ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೊಸ ನೀರು ಇಲ್ಲದೆ ಭೀಮೆ ನಿಶ್ಚಲ !

ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಬಳಿ ಇರುವ ಭೀಮಾ ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ಆತಂಕಕಾರಿ ಹಂತಕ್ಕೆ ಕುಸಿದಿದೆ. 3.199 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಬ್ಯಾರೇಜ್‌ನಲ್ಲಿ ಪ್ರಸ್ತುತ ಕೇವಲ 0.270 ಟಿಎಂಸಿ ನೀರು ಮಾತ್ರ ಉಳಿದಿದ್ದು, ಜಲಾಶಯವು ಶೇ.8.53ರಷ್ಟು ಮಾತ್ರ ಭರ್ತಿಯಾಗಿದೆ.

ದೇವೇಂದ್ರ ಜಾಡಿ

ಸೊನ್ನ ಬ್ಯಾರೇಜ್‌ನಲ್ಲಿ ಬರೀ ಶೇ.8.53 ನೀರು

ಮಳೆ ಕೈ ಕೊಟ್ಟರೆ ಕಲಬುರಗಿಗೆ ಜಲಕಂಟಕ

ಕಲಬುರಗಿ ಜಿಲ್ಲೆಯ ಜೀವನಾಡಿಯಾಗಿರುವ ಭೀಮಾ ನದಿ ಈ ಬಾರಿ ಮುಂಗಾರು ಆರಂಭವಾದರೂ ಜೀವ ಪಡೆಯದೆ ನಿಶ್ಚಲವಾಗಿ ಬಿದ್ದಿದೆ. ಮಹಾರಾಷ್ಟ್ರದ ಮೇಲ್ದಂಡೆ ಪ್ರದೇಶದಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಭೀಮೆಗೆ ಹೊಸ ನೀರಿನ ಹರಿವು ಇಲ್ಲದಂತಾಗಿದ್ದು, ನದಿಯ ಪಾತ್ರ ಹಲವು ಕಡೆ ಮರಳುಗಾಡಿನಂತಾಗಿದೆ. ಭೀಮೆಯನ್ನೇ ಆಶ್ರಯಿಸಿರುವ ರೈತರು, ಗ್ರಾಮೀಣ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಬಳಿ ಇರುವ ಭೀಮಾ ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ಆತಂಕಕಾರಿ ಹಂತಕ್ಕೆ ಕುಸಿದಿದೆ. 3.199 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಬ್ಯಾರೇಜ್‌ನಲ್ಲಿ ಪ್ರಸ್ತುತ ಕೇವಲ 0.270 ಟಿಎಂಸಿ ನೀರು ಮಾತ್ರ ಉಳಿದಿದ್ದು, ಜಲಾಶಯವು ಶೇ.8.53ರಷ್ಟು ಮಾತ್ರ ಭರ್ತಿಯಾಗಿದೆ.

ಒಳಹರಿವು ಹಾಗೂ ಹೊರಹರಿವು ಎರಡೂ ಶೂನ್ಯವಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಗರಕ್ಕೂ ತಟ್ಟಿದ ಜಲಕ್ಷಾಮದ ಬಿಸಿ; ಭೀಮೆಯಲ್ಲಿನ ನೀರಿನ ಕೊರತೆ ಇದೀಗ ಕಲಬುರಗಿ ಮಹಾನಗರಕ್ಕೂ ತಟ್ಟಿದೆ. ನಗರದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಪೂರೈಸುವ ಸರಡಗಿ ಬ್ಯಾರೇಜ್ನಲ್ಲಿ ಉಳಿದಿರುವ ನೀರು ಕೇವಲ ಮುಂದಿನ 40 ದಿನಗಳಿಗೆ ಮಾತ್ರ ಸಾಕಾಗುವಷ್ಟು ಇದೆ ಎಂದು ಮೂಲಗಳು ತಿಳಿಸಿವೆ. ಇದೇ ಪರಿಸ್ಥಿತಿ ಮುಂದುವರಿದು ಮಳೆ ಕೈಕೊಟ್ಟರೆ ನಗರದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Kalaburagi Transport App: ಕೈಕೊಟ್ಟ ನಮ್ಮ ಕಲಬುರಗಿ ಸಾರಿಗೆ App

ರೈತರು, ಜಾನುವಾರುಗಳ ಸಂಕಷ್ಟ ಹೆಚ್ಚಳ: ಭೀಮಾ ನದಿಯನ್ನು ಅವಲಂಬಿಸಿರುವ ಗ್ರಾಮ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಜಾನುವಾರುಗಳಿಗೆ ನೀರು ಒದಗಿಸುವುದೇ ಸವಾಲಾಗಿ ಪರಿಣಮಿಸಿದ್ದು, ರೈತರು ಕೃಷಿ ಚಟುವಟಿಕೆಗಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸು ತ್ತಿದ್ದಾರೆ. ನದಿಯಲ್ಲಿ ಹೊಸ ನೀರಿನ ಹರಿವು ಆರಂಭವಾಗದಿದ್ದರೆ ಖರೀಫ್ ಬೆಳೆ ಮೇಲೆಯೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇನ್ನೂ, ಬರಲಿಲ್ಲ 0.6 ಟಿಎಂಸಿ ನೀರು

ನಾರಾಯಣಪುರ ಜಲಾಶಯದಿಂದ ಭೀಮೆಗೆ 0.6 ಟಿಎಂಸಿ ನೀರು ಹರಿಸಲಾಗುವುದು ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ದಿನಗಳು ಕಳೆದರೂ ನೀರು ಹರಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣ ವಾಗಿದೆ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುತ್ತಿದ್ದರೂ ಸರಕಾರ ಹಾಗೂ ಸಂಬಂಧಿಸಿದ ಇಲಾಖೆ ತುರ್ತು ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

image

ಮಳೆಯ ಕೊರತೆಯಿಂದ ಕಲಬುರಗಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಉಜನಿ ಜಲಾಶಯ ದಿಂದ 3 ಟಿಎಂಸಿ ನೀರು ಹಾಗೂ ನಾರಾಯಣಪುರ ಜಲಾಶಯದಿಂದ ನೀರು ಪೂರೈಸಲು 1225 ಕೋಟಿ ವೆಚ್ಚದ ಡಿಪಿಆರ್ಗೆ ಅನುಮೋದನೆ ನೀಡುವಂತೆ ಒತ್ತಾಯಿಸಿದ್ದೇನೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜಿಲ್ಲೆಗೆ ಸಂಕಷ್ಟ ಎದುರಾಗಲಿದೆ.

- ಅಲ್ಲಮಪ್ರಭು ಪಾಟೀಲ್, ಶಾಸಕ