ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತೀವ್ರ ಚಳಿ ಪ್ರಭಾವ: ಮಾಂಸಾಹಾರಕ್ಕೆ ಭಾರೀ ಬೇಡಿಕೆ

ಕಳೆದೊಂದು ತಿಂಗಳಿನಿಂದ ಮಟನ್ ದರದಲ್ಲಿ ಗರಿಷ್ಠ ಏರಿಕೆ ಕಂಡಿದೆ. ಚಳಿಯಿಂದ ಹಾಗೂ ಆಗಸ್ಟ್ ಸೆಪ್ಟೆಂಬರ್‌ನಲ್ಲಿ ಭಾರೀ ಮಳೆಗೆ ಕುರಿ, ಕೋಳಿ ಬೆಳವಣಿಗೆ ಕುಂಟಿತವಾಗಿದೆ. ಉತ್ಪಾದನೆ ಕುಸಿತವಾಗಲು ಇದೂ ಕಾರಣ. ಮಟನ್‌ಗೆ ಈಗ 900 ರು. ಇದ್ದು, ಮುಂದಿನ ಹೊಸ ವರ್ಷಾರಂಭದಲ್ಲಿ ಒಂದು ಸಾವಿರ ರು. ಆಗುವ ಸಾಧ್ಯತೆ ಇದೆ ಎಂದು ಮಟನ್ ವ್ಯಾಪಾರಿ ಮಹಮ್ಮದ್ ಅವರ ಅನಿಸಿಕೆ.

ಹೂವಪ್ಪ ಐ ಹೆಚ್ ಬೆಂಗಳೂರು

ತೀವ್ರ ಚಳಿಗೆ ಚಿಕನ್, ಮಟನ್, ಮೀನಿಗೆ ಬೇಡಿಕೆ

ಶೇ.30ರಷ್ಟು ಕೋಳಿ, ಮಟನ್ ಉತ್ಪಾದನೆ ಕುಸಿತ

ಕ್ರಿಸ್ಮಸ್, ಹೊಸ ವರ್ಷ ಆಚರಣೆ ಹಿನ್ನೆಲೆ

ಹವಾಮಾನದಲ್ಲಿ ಬದಲಾವಣೆ ಆಗಿರುವ ಹಿನ್ನಲೆಯಲ್ಲಿ ಶಾಖಾಹಾರಿ ಪದಾರ್ಥಗಳಾದ ಕುರಿ, ಕೋಳಿ ಉತ್ಪಾದನೆ ಶೇ.30ರಷ್ಟು ಕುಸಿತವಾಗಿದೆ, ಆ ಕಾರಣಕ್ಕಾಗಿ ಚಿಕನ್, ಮಟನ್, ಮೀನು ಬೇಡಿಕೆ ಹೆಚ್ಚಿದ್ದು ಭಾರೀ ಬೆಲೆ ಏರಿಕೆಯಾಗಿದೆ. ಮಟನ್ ರೇಟ್ ಕೆ.ಜಿ.ಗೆ ರು. 800 ಇದ್ದದ್ದು, ಈಗ 900 ರೂ. ಆಗಿದೆ.

ಕಳೆದೊಂದು ತಿಂಗಳಿನಿಂದ ಮಟನ್ ದರದಲ್ಲಿ ಗರಿಷ್ಠ ಏರಿಕೆ ಕಂಡಿದೆ. ಚಳಿಯಿಂದ ಹಾಗೂ ಆಗಸ್ಟ್ ಸೆಪ್ಟೆಂಬರ್‌ನಲ್ಲಿ ಭಾರೀ ಮಳೆಗೆ ಕುರಿ, ಕೋಳಿ ಬೆಳವಣಿಗೆ ಕುಂಟಿತವಾಗಿದೆ. ಉತ್ಪಾದನೆ ಕುಸಿತ ವಾಗಲು ಇದೂ ಕಾರಣ. ಮಟನ್‌ಗೆ ಈಗ 900 ರು. ಇದ್ದು, ಮುಂದಿನ ಹೊಸ ವರ್ಷಾರಂಭ ದಲ್ಲಿ ಒಂದು ಸಾವಿರ ರು. ಆಗುವ ಸಾಧ್ಯತೆ ಇದೆ ಎಂದು ಮಟನ್ ವ್ಯಾಪಾರಿ ಮಹಮ್ಮದ್ ಅವರ ಅನಿಸಿಕೆ.

ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶ ಇದೆ ಎಂಬ ಚರ್ಚೆ ಆರಂಭವಾಗಿರುವ ನಡುವೆ ಹೊಸ ವರ್ಷ ಹಾಗೂ ಕ್ರಿಸ್‌ಮಸ್ ಹಬ್ಬದ ಬೇಡಿಕೆ ಮಧ್ಯೆ ಮಾಂಸಪ್ರಿಯರಿಗೆ ಆಘಾತವಾಗಿದೆ. ಒಟ್ಟಿನಲ್ಲಿ ಅತಿ ಯಾದ ಚಳಿ ಹಾಗೂ ಹೆಚ್ಚಾದ ಬೇಡಿಕೆಯಿಂದ ಆಗಿರುವ ಬೆಲೆ ಏರಿಕೆಯಿಂದ ನಾನ್‌ವೆಜ್ ಪ್ರಿಯರು ಕಂಗೆಟ್ಟಿದ್ದಾರೆ.

ಚಳಿಗೆ ಮಾಂಸ ಬೇಡಿಕೆ: ಇನ್ನೂ ಕೋಳಿ ಮಾಂಸದ ಬೆಲೆ ಹೀಗೆ ದಿಢೀರ್ ಹೆಚ್ಚಾಗಲು ಪ್ರಮುಖ ಕಾರಣವಾದರೆ ಚಳಿಗೆ ಮಾಂಸಾಹಾರ ಸೇವಿಸುವವರ ಸಂಖ್ಯೆಯ ಹೆಚ್ಚಳ. ಅಷ್ಟೇ ಅಲ್ಲದೇ, ಕ್ರಿಸ್ಮಸ್ ಮತ್ತು ನ್ಯೂ ಇಯರ್ ಸೆಲೆಬ್ರೇಷನ್ ಡಿಮ್ಯಾಂಡ್ ಕೂಡ ಇರುವುದರಿಂದ ಬೆಲೆ ಹೆಚ್ಚಾಗಿದೆ. ಡಿಸೆಂ ಬರ್ ಅಂತ್ಯದ ವೇಳೆಗೆ ಕೋಳಿ ಮಾಂಸ ರು. 300ರ ಗಡಿ ದಾಟುವ ಸಾಧ್ಯತೆ ಕೂಡ ಇದೆ ಎನ್ನಲಾಗು ತ್ತಿದೆ.

ಇದನ್ನೂ ಓದಿ: Vegetables Price: ಗಗನಕ್ಕೇರಿದ ತರಕಾರಿ ಬೆಲೆ, ರಸಂ ಮಾಡ್ತೀವಿ ಸಾಕು ಅಂತಿರೋ ಗ್ರಾಹಕರು!

ಮೀನಿನ ಬೆಲೆ ಕೂಡಾ ಏರಿಕೆ: ಚಿಕನ್, ಮಟನ್ ಹೊರತುಪಡಿಸಿ ಮೀನು ತಿನ್ನುವವರಿಗೂ ಇದೀಗ ದರ ಏರಿಕೆಯ ಶಾಕ್ ತಟ್ಟಿದೆ. ಬೆಂಗಳೂರಿನಲ್ಲಿ ಮೀನಿನ ಬೆಲೆಯಲ್ಲಿ ಶೇಕಡಾ 30ರಷ್ಟು ಏರಿಕೆ ಯಾಗಿದೆ. ಎಲ್ಲಾ ರೀತಿಯ ಸಮುದ್ರ ಮೀನುಗಳ ದರದಲ್ಲಿ ವ್ಯತ್ಯಾಸ ಆಗಿದೆ. ಬೇಡಿಕೆಗೆ ತಕ್ಕಷ್ಟು ಮೀನು ಪೂರೈಕೆ ಆಗದ ಹಿನ್ನೆಲೆಯಲ್ಲಿ ಈ ರೀತಿ ದಿಢೀರ್ ಬೆಲೆ ಏರಿಕೆಯಾಗಿದೆ ಎನ್ನುತ್ತಿವೆ ಮಾರು ಕಟ್ಟೆ ಮೂಲಗಳು.

ಮಟನ್ ಚಿಕನ್ ದುಬಾರಿಯಾದ ಬಳಿಕ ಮೀನಿನ ದರ ಸಹಜವಾಗಿ ಏರಿಕೆಯಾಗಿದೆ ಎನ್ನುತ್ತಾರೆ ಶಿವಾಜಿನಗರ ರಸೇಲ್ ಮಾರುಕಟ್ಟೆ ಮಿನಿನ ವ್ಯಾಪಾರಿ ಅಭುದುಲ್ ಪಾಷಾ.

ಮಟನ್‌ಗಿಂತ ಕೋಳಿಗೆ ಯಾಕೆ ಬೇಡಿಕೆ: ಮಟನ್‌ಗೆ ಹೋಲಿಸಿದರೆ ಎರಡು ಪಟ್ಟು ಕೋಳಿ ಮಾಂಸ ಮಾರಾಟವಾಗುತ್ತದೆ. ಮುಖ್ಯವಾಗಿ ಕೋಳಿಯಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆ ಇರುವು ದರ ಜತೆ ಮಟನ್‌ಗೆ ಹೋಲಿಸಿದರೆ ದರದಲ್ಲೂ ಇಳಿಕೆ ಇರುವುದರಿಂದ ರಂಜಾನ್ ಹಬ್ಬದ ಮೊದಲು ಹಾಗೂ ನಂತರವೂ ಕೋಳಿಮಾಂಸಕ್ಕೆ ವಿಪರೀತ ಬೇಡಿಕೆ ಸೃಷ್ಟಿಯಾಗುತ್ತದೆ. ಮದುವೆ ಬಾಡೂಟ ದಲ್ಲಂತೂ ಕೋಳಿಮಾಂಸಕ್ಕೆ ಬೇಡಿಕೆ ಸೃಷ್ಟಿಯಾಗುತ್ತದೆ. ಈಗ ಪೂರೈಕೆ ಕಡಿಮೆ ಯಾಗಿ, ಬೇಡಿಕೆ ಹೆಚ್ಚಿದ್ದು, ದರದಲ್ಲಿ ಏರಿಕೆ ಕಾಣಿಸಿಕೊಂಡಿದೆ ಎನ್ನುವುದು ಕುಕ್ಕುಟೋದ್ಯಮಿಗಳ ಅಭಿಪ್ರಾಯ.

ಕುಕ್ಕುಟೋದ್ಯಮದಲ್ಲಿದೊಡ್ಡ ಸಮಸ್ಯೆ: ಈ ವರ್ಷ ಭಾರೀ ಗಾಳಿ, ಮಳೆಗೆ ಕೋಳಿ ಸಾಕುವ ಚಾವಣೆ ಗಳು ನೆಲಕ್ಕುರುಳಿವೆ, ಹೊಸತಾಗಿ ನಿರ್ಮಿಸಲು ವೆಚ್ಚ ಹಾಗೂ ಸಾವಿರಾರು ಕೋಳಿಮರಿಗಳು ಸಾವು ಕುಕ್ಕುಟೋದ್ಯಮವನ್ನೂ ಕಂಗೆಡೆಸಿದ್ದು, ಕೋಳಿಗಳ ಸಾಕಣೆ ಸವಾಲಾಗಿದೆ. ಇದರ ಮದ್ಯ ಕೋಳಿ ಆಹಾರದ ಕೊರತೆ ಎದುರಾಗಿರುವ ಮಧ್ಯೆ ಬೆಲೆ ಶೇ.30ರಷ್ಟು ಹೆಚ್ಚಿರುವುದು ಕೋಳಿ ಫಾರಂ ಮಾಲೀಕರನ್ನು ಆರ್ಥಿಕ ನಷ್ಟಕ್ಕೆ ದೂಡಿದೆ ಎನ್ನುತ್ತಾರೆ ಕುಕ್ಕುಟ ಉದ್ಯಮಿಗಳು.

ಕೋಳಿ ಆಹಾರದ ಬೆಲೆ ಏರಿಕೆ: ಈ ಬಾರಿ ತೀವ್ರ ಅತಿವೃಷ್ಟಿ ಎದುರಾದ ಪರಿಣಾಮವಾಗಿ ಕೋಳಿ ಗಳಿಗೆ ಅಗತ್ಯವಿರುವ ಆಹಾರದ ಮೇಲೂ ಪರೋಕ್ಷ ಪರಿಣಾಮ ಬೀರಿದೆ. ಈ ಹಿಂದೆ ಕೋಳಿ ನುಚ್ಚು ಕ್ವಿಂಟಾಲ್‌ಗೆ 1500 ರು.ಗೆ ದೊರೆಯುತ್ತಿತ್ತು. ಇದೀಗ 2000 ರು. ವ್ಯಯಿಸಬೇಕಿದೆ. ಮೆಕ್ಕೆಜೋಳ ಈ ಹಿಂದೆ ಕ್ವಿಂಟಾಲ್‌ಗೆ 1300-1400 ರು. ಇದ್ದುದು 2500 ರು.ಗೆ ಏರಿದೆ.

ಪ್ರತಿ ಟನ್ ಸೋಯಾಬೀನ್, ಶೇಂಗಾ ಹೊಟ್ಟು ಈ ಹಿಂದೆ 28-30 ಸಾವಿರ ರು.ಗೆ ದೊರೆಯುತ್ತಿತ್ತು. ಈಗ ಪ್ರತಿ ಟನ್ ಗೆ 45-50 ಸಾವಿರ ರು. ವ್ಯಯಿಸಬೇಕಿದೆ. ಕೋಳಿ ಆಹಾರದ ಬೆಲೆ ಶೇ.30ರಷ್ಟು ಏರಿಕೆಯಾಗಿದೆ. ಕೋಳಿ ಮರಿಗಳ ದರ ಕೂಡಾ ದುಪಟ್ಟಾಗಿದೆ. ಕಳೆದ ವರ್ಷ 26 ರು.ಗೆ ಮರಿ ಲಭ್ಯ ವಿದ್ದು, ಈಗ 40 ರು.ಗೆ ಮಾರಾಟವಾಗುತ್ತಿದೆ, ಜತೆಗೆ ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಿದ್ದು, ಒಂದು ಕೋಳಿಗೆ 80 ರು. ಇದ್ದ ಕಡೆಯಲ್ಲಿ 110 ರು. ಗಳಿಗೆ ತಲುಪಿದೆ ಎನ್ನುತ್ತಾರೆ ಕೋಳಿ ಸಾಕಾಣಿಕೆ ದಾರರು.

*

ಚಳಿಗೆ ಮಾಂಸಾಹಾರ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ, ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕೆ ಬೇಡಿಕೆ ಹೆಚ್ಚಾಗಿದೆ, ಜತೆಗೆ ಕೋಳಿಗೆ ನೀಡುವ ಆಹಾರದ ಬೆಲೆ ಏರಿಕೆ ಕೂಡ ಕೋಳಿ ಮಾಂಸದ ಬೆಲೆ ಏರಿಕೆಗೆ ಕಾರಣವಾಗಿದೆ.

-ಸುರೇಶ್ ಮೈಸೂರು, ಕೋಳಿ ಫಾರಂ ಮಾಲೀಕ

*

ಕೆಜಿಗೆ 230 ರು. ಇದ್ದ ಕೋಳಿ ಮಾಂಸ ಈಗ 280 ರು. ಮಟನ್ 800-900 ರು. ಆಗಿದೆ ಇದರ ಬೆಲೆ ಇನ್ನೂ ಹೆಚ್ಚಾಗಲಿದೆ. ಮೊಟ್ಟೆ ಬೆಲೆ ಕೂಡಾ ದುಬಾರಿಯಾಗಿದೆ. ಈ ಪರಿ ದುಬಾರಿ ಬೆಲೆಯಾದರೆ ನಮ್ಮಂತಹ ಕೂಲಿ ಕಾರ್ಮಿಕರು ಮಾಂಸ, ಮೀನು ತಿನ್ನುವುದು ಕನಸಿನ ಮಾತು.

-ಮುನೇಶ್ ಬೆಂಗಳೂರು, ಕಟ್ಟಡ ಕಾರ್ಮಿಕ