ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sowjanya Case: ಸೌಜನ್ಯ ಪ್ರಕರಣ: ಹೊಸ ವಿಶೇಷ ತನಿಖಾ ತಂಡದಿಂದ ಖಡಕ್ ಪೊಲೀಸ್ ಅಧಿಕಾರಿ ನಿರ್ಗಮನ?: ಅಧಿಕಾರಿಗಳ ಬದಲಾವಣೆಗೆ ʼಗ್ಯಾಂಗ್‌ʼ ಹೊಸ ದಾಳ

ಕರಾವಳಿಯನ್ನು ಈ ಹಿಂದೆ ತಲ್ಲಣಗೊಳಿಸಿದ್ದ ಬುರುಡೆ ಪ್ರಕರಣದ ಸಂದರ್ಭದಲ್ಲೂ ಇದೇ ತಂಡ ತಮಗೆ ಬೇಕಾದ ಅಧಿಕಾರಿಗಳನ್ನು ತಂದು ತನಿಖೆಯನ್ನು ಹಳ್ಳಹಿಡಿಸಲು ಹೂಡಿದ್ದ ಅದೇ ತಂತ್ರಗಾರಿಕೆ ಯ ದಾಳವನ್ನು, ಇಂದು ಸೌಜನ್ಯ ಪ್ರಕರಣದ ಮರು ತನಿಖೆಯಲ್ಲೂ ಹೂಡಲು ಹೊರಟಿರುವುದು ಅಪರಾಧ ತನಿಖಾ ಇತಿಹಾಸದ ನಿಖರ ಪುನರಾವರ್ತನೆಯಂತೆ ಗೋಚರಿಸುತ್ತಿದೆ.

ಜಿತೇಂದ್ರ ಕುಂದೇಶ್ವರ ಮಂಗಳೂರು

ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರಕಾರ ರಚಿಸಿರುವ ನೂತನ ವಿಶೇಷ ತನಿಖಾ ತಂಡ (ಎಸ್‌ಐಟಿ) ಕಾರ್ಯಾ ರಂಭ ಮಾಡುತ್ತಿ ದ್ದಂತೆಯೇ, ಇಡೀ ತನಿಖಾ ವ್ಯವಸ್ಥೆಯನ್ನೇ ಬೆಚ್ಚಿ ಬೀಳಿಸುವ ಸ್ಫೋಟಕ ಬೆಳವಣಿಗೆಯೊಂದು ಮುನ್ನೆಲೆಗೆ ಬಂದಿದೆ.

ನೂತನ ಎಸ್‌ಐಟಿ ತಂಡದಲ್ಲಿ ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದ ಸೂಪರ್ ಕಾಪ್ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ಅವರು ತಾವೇ ಸ್ವತಃ ಈ ತನಿಖಾ ತಂಡದಿಂದ ಹಿಂದೆ ಸರಿಯುವುದಾಗಿ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿರುವ ಮಾಹಿತಿ ಇದೀಗ ಹೊರಬಿದ್ದಿದೆ. ತನಿಖೆ ಆರಂಭವಾಗುವ ಮುನ್ನವೇ ದಕ್ಷ ಅಧಿಕಾರಿಯೊಬ್ಬರು ತಂಡದಿಂದ ಹೊರ ಬರಲು ಮುಂದಾಗಿರು ವುದು, ತೆರೆಮರೆಯಲ್ಲಿ ನಡೆಯುತ್ತಿರುವ ತೀವ್ರ ಒತ್ತಡ ತಂತ್ರಗಳು ಮತ್ತು ಬುರುಡೆ ಗ್ಯಾಂಗ್‌ನ ಹಳೆಯ ತಂತ್ರಗಾರಿಕೆಯ ದಾಳಗಳು ಮತ್ತೆ ಫಲ ನೀಡಲು ಆರಂಭಿಸಿವೆಯೇ ಎಂಬ ಗಂಭೀರ ಸಂಶಯಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Sowjanya case: ಸಿಕ್ಕಿಬಿದ್ದವರು ಇಂದು ಸಂಭ್ರಮಿಸುತ್ತಿದ್ದಾರೆ, ಮುಂದೆ...?: ಎಸ್‌ಐಟಿ ರಚನೆ ಹಿಂದಿನ ತಂಡ ಒಂದೇ!

ಕರಾವಳಿಯನ್ನು ಈ ಹಿಂದೆ ತಲ್ಲಣಗೊಳಿಸಿದ್ದ ಬುರುಡೆ ಪ್ರಕರಣದ ಸಂದರ್ಭದಲ್ಲೂ ಇದೇ ತಂಡ ತಮಗೆ ಬೇಕಾದ ಅಧಿಕಾರಿಗಳನ್ನು ತಂದು ತನಿಖೆಯನ್ನು ಹಳ್ಳ ಹಿಡಿಸಲು ಹೂಡಿದ್ದ ಅದೇ ತಂತ್ರಗಾರಿಕೆಯ ದಾಳವನ್ನು, ಇಂದು ಸೌಜನ್ಯ ಪ್ರಕರಣದ ಮರು ತನಿಖೆಯಲ್ಲೂ ಹೂಡಲು ಹೊರಟಿರುವುದು ಅಪರಾಧ ತನಿಖಾ ಇತಿಹಾಸದ ನಿಖರ ಪುನರಾವರ್ತನೆಯಂತೆ ಗೋಚರಿಸುತ್ತಿದೆ.

ಅಂದು ಧರ್ಮಸ್ಥಳದ ಪರಿಸರದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಕಟ್ಟುಕತೆ ಯನ್ನು ಮುಂದಿಟ್ಟುಕೊಂಡು ಮಹೇಶ್ ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ವಿಠಲ ಗೌಡ ಒಳಗೊಂಡ ತಂಡ ಸಾರ್ವಜನಿಕವಾಗಿ ಸಂಚಲನ ಸೃಷ್ಟಿಸಿತ್ತು.

ಸ್ಥಳೀಯ ಪೊಲೀಸ್ ವ್ಯವಸ್ಥೆಯ ಮೇಲೆ ಸಾರಾಸಗಟು ಅವಿಶ್ವಾಸ ವ್ಯಕ್ತಪಡಿಸಿ, ‘ಕೇರಳ ಪೊಲೀಸರೇ ತನಿಖೆ ನಡೆಸಬೇಕು’ ಎಂದು ಪಟ್ಟು ಹಿಡಿಯಲಾ ಗಿತ್ತು. ಆದರೆ ಅದು ಆಭಾಸ ಆಗಿದ್ದ ಕಾರಣ ರಾಜ್ಯ ಸರಕಾರ, ಕೊನೆಗೆ ಕರ್ನಾಟಕ ಪೊಲೀಸರೇ ತನಿಖೆ ನಡೆಸುವುದು ನಿಶ್ಚಯವಾದಾಗ ಪ್ರಣಬ್ ಮೊಹಂತಿ ಅವರೇ ನೇತೃತ್ವ ವಹಿಸಬೇಕು ಎಂದು ಹಠ ಹಿಡಿದಿತ್ತು. ಅಂದು ಸರಕಾರ ಇವರ ಒತ್ತಡಕ್ಕೆ ಮಣಿದು, ಬೇಕಾದ ಅಧಿಕಾರಿಗಳನ್ನೇ ತನಿಖೆಗೆ ನಿಯೋಜಿಸಿ ಪ್ರಣಬ್ ಮೊಹಂತಿ ನೇತೃತ್ವ ದಲ್ಲಿ ಎಸ್‌ಐಟಿ ರಚಿಸಿದ್ದು ಇತಿಹಾಸ.

ಇದನ್ನೂ ಓದಿ: Sowjanya Case: ವೈರುಧ್ಯದ ಹೇಳಿಕೆಗಳು: ಸೌಜನ್ಯ ಪ್ರಕರಣ: 8 ಸುಳ್ಳುಗಳು, ದಿಢೀರ್ ಹುಟ್ಟಿದ 20 ಸಾಕ್ಷಿಗಳು

ಆದರೆ ದಿನಬೆಳಗಾದರೆ ಮಾಧ್ಯಮಗಳ ಮುಂದೆ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದ ತಂಡ ಮಾನವ ತಲೆಬುರುಡೆ ತಂದು ಪ್ರದರ್ಶಿಸಿ ಇಡೀ ರಾಜ್ಯವನ್ನಲ್ಲ ಇಡೀ ದೇಶವನ್ನೇ ಮಂಗ ಮಾಡಿತ್ತು. ಕೊನೆಗೆ ಗುಡ್ಡ ಅಗೆದು ಇಲಿ ಹಿಡಿದದ್ದು ಇತಿಹಾಸ. ಅಸ್ತಿತ್ವದ ಇಲ್ಲದ ಅನನ್ಯ ಭಟ್ ಎಂಬ ವೈದ್ಯಕೀಯ ವಿದ್ಯಾರ್ಥಿನಿಯ ಕೊಲೆಯ ಕತೆ ಹಾಗೂ ಸುಜಾತಾ ಭಟ್ ಹೆಣೆದ ಸುಳ್ಳು ಸಾಕ್ಷಿಗಳು ಎಸ್‌ಐಟಿ ತನಿಖೆಯ ಮುಂದೆ ಧರಾಶಾಹಿಯಾಗಿ, ಷಡ್ಯಂತ್ರ ರೂಪಿಸಿದವರೆಲ್ಲ ಕಾನೂನು ಕ್ರಮದ ಭೀತಿಯಿಂದ ತಲೆಮರೆಸಿಕೊಳ್ಳ ಬೇಕಾಯಿತು. ಆದರೆ ಸರಕಾರದ ಮೃಧು ಧೋರಣೆಯಿಂದಾಗಿ ಸ್ವಲ್ಪ ಸಮಯ ತಲೆಮರೆಸಿ ಕೊಂಡಿದ್ದವರೆಲ್ಲ ಈಗ ಬಂದು ಅಟ್ಟಹಾಸ ಶುರು ಮಾಡಿದ್ದಾರೆ.

ಇಂದು ಅದೇ ತಂಡ ಸೌಜನ್ಯ ಮರುತನಿಖೆ ಯಲ್ಲೂ ಅದೇ ಹಳೆಯ ‘ಮೋಡಸ್ ಅಪರಂಡಿ’ಯನ್ನು ಮುನ್ನೆಲೆಗೆ ತಂದಿದೆ. ಗೃಹ ಇಲಾಖೆ ಹೊರಡಿಸಿರುವ ಆದೇಶದ ಅನ್ವಯ, ಐಪಿಎಸ್ ಅಧಿಕಾರಿ ಎನ್.ಶಶಿಕುಮಾರ್ ನೇತೃತ್ವದಲ್ಲಿ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ, ಸುಧೀರ್ ಕುಮಾರ್ ರೆಡ್ಡಿ, ನಿಶಾ ಜೇಮ್ಸ ಹಾಗೂ ಲೋಕೇಶ್ ಜಗಲಾಸರ್ ಅವರನ್ನೊಳಗೊಂಡ ಪ್ರಬಲ ಎಸ್‌ಐಟಿ ತಂಡ ರಚನೆಯಾಗಿತ್ತು.

ಆದರೆ ಈ ಪಟ್ಟಿಯಲ್ಲಿ ಸೂಪರ್ ಕಾಪ್ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ಹಾಗೂ ಎನ್. ಶಶಿಕುಮಾರ್ ಅವರ ಹೆಸರುಗಳು ಇರುವುದೇ ಈ ಹಿತಾಸಕ್ತಿ ಗ್ಯಾಂಗ್‌ನಲ್ಲಿ ಮೊದಲಿನಿಂದಲೂ ನಡುಕ ಹುಟ್ಟಿಸಿತ್ತು. ಡಾ. ಎಚ್.ಎನ್.ವೆಂಕಟೇಶ್ ಪ್ರಸನ್ನ ಅವರು ಈ ಹಿಂದೆ ಗುಪ್ತಚರ ವಿಭಾಗ ದಲ್ಲಿದ್ದಾಗಲೇ ಕರಾವಳಿಯ ನಕ್ಸಲ್ ಕಾರ್ಯಾಚರಣೆ, ನಗರ ನಕ್ಸಲ್ ಜಾಲಗಳು ಹಾಗೂ ಇದೇ ಬುರುಡೆ ಗ್ಯಾಂಗ್‌ನ ಹಿಂದಿರುವ ಅನುಮಾನಾಸ್ಪದ ಹಣಕಾಸು ದೇಣಿಗೆಗಳ ಆಳವಾದ ಮಾಹಿತಿ ಕಲೆಹಾಕಿದ ದಾಖಲೆ ಹೊಂದಿzರೆ. ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನಿಖರ ಸಾಕ್ಷ್ಯಾಧಾರಗಳ ನಿಷ್ಠುರ ಕಡತ ಸಿದ್ಧಪಡಿಸುವ ಅವರ ಶೈಲಿ ಈ ಗ್ಯಾಂಗ್‌ಗೆ ಸಿಂಹಸ್ವಪ್ನವಾಗ ಬಹುದಿತ್ತು.

ಇನ್ನೊಂದೆಡೆ, ಮಂಗಳೂರು ಪೊಲೀಸ್ ಆಯುಕ್ತರಾಗಿದ್ದ ಎನ್. ಶಶಿಕುಮಾರ್ ಅವರು ಹುಬ್ಬಳ್ಳಿಗೆ ವರ್ಗಾವಣೆಗೊಂಡಿದ್ದಾಗ ಅಲ್ಲಿ ಕ್ರಿಮಿನಲ್‌ಗಳ ಪರೇಡ್ ನಡೆಸಿದ್ದರು. ಹಿಂದೆ ಗಿರೀಶ್ ಮಟ್ಟಣ್ಣ ನವರ್ ಜತೆ ಮಾನವ ಹಕ್ಕುಗಳ ಅಧಿಕಾರಿ ಎಂಬಂತೆ ಪೋಸ್ ಕೊಟ್ಟು ಜಾಲತಾಣಗಳಲ್ಲಿ ಮೆರೆದಿದ್ದ ವ್ಯಕ್ತಿ, ಹುಬ್ಬಳ್ಳಿಯ ಆ ಪರೇಡ್‌ನಲ್ಲಿ ಸಾಮಾನ್ಯ ಕ್ರಿಮಿನಲ್‌ನಂತೆ ನಿಂತಿದ್ದನ್ನು ಸಾಬೀತುಪಡಿಸಿ ಆತನ ಮುಖವಾಡ ಕಳಚಿದ್ದು ಇದೇ ಶಶಿಕುಮಾರ್.

ಇಂತಹ ನಿಷ್ಠುರ ಅಧಿಕಾರಿಗಳ ಉಪಸ್ಥಿತಿಯೇ ಇಂದು ಈ ತಂಡಕ್ಕೆ ನುಂಗಲಾರದ ತುತ್ತಾಗಿತ್ತು. ಈಗ ವೆಂಕಟೇಶ್ ಪ್ರಸನ್ನ ಅವರೇ ಸ್ವತಃ ತನಿಖಾ ತಂಡದಿಂದ ಹಿಂದೆ ಸರಿಯಲು ಪತ್ರ ಬರೆದಿರುವ ಬೆಳವಣಿಗೆಯು, ಈ ತಂಡ ರೂಪಿಸುತ್ತಿರುವ ತೆರೆಮರೆಯ ಒತ್ತಡ ಎಷ್ಟು ತೀವ್ರವಾಗಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.

ಇದೇ ಹೊತ್ತಿನಲ್ಲಿ, ಸಂತ್ರಸ್ತೆಯ ತಾಯಿ ಕುಸುಮಾವತಿ ಗೌಡ ಅವರ ಹೆಸರಿನಲ್ಲಿ ವಕೀಲ ಅಶುತೋಷ್ ದುಬೆ ಅವರು ಎಸ್‌ಐಟಿ ಮುಖ್ಯಸ್ಥರಿಗೆ ಪತ್ರ ಬರೆದು, ‘ಹಿಂದಿನ ತನಿಖೆಯಲ್ಲಿ ಹಿರಿಯ ಅಧಿಕಾರಿಗಳ ಮೌಖಿಕ ಸೂಚನೆ ಹಾಗೂ ಒತ್ತಡದಿಂದಲೇ ಸಾಕ್ಷ್ಯಗಳು ಹಾಳಾಗಿವೆ’ ಎಂದು ಆಪಾದಿಸುತ್ತಾ ಹೊಸ ತನಿಖೆಗೆ ನಿಯಮಾವಳಿಗಳ ಷರತ್ತು ವಿಧಿಸಲು ಮುಂದಾಗಿದ್ದಾರೆ.

ಅಂದು ಚಿನ್ನಯ್ಯನಿಗೆ ಮಾಸ್ಕ್ ಧರಿಸಿ ‘ಸಾಕ್ಷಿ ರಕ್ಷಣಾ ಕಾಯ್ದೆ’ಯ ಕವಚ ತೊಡಿಸಿ ಷರತ್ತುಗಳ ಬೇಲಿ ಹಾಕಿದಂತೆ, ಇಂದು ಸಂತೋಷ್ ರಾವ್‌ಗೆ ಸಿಕ್ಕಿರುವ ‘ಡಬಲ್ ಜಿಯೋಪಾರ್ಡಿ’ ಸಾಂವಿಧಾನಿಕ ರಕ್ಷಣೆ ಮತ್ತು ಬಟ್ಟೆಯ ಮೇಲಿನ ಅಪ್ರಸ್ತುತ ‘ಕೂದಲಿನ ತನಿಖೆ’ಯ ಜತೆಗೆ, ತನಿಖಾಧಿಕಾರಿಗಳನ್ನೇ ಬದಲಾಯಿಸುವಂತೆ ವ್ಯವಸ್ಥಿತ ಒತ್ತಡ ಹೇರಲಾಗುತ್ತಿದೆ. ಅಂದು ಬುರುಡೆ ಪ್ರಕರಣದಲ್ಲಿ ಆರೋಪಿಗಳ ಒತ್ತಾಯಕ್ಕೆ ಮಣಿದು ತಮಗೆ ಬೇಕಾದ ಅಧಿಕಾರಿಗಳನ್ನು ಕೂರಿಸಿಕೊಂಡಿದ್ದ ಸರಕಾರ, ಇಂದು ಮತ್ತೆ ಅದೇ ಕೋಳಿಯನ್ನು ಕೇಳಿ ಮಸಾಲೆ ಅರೆಯುವ ತಪ್ಪನ್ನು ಪುನರಾವರ್ತಿಸುತ್ತದೆಯೇ ಎಂಬುದು ಈಗಿನ ಗಂಭೀರ ಪ್ರಶ್ನೆ.

ಒಬ್ಬ ದಕ್ಷ ಅಧಿಕಾರಿ ತನಿಖೆಯಿಂದ ಹಿಂದೆ ಸರಿಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ತನಿಖಾ ಸಂಸ್ಥೆಗಳ ಸ್ವಾತಂತ್ರ್ಯದ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ರಾಜ್ಯ ಸರಕಾರ ಈ ತೆರೆಮರೆ ಯ ಹುನ್ನಾರಕ್ಕೆ ಮಣಿಯದೆ ನಿಷ್ಠುರ ಅಽಕಾರಿಗಳಿಗೆ ಸಂಪೂರ್ಣ ಮುಕ್ತ ಸ್ವಾತಂತ್ರ್ಯ ನೀಡಿ ನೈಜ ಸತ್ಯವನ್ನು ಬಯಲಿಗೆಳೆಯಲು ದಾರಿ ಮಾಡಿಕೊಡುತ್ತದೆಯೇ ಅಥವಾ ಹಳೇ ಇತಿಹಾಸವೇ ಮರುಕಳಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಮಹತ್ವದ ಮನವಿ

ಹೊಸದಾಗಿ ಆರಂಭವಾಗುತ್ತಿರುವ ತನಿಖೆಯ ಹಾದಿಯಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಕಾನೂನು ಅಧಿಕಾರಿಗಳು ನೀಡುವ ನಿರ್ದೇಶನ, ಸಲಹೆ ಅಥವಾ ಮಾರ್ಗದರ್ಶನಗಳು ಕಡ್ಡಾಯ ವಾಗಿ ಲಿಖಿತ ರೂಪದ ಇರಬೇಕು ಮತ್ತು ಅವುಗಳನ್ನು ಅಧಿಕೃತ ಕಡತಗಳಲ್ಲಿ ಭದ್ರವಾಗಿ ದಾಖಲಿಸಬೇಕು ಎಂದು ಸೌಜನ್ಯ ತಾಯಿ ಪರ ವಕೀಲರು ಆಗ್ರಹಿಸಿದ್ದಾರೆ.