಇದನ್ನೂ ಓದಿ: Dharwad News: ಪಿಎಚ್‌ಡಿ ವಿದ್ಯಾರ್ಥಿನಿ ಜತೆ ಅನೈತಿಕ ಸಂಬಂಧ; ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗುದೊರೈ ಅಮಾನತು
ವಿದ್ಯುತ್ ಕಡಿತವಾದಾಗ ಓದಿಗೆ ತೊಂದರೆ: ಆಹಾರ ಮತ್ತು ನೀರಿನ ಸಮಸ್ಯೆಯ ಜತೆಗೆ ವಿದ್ಯುತ್ ವ್ಯತ್ಯಯವೂ ಕೆಲವೊಮ್ಮೆ ತೊಂದರೆ ಉಂಟುಮಾ ಡುತ್ತಿದೆ ಎಂದು ವಿದ್ಯಾರ್ಥಿನಿಯರು ದೂರಿ ದ್ದಾರೆ. ಹಾಸ್ಟೆಲ್‌ನಲ್ಲಿ ಜನರೇಟರ್ ಅಥವಾ ಯುಪಿಎಸ್ ವ್ಯವಸ್ಥೆ ಇಲ್ಲದಿರುವುದರಿಂದ ಪರೀಕ್ಷಾ ಸಂದರ್ಭದಲ್ಲಿ ವಿದ್ಯುತ್ ಕಡಿತವಾದರೆ ಓದಿಗೆ ತೊಂದರೆಯಾಗುತ್ತದೆ.
ಹಾಸ್ಟೆಲ್‌ನ ದೈನಂದಿನ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದರೂ, ಆಹಾರ ತಯಾರಿಕೆಯ ವೇಳೆ ಗುಣಮಟ್ಟ ಮತ್ತು ಸ್ವಚ್ಛತೆಯ ಮೇಲ್ವಿಚಾರಣೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ನಡೆಸಬೇಕು ಎಂದು ವಿದ್ಯಾರ್ಥಿನಿ ಯರು ಆಗ್ರಹಿಸಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿನಿಯರ ದುಮ್ಮಾನ-ಬೇಡಿಕೆಗಳು
ಆಹಾರದ ಗುಣಮಟ್ಟ ಸುಧಾರಿಸಬೇಕು
ಶುದ್ಧ ಕುಡಿವ ನೀರನ್ನು ಒದಗಿಸಬೇಕು
ಅಡುಗೆ ಮಾಡುವಾಗ ಸ್ವಚ್ಛತೆ ಕಾಪಾಡಿ
ನೀರಿನಿಂದಾಗುವ ಅನಾರೋಗ್ಯ ತಡೆಯಿರಿ
ಸ್ವಚ್ಛತೆಗೆ ನಿರಂತರ ಗಮನ ಹರಿಸಬೇಕು
500 ವಿದ್ಯಾರ್ಥಿನಿಯರಿಗೆ ಒಂದೇ ಮೆಸ್‌ನಲ್ಲಿ ಅಡುಗೆಯಿಂದ ಸಮಸ್ಯೆ
ಬೆಳಗ್ಗೆ ತಿಂಡಿಯ ವೇಳೆ ದೊಡ್ಡ ಕ್ಯೂ, ತಿನ್ನಲಾಗದೇ ಪರದಾಟವಾಗುತ್ತಿದೆ
ಹಾಸ್ಟೆಲ್‌ನಲ್ಲಿ ವಿದ್ಯುತ್ ವ್ಯತ್ಯಯ ಆಗದಿರುವಂತೆ ಕ್ರಮ ವಹಿಸಬೇಕು
ಈ ಹಿಂದೆ ಹಲವು ದೂರು ನೀಡಲಾಗಿ ತ್ತು, ಅವಕ್ಕೆ ಶಾಶ್ವತ ಪರಿಹಾರ ಬೇಕು
![]()
ಮಹಿಳಾ ಹಾಸ್ಟೆಲ್‌ನಲ್ಲಿ ಆಹಾರ, ನೀರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂಬ ದೂರು ಗಳ ಹಿನ್ನೆಲೆಯಲ್ಲಿ ಪರೀಕ್ಷೆ ನಡೆದಿದೆ. ಕೆಲವರಿಗೆ ಅನಾರೋಗ್ಯವಾದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳ ಲಾಗುತ್ತಿದೆ. ಸರಿಪಡಿಸಲಾಗುತ್ತದೆ.
ನಿತ್ಯಶ್ರೀ, ವಿವಿ ಹಾಸ್ಟೆಲ್ ವಾರ್ಡನ್
![]()
ನಾವು ಪಾವತಿಸುವ ಮೆಸ್ ಬಿಲ್‌ಗೆ ತಕ್ಕಂತೆ ಉತ್ತಮ ಗುಣಮಟ್ಟದ ಆಹಾರ ಮತ್ತು ಶುದ್ಧ ಕುಡಿಯುವ ನೀರು ಸಿಗಬೇಕು. ಆಹಾರ, ನೀರಿನ ಸಮಸ್ಯೆ ಬಗೆಹರಿಸಿ. ಅನಾರೋಗ್ಯದಿಂದ ನೀರನ್ನು ಕುಡಿಯಲು ಆತಂಕವಾಗುತ್ತಿದೆ.
-ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿನಿ