ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚರಂಡಿ ನೀರಿನಿಂದ ಆವೃತವಾಗಿರುವ ರಸ್ತೆ, ಗ್ರಾಮಸ್ಥರ ಆಕ್ರೋಶ

ಇಲ್ಲಿನ ಅಂಗನವಾಡಿ ಮಕ್ಕಳ ಜೀವನಾಡಿಯಂತಿರುವ ಈ ರಸ್ತೆಯಲ್ಲಿಯೇ ನಡೆದಾಡಿಕೊಂಡು ಹೋಗಬೇಕು ಕಾಲು ಜಾರಿ ಅನೇಕ ಮಕ್ಕಳು ಈ ರಸ್ತೆಯಲ್ಲಿ ಬಿಳುತ್ತಿದ್ದಾರೆ ಅಲ್ಲದೇ ಈ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಭಯಾನಕ ರೋಗ-ರುಜಿನಗಳ ಬೀಕ್ಷಿತಿಯಲ್ಲಿ ಜನ ತತ್ತರಿಸಿ ಹೋಗಿದ್ದು ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಾಜಾ ಸಾಕ್ಷಿಯಾಗಿದೆ

ಬಸವರಾಜ್ ಉಳ್ಳಾಗಡ್ಡಿ ಬಾದಾಮಿ

ಚಿಕ್ಕ-ಪುಟ್ಟ ಚರಂಡಿಗಳ ಮೇಲಿನ ನೀರಿನಿಂದ ಆವೃತವಾಗಿರುವ ನೀರಿನ ರಸ್ತೆಯಿಂದ ಪ್ರತಿ ನಿತ್ಯವೂ ಅಂಗನವಾಡಿ ಮಕ್ಕಳು ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ ಇನ್ನೂ ಸಾರ್ವ ಜನಿಕ ಶೌಚಾಲಯವಂತೂ ನೋಡುವ ಹಾಗಿಲ್ಲ ನಿರ್ವಹಣೆ ಅಂತು ಮೊದಲು ಇಲ್ಲ, ಗಬ್ಬೆದ್ದು ನಾರುತ್ತಿದೆ ಬಳಸಲು ಅಯೋಗ್ಯವಾಗಿರುವುದಿಂದ ಗ್ರಾಮಸ್ಥರು ಚಿಂತೆಯಲ್ಲಿ ಮುಳಗಿದ್ದಾರೆ ಇವರ ಮನವಿಗೆ ಗ್ರಾಮ ಪಂಚಾಯತಿಯವರು ಖ್ಯಾರೆ ಅನ್ನುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆ ಇರುವುದು ಸಿಎಂ ಸಿದ್ದರಾಮಯ್ಯ ಶಾಸಕರಾಗಿರುವ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ ಅಂಗನವಾಡಿ ಸಮುಚ್ಛಯ ಪಕ್ಕದ ರಸ್ತೆಯ ದುಸ್ಥಿತಿ ಇದು, ಇಲ್ಲಿನ ಅಂಗನವಾಡಿ ಮಕ್ಕಳ ಜೀವನಾಡಿಯಂತಿರುವ ಈ ರಸ್ತೆಯಲ್ಲಿಯೇ ನಡೆದಾಡಿಕೊಂಡು ಹೋಗಬೇಕು ಕಾಲು ಜಾರಿ ಅನೇಕ ಮಕ್ಕಳು ಈ ರಸ್ತೆಯಲ್ಲಿ ಬಿಳುತ್ತಿದ್ದಾರೆ ಅಲ್ಲದೇ ಈ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಭಯಾನಕ ರೋಗ-ರುಜಿನಗಳ ಬೀಕ್ಷಿತಿಯಲ್ಲಿ ಜನ ತತ್ತರಿಸಿ ಹೋಗಿದ್ದು ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಾಜಾ ಸಾಕ್ಷಿಯಾಗಿದೆ.

ಇದನ್ನೂ ಓದಿ: Bagalakote news: ಜೀವ ನೀಡಿದ ರೋಡ್‌ ಹಂಪ್‌! ರಸ್ತೆ ಉಬ್ಬಿನ ಮೇಲೆ ವಾಹನ ಚಲಿಸಿದಾಗ ಎದ್ದು ಕುಳಿತ ಮೃತ ವ್ಯಕ್ತಿ!

ರೋಗಗಳಿಗೆ ಈ ರಸ್ತೆ ರಹದಾರಿ: ಗಬ್ಬೆದ್ದು ನಾರುತ್ತಿರುವ ಶೌಚಾಲಯ, ಕೊಳಕು ನೀರಿನಿಂದ ತುಟುಕುತ್ತಿರುವ ಆ ರಸ್ತೆಯಲ್ಲಿ ನಡೆಯುತ್ತಿದ್ದರೆ ನರಕದಲ್ಲಿ ನಡೆದಾಡುವ ಅನುಭವವಾಗುತ್ತದೆ, ಇದು ಒಂದಡೆಯಾದರೆ ರಸ್ತೆಯಲ್ಲಿ ಕೊಲಕು ನೀರಿನಿಂದ ತುಂಬಿ ಕೊಂಡು ಶ್ವಾಸಕ್ಕೆ ಅಯೋಗ್ಯ ವಾತಾವರಣ ಸೃಷ್ಠಿಯಾಗಿದ್ದು ಡೆಂಘೀ, ಮಲೇರಿಯಾ, ಚಿಕುನ್ ಗುನ್ಯಾ ಮತ್ತಿತರ ರೋಗಕ್ಕೆ ತುತ್ತಾಗಲಿದ್ದೇವೆ ಎಂದು ಅಲ್ಲಿಯ ನಿವಾಸಿಗಳು, ಮಕ್ಕಳು ಗೋಳು ತೊಡಿಕೊಂಡಿದ್ದಾರೆ.

ನಿರ್ವಹಣೆ ಇಲ್ಲದ ಶೌಚಾಲಯಗಳು: ನೀಲಗುಂದ ಗ್ರಾಮದ ಸಾರ್ವಜನಿಕ ಶೌಚಾಲಯ ಗಳು ಬೇಕಾಬಿಟ್ಟಿಯಾಗಿ ಕಟ್ಟಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿ ಕಟ್ಟಿ ಮೂಲ ಸೌಕರ್ಯವಿಲ್ಲದೆ ಹಾಳಾಗಿದ್ದು ಅಲ್ಲಿ ಶೌಚಕ್ಕೆ ಹೋಗಲಾರದಸ್ಥಿಯಿಲ್ಲಿವೆ, ಗ್ರಾ.ಪಣ ಸದಸ್ಯರಾಗಲಿ, ಅಧ್ಯಕ್ಷರಾಗಿ, ಅಧಿಕಾರಿ ವರ್ಗದವರಾಗಿ ಈ ಬಗ್ಗೆ ಲಕ್ಷ್ಯ ವಹಿಸದಿರುವುದು ಖೇದಕರ ಸಂಗತಿಯಾಗಿದೆ.

ಶೀಘ್ರ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಆಗ್ರಹ

ಈ ರಸ್ತೆಯಲ್ಲಿ ಮಕ್ಕಳು ಜನರು ನಿತ್ಯ ಸಂಚರಿಸುತ್ತಾರೆ ರಸ್ತೆಯ ಮೇಲೆ ಕೊಳಕು ನೀರು ಹರಿಯುತ್ತಿರುವುದರಿಂದ ಈ ರಸ್ತೆಯನ್ನು ದಾಟುವಾಗ ಮಕ್ಕಳು, ಮಹಿಳೆಯರು, ವೃದ್ದರು, ವಿಶೇಷ ಚೇತನರು ನೀರಿನಲ್ಲಿ ಬಿದ್ದಿದ್ದಾರೆ, ಈ ರಸ್ತೆಯಲ್ಲಿ ಹೋಗುವುದು ಎಂದರೆ ನರಕಕ್ಕೆ ಹೋದಂತಾಗಿತ್ತಿದೆ, ಶೀಘ್ರವಾಗಿ ಗ್ರಾ.ಪಂ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಬೇಕ್ಥೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.