ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟ ರಾಜು ಕಾಗೆ

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಲಕ್ಷ್ಮಣ ಸವದಿಗೆ ನಿರ್ದೇಶಕ ಸ್ಥಾನ ಕೈತಪ್ಪುವಂತೆ ಮಾಡಿರುವ ಜಾರಕಿಹೊಳಿ ಸಹೋ ದರರು, ಮುಂದೆ ಮಂತ್ರಿ ಸ್ಥಾನ ವಿಚಾರದಲ್ಲಿ ಶಾಸಕ ರಾಜು ಕಾಗೆ ಅಸ್ತ್ರ ಪ್ರಯೋಗಿಸಲು ರಣತಂತ್ರ ಹೆಣೆದಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ವಿನಾಯಕ ಮಠಪತಿ ಬೆಳಗಾವಿ

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಸವದಿ ಕನಸಿಗೆ ತಣ್ಣೀರು

ಸವದಿ ವಿರುದ್ದ ಕಾಗೆ ಅಸ್ತ್ರ ಪ್ರಯೋಗಿಸಲು ರಣತಂತ್ರ

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಜಾರಕಿಹೊಳಿ ಸಹೋದರರ ಕಾಟ ತಪ್ಪುತ್ತಿಲ್ಲ ಎಂಬಂತಾಗಿದೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿ ಟ್ಟಿದ್ದ ಲಕ್ಷ್ಮಣ ಸವದಿಗೆ ನಿರ್ದೇಶಕ ಸ್ಥಾನ ಕೈತಪ್ಪುವಂತೆ ಮಾಡಿರುವ ಜಾರಕಿಹೊಳಿ ಸಹೋದರರು, ಮುಂದೆ ಮಂತ್ರಿ ಸ್ಥಾನ ವಿಚಾರದಲ್ಲಿ ಶಾಸಕ ರಾಜು ಕಾಗೆ ಅಸ್ತ್ರ ಪ್ರಯೋಗಿಸಲು ರಣತಂತ್ರ ಹೆಣೆದಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಹೌದು.. ಕಳೆದ ಕೆಲ ವರ್ಷಗಳಿಂದಲೂ ಸವದಿ ಹಾಗೂ ಜಾರಕಿಹೊಳಿ ಮನೆತನಕ್ಕೆ ಅಷ್ಟಕಷ್ಟೇ ಎಂಬ ವಾತಾವರಣವಿದೆ. ಈ ನಡುವೆ ಬಿಡಿಸಿಸಿ ನಿರ್ದೇಶಕ ಸ್ಥಾನದ ಚುನಾವಣೆ ಸಂದರ್ಭದಲ್ಲಿ ರಮೇಶ್ ಕತ್ತಿ ಹಾಗೂ ಲಕ್ಷ್ಮಣ ಸವದಿಯನ್ನು ಹೊರಗಿಟ್ಟು ಜಾರಕಿಹೊಳಿ ಸಹೋದರರು ಚುನಾ ವಣೆ ಎದುರಿಸುವ ಮೂಲಕ, ಬಹುಮತ ಪಡೆದು ತಮ್ಮದೇ ಬೆಂಬಲಿತ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಷ್ಟೇ ಅಲ್ಲದೆ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಲಕ್ಷ್ಮಣ ಸವದಿ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಸ್ಥಾನ ಪಡೆಯುವ ಹುಮ್ಮಸ್ಸಿನಲ್ಲಿರುವ ಸವದಿಗೆ ಮತ್ತೊಮ್ಮೆ ಜಾರಕಿಹೊಳಿ ಸಹೋದರರು ಅಡ್ಡಗಾಲು ಹಾಕುವಲ್ಲಿ ಅನುಮಾನ ಇಲ್ಲ ಎನ್ನುತ್ತಿದೆ ಆಪ್ತ ವಲಯ.

ಇದನ್ನೂ ಓದಿ: Vinayaka Mathapathy Column: ಬದಲಾಗುವುದೇ ಮಹಾರಾಷ್ಟ್ರ ರಾಜಕೀಯ ಸಮೀಕರಣ ?

ಲಕ್ಷ್ಮಣ ಸವದಿಗೆ ಮಂತ್ರಿ ಸ್ಥಾನ ಕೊಡುವ ಸಂದರ್ಭ ಬಂದರೆ ಈ ವೇಳೆ ಹಿರಿಯ ಶಾಸಕ ರಾಜು ಕಾಗೆ ಹೆಸರು ತೇಲಿ ಬಿಡುವ ಮೂಲಕ ಮತ್ತೊಮ್ಮೆ ಸವದಿಗೆ ಟಕ್ಕರ್ ಕೊಡುವ ಪ್ರಯತ್ನ ನಡೆದಿದೆ ಎಂಬ ಸುದ್ದಿ ಜೋರಾಗಿದೆ.

ಸವದಿ ಮೇಲೆ ಸತೀಶ್ ಕೋಪಕ್ಕೆ ಕಾರಣವೇನು?: ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಪರ ಲಕ್ಷ್ಮಣ ಸವದಿ ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದರು. ಅಷ್ಟೇ ಅಲ್ಲದೆ ಅಥಣಿಯಲ್ಲಿ ಮೂಲ ಕಾಂಗ್ರೆಸ್ ಕಾರ್ಯಕರ್ತರ ಬೆನ್ನಿಗೆ ನಿಲ್ಲುವ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಅವರು ಸವದಿಗೆ ಠಕ್ಕರ್ ಕೊಡುವ ಪ್ರಯತ್ನ ಮಾಡಿದ್ದರು. ಅವಕಾಶ ಸಿಕ್ಕಾಗ ತಮ್ಮ ವಿರೋಧಿ ಪಾಳೆಯ ವನ್ನು ಹಿಮ್ಮೆಟ್ಟಿಸುವ ಕಾರ್ಯವನ್ನು ಜಾರಕಿಹೊಳಿ ಸಹೋದರರು ಮಾಡುತ್ತಿದ್ದಾರೆ.

ಕಾಗವಾಡದಲ್ಲಿ ಬದಲಾದ ರಾಜಕೀಯ ಸಮೀಕರಣ: ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆ ನಂತರದಲ್ಲಿ ಕಾಗವಾಡ ಕ್ಷೇತ್ರದ ರಾಜಕೀಯ ಸಮೀಕರಣ ಬದಲಾಗಿದೆ. ವೈರಿಗಳಂತೆ ಇದ್ದ ಶಾಸಕ ರಾಜು ಕಾಗೆ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ್ ಒಂದಾಗುವ ಮೂಲಕ ಅವಿರೋಧ ಆಯ್ಕೆಗೆ ಒಪ್ಪಿಕೊಂಡರು. ಇತ್ತ ಕಾಗೆಗೆ ಅನಾಯಾಸವಾಗಿ ಬಿಡಿಸಿಸಿ ಬ್ಯಾಂಕ್ ನಿರ್ದೇ ಶಕ ಸ್ಥಾನದ ಜತೆ ಉಪಾಧ್ಯಕ್ಷ ಸ್ಥಾನವೂ ಲಭಿಸಿದೆ. ಇಷ್ಟೆಲ್ಲಾ ಬೆಳವಣಿಗೆ ಹಿಂದೆ ಜಾರಕಿಹೊಳಿ ಸಹೋದರ ಮಾಸ್ಟರ್ ಪ್ಲ್ಯಾನ್ ಚೆನ್ನಾಗಿ ಕೆಲಸ ಮಾಡಿದೆ.

ಸವದಿ ಹಾಗೂ ಕಾಗೆ ನಡುವೆ ಮುನಿಸು?

ಶಾಸಕ ರಾಜು ಕಾಗೆ ಹಾಗೂ ಲಕ್ಷ್ಮಣ ಸವದಿ ರಾಜಕೀಯ ಹೊರತಾಗಿ ತಮ್ಮ ಸ್ನೇಹವನ್ನು ಗಟ್ಟಿ ಯಾಗಿಟ್ಟುಕೊಂಡವರು. ಆದರೆ ಕಳೆದ ಬಿಡಿಸಿಸಿ ಬ್ಯಾಂಕ್ ಚುನಾವಣೆ ನಂತರದಲ್ಲಿ ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ. ಕಾಗವಾಡ ಕ್ಷೇತ್ರದಿಂದ ಕಾಗೆ ಯನ್ನು ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಜಾರಕಿಹೊಳಿ ಸಹೋ ದರರ ಸೂಕ್ಷ್ಮ ನಡೆಯ ಕಾರಣದಿಂದ ಜೋಡೆತ್ತಿನ ನಡುವೆ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ.

ಲಕ್ಷ್ಮಣ ಸವದಿ ಬೆಂಬಲಿಗ ರಾಜು ಕಾಗೆಗೆ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನ ಕೊಡಿಸುವ ಮೂಲಕ ಸವದಿ ವಿರುದ್ಧ ಕಾಗೆ ಅಸ್ತ್ರ ಪ್ರಯೋಗಿಸುವಲ್ಲಿ ಜಾರಕಿಹೊಳಿ ಸಹೋದರರು ಯಶಸ್ವಿಯಾಗಿದ್ದಾರೆ. ಮುಂದೆ ಸಚಿವ ಸಂಪುಟ ವಿಸ್ತರಣೆ ನಡೆದರೆ ಹಿರಿತನದ ಆಧಾರದ ಮೇಲೆ ಕಾಗೆ ಹೆಸರು ಪರಿಗಣಿಸು ವಂತೆ ಸಚಿವ ಸತೀಶ್ ಹಠ ಹಡಿಯುವ ಸಾಧ್ಯತೆ ಇದೆ. ಇದರ ಹಿಂದೆ ಸವದಿಗೆ ಹುದ್ದೆ ತಪ್ಪಿಸುವ ತಂತ್ರ ಇದ್ದು, ಇದೇ ಕಾರಣಕ್ಕೆ ಜೋಡೆತ್ತಿನಂತಿದ್ದ ಸವದಿ ಹಾಗೂ ಕಾಗೆ ನಡುವೆ ಒಡಕು ಮೂಡಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಸವದಿಗೆ ಡಿಕೆ ಬೆಂಬಲ?

ಲಕ್ಷ್ಮಣ ಸವದಿ ಪ್ರಭಾವ ಏನು ಎಂಬುದನ್ನು ಕಳೆದ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಇದೇ ಕಾರಣಕ್ಕೆ ‘ಸವದಿ ಅವರನ್ನು ಮಂತ್ರಿ ಮಾಡುತ್ತೇವೆ ಕಾಯಿರಿ’ ಎಂಬ ಮಾತನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವ ಸಂಪುಟ ಬದಲಾವಣೆ ಸಂದರ್ಭ ಬಂದರೆ ತಮಗೆ ಖಂಡಿತವಾಗಿಯೂ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಸವದಿ ಇದ್ದಾರೆ. ಜಾರಕಿಹೊಳಿ ಸಹೋದರ ವಿರೋಧದ ನಡುವೆಯೂ ಸವದಿ ಮಂತ್ರಿ ಸ್ಥಾನ ಪಡೆಯುವಲ್ಲಿ ಯಶಸ್ವಿ ಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕು.