ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾಲುವೆಗಳಲ್ಲಿ ತುಂಬಿದ ಹೂಳು, ಕೇಳುವವರಿಲ್ಲ ರೈತರ ಗೋಳು

ಕೆರೆ ನಿರ್ಮಾಣವಾದ ಬಳಿಕ ಇದುವರೆಗೆ ಹೊಳು ತೆಗೆದು ಸ್ವಚ್ಛಗೊಳಿಸುವ ಕೆಲಸವಾಗಿಲ್ಲ. ಸರಕಾರ ದಿಂದ ನಿರ್ವಹಣೆಗೆ ಬರುವ ಅನುದಾನ ಎಲ್ಲಿ ಹೋಯಿತು ಎಂಬುದರ ಬಗ್ಗೆ ತನಿಖೆ ನಡೆಸಬೇಕೆಂದು ರೈತರು ಒತ್ತಾಯಿಸಿದ್ದಾರೆ. ಬಡ ಹಾಗೂ ಸಣ್ಣ ರೈತರು ತಮ್ಮ ಖರ್ಚಿನಲ್ಲಿ ಹೊಳು ತೆಗೆದು ನೀರು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಶರಣಬಸಪ್ಪ ಎನ್. ಕಾಂಬಳೆ ಇಂಡಿ

ಕೃಷ್ಣಾ ನದಿಯಿಂದ ಕೊಟ್ನಾಳ ಕೆರೆಗೆ ಹರಿಯುವ ನೀರು

ಜಮೀನುಗಳಿಗೆ ಇಲ್ಲ ನೀರು ಸೌಲಭ್ಯ

ತಾಲೂಕಿನ ಕೊಟ್ನಾಳ ಕೆರೆ ಕೃಷ್ಣಾ ನದಿಯಿಂದ ನೀರು ಪಡೆಯುವ ಪ್ರಮುಖ ಕೆರೆಯಾಗಿದೆ. ಶಾಸಕ ಯಶವಂತರಾಯಗೌಡ ಪಾಟೀಲರ ಸತತ ಪ್ರಯತ್ನದಿಂದ ತಿಡಗುಂದಿ ಶಾಖಾ ಕಾಲುವೆ ಮೂಲಕ ಕೆರೆಗೆ ನೀರು ತುಂಬಿಸಲಾಗಿದ್ದು, ಇದರಿಂದ ಇಂಡಿ ತಾಲೂಕಿನ ಹಲವಾರು ಕೆರೆಗಳೊಂದಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತಿದೆ.

ಅಂತರ್ಜಲ ಮಟ್ಟ ಹೆಚ್ಚಾಗಿ ಬಾವಿ ಬೋರ್‌ವೆಲ್‌ಗಳು ರೀಚಾರ್ಜ್ ಆಗಿದ್ದರೂ, ಕಾಲುವೆಗಳ ಅವ್ಯವಸ್ಥೆಯಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.‌ ಕೊಟ್ನಾಳ ಕೆರೆಯ ಡಿಸ್ಟ್ರಿಬ್ಯೂಟರ್ (ಲ್ಯಾಟರಲ್) ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ ಕಳೆದ ಹತ್ತಾರು ವರ್ಷಗಳಿಂದ ಕಾಲುವೆಗಳಲ್ಲಿ ಕಹಿ ಜಾಲಿ, ಕಂಟಿ, ಕಲ್ಲು ಮಣ್ಣು ಹಾಗೂ ಹೂಳು ತುಂಬಿ ಓವರ್ಫ್‌ಲೋ ಆಗುತ್ತಿದ್ದು, ಕೆರೆ ಸಮೀಪದ ರೈತರ ಭೂಮಿಗಳು ಕೊಚ್ಚಿಕೊಂಡು ಹೋಗಿವೆ.

ನೀರಾವರಿ ಯೋಜನೆಗಳ ನಿರ್ವಹಣೆ ಸಮರ್ಪಕವಾಗದೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬುದು ರೈತರ ಆರೋಪ.

ಇದನ್ನೂ ಓದಿ: Indi News: ಇನ್ನೊಬ್ಬರಿಗೆ ನೋವಾಗದಂತೆ ಬದುಕಿ: ಮುತ್ತಪ್ಪ ಪೋತೆ ಕಿವಿ ಮಾತು

ಕೆರೆ ನಿರ್ಮಾಣವಾದ ಬಳಿಕ ಇದುವರೆಗೆ ಹೊಳು ತೆಗೆದು ಸ್ವಚ್ಛಗೊಳಿಸುವ ಕೆಲಸವಾಗಿಲ್ಲ. ಸರಕಾರ ದಿಂದ ನಿರ್ವಹಣೆಗೆ ಬರುವ ಅನುದಾನ ಎಲ್ಲಿ ಹೋಯಿತು ಎಂಬುದರ ಬಗ್ಗೆ ತನಿಖೆ ನಡೆಸ ಬೇಕೆಂದು ರೈತರು ಒತ್ತಾಯಿಸಿದ್ದಾರೆ. ಬಡ ಹಾಗೂ ಸಣ್ಣ ರೈತರು ತಮ್ಮ ಖರ್ಚಿನಲ್ಲಿ ಹೊಳು ತೆಗೆದು ನೀರು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

*

ನಾನು ಕೇವಲ ಐದು ತಿಂಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಗುಂದವಾನ ಕೆರೆಯ ಹತ್ತಿರ 400 ಮೀಟರ್‌ ಮಾತ್ರ ಕಾಲುವೆ ಹೋಳು ತಗೆಸಲಾಗಿದೆ. ಕೈಯಿಂದ ಹಾಕಲಾಗುವುದಿಲ್ಲ. ಕೆಲ ಗೇಟುಗಳಿಗೆ ಮಾತ್ರ ಅನುದಾನ ಬಂದಿದೆ. ಹಳೆಯ ವಿಷಯಗಳು ನನಗೆ ಗೊತ್ತಿಲ್ಲ.

- ಸಂದೀಪ್ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ

*

ಯೋಜನೆಗಳ ನಿರ್ವಹಣೆ ಸರಕಾರದ ಜವಾಬ್ದಾರಿ. ಹೋಳು ತುಂಬಿರುವುದರಿಂದ ಕೆರೆ ಒಡೆಯುವ ಅಪಾಯ ಹೆಚ್ಚಿದೆ. ಕೆರೆಗಳ ಹೋಳು ತಗೆಯದೆ ಅನೇಕ ಕೆರೆಗಳ ಅನುಧಾನ ಎತ್ತಿ ಹಾಕಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪಾಲುದಾರರಾದ ತಪ್ಪಿಸ್ಥ ಅಧಿಕಾರಿಗಳ ಶಿಸ್ತು ಕ್ರಮಕೈಗೊಳ್ಳಬೇಕು ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಏದುರು ಧರಣಿ ಸತ್ಯಾಗ್ರಹ ಮಾಡುವ ಮೂಲಕ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು.

ಸಂತೋಷ ಕಂಬಾಗಿ, ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾಧ್ಯಕ್ಷ