ಶರಣಬಸವ ಹುಲಿಹೈದರ, ಕೊಪ್ಪಳ
ನಕಲಿ ಸೇವಾ ಅನುಭವ ಪತ್ರ ಕೊಟ್ಟಿದ್ದ ಸಹಾಯ ಪ್ರಾಧ್ಯಾಪಕ ಈಗ ಬಿಒಇ ಅಧ್ಯಕ್ಷ ಬಗೆದಷ್ಟು ಬಯಲಾಗುತ್ತಿವೆ ಕೊವಿವಿ ಅಕ್ರಮ
ಕೊಪ್ಪಳ ವಿಶ್ವವಿದ್ಯಾಲಯದ ಅಕ್ರಮ, ನಿಯಮ ಬಾಹಿರ ನಡೆಗಳು ಬಗೆದಷ್ಟು ಬಯಲಾಗುತ್ತಿವೆ. ಅತಿಥಿ ಉಪನ್ಯಾಸಕರ ಅಕ್ರಮ ನೇಮಕಾತಿ ತನಿಖೆಗೆ ಸರಕಾರ ಸಮಿತಿ ರಚಿಸಿದೆ. ಈ ನಡುವೆ, ನಕಲಿ ಸೇವಾ ಅನುಭವ ಪತ್ರ ವಿತರಣೆ ಮಾಡಿದ್ದ ಸಹಾಯಕ ಪ್ರಾಧ್ಯಾಪಕನನ್ನು ವಿವಿ ಪರಿಕ್ಷಾ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದೆ. ಸೇವಾ ಹಿರಿತನವನ್ನೂ ಕಡೆಗಣಿಸಿ, ಬಿಒಇ ಅಧ್ಯಕ್ಷ ರನ್ನು ನೇಮಕ ಮಾಡಲಾ ಗಿದ್ದು, ಪ್ರಾಧ್ಯಾಪಕರ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕೊಪ್ಪಳ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಕಳೆದ ಸೆ.9ರಂದು ಪರಿಕ್ಷಾ ಮಂಡಳಿ ರಚಿಸಿದೆ.
ಮಂಡಳಿಗೆ ಅಧ್ಯಕ್ಷ ಹಾಗೂ ಐವರು ಸದಸ್ಯರನ್ನು ನೇಮಕ ಮಾಡಿ ಆದೇಶಿಸಿದೆ. ಸಾಮಾನ್ಯವಾಗಿ ವಿವಿ ವ್ಯಾಪ್ತಿಯ ಕಾಲೇಜುಗಳ ಹಿರಿಯ ಪ್ರಾಧ್ಯಾಪಕರರನ್ನು ಅಧ್ಯ ಕ್ಷರು ಹಾಗೂ ಸದಸ್ಯರಾಗಿ ನೇಮಕ ಮಾಡಬೇಕು. ಆದರೆ, ಸೇವಾ ಹಿರಿತನ ಕಡೆಗಣಿಸಿ ಅತ್ಯಂತ ಕಿರಿಯ ಪ್ರಾಧ್ಯಾಪಕರನ್ನು ಬಿಒಇ ಅಧ್ಯಕ್ಷರಾಗಿ ನೇಮಿಸಲಾಗಿದೆ. ವಿವಿಯ ಈ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಏನಿದು ಬಿಒಇ?: ಯಾವುದೇ ಒಂದು ವಿಶ್ವವಿದ್ಯಾಲಯ ದಲ್ಲಿ ಬೋರ್ಡ್ ಆಫ್ ಎಕ್ಸಾಮಿನೇಷನ್ (ಬಿಒಇ) ಅಂದರೆ ಪರೀಕ್ಷಾ ಮಂಡಳಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ವಿಷಯವಾರು ಎಲ್ಲ ವಿಷಯಕ್ಕೂ ಒಂದು ಪರೀಕ್ಷಾ ಮಂಡಳಿಯನ್ನು ವಿಶ್ವವಿದ್ಯಾಲಯ ರಚಿಸುತ್ತದೆ. ಆಯಾ ವಿಶ್ವ ವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಪರೀಕ್ಷೆಗೆ ಅಗತ್ಯ ಇರುವ ಪ್ರಶ್ನೆ ಪತ್ರಿಕೆ ತಯಾರಿಸಿ, ವಿವಿಗೆ ನೀಡುವುದು ಪರೀಕ್ಷಾ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರ ಜವಾಬ್ದಾರಿ. ಪರೀಕ್ಷಾ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರಾದವರ ಮಕ್ಕಳು, ಸಂಬಂಧಿಕರು ಸಂಬಂಧಿಸಿದ ವಿಶ್ವವಿದ್ಯಾ ಲಯದಲ್ಲಿ ಓದುತ್ತಿರಬಾರದು ಎಂಬ ನಿಯಮವೂ ಇದೆ.
ಜತೆಗೆ ವಿವಿ ವ್ಯಾಪ್ತಿಯ ಕಾಲೇಜಿನ ಅತ್ಯಂತ ಹಿರಿಯ ಪ್ರಾಧ್ಯಾಪಕರನ್ನು ಅಧ್ಯಕ್ಷರಾಗಿಯೂ ಮತ್ತು ನಂತರ ಹಿರಿತನ ಇದ್ದವರನ್ನು ಸದಸ್ಯರಾಗಿ ನೇಮಕ ಮಾಡಲಾಗುತ್ತದೆ. ಒಂದೊಮ್ಮೆ ಸಮಾನ ಸೇವಾ ಹಿರಿತನ ಹೊಂದಿದ್ದವರು ಒಂದಕ್ಕಿಂದ ಹೆಚ್ಚು ಜನ ಇದ್ದರೆ ಸರತಿ ಆಧಾರದಲ್ಲಿ ಅಧ್ಯಕ್ಷ ಮತ್ತು ಸದಸ್ಯರಾಗಿ ನೇಮಕ ಮಾಡಲಾಗುತ್ತದೆ. ಆದರೆ, ಕೊಪ್ಪಳ ವಿವಿ ಕುಲಸಚಿವರು, ಸೇವಾ ಹಿರಿತನ ಮತ್ತು ಸರತಿ ನಿಯಮವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದರಿಂದ ಸೇವಾ ಹಿರಿತನ ಇದ್ದವರನ್ನು ಸಂಪೂರ್ಣ ಕಡೆಗಣಿಸಿ, ಕಿರಿಯ ಪ್ರಾಧ್ಯಾಪಕರನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿದ್ದಾರೆ ಎಂಬುದು ಅವಕಾಶ ವಂಚಿತರ ಆರೋಪ.
ನಕಲಿ ಪ್ರಮಾಣ ಪತ್ರ ಕೊಟ್ಟಿರುವ ಆರೋಪ
ಸದ್ಯ ಕೊಪ್ಪಳ ವಿವಿ ಪರೀಕ್ಷಾ ಮಂಡಳಿಗೆ ಅಧ್ಯಕ್ಷರಾದವರು ನಕಲಿ ಸೇವಾ ಅನುಭವ ಪತ್ರ ಕೊಟ್ಟಿ ರುವ ದಾಖಲೆ ಇವೆ.ಡಾ.ನಿಂಗಪ್ಪ ಅವರು ಹೊಸ ಬಂಡಿ ಹರ್ಲಾಪೂರ ಪದವಿ ಕಾಲೇಜಿ ನಲ್ಲಿ ಪ್ರಾಂಶುಪಾಲ ರಾಗಿದ್ದಾಗ ನಕಲಿ ಸೇವಾ ಅನುಭವ ಪತ್ರ ಕೊಟ್ಟಿದ್ದಾರೆ. ಡಾ.ನಿಂಗಪ್ಪ, ಮಾರುತಿ ಎಂಬುವರಿಗೆ ತಮ್ಮ ಕೈ ಬರಹದ ಕೊಟ್ಟಿದ್ದ ನಕಲಿ ಸೇವಾ ಅನುಭವ ಪತ್ರ ಕೊಟ್ಟಿದ್ದಾರೆ. ಅದರ ಆಧಾರದ ಅಭ್ಯರ್ಥಿ ಒಬ್ಬರು ಕೊಪ್ಪಳ ವಿವಿಯಲ್ಲಿ ಕೆಲಸ ಪಡೆದಿದ್ದಾರೆ. ನಂತರ ಆರ್ ಟಿಐ ಕಾಯ್ದೆಯಡಿ ಮಾಹಿತಿ ಕೇಳಿದಾಗ ಈಗಿನ ಪ್ರಾಂಶುಪಾಲರು, 2020-21 ಮತ್ತು 2021-22ರಲ್ಲಿ ಮಾರುತಿ ಎಂಬ ವ್ಯಕ್ತಿ ಕೆಲಸ ಮಾಡಿಲ್ಲ ಎಂದು ದಾಖಲೆ ಒದಗಿಸಿದ್ದಾರೆ.
ಕಿರಿಯ ಪ್ರಾಧ್ಯಾಪಕರಿಗೆ ಆಯಕಟ್ಟಿನ ಹುದ್ದೆ
ಸೇವಾ ಹಿರಿತನ ಕಡೆಗಣಿಸಿದ ಕೊಪ್ಪಳ ವಿವಿ
ಕಿರಿಯ ಪ್ರಾಧ್ಯಾಪಕರಿಗೆ ವಿಶ್ವವಿದ್ಯಾಲಯದ ಪರೀಕ್ಷಾ ಮಂಡಳಿಯ ಅಧ್ಯಕ್ಷ ಸ್ಥಾನ
ನಕಲಿ ಸೇವಾ ಪ್ರಮಾಣಪತ್ರ ನೀಡಿದ ಆರೋಪ ಆರ್‌ಟಿಐ ಮಾಹಿತಿಯಲ್ಲಿ ಬಯಲು
![]()
ಡಾ.ನಿಂಗಪ್ಪ ಅವರಿಗಿಂತ ಸೀನಿ ಯರ್ ಇದ್ದವರೆಲ್ಲ ಈಗಾಗಲೇ ಬಿಒಇಗೆ ಅಧ್ಯಕ್ಷರು, ಸದಸ್ಯ ರಾಗಿ ಕೆಲಸ ಮಾಡಿದ್ದಾರೆ. ಈಗ ಇವರಿ ಗಿಂತ ಸೀನಿಯರ್ ಯಾರೂ ಇಲ್ಲ. ಜತೆಗೆ ಇವರು ನಕಲಿ ಪ್ರಮಾಣ ಪತ್ರ ಕೊಟ್ಟಿರುವುದು ಕೇವಲ ಆರೋಪ ಮಾತ್ರ. ಆರೋಪ ಸಾಬೀತಾಗಿ, ಇವರ ಮೇಲೆ ಕ್ರಮ ಆಗಿದೆಯೇ? ನಾವು ಮಾಡಿರುವುದು ಸರಿಯಾಗಿಯೇ ಇದೆ.
-ಪ್ರೊ.ರಮೇಶ, ಕುಲಸಚಿವರು ಕೊಪ್ಪಳ ವಿವಿ