ಹರೀಶ್ ತಿಮ್ಮಪ್ಪಯ್ಯನಹಳ್ಳಿ, ನಾಯಕನಹಟ್ಟಿ
ನಾಯಕನಹಟ್ಟಿ ಪುಣ್ಯಕ್ಷೇತ್ರದಲ್ಲಿ ವಿಶೇಷ ಉತ್ಸವ
ಒಳಮಠ, ಹೊರಮಠ ಮತ್ತು ಏಕಾಂತೇಶ್ವರ ಮಠಗಳಲ್ಲಿ ಸಾಂಪ್ರದಾಯಿಕ ಪೂಜೆ
ನಾಯಕನಹಟ್ಟಿ ಪುಣ್ಯಕ್ಷೇತ್ರದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು ಪವಾಡಗೈದ ಒಳಮಠ, ಹೊರಮಠ ಮತ್ತು ಏಕಾಂತೇಶ್ವರ ಮಠಗಳನ್ನು ಇಲ್ಲಿ ಕಾಣಬಹುದು. ಶ್ರೀಗುರು ತಿಪ್ಪೇರುದ್ರಸ್ವಾಮಿಯ ಬೃಹತ್ ಮಟ್ಟದ ರಥೋತ್ಸವ ಮಾ.06ರಂದು ಜರುಗಲಿದೆ.
ಒಳಮಠ ಐತಿಹಾಸಿಕ ಹಿನ್ನಲೆ: ಊರ ಮಧ್ಯದಲ್ಲಿರುವ ಮಠವೇ ಒಳಮಠ, ಊರ ಒಳಗೆ ಈ ಮಠವಿರುವದರಿಂದ ಒಳಮಠವೆಂದು ಕರೆಯುವ ವಾಡಿಕೆ. ಈ ಮಠಕ್ಕೆ ಹಿರೇಮಠ, ದರ್ಬಾಟ ಮಠವೆಂತಲೂ ಕರೆಯಲಾಗುತ್ತಿದೆ. ಶ್ರೀಗಳ ಜೀವಿತ ಕಾಲದಲ್ಲಿ ಈ ಮಠದಲ್ಲಿಯೇ ಇದ್ದು ರಾಜ- ಮಹಾರಾಜರಿಗೆ, ಭಕ್ತಾದಿಗಳಿಗೆ ದರ್ಶನ ನೀಡುವುದಲ್ಲದೆ ಅವರ ಕಷ್ಟ-ಸುಖ ಗಳನ್ನು ವಿಚಾರಿಸುತ್ತಿದ್ದರು. ಅವುಗಳಿಗೆ ಪರಿಹಾರವನ್ನು ಸೂಚಿಸಿ, ಆಶೀರ್ವದಿಸುತ್ತಿದ್ದರು. ಹೀಗಾಗಿ ಈ ಮಠವನ್ನು ದರ್ಬಾರು ಮಠವೆಂದು ಕರೆಯುವ ವಾಡಿಕೆಗೆ ಕಾರಣ ವಾಗಿದೆ.
ವಿಶೇಷ ಉತ್ಸವಾದಿಗಳು, ಪೂಜಾ ವಿಧಾನ ಸಲ್ಲಿಕೆ: ಈ ಮಠವು ಈ ಕ್ಷೇತ್ರದ ಕೇಂದ್ರ ಬಿಂದುವಾಗಿದೆ, ಈ ಕ್ಷೇತ್ರದ ಆರಾಧ್ಯ ದೈವವಾದ ದಿವ್ಯ ಶಿವಲಿಂಗ ಈ ಮಠದಲ್ಲಿಯೇ ಇದೇ, ಸ್ಥಳೀಯ ಸಂಪ್ರದಾಯ ಪದ್ದತಿಗಳಂತೆ ಅದ್ದೂರಿಯಾದ ದೈನಂದಿನ ಪೂಜಾ ಕಾರ್ಯಗಳು ನಡೆಯುತ್ತಿವೆ. ಈ ಸ್ಥಳದಿಂದಲೇ ಶ್ರೀಸ್ವಾಮಿಯ ಉತ್ಸವ ಮೂರ್ತಿ ಹೊರಡುತ್ತದೆ.
ಸಕಲ ಬಿರುದಾವಳಿಯೊಂದಿಗೆ ಶ್ರೀಸ್ವಾ ವಿಯವರ ಜೀವೈಕ್ಯ ಸಮಾಧಿಯಾದ ಹೊರಮಠಕ್ಕೆ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಶ್ರಾವಣ ನವರಾತ್ರಿ, ಕಾರ್ತಿಕ ಮಾಸ, ಪಾಲ್ಗುಣ, ಧನರ್ಮಾ ಸದಲ್ಲಿ ವಿಶೇಷ ಉತ್ಸವಾದಿಗಳು ಪೂಜೆಗಳು ಸಂಪ್ರದಾಯ ಬದ್ಧವಾಗಿ ನಡೆಯುವುದು.
ಇದನ್ನೂ ಓದಿ: Karnataka Budget 2026: ಆರೋಗ್ಯ ಇಲಾಖೆಯಲ್ಲಿ 2,500 ಖಾಲಿ ಹುದ್ದೆ ಭರ್ತಿ, ಟೈಪ್-1 ಮಧುಮೇಹಿಗಳಿಗೆ ಉಚಿತ ಇನ್ಸುಲಿನ್ ಪೆನ್
ಶಿಲ್ಪ ಕಾಲಾಕೃತಿಯಲ್ಲಿ ಗರ್ಭಗುಡಿ ವಿನ್ಯಾಸ: ಈ ಮಠದ ಗರ್ಭಗುಡಿಯ ಮುಖ ಭಾಗದಲ್ಲಿಯ ಪ್ರಕಾರದಲ್ಲಿ 18 ಶಿಲಾಕಂಬಗಳಿದ್ದು, ಪ್ರತಿಯೊಂದು ಕಂಬಗಳಲ್ಲಿ ವಿಶೇಷ ವಾದ ಶಿಲ್ಪ ಕಾಲಾ ಕೆತ್ತನೆಯ ಕೆಲಸವಲ್ಲಡಗಿದೆ, ಅವುಗಳಲ್ಲಿ ವಿಷ್ಣು ಅವತಾರ, ಶಿವ ಪಾರ್ವತಿ, ಭರತನಾಟ್ಯ, ಮಾಡುವ ದೃಶ್ಯಗಳನ್ನು ಸುಂದರವಾಗಿ ಬಿಡಿಸಲಾಗಿದೆ.
ಈ ಕಂಬವೊಂದರಲ್ಲಿಯ ತುಂಬಾ ಆಕರ್ಷಿಣೀಯವಾಗಿದೆ. ಹಲ್ಲು ಚಿತ್ರವನ್ನು ವಿಭಿನ್ನ ದೃಷ್ಟಿ ಕೋನದಿಂದ ನೋಡಿದರು ಕಾಣುವ ಚಿತ್ರ ಒಂದೇಯಾಗಿದೆ. ಮಧ್ಯ ಮಂಟಪಕ್ಕೆ ಬಂದಾಗ ನವನಾಡಿ ಕುಂಜರ ಎಂದು ಕರೆಯಲ್ಪಡುವ ಕಂಬವೊಂದರಲ್ಲಿಯ ಚಿತ್ರ ಒಂದೇ ಆನೆಯ ಗಭರ್ದಲ್ಲಿ 9 ನಾರೆಯರ ಆನೆ ಚಿತ್ರ ಆ ಆನೆಯ ಮೇಲೆ ಮನ್ಮತನ ಆರೋಹಣ ಮಾಡಿದ ಚಿತ್ರಕ್ಕೆ ಗಜರ್ಭ ಎಂತಲೂ ಕರೆಯುವ ವಾಡಿಕೆ ಇದೇ.
ಈ ಚಿತ್ರದ ಬಗ್ಗೆ ಪ್ರತಿಯೊಂದು ಈಗಲೂ ಚಾಲ್ತಿಯಲ್ಲಿದೆ. ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ನೋವು ಕಾಣಿಸಿ ಕೊಂಡು ಹೆರಿಗೆ ವಿಳಂಭವಾದಾಗ ಈ ನವನಾರಿ ಕಂಬಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಹೆರಿಗೆ ಬೇಗನೆ ಸರಳವಾಗಿ ಆಗುತ್ತದೆ ಎಂಬ ನಂಬಿಕೆಯಿದ್ದು, ಈಗಲೂ ಗರ್ಭಿಣಿ ಸ್ತ್ರೀಯರನ್ನು ಹೆಚ್ಚಾಗಿ ಆಕರ್ಷಿಸುತ್ತದೆ.
ಮಧ್ಯ ಮಂಟಪದಲ್ಲಿ ನಿಂತ ಮೇಲೆ ಮುಖಮಾಡಿ ಮಧ್ಯದ ಮೇಲ್ಚಾವಣಿಯನ್ನು ನೋಡಿ ದಾಗ ಶಿಲ್ಪಕಲಾ ಚಾತುರ್ಯದ ಸಂಗಮವೇ ಆಗಿರುವ ಭೂಮಿಗೆ ಮುಖ ಮಾಡಿಕೊಂಡು ಬಾಳೆಯ ಮುಖವನ್ನು ಹೊರಚಾಚಿದಂತಿರುವ ಭುವನೇಶ್ವರಿ ಕಮಲ, ಶಿಲ್ಪಕಲಾ, ಚಾತುರ್ಯದ ಪರಾಕಾಷ್ಟೆಯನ್ನು ತಲುಪಿದೆ.
ಕಮಲವು 5 ಸುತ್ತುಳ್ಳ ದಳಗಳನ್ನು ಹೊಂದಿದ್ದು, ಪ್ರತಿಯೊಂದು ಸುತ್ತಿನಲ್ಲಿ ಮನ ಮೊಹಕ ರವಾದ ಪೌರಾಣಿಕ ಹಿನ್ನಲೆಯ ಸನ್ನಿವೇಶಗಳನ್ನು ಸುಂದರವಾಗಿ ಬಿಡಿಸಲಾಗಿದೆ. ಅವು ಶಿವನ ಅವತಾರ, ಗಿರೀಜ ಕಲ್ಯಾಣ, ತ್ರೀಪುರಸಂಹಾರ, ಹಾಗೂ ವೈವಿದ್ಯ ಮಯ ವಾದ ಸನ್ನಿವೇಶಗಳ ಚಿತ್ರಣಗಳಿವೆ.
ಯೂರೋಪಿಯನ್ನರ ಗಾರೆ ಶಿಲ್ಪವು ಮನಮೋಹಕ: ಈ ಒಳಮಠದ ಪ್ರಕಾರದ ರಾಜಗೋಪುರವು ಇಟ್ಟಿಗೆ ಗಾರೆಯಿಂದ ಕಟ್ಟಲಾಗಿದ್ದು, ಹೊರ ಗೋಡೆಗಳ ಮೇಲಿರುವ ಗಾರೆ ಶಿಲ್ಪಗಳಲ್ಲಿ ಯೂರೋಪಿಯನ್ನರ ಗಾರೆ ಶಿಲ್ಪವು ಮನಮೋಹಕವಾಗಿದೆ. ಈ ಶಿಲ್ಪದ ಸನ್ನಿವೇಶ ಒಂದರಲ್ಲಿ ಒಬ್ಬ ಫ್ರೇಂಚ್ ಅಧಿಕಾರಿಯನ್ನು ಮತ್ತು ಅವನ ಕುಟುಂಬದವ ರನ್ನು ದೇಶಿಯವರು ಸ್ವಾಗತಿಸುತ್ತಿರುವ ಚಿತ್ರವಿದ್ದಂತಿದೆ.
ಈ ಚಿತ್ರಗಳಲ್ಲದೆ ನಮ್ಮ ಪೌರಾಣಿಕ ಸನ್ನಿವೇಶಗಳನ್ನು ತಿಳಿಸುವಂತೆ ಮಹಿಷ ಮರ್ದಿನಿ ವಿಷ್ಣು ಅವತಾರ, ಉಗ್ರ ನರಸಿಂಹ, ಸೀತಾರಾಮಾಂಜನೇಯ, ಗಣೇಶ, ಆಂಜನೇಯ ಹಾಗೂ ಯುದ್ಧದ ಸನ್ನಿವೇಶಗಳು ಅಷ್ಟೆ ಮೋಹಕ ವಾಗಿರುವುದು ವಿಶೇಷವಾಗಿದೆ.
ರಾಜಗೋಪುರದ ಹೊರ ಮತ್ತು ಒಳಗೋಡೆಗಳಲ್ಲಿ ಯೂರೋಪಿಯನ್ನರ ಗಾರೆಯ ಉಬ್ಬು ಶಿಲ್ಪಗಳನ್ನು ಕರ್ನಾಟಕದ ಬೇರೆ ದೇವಾಲಯಗಳಲ್ಲಿ ಕಾಣುವುದು ಅಪರೂಪವಾಗಿದೆ.
ಹೊರಮಠ ಹಿನ್ನಲೆ: ಊರ ಹೊರಗಿರುವ ಮಠಕ್ಕೆ ಹೊರ ಮಠವೆಂದು ಕರೆಯುವ ವಾಡಿಕೆ ಚಿಕ್ಕ ಕೆರೆ ಪಕ್ಕದಲ್ಲಿರುವ ಹೊರಮಠ ಶ್ರೀಗಳು ಜೀವೈಕ್ಯ ಸಮಾಧಿ ಹೊಂದಿರುವ ಸ್ಥಳವಾ ಗಿದೆ. ಸಮಾಧಿಯ ಮೇಲೆ ನಿರ್ಮಿತವಾದ ಅರ್ಧ ಗೋಳಾಕಾರದ ಇಂಡೋ-ಇಸ್ಲಾಮಿಕ್ ಶೈಲಿಯ ಗುಮ್ಮಟ್ಟ ಹಿಂದು-ಮುಸ್ಲಿಂರ ಭಾವೈಕ್ಯತೆಯ ಸಂದೇಶ ಸಾರುವ ಸಂಕೇತವಾಗಿದೆ.
ಏಕಾಂತಸ್ವಾಮಿ ಮಠ: ಚಳ್ಳಕೆರೆಗೆ ಹೋಗುವ ಮಾರ್ಗದಲ್ಲಿರುವುದೇ ಏಕಾಂತ ಸ್ವಾಮಿಯ ಮಠ. ಶ್ರೀಗಳು ಅನುಷ್ಠಾನಕೈದ ಸ್ಥಳವಾಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಉತ್ಸವಗಳ ರಾಜ ನೆಂದು ಕರೆಯಲ್ಪಡುವ ದೊಡ್ಡರಥೋತ್ಸವ ಪಾಲ್ಗುಣ ಮಾಸದ ಚಿತ್ತಾ ನಕ್ಷತ್ರದ ಮಧ್ಯಾಹ್ನ ಜರುಗತ್ತದೆ. ಅಂದು ಪ್ರಾಥಕಾಲ 9 ಗಂಟೆಯಿಂದ ವೃಷಭವಾಹನ ಯುಕ್ತ ಚಿಕ್ಕ ರಥೋತ್ಸವ ನಡೆಯುತ್ತದೆ ಮದ್ಯಾಹ್ನ 12 ಗಂಟೆಯಿಂದ ದೊಡ್ಡ ರಥೋತ್ಸವಕ್ಕೆ ಸಿದ್ಧತೆ ಗಳು ನಡೆಯುತ್ತವೆ.
ಯೂರೋಪಿಯನ್ನರ ಗಾರೆ ಶಿಲ್ಪ
ಈ ಒಳಮಠದ ಪ್ರಕಾರದ ರಾಜಗೋಪುರವು ಇಟ್ಟಿಗೆ ಗಾರೆಯಿಂದ ಕಟ್ಟಲಾಗಿದ್ದು, ಹೊರ ಗೋಡೆಗಳ ಮೇಲಿರುವ ಗಾರೆ ಶಿಲ್ಪಗಳಲ್ಲಿ ಯೂರೋಪಿಯನ್ನರ ಗಾರೆ ಶಿಲ್ಪವು ಮನಮೋಹಕವಾಗಿದೆ. ಈ ಶಿಲ್ಪದ ಸನ್ನಿವೇಶ ಒಂದರಲ್ಲಿ ಒಬ್ಬ ಫ್ರೆಂಚ್ ಅಧಿಕಾರಿಯನ್ನು ಮತ್ತು ಅವನ ಕುಟುಂಬದವರನ್ನು ದೇಶಿಯವರು ಸ್ವಾಗತಿಸುತ್ತಿರುವ ಚಿತ್ರವಿದ್ದಂತಿದೆ. ಏಕೆಂದರೆ ಅವರು ಧರಿಸುವ ಉಡುಪು ಸೊಂಟದಲ್ಲಿರುವ ಕೀರುಗತ್ತಿ ಮುಂತಾದವು ಫ್ರೆಂಚರು 18 ಶತಮಾನದಲ್ಲಿ ಧರಿಸುತ್ತಿದ್ದ ಉಡುಪುಗಳನ್ನು ಹೋಲುತ್ತವೆ.