ರೇಣುಕಾರಾಧ್ಯ ಹೆಗ್ಗರೆ, ಶಿವಮೊಗ್ಗ
ಏ.30ರಿಂದ ಹಾರಾಟ ನಿಲ್ಲಿಸಿದ ಇಂಡಿಗೋ ಏರ್‌ಲೈನ್ಸ್
ನೈಟ್ ಲ್ಯಾಂಡಿಂಗ್ ವ್ಯವಸ್ಥೆಯ ಕೊರತೆ
ಮಲೆನಾಡಿನ ಜನರ ಬಹುದಿನಗಳ ಕನಸಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 3 ವರ್ಷಗಳ ಪೂರೈಸುವ ಮುನ್ನವೇ ಇಂಡಿಗೋ ಏರ್‌ಲೈನ್ಸ್ ಹಾರಾಟ ನಿಲ್ಲಿಸಿದೆ. ಇದರಿಂದ ಅದ್ದೂರಿಯಾಗಿ ಆರಂಭಗೊಂಡ ವಿಮಾನ ಸೇವೆಯೊಂದು ದಿಢೀರನೇ ಅಂತ್ಯ ಕಂಡು ಮುಂದೇನು ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಕಳೆದ 2023ರ ಆಗಸ್ಟ್ 31ರಂದು ಅದ್ಧೂರಿಯಾಗಿ ಆರಂಭಗೊಂಡಿದ್ದ ಇಂಡಿಗೋ ಏರ್‌ಲೈನ್ಸ್ ಸೇವೆ ಬಲು ಬೇಗ ಸ್ಥಗಿತಗೊಂಡಿದ್ದು ಯಾಕೆ? ಎಂಬುದಕ್ಕೆ ಇದುವರೆಗೂ ಸರಕಾರದಿಂದಲೂ ನಿಖರವಾದ ಉತ್ತರ ಬಂದಿಲ್ಲ. ಆದರೆ, ವಿಮಾನ ಕಂಪನಿ ಹೇಳುತ್ತಿರುವ ಕಾರಣಗಳನ್ನು ನಂಬುವಂತೆಯೇ ಇಲ್ಲ. ತಿಂಗಳಿಗೆ ನೂರಾರು ಜನರಿಗೆ ಸೇವೆ ಒದಗಿಸುತ್ತಿದ್ದ ವಿಮಾನ ನಿಂತು ಹೋಗಿರುವುದು ಶಿವಮೊಗ್ಗದ ಜನರಿಗೆ ಬೇಸರ ತಂದಿದೆ.
ಈ ವಿಮಾನ ನಿಲ್ದಾಣ ಆರಂಭವಾದ ದಿನದಿಂದಲೂ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಶಿವಮೊಗ್ಗ ನಿಲ್ದಾಣದಿಂದ ಇದೂವರೆಗೆ 2400ಕ್ಕೂ ಅಧಿಕ ವಿಮಾನಗಳು ಸಂಚರಿ ಸಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ಇದರ ಲಾಭ ಪಡೆದಿದ್ದಾರೆ. ಕಳೆದ ಕೆಲವು ಸಮಯದಿಂದ ನೈಟ್ ಲ್ಯಾಂಡಿಂಗ್ ವ್ಯವಸ್ಥೆಯ ಕೊರತೆ ಹಾಗೂ ಪದೇ ಪದೇ ವಿಮಾನಗಳು ರದ್ದಾಗಿದ್ದವು.
ಕೈಗಾರಿಕೋದ್ಯಮಿಗಳಿಗೆ ಹೊಡೆತ?: ಏಪ್ರಿಲ್ 30ರಂದು ಮಧ್ಯಾಹ್ನ 2.30ಕ್ಕೆ ಶಿವಮೊಗ್ಗದಿಂದ ಹೊರಡುವ ವಿಮಾನವೇ ಕೊನೆಯದಾಗಿದೆ. ಈ ಬೆಳವಣಿಗೆ ಜಿಲ್ಲೆಯ ಕೈಗಾರಿಕೋದ್ಯಮಿಗಳಿಗೆ ದೊಡ್ಡ ಹೊಡೆತವಾಗಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ಇಂಡಿಗೋ ನಡುವಿನ ಒಪ್ಪಂದ 2025ರ ಆಗಸ್ಟ್‌ಗೆ ಕೊನೆಯಾಗಿದೆ ಎಂದು ವರದಿ ಆಗಿದೆ.
ಅಕ್ಟೋಬರ್‌ವರೆಗೆ ಸೇವೆ ಸ್ಥಗಿತಗೊಳಿಸುತ್ತಿರುವುದಾಗಿ ಇಂಡಿಗೋ ಆಡಳಿತ ಮಂಡಳಿ ಅಧಿಕೃತ ವಾಗಿ ಕೆಎಸ್ಐಡಿಸಿಗೆ ಪತ್ರ ಬರೆದಿದೆ. ಅಕ್ಟೋಬರ್ ಬಳಿಕ ಮತ್ತೆ ಸೇವೆ ಆರಂಭಿಸಲಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಅಲ್ಲಿಯವರೆಗೆ ಮಾತ್ರ ಈ ವಿಮಾನ ಹಾರುವುದಿಲ್ಲ ಎಂಬುದು ನಿಶ್ಚಿತ.
ಇಂಡಿಗೋ ದೇಶದೊಳಗೆ ಅನೇಕ ನಗರಗಳಿಗೆ ನೀಡುತ್ತಿದ್ದ ಸೇವೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ. ಡಿಜಿಸಿಎ ವಿಧಿಸಿದ ಷರತ್ತು ಪೂರೈಸುವುದು ಹೊರೆಯಾಗಿರುವುದೇ ಇದಕ್ಕೆ ಕಾರಣ. ಮುಖ್ಯವಾಗಿ ಸಿಬ್ಬಂದಿ ವಿಚಾರದಲ್ಲಿನ ಷರತ್ತು ಆ ಸಂಸ್ಥೆಗೆ ಹೊರೆಯಾಗಿತ್ತು. ಷರತ್ತು ಪೂರೈಸಲು ಮುಂದಾದರೆ ಆರ್ಥಿಕ ಹೊರೆ ಉಂಟಾಗುತ್ತದೆ.
ಷರತ್ತು ಪೂರೈಸದಿದ್ದರೆ ದಂಡ ಪಾವತಿಸಬೇಕಾಗುತ್ತದೆ. ಒಂದು ರೀತಿ ಎರಡು ಅಲುಗಿನ ಕತ್ತಿಯಲ್ಲಿ ಇಂಡಿಗೋ ಸಿಲುಕಿಕೊಂಡಿತ್ತು. ಅದರಿಂದ ಹೊರ ಬರಲು ಸೇವೆ ಸ್ಥಗಿತದ ತೀರ್ಮಾನಕ್ಕೆ ಬಂದಿದೆ. ಇಂಡಿಗೋ ವಿಮಾನ ಗುರುವಾರ ಶಿವಮೊಗ್ಗದಿಂದ ಬೆಂಗಳೂರಿಗೆ ಮರಳುತ್ತಿದ್ದಂತೆಯೇ ಇಂಡಿಗೋ ದ ಎಲ್ಲ ಸಿಬ್ಬಂದಿಯನ್ನು ಮಂಗಳೂರು, ಹುಬ್ಬಳ್ಳಿಗೆ ಸ್ಥಳಾಂತರಿಸಲಾಗಿದೆ.
ಶಿವಮೊಗ್ಗ- ಬೆಂಗಳೂರು ನಡುವಿನ ಇಂಡಿಗೋ ವಿಮಾನ ಎಂದೂ ನಷ್ಟದ ಹಾದಿಗೆ ಹೋಗಿರಲಿಲ್ಲ. ಪ್ರತಿ ಟ್ರಿಪ್‌ನಲ್ಲೂ ಶೇ.75-80ರಷ್ಟು ಪ್ರಯಾಣಿಕರು ಇರುತ್ತಿದ್ದರು. ಇಂಡಿಗೋ ಕಂಪನಿಯೇ ಸರ್ಕಾರಕ್ಕೆ ಆದಾಯ ನೀಡುತ್ತಿತ್ತು. ಏರ್‌ಪೋರ್ಟ್ ಬಳಕೆಯ ಶುಲ್ಕವಾಗಿ ಪ್ರತಿ ಪ್ರಯಾಣಿಕರ ಪಾಲು 750 ರೂ.ಅನ್ನು ಕೆಎಸ್‌ಐಡಿಸಿಗೆ ಇಂಡಿಗೋ ಪಾವತಿ ಮಾಡುತ್ತಿತ್ತು.
ವಾರ್ಷಿಕ ಇದರ ಒಟ್ಟು ಮೌಲ್ಯ 1.50 ಕೋಟಿ ರು. ಆಗುತ್ತಿತ್ತು. ಸದ್ಯ ಶಿವಮೊಗ್ಗದಿಂದ ಬೆಂಗಳೂರಿನ ಜತೆಗೆ ಹೈದರಾಬಾದ್, ತಿರುಪತಿ, ಗೋವಾ ಹಾಗೂ ಚೆನ್ನೈಗೆ ಸಂಪರ್ಕವೂ ಇದೆ. ಶಿವಮೊಗ್ಗದಿಂದ ಇಂಡಿಗೋ, ಸ್ಟಾರ್ ಏರ್‌ಲೈನ್ಸ್ ಮತ್ತು ಸ್ಪೆಸ್ ಜೆಟ್ ವಿಮಾನಗಳು ಹಾರಾಟ ಮಾಡುತ್ತಿವೆ.
ಬೇರೆ ವಿಮಾನ ಸಂಸ್ಥೆಗಳೊಂದಿಗೂ ಮಾತುಕತೆ
ಶಿವಮೊಗ್ಗ-ಬೆಂಗಳೂರು ನಡುವಿನ ಇಂಡಿಗೋ ವಿಮಾನ ಸೇವೆ ಉಳಿಸಿಕೊಳ್ಳಲು ಎಲ್ಲ ರೀತಿ ಪ್ರಯತ್ನ ಮಾಡಿ ದರೂ ಅದು ಫಲ ನೀಡಿಲ್ಲ. ಆದರೆ ಆಶಾ ಭಾವನೆ ಕುಂದಿಲ್ಲ. ಪ್ರಯತ್ನ ಮುಂದು ವರಿದಿದೆ. ಬೇರೆ ವಿಮಾನ ಸಂಸ್ಥೆಗಳೊಂದಿಗೂ ಮಾತು ಕತೆ ನಡೆಯುತ್ತಿದೆ. ಶೀಘ್ರದಲ್ಲೇ ಶುಭ ಸುದ್ದಿ ಬರಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ ನೀಡಿದ್ದಾರೆಯಾದರೂ, ಪರಿಸ್ಥಿತಿ ಅನಿಶ್ಚಿತೆತೆ ಯಲ್ಲಿ ಇದೆ. ರಾಜ್ಯದೊಳಗೆ ಸಂಚರಿಸುವ ವಿಮಾನಗಳು ಉಡಾನ್ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಶಿವಮೊಗ್ಗ-ಬೆಂಗಳೂರು ನಡುವಿನ ವಿಮಾನ ಹಾರಾಟಕ್ಕೆ ಪ್ರತಿ ಸೀಟಿಗೆ ಇಂಡಿಗೂ ಕಂಪನಿಗೆ 500 ರು. ರಾಜ್ಯ ಸರಕಾರದಿಂದ ನೀಡು ತ್ತಿದ್ದರು. ಇದರಿಂದ ಪ್ರಯಾಣಿಕರಿಗೂ ಹೊರೆಯಾಗಲಿಲ್ಲ. ವಿಮಾನ ಕಂಪನಿಗೂ ನಷ್ಟವಾಗಲಿಲ್ಲ. ಆದರೆ ಈಗ ರಾಜ್ಯ ಸರಕಾರ ಹಣ ನೀಡಲು ಸಿದ್ಧವಿಲ್ಲ. ಜತೆಗೆ ಡಿಜಿಸಿಎ ನಿಯಮಾವಳಿ ಗಳನ್ನೂ ಭರಿಸುವ ಪೂರ್ಣ ಸಾಮರ್ಥ್ಯವೂ ಇಂಡಿಗೋ ಕಂಪನಿಗೆ ಇಲ್ಲ. ಹೀಗಾಗಿ ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿ ಸುತ್ತಿದ್ದಾರೆ ಎಂದು ಸಂಸದರೇ ಹೇಳುತ್ತಿದ್ದಾರೆ.
ಜೂನ್‌ಗೆ ನೈಟ್ ಲ್ಯಾಂಡಿಂಗ್ ವರ್ಕ್ ಮುಗಿಯುವುದೇ?
ನಗರಕ್ಕೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ ಅಧ್ಯಕ್ಷರಾದ ನಂಜಯ್ಯ ಮಠರವರು ಭೇಟಿ ನೀಡಿ ಮೇ ಮೊದಲನೇ ವಾರದಲ್ಲಿಯೇ 7 ಮತ್ತು 8 ತಾರೀಖಿನಂದು ಮತ್ತೊಮ್ಮೆ ಆಗ ಮಿಸಲಿದ್ದು ಅದರೊಳಗಾಗಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಪೂರ್ಣಗೊಳಿಸ ಬೇಕೆಂದು ಕಾಮಗಾರಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರನ್ನು ಕರೆಸಿ ತಿಳಿಸಿ ದರು. ಜೂನ್ ತಿಂಗಳ ಮೊದಲನೇ ವಾರದಲ್ಲಿ ನೈಟ್ ಲೈಟಿಂಗ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಭರವಸೆಯನ್ನು ಅಧಿಕಾರಿಗಳು ನೀಡಿದರು. ಇದರ ಜೊತೆಗೆ ಇಂಡಿಗೋ ವಿಮಾನ ಸಂಸ್ಥೆ ಪ್ರಯಾಣವನ್ನು ನಿಲ್ಲಿಸಿರುವುದು ಈ ನೈಟ್ ಲ್ಯಾಂಡಿಂಗ್ ವಿಚಾರಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ, ನೈಟ್ ಲ್ಯಾಂಡಿಂಗ್ ಕಾಮಗಾರಿಗೆ ರಾಜ್ಯ ಸರಕಾರವೇ ಹಣವನ್ನು ನೀಡಿದ್ದು, ಇಂಡಿಗೋ ವಿಮಾನ ಕೇಂದ್ರ ಸರಕಾರದ ಅಸ್ತಿತ್ವದಲ್ಲಿರುವುದರಿಂದ ಪೈಲೆಟ್ʼಗಳ ಕೊರತೆಯಿಂದ ಚಾಲನೆಯನ್ನು ನಿಲ್ಲಿಸಿರುತ್ತದೆ. ನೈಟ್ ಲ್ಯಾಂಡಿಂಗ್ ಚಾಲನೆಗೆ ವಿಮಾನ ಸಂಸ್ಥೆ ಗಳೊಂದಿಗೆ ಚರ್ಚಿಸಿ ವಿಮಾನದ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವುದಾಗಿ ನಂಜಯ್ಯ ಮಠ ತಿಳಿಸಿದರು.