ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಾಮುಂಡಿಬೆಟ್ಟದ ತಪ್ಪಲಿನಲ್ಲಿ 81 ಕೋಟಿ ವೆಚ್ಚದ ಅತ್ಯಾಧುನಿಕ ತಾರಾಲಯ

ಇದು ಕೇವಲ ಆಕಾಶಕಾಯಗಳ ಪರಿಚಯ ಮಾಡಿಸುವ ತಾರಾಲಯವಲ್ಲ; ಬದಲಿಗೆ, ಬಾಹ್ಯಾಕಾಶದ ವಿಸ್ಮಯಗಳನ್ನು ಹೊಸ ತಂತ್ರಜ್ಞಾನದ ಮೂಲಕ ಜನರ ಕಣ್ಣಮುಂದೆ ತೆರೆದಿಡುವ ಮಹತ್ವಾಕಾಂಕ್ಷಿ ಯೋಜನೆ. ವಿಶ್ವದ ಮೊದಲ ಬಾಗಿದ ಗುಮ್ಮಟಾಕೃತಿಯ ಎಲ್‌ಇಡಿ ತಾರಾಲಯ ಎಂಬ ಹೆಗ್ಗಳಿಕೆಯನ್ನು ಪಡೆಯುವ ಉದ್ದೇಶ ಹೊಂದಿರುವ ಈ ಕೇಂದ್ರ, ಮೈಸೂರಿನ ವೈಜ್ಞಾನಿಕ ಮತ್ತು ಶೈಕ್ಷಣಿಕ ಪರಂಪರೆಗೆ ಹೊಸ ಆಯಾಮ ನೀಡುವ ನಿರೀಕ್ಷೆ ಮೂಡಿಸಿದೆ.

ಕೆ.ಜೆ.ಲೋಕೇಶ್ ಬಾಬು ಮೈಸೂರು

ಖಗೋಳ ಕೌತುಕ 8ಕೆ ರೆಸಲ್ಯೂಶನ್‌ನಲ್ಲಿ ನೋಡಲು ಸಹಕಾರಿ ಆಗುವಂತೆ 81 ಕೋಟಿ ರು. ವೆಚ್ಚ ದಲ್ಲಿ ಮೈಸೂರಿನಲ್ಲಿ ಗುಮ್ಮಟ ಆಕಾರದ ತಾರಾ ಯಲ ನಿರ್ಮಾಣ ಹಂತದಲ್ಲಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಈ ತಾರಾಲಯದಿಂದ ಆಕಾಶದಾಚೆ ಏನಿದೆ? ನಕ್ಷತ್ರಗಳ ಜನನ ಹೇಗೆ? ಗ್ರಹಗಳ ಚಲನೆಯ ಹಿಂದಿನ ರಹಸ್ಯವೇನು? ಬ್ರಹ್ಮಾಂಡದ ಅಗಾಧತೆಯನ್ನು ಕಣ್ಣಾರೆ ಕಂಡ ಅನುಭವ ಪಡೆಯುವುದು ಹೇಗೆ? ಇಂತಹ ಅನೇಕ ಕುತೂಹಲಗಳಿಗೆ ವಿಜ್ಞಾನದ ಬೆಳಕಿನಲ್ಲಿ ಉತ್ತರ ಸಿಗ ಲಿದೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ ತಾರಾಲಯ, ಜ್ಞಾನ ಮತ್ತು ತಂತ್ರಜ್ಞಾನದ ಸಂಗಮವಾಗಿ ರೂಪುಗೊಳ್ಳುತ್ತಿದೆ.

ಇದು ಕೇವಲ ಆಕಾಶಕಾಯಗಳ ಪರಿಚಯ ಮಾಡಿಸುವ ತಾರಾಲಯವಲ್ಲ; ಬದಲಿಗೆ, ಬಾಹ್ಯಾಕಾಶದ ವಿಸ್ಮಯಗಳನ್ನು ಹೊಸ ತಂತ್ರಜ್ಞಾನದ ಮೂಲಕ ಜನರ ಕಣ್ಣಮುಂದೆ ತೆರೆದಿಡುವ ಮಹತ್ವಾಕಾಂಕ್ಷಿ ಯೋಜನೆ. ವಿಶ್ವದ ಮೊದಲ ಬಾಗಿದ ಗುಮ್ಮಟಾಕೃತಿಯ ಎಲ್‌ಇಡಿ ತಾರಾಲಯ ಎಂಬ ಹೆಗ್ಗಳಿಕೆಯನ್ನು ಪಡೆಯುವ ಉದ್ದೇಶ ಹೊಂದಿರುವ ಈ ಕೇಂದ್ರ, ಮೈಸೂರಿನ ವೈಜ್ಞಾನಿಕ ಮತ್ತು ಶೈಕ್ಷಣಿಕ ಪರಂಪರೆಗೆ ಹೊಸ ಆಯಾಮ ನೀಡುವ ನಿರೀಕ್ಷೆ ಮೂಡಿಸಿದೆ.

ಗುಮ್ಮಟವೇ ಆಗಲಿದೆ ಬ್ರಹ್ಮಾಂಡದ ಕಿಟಕಿ: ಮೈಸೂರು ವಿಶ್ವವಿದ್ಯಾಲಯದ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಈ ತಾರಾಲಯದ ಪ್ರಮುಖ ಆಕರ್ಷಣೆ ಅದರ ಅತ್ಯಾಧುನಿಕ ತಂತ್ರಜ್ಞಾನ. ಬರೋಬ್ಬರಿ 15 ಮೀಟರ್ ವ್ಯಾಸದ ಎಲ್‌ಇಡಿ ಗುಮ್ಮಟದಲ್ಲಿ 8ಕೆ ರೆಸಲ್ಯೂಶನ್‌ನ ದೃಶ್ಯಾನುಭವವನ್ನು ಒದಗಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.

ಇದನ್ನೂ ಓದಿ: Mysuru Dasara 2026: ಆಕರ್ಷಕ ಪಂಜಿನ ಕವಾಯತಿನೊಂದಿಗೆ ಮೈಸೂರು ದಸರಾಗೆ ಅದ್ಧೂರಿ ತೆರೆ

ನಕ್ಷತ್ರಮಂಡಲಗಳು, ಗ್ರಹಗಳು, ಗೆಲಕ್ಸಿಗಳು ಹಾಗೂ ದೂರದ ಬಾಹ್ಯಾಕಾಶದ ವಿದ್ಯಮಾನಗಳನ್ನು ಉನ್ನತ ಗುಣಮಟ್ಟದ ದೃಶ್ಯಗಳ ಮೂಲಕ ಪರಿಚಯಿಸುವ ಸಾಮರ್ಥ್ಯ ಈ ತಂತ್ರಜ್ಞಾನದ ವಿಶೇಷತೆ. ಸಾಂಪ್ರದಾಯಿಕ ತಾರಾಲಯಗಳ ಅನುಭವಕ್ಕಿಂತ ಭಿನ್ನವಾಗಿ, ಗುಮ್ಮಟದ ವಿನ್ಯಾಸ ಮತ್ತು ಎಲ್‌ಇಡಿ ತಂತ್ರಜ್ಞಾನವು ಪ್ರೇಕ್ಷಕರಿಗೆ ಹೆಚ್ಚು ಜೀವಂತವಾದ ಬಾಹ್ಯಾಕಾಶ ಅನುಭವವನ್ನು ಒದಗಿಸುವ ನಿರೀಕ್ಷೆಯಿದೆ. ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಜಪಾನ್ ಮತ್ತು -ನ್ಸ್‌ನ ಸಂಸ್ಥೆಗಳಿಂದ ತಾಂತ್ರಿಕ ನೆರವು ಪಡೆಯಲಾಗುತ್ತಿದೆ. ಹೀಗಾಗಿ, ಸ್ಥಳೀಯ ವಾಗಿ ನಿರ್ಮಾಣಗೊಳ್ಳುತ್ತಿರುವ ಈ ಕೇಂದ್ರಕ್ಕೆ ಅಂತಾರಾಷ್ಟ್ರೀಯ ತಂತ್ರಜ್ಞಾನದ ಸಹಕಾರವೂ ದೊರೆಯುತ್ತಿದೆ.

ಕುತೂಹಲಕ್ಕೆ ವಿಜ್ಞಾನದ ಉತ್ತರ: ಖಗೋಳ ವಿಜ್ಞಾನವನ್ನು ಪಠ್ಯಪುಸ್ತಕಗಳ ಪುಟಗಳಿಂದ ಹೊರತಂದು, ವಿದ್ಯಾರ್ಥಿಗಳ ಅನುಭವದ ಭಾಗವಾಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಶಾಲಾಕಾಲೇಜುಗಳ ವಿದ್ಯಾರ್ಥಿಗಳು, ಯುವಜನರು ಹಾಗೂ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಹೊಂದಿರುವ ಸಾರ್ವಜನಿಕರಿಗೆ ಅಧಿಕೃತ ವೈಜ್ಞಾನಿಕ ಮಾಹಿತಿಯನ್ನು ತಲುಪಿಸುವ ಕೇಂದ್ರವಾಗಿ ಇದು ಕಾರ್ಯನಿರ್ವಹಿಸುವ ಆಶಯ ಹೊಂದಿದೆ.

Khagola Map

ಬಾಹ್ಯಾಕಾಶದ ಬಗ್ಗೆ ಸಾಮಾನ್ಯವಾಗಿ ಕೇಳಿ ಬರುವ ಪ್ರಶ್ನೆಗಳಿಗೆ ವೈಜ್ಞಾನಿಕ ವಿವರಣೆ ದೊರೆಯು ವಂತೆ ಮಾಡುವುದು, ಹೊಸ ತಲೆಮಾರಿನಲ್ಲಿ ಸಂಶೋಧನಾ ಮನೋಭಾವ ಬೆಳೆಸುವುದು ಹಾಗೂ ವಿಜ್ಞಾನವನ್ನು ಜನಸಾಮಾನ್ಯರಿಗೆ ಹತ್ತಿರವಾಗಿಸುವುದು ಇಂತಹ ತಾರಾಲಯಗಳ ಮಹತ್ವದ ಉದ್ದೇಶಗಳಾಗಿವೆ. ತರಗತಿಗಳಲ್ಲಿ ಕಲಿಯುವ ಖಗೋಳವಿಜ್ಞಾನದ ಪರಿಕಲ್ಪನೆಗಳನ್ನು ದೃಶ್ಯಾನು ಭವದ ಮೂಲಕ ಅರ್ಥೈಸಿಕೊಳ್ಳಲು ಇಂತಹ ಕೇಂದ್ರಗಳು ನೆರವಾಗಬಲ್ಲವು. ಆ ಮೂಲಕ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವುದರ ಜತೆಗೆ, ಭವಿಷ್ಯದಲ್ಲಿ ಖಗೋಳ ವಿಜ್ಞಾನ, ಬಾಹ್ಯಾಕಾಶ ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವವ ರಿಗೆ ಪ್ರೇರಣೆಯ ವೇದಿಕೆಯಾಗುವ ಸಾಧ್ಯತೆಯೂ ಇದೆ.

81 ಕೋಟಿ ಹೂಡಿಕೆ: ಈ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನಕ್ಕಾಗಿ ಒಟ್ಟು 81 ಕೋಟಿ ವೆಚ್ಚ ಮಾಡಲಾಗುತ್ತಿದೆ. ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ ಹಾಗೂ ಮೈಸೂರಿನ ಕಾಸ್ಮಾಲಜಿ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಸಹಯೋಗದಲ್ಲಿ ಯೋಜನೆ ರೂಪುಗೊಳ್ಳುತ್ತಿದೆ. ಯೋಜನೆಗೆ ಮತ್ತಷ್ಟು ಆರ್ಥಿಕ ಬಲ ತುಂಬುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಂಸದರ ನಿಧಿಯಿಂದ 5 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದಾರೆ.

2022ರ ಮಾರ್ಚ್‌ನಲ್ಲಿ ತಾರಾಲಯದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದ ಅವರು, ಯೋಜನೆಗೆ ಹೆಚ್ಚುವರಿ ನೆರವನ್ನೂ ಒದಗಿಸಿದ್ದಾರೆ. ಒಂದು ವೈಜ್ಞಾನಿಕ ಕೇಂದ್ರದ ನಿರ್ಮಾಣ ದಾಚೆಗೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ವೈಜ್ಞಾನಿಕ ಜಾಗೃತಿ ಮತ್ತು ಸ್ಥಳೀಯ ಅಭಿವೃದ್ಧಿಗೆ ಕೊಡುಗೆ ನೀಡುವ ಯೋಜನೆಯಾಗಿ ಇದು ಗುರುತಿಸಿಕೊಂಡಿದೆ. ಎಲ್ಲವೂ ಯೋಜನೆಯ ಆಶಯ ದಂತೆ ಸಾಕಾರಗೊಂಡರೆ, ಚಾಮುಂಡಿಬೆಟ್ಟದ ತಪ್ಪಲಿನ ಈ ತಾರಾಲಯವು ಮೈಸೂರಿನ ಪ್ರವಾಸಿ ನಕ್ಷೆಯಲ್ಲಿ ಹೊಸ ಗುರುತಾಗುವುದಷ್ಟೇ ಅಲ್ಲ, ವಿದ್ಯಾರ್ಥಿಗಳ ಕಲ್ಪನೆಗೆ ರೆಕ್ಕೆ ನೀಡುವ ವೈಜ್ಞಾನಿಕ ತಾಣವಾಗಿಯೂ ಹೊರಹೊಮ್ಮಬಹುದು.

ಮೈಸೂರಿನ ಪ್ರವಾಸೋದ್ಯಮಕ್ಕೆ ಹೊಸ ಗುರುತು

ಅರಮನೆ, ಚಾಮುಂಡಿಬೆಟ್ಟ, ಸಾಂಸ್ಕೃತಿಕ ಪರಂಪರೆ ಮತ್ತು ದಸರಾ ವೈಭವದಿಂದ ದೇಶವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಮೈಸೂರಿಗೆ, ಈ ತಾರಾಲಯವು ಮತ್ತೊಂದು ಪ್ರಮುಖ ಆಕರ್ಷಣೆ ಯಾಗುವ ನಿರೀಕ್ಷೆಯಿದೆ. ತಾರಾಲಯವು ಪ್ರವಾಸಿಗರನ್ನು ಸೆಳೆಯುವುದರ ಜತೆಗೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ, ವಿಜ್ಞಾನಾಧಾರಿತ ಚಟುವಟಿಕೆಗಳು ಮತ್ತು ಸಾರ್ವಜನಿಕರಲ್ಲಿ ಖಗೋಳ ವಿಜ್ಞಾನದ ಅರಿವು ಹೆಚ್ಚಿಸುವ ಪ್ರಯತ್ನಗಳಿಗೆ ವೇದಿಕೆಯಾಗಬಹುದು. ತಾರಾಲಯದ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿ ರುವುದರಿಂದ, ಯೋಜನೆಯ ಮುಂದಿನ ಹಂತದಲ್ಲಿ ಅತ್ಯಾಧುನಿಕ ತಾಂತ್ರಿಕ ಉಪಕರಣಗಳ ಅಳವಡಿಕೆ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಿದ್ಧತೆಗಳು ಪ್ರಮುಖವಾಗಲಿವೆ.

ಈ ತಾರಾಲಯದ ವಿಶೇಷತೆ ಏನು?

ವಿಶ್ವದ ಮೊದಲ ಬಾಗಿದ ಗುಮ್ಮಟಾಕೃತಿಯ ಎಲ್‌ಇಡಿ ತಾರಾಲಯ ಎಂಬ ಹೆಗ್ಗಳಿಕೆ 15 ಮೀಟರ್ ಗುಮ್ಮಟ ಆಕಾರದ ಎಲ್‌ಇಡಿ ಸ್ಕ್ರಿನ್‌ನಲ್ಲಿ 8ಕೆ ರೆಸಲ್ಯೂಶನ್ ಬ್ರಹ್ಮಾಂಡ ಲಭ್ಯ ಹೊಸ ತಂತ್ರಜ್ಞಾನದ ಮೂಲಕ ಬಾಹ್ಯಾಕಾಶ ತೋರಿಸುವ ಮಹತ್ವಾಕಾಂಕ್ಷೆ ಸಾಂಪ್ರದಾಯಿಕ ತಾರಾಲಯಗಳ ಅನುಭವಕ್ಕಿಂತ ಭಿನ್ನವಾಗಿ ವಿನ್ಯಾಸ ಬಾಹ್ಯಾಕಾಶದ ಕುತೂಹಲ ಹತ್ತಿರದಿಂದ 8ಕೆನಲ್ಲಿ ನೋಡುವ ಅವಕಾಶ ಖಗೋಳವಿಜ್ಞಾನ ಸಂಶೋಧನೆಗೆ 8ಕೆ ರೆಸಲ್ಯೂಶನ್ ತಾರಾಯಲ ಸಹಕಾರಿ