ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Safari struggle: ಐಎಫ್‌ಎಸ್‌- ಖಂಡ್ರೆ ಕಿತ್ತಾಟದಲ್ಲಿ ಸಫಾರಿ ಸ್ಥಗಿತ ?

ಬಂಡೀಪುರ, ನಾಗರಹೊಳೆ ಸಫಾರಿ ನಿರ್ಬಂಧ ಸದ್ಯದ ಹಾಟ್ ಟಾಪಿಕ್. ಸಫಾರಿಯಿಂದ 40 ಕಿಮೀ ದೂರದ ಪ್ರದೇಶದಲ್ಲಿನ ಹುಲಿ ದಾಳಿ ಮುಂದಿಟ್ಟುಕೊಂಡು ಸಫಾರಿ ನಿರ್ಬಂಧಿಸಿರುವುದಕ್ಕೆ ಪ್ರವಾಸಿ ಕ್ಷೇತ್ರದಲ್ಲಿ ತೀವ್ರ ಆಕ್ಷೇಪ ವ್ಯಕ್ತ ವಾಗುತ್ತದೆಯಾದರೂ, ನಿರ್ಬಂಧಕ್ಕೆ ಸಚಿವರು ಮತ್ತು ಐಎಫ್‌ಎಸ್ ಅಧಿಕಾರಿ ಗಳ ನಡುವಣ ತಿಕ್ಕಾಟ ಕಾರಣ ಎನ್ನಲಾಗುತ್ತಿದೆ.

ರಂಜಿತ್ ಎಚ್. ಅಶ್ವತ್ಥ ಬೆಂಗಳೂರು

ಅರಣ್ಯಸಚಿವ ಖಂಡ್ರೆ ಖುದ್ದು ಆದೇಶದ ಮೇರೆಗೆ ಸಫಾರಿ ರದ್ದು

ಕಮಿಷನ್ ಆಸೆಗೆ ಬಿದ್ದ ಅಧಿಕಾರಿಗಳಿಗೆ ಪಾಠ ಕಲಿಸಲು ಕ್ರಮ

ವೈಜ್ಞಾನಿಕ ಕಾರಣಗಳಿಲ್ಲದೆ ಸಫಾರಿ ನಿರ್ಬಂಧಿಸುವ ಅರಣ್ಯ ಇಲಾಖೆಯ ಕ್ರಮದ ಹಿಂದೆ, ಸಚಿವ ಈಶ್ವರ್ ಖಂಡೆ ಹಾಗೂ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟ ಕೆಲಸ ಮಾಡಿದೆ ಎನ್ನುವ ಮಾತುಗಳು ಇಲಾಖೆಯಲ್ಲಿ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಐಎಫ್‌ʼಎಸ್-ಸಚಿವರ ಕಿತ್ತಾಟದಲ್ಲಿ ಸಫಾರಿ ಸ್ಥಗಿತ: ಬಂಡೀಪುರ, ನಾಗರಹೊಳೆ ಸಫಾರಿ ನಿರ್ಬಂಧ ಸದ್ಯದ ಹಾಟ್ ಟಾಪಿಕ್. ಸಫಾರಿಯಿಂದ 40 ಕಿಮೀ ದೂರದ ಪ್ರದೇಶದಲ್ಲಿನ ಹುಲಿ ದಾಳಿ ಮುಂದಿಟ್ಟುಕೊಂಡು ಸಫಾರಿ ನಿರ್ಬಂಧಿಸಿರುವುದಕ್ಕೆ ಪ್ರವಾಸಿ ಕ್ಷೇತ್ರದಲ್ಲಿ ತೀವ್ರ ಆಕ್ಷೇಪ ವ್ಯಕ್ತ ವಾಗುತ್ತದೆಯಾದರೂ, ನಿರ್ಬಂಧಕ್ಕೆ ಸಚಿವರು ಮತ್ತು ಐಎಫ್‌ಎಸ್ ಅಧಿಕಾರಿ ಗಳ ನಡುವಣ ತಿಕ್ಕಾಟ ಕಾರಣ ಎನ್ನಲಾಗುತ್ತಿದೆ.

ಹುಲಿ ದಾಳಿಯನ್ನು ಗಂಭೀರವಾಗಿ ಪರಿಗಣಿಸದೆ ಸಫಾರಿಯ ದುಡ್ಡನ್ನು ಖರ್ಚು ಮಾಡುವುದು ಹೇಗೆ ಎನ್ನುವುದರಲ್ಲಿ ಮುಳುಗಿದ್ದ ಅಧಿಕಾರಿಗಳಿಗೆ ಪಾಠ ಕಲಿಸಲು ಸಫಾರಿ ನಿರ್ಬಂಧಿಸುವ ತೀರ್ಮಾನಕೆ ಸಚಿವ ಈಶ್ವರ್ ಖಂಡ್ರೆ ಅವರು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಬಂಡೀಪುರ, ನಾಗರಹೊಳೆ ಭಾಗದ ಅಧಿಕಾರಿಗಳಿಗೆ ಕಾಮಧೇನುವಾಗಿರುವ ಫೌಂಡೇಶನ್ ಖಾತೆಯ ಹಣಕ್ಕೆ ಕೊಕ್ಕೆ ಹಾಕಲು ಈಶ್ವರ್ ಖಂಡ್ರೆ ಮುಂದಾಗಿದ್ದಾರೆ.

ಬಂಡೀಪುರ, ನಾಗರಹೊಳೆಯಲ್ಲಿ ನಡೆಸುವ ಸಫಾರಿಯಿಂದ ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೇ ಅರಣ್ಯ ಇಲಾಖೆಗೂ ಇಂತಿಷ್ಟು ಹಣ ಬರುತ್ತದೆ. ಈ ಹಣವನ್ನು ಫೌಂಡೇಶನ್ ಖಾತೆಗೆ ಹಾಕಲಾಗು ತ್ತಿದೆ. ಫೌಂಡೇಶನ್‌ನಲ್ಲಿರುವ ಈ ಹಣವನ್ನು ಅರಣ್ಯ ಭಾಗದಲ್ಲಿ ಅಗತ್ಯವಿರುವ ಅಭಿವೃದ್ದಿ, ಕಳೆ ತೆರವು, ವನ್ಯಜೀವಿಗಳ ದಾಳಿಯಿಂದ ಮೃತ ಪಟ್ಟವರ ಕುಟುಂಬಗಳಿಗೆ ಕೊಳ್ಳಲಾಗುತ್ತದೆ.

ಬಂಡೀಪುರ ಟೈಗರ್ ಪ್ರತಿಷ್ಠಾನದ ಖಾತೆಯಲ್ಲಿದ್ದ 40 ಕೋಟಿ ರು.ಗಳನ್ನು ಹೇಗೆ ಖರ್ಚು ಮಾಡಬೇಕೆ ನ್ನುವ ವಿಷಯದಲ್ಲಿ ಆರಂಭವಾದ ತಿಕ್ಕಾಟ, ಧಾವಂತದಿಂದ ಅರಣ್ಯದಲ್ಲಿರುವ ಪೊದೆಗಳನ್ನೇ ನಿರ್ಮೂಲನೆ ಮಾಡಲಾಗಿದೆ. ಇದರಿಂದಾಗಿ, ಹುಲಿಗಳ ಅಡಗುತಾಣಗಳು ಕಾಣೆಯಾಗಿ, ಹುಲಿ ದಾಳಿ ಹೆಚ್ಚಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಪೊದೆಗಳ ನಿರ್ಮೂಲನೆ ಏಕೆ?: ಬಂಡೀಪುರ ಭಾಗದಲ್ಲಿ ಲಾಂಟೆನಾ ಹಾಗೂ ಸೆನ್ನಾ ಎನ್ನುವ ಕಳೆ ಸಸಿಗಳ ಸಮಸೆ ಹೆಚ್ಚಾಗಿದೆ. ಕೆಲ ತಿಂಗಳ ಹಿಂದೆ ಅರಣ್ಯ ಇಲಾಖೆಯ ಬದಲಿಗೆ ಖಾಸಗಿ ರೆಸಾರ್ಟ್ ಮಾಲೀಕರೇ ಈ ಕಳೆ ಬೆಳೆಯನ್ನು ನಿರ್ಮೂಲನೆ ಮಾಡಲು ಮುಂದಾದರು. ಆದರೆ ಖಾಸಗಿಯವರು ನಿರ್ಮೂಲನೆ ಮಾಡುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇರುವ ಇಡಿಗಂಟನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಸ್ಥಳೀಯ ಆರೇಳು ಆರ್‌ಎಫ್ಒಗಳು ಗುಂಪು ಮಾಡಿ ಕೊಂಡು ನುಗು ಅಭಯಾರಣ್ಯ ಭಾಗದಲ್ಲಿ ಕಳೆ ತೆಗೆಸಲು 1.5 ಕೋಟಿ ರು.ಗೆ ಟೆಂಡರನ್ನು‌ ತಮಗೆ ಬೇಕಾದವರಿಗೆ ಕೊಡಿಸುವಲ್ಲಿ ಯಶಸ್ವಿಯಾದರು. ಆದರೆ ಒಂದುವರೆ ಕೋಟಿಯಲ್ಲಿ 30-40 ಲಕ್ಷ ರುಪಾಯಿ ಮಾತ್ರ ಖರ್ಚು ಮಾಡಿ ಇನ್ನುಳಿದ ಹಣವನ್ನು ಅಧಿಕಾರಗಳೊಳಗೆ ಹಂಚಿಕೊಳ್ಳಲು ಆಲೋಚಿಸಲಾಗಿತ್ತು.

ಕಡಿಮೆ ಮೊತ್ತದಲ್ಲಿ ಕಾಮಗಾರಿ ಮುಗಿಸುವ ಧಾವಂತದಲ್ಲಿ ಹುಲಿ, ಜಿಂಕೆ ಮರೆಯಾಗಲು ಇರುವ ಪೊದೆಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಇದರಿಂದ ಹುಲಿಗಳಿಗೆ ಮಾಡಿವೆ ಎನ್ನುವ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ.

ಈ ಅನುದಾನ ಬಳಕೆ ವಿಷಯದಲ್ಲಿ ಆರ್‌ಎಫ್ಒ ಹಾಗೂ ಎಸಿಎಫ್ ನಡುವೆ ತಿಕ್ಕಾಟ ನಡೆದು, ಎಸಿಎಫ್ʼನ ವರ್ಗಾವಣೆ ಮಾಡಿಸುವಲ್ಲಿಯೂ ಆರ್‌ಎಫ್ಒ ಅಧಿಕಾರಿಗಳು ಯಶಸ್ವಿಯಾಗಿದ್ದರು. ಆದರೆ ಎಸಿಎಫ್ ನ್ಯಾಯಾಲಯದ ಮೆಟ್ಟಿಲೇರಿ ವರ್ಗಾವಣೆ ರದ್ದುಪಡಿಸಿಕೊಂಡು ವಾಪಸಾದರು. ಈ ವೇಳೆ ಎಸಿಎಫ್ ಹಾಗೂ ಆರ್‌ಎಫ್ಸಿ ನಡುವಿನ ತಿಕ್ಕಾಟದಿಂದ ಅರಣ್ಯ ಪ್ರದೇಶದಲ್ಲಾಗುತ್ತಿರುವ ಈ ಸಮಸ್ಯೆೆಗಳಿಗೆ ಯಾರೊಬ್ಬರೂ ಗಮನ ಹರಿಸಿಲ್ಲ. ಆದರೆ ಇಂದಿನ ಈ ಸಮಸ್ಯೆಗೆ ಕಮಿಷನ್ ಹಣವೇ ಕಾರಣ ಎನ್ನುವುದು ಕೆಳಹಂತದ ಅಧಿಕಾರಿಗಳ ಅಭಿಪಾಯವಾಗಿದೆ.

ಮೂಲಗಳ ಪ್ರಕಾರ, ಬಂಡೀಪುರ ಭಾಗದಲ್ಲಿ ಹುಲಿಗಳು ಮನುಷ್ಯರ ಮೇಲೆ ನಿರಂತರ ದಾಳಿ ನಡೆಸಿರುವುದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಎಲ್ಲ ಪ್ರಕರಣಗಳಿಗೆ ಕಾರಣ ಒಂದೇ ಎನ್ನುವುದನ್ನು ನೋಡದೇ, ಪ್ರತಿ ಪ್ರಕರಣವನ್ನು ಪ್ರತ್ಯೇಕ ಪ್ರಕರಣವೆಂದು ತೋರಿಸಿ, ಪರಿಹಾರ ನೀಡಿ ಕೈತೊಳೆದುಕೊಳ್ಳುವ ಕೆಲಸವನ್ನು ಅಧಿಕಾರಿಗಳು ಮಾಡಿದರು. ಈ ದಾಳಿಯನ್ನು ನಿಯಂತ್ರಿಸುವ ಬದಲು, ಸಫಾರಿಯಿಂದ ಬರುವ ಹಣವನ್ನು ಖರ್ಚು ಮಾಡುವುದು ಹೇಗೆ ಎನ್ನುವುದರಲ್ಲಿಯೇ ಅಧಿಕಾರಿಗಳು ಮುಳುಗಿದ್ದರು.

ಈ ಸೂಕ್ಷ್ಮ ಅರಿತ ಸಚಿವ ಈಶ್ವರ್ ಖಂಡೆ ಸಫಾರಿಯನೇ ನಿರ್ಬಂಧಿಸುವ ಆದೇಶ ಹೊರಡಿಸುವ ಮೂಲಕ ಟೈಗರ್ ಪ್ರತಿಷ್ಠಾನಕ್ಕೆ ಬರುವ ಬಹುದೊಡ್ಡ ಅನುದಾನಕೆ ಕೊಕ್ಕೆ ಹಾಕಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಅಧಿಕಾರಿ-ಮಂತ್ರಿ ತಿಕ್ಕಾಟ, ಪ್ರವಾಸಿಗರಿಗೆ ಪೀಕಲಾಟ

ನಿರ್ಬಂಧ ವಾಪಸ್‌ಗೆ ದಾರಿಯ ಹುಡುಕಾಟಈಶ್ವರ್ ಖಂಡೆ ಅವರು ಅರಣ್ಯ ಇಲಾಖೆ ಅಧಿಕಾರ ವಹಿಸಿಕೊಂಡಾಗಿನಿಂದ ನಾನಾ ಕಾರಣಗಳಿಗೆ ಮೂವರು ಐಎಫ್ಎಸ್ ಅಧಿಕಾರಿಗಳನ್ನು ಅಮಾ ನತು ಮಾಡಿದ್ದರು. ಈ ಬಗ್ಗೆ ಕೆಲವು ಅಧಿಕಾರಿಗಳಲ್ಲಿ ಬೇಸರವೂ ಇತ್ತು. ತಿರುಗೇಟು ನೀಡಲು ಸಮಯ ಕಾಯುತ್ತಿದ್ದ ಅಧಿಕಾರಿಗಳು, ಹುಲಿ ದಾಳಿಯಾದ ಪ್ರದೇಶಗಳಿಗೆ ಖಂಡೆ ಅವರನ್ನು ಕರೆದುಕೊಂಡು ಹೋದರು. ಈ ವೇಳೆ ಜನರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಗಲಾಟೆ ಶುರು ಮಾಡಿದರು. ಜನರು ತಿರುಗಿಬಿದ್ದಿರುವುದಕೆ ಕಾರಣವೇನು? ಜನರಿಂದ ತಮ್ಮನ್ನು ಟೀಕಿಸ ಬೇಕೆಂಬ ಕಾರಣಕ್ಕೆ ಕರೆದುಕೊಂಡು ಬಂದಿದ್ದಾರೆ ಎನ್ನುವುದು ಅರಿವಿಗೆ ಬರುತ್ತಿದ್ದಂತೆ, ಅಧಿಕಾರಿ ಗಳಿಗೆ ಪಾಠ ಕಲಿಸಲು ಸಚಿವರು ಸಫಾರಿ ನಿರ್ಬಂಧಿಸಲು ಮುಂದಾದರು ಎನ್ನಲಾಗಿದೆ.

ನಿರ್ಬಂಧ ವಾಪಸ್‌ಗೆ ದಾರಿಯ ಹುಡುಕಾಟ

ಅಧಿಕಾರಿಗಳ ಮೇಲಿನ ಸಿಟ್ಟಿಗೆ, ಎರಡು ಸಫಾರಿಗಳನ್ನು ನಿಲ್ಲಿಸುವ ಆದೇಶವನ್ನು ಈಶ್ವರ್ ಖಂಡೆ ಆದೇಶ ಹೊರಡಿಸಿದ್ದರು. ಆದರೆ ಇದರ ಪರಿಣಾಮ ಈ ಪ್ರಮಾಣದಗುತ್ತದೆ, ಪ್ರವಾಸೋದ್ಯಮಕ್ಕೆ ಈ ಪ್ರಮಾಣದ ನಷ್ಟವಾಗುತ್ತದೆ ಎನ್ನುವ ಕಲ್ಪನೆಯೂ ಅವರಿಗೆ ಇರಲಿಲ್ಲ. ಸಫಾರಿಗೂ, ಹುಲಿ ದಾಳಿಗೂ ಸಂಬಂಧವಿಲ್ಲದಿದ್ದರೂ ನಿರ್ಬಂಧಿಸುವ ತೀರ್ಮಾನವನ್ನು ಸಚಿವ ಖಂಡೆ ಕೈಗೊಂಡಿದ್ದ ರಿಂದ ಸರಕಾರದ ಮಟ್ಟದಲ್ಲಿ ತೀವ್ರ ಅಕ್ಷೇಪ ವ್ಯಕ್ತವಾಗಿತ್ತು. ಇದೀಗ ಸಫಾರಿ ನಿರ್ಬಂಧ ಹಿಂಪಡೆಯ ಬೇಕು ಎನ್ನುವ ಒತ್ತಡ ತೀವ್ರವಾಗಿದೆ. ಆದರೆ ಅಧಿಕಾರಿಗಳಿಗೆ ಪಾಠ ಕಲಿಸಲು ಹೇರಿರುವ ನಿರ್ಬಂಧ ಹಿಂಪಡೆಯುವುದು ಹೇಗೆ ಎನ್ನುವ ದಾರಿ ತೋಚದೆ ಸಚಿವರು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಂಜಿತ್​ ಎಚ್​ ಅಶ್ವತ್ಥ್

View all posts by this author