ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜಾಗೃತ ಗ್ರಾಹಕನೇ ಮಹಾರಾಜ

‘ಗ್ರಾಹಕರು ನಮ್ಮ ಆರ್ಥಿಕತೆಯ ಅತಿದೊಡ್ಡ ಗುಂಪು, ಆದರೆ ಅವರ ಧ್ವನಿ ಮಾತ್ರ ಕೇಳುತ್ತಿಲ್ಲ‘ ಎಂದು ಅವರು ಪ್ರತಿಪಾದಿಸಿದರು. ಈ ಐತಿಹಾಸಿಕ ಭಾಷಣದ ನೆನಪಿಗಾಗಿ 1983ರಿಂದ ಈ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತಿದೆ. ಭಾರತದ "ಗ್ರಾಹಕ ಸಂರಕ್ಷಣಾ ಕಾಯ್ದೆ"ಯ ಪ್ರಕಾರ ಪ್ರತಿಯೊಬ್ಬ ಗ್ರಾಹಕನಿಗೂ ಈ ಕೆಳಗಿನ ಹಕ್ಕುಗಳಿವೆ.

ವಿನುತಾ ಹೆಗಡೆ ಶಿರಸಿ

ಹಕರನ್ನು ಶೋಷಣೆಯಿಂದ ರಕ್ಷಿಸಲು ಪ್ರತಿ ವರ್ಷ ಮಾ.12ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನ ಆಚರಣೆ

ಗ್ರಾಹಕನೇ ಮಾರುಕಟ್ಟೆಯ ರಾಜ‘ ಎಂಬ ಮಾತಿದೆ. ಆದರೆ ಇಂದಿನ ಜಾಗತೀಕರಣದ ಯುಗ ದಲ್ಲಿ ರಾಜನಿಗೆ ಸಿಗಬೇಕಾದ ಗೌರವ ಮತ್ತು ಸುರಕ್ಷತೆ ಸಿಗುತ್ತಿದೆಯೇ? ಎಂಬುದು ದೊಡ್ಡ ಪ್ರಶ್ನೆ. ಗ್ರಾಹಕರನ್ನು ಶೋಷಣೆಯಿಂದ ರಕ್ಷಿಸಲು, ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿ ಸಲು ಮತ್ತು ಮಾರುಕಟ್ಟೆಯಲ್ಲಿ ನ್ಯಾಯಸಮ್ಮತ ವಹಿವಾಟನ್ನು ಉತ್ತೇಜಿಸಲು ಪ್ರತಿ ವರ್ಷ ಮಾರ್ಚ್ 15ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನ"ವನ್ನು ಆಚರಿಸಲಾಗುತ್ತದೆ.

ಗ್ರಾಹಕ ಹಕ್ಕುಗಳ ಪರಿಕಲ್ಪನೆಗೆ ಚಾಲನೆ ಸಿಕ್ಕಿದ್ದು 1962ರ ಮಾರ್ಚ್ 15ರಂದು. ಅಂದಿನ ಅಮೆರಿಕ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರು ಅಮೆರಿಕ ಕಾಂಗ್ರೆಸ್ನಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಮೊದಲ ಬಾರಿಗೆ ಅಧಿಕೃತವಾಗಿ ಪ್ರಸ್ತಾಪಿಸಿದರು.

‘ಗ್ರಾಹಕರು ನಮ್ಮ ಆರ್ಥಿಕತೆಯ ಅತಿದೊಡ್ಡ ಗುಂಪು, ಆದರೆ ಅವರ ಧ್ವನಿ ಮಾತ್ರ ಕೇಳು ತ್ತಿಲ್ಲ‘ ಎಂದು ಅವರು ಪ್ರತಿಪಾದಿಸಿದರು. ಈ ಐತಿಹಾಸಿಕ ಭಾಷಣದ ನೆನಪಿಗಾಗಿ 1983ರಿಂದ ಈ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತಿದೆ. ಭಾರತದ "ಗ್ರಾಹಕ ಸಂರಕ್ಷಣಾ ಕಾಯ್ದೆ"ಯ ಪ್ರಕಾರ ಪ್ರತಿಯೊಬ್ಬ ಗ್ರಾಹಕನಿಗೂ ಈ ಕೆಳಗಿನ ಹಕ್ಕುಗಳಿವೆ.

ಇದನ್ನೂ ಓದಿ: Sirsi News: ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅನನ್ಯ: ಶಿರಸಿ ರಂಗಧಾಮದಲ್ಲಿ ಲೋಗೋ ಬಿಡುಗಡೆಗೊಳಿಸಿ ಶಾಸಕ ಭೀಮಣ್ಣ ನಾಯ್ಕ

ಸುರಕ್ಷತೆಯ ಹಕ್ಕು: ಪ್ರಾಣಕ್ಕೆ ಅಥವಾ ಆರೋಗ್ಯಕ್ಕೆ ಹಾನಿಕಾರಕವಾದ ಸರಕು ಮತ್ತು ಸೇವೆಗಳ ವಿರುದ್ಧ ರಕ್ಷಣೆ ಪಡೆಯುವ ಹಕ್ಕು.

ಮಾಹಿತಿ ಪಡೆಯುವ ಹಕ್ಕು: ವಸ್ತುವಿನ ಗುಣಮಟ್ಟ, ಪ್ರಮಾಣ, ಶುದ್ಧತೆ, ಬೆಲೆ ಮತ್ತು ಮಾನದಂಡಗಳ ಬಗ್ಗೆ ಸರಿಯಾದ ಮಾಹಿತಿ ಪಡೆಯುವುದು.

ಆಯ್ಕೆಯ ಹಕ್ಕು: ವಿವಿಧ ಸ್ಪರ್ಧಾತ್ಮಕ ಬೆಲೆಗಳಲ್ಲಿ ತಮಗೆ ಇಷ್ಟವಾದ ವಸ್ತುವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ.

ಆಲಿಸುವಿಕೆಯ ಹಕ್ಕು: ಗ್ರಾಹಕರ ಹಿತಾಸಕ್ತಿಗಳಿಗೆ ಸಂಬಂಧಿಸಿದ ವೇದಿಕೆಗಳಲ್ಲಿ ಗ್ರಾಹಕನ ಧ್ವನಿಗೆ ಮನ್ನಣೆ ಸಿಗುವುದು.

ಪರಿಹಾರ ಪಡೆಯುವ ಹಕ್ಕು: ಅನುಚಿತ ವ್ಯಾಪಾರ ಪದ್ಧತಿ ಅಥವಾ ಶೋಷಣೆಯ ವಿರುದ್ಧ ನ್ಯಾಯಯುತ ಪರಿಹಾರ ಪಡೆಯುವುದು.

ಗ್ರಾಹಕ ಶಿಕ್ಷಣದ ಹಕ್ಕು: ಒಬ್ಬ ಜಾಗೃತ ಗ್ರಾಹಕನಾಗಿರಲು ಬೇಕಾದ ಜ್ಞಾನ ಮತ್ತು ಕೌಶಲ ಗಳನ್ನು ಹೊಂದುವ ಹಕ್ಕು.

ಇಂದಿನ ಸವಾಲು: ಡಿಜಿಟಲ್ ಮಾರುಕಟ್ಟೆ ಇಂದಿನ ಕಾಲಘ ಟ್ಟದಲ್ಲಿ ಆನ್ಲೈನ್ ಶಾಪಿಂಗ್ ಹೆಚ್ಚಾಗಿದೆ. ಇ-ಕಾಮರ್ಸ್ ವೇದಿಕೆಗಳಲ್ಲಿ ನಕಲಿ ಉತ್ಪನ್ನಗಳು, ಡಾರ್ಕ್ ಪ್ಯಾಟರ್ನ್ಗಳು ಮತ್ತು ಸೈಬರ್‌ವಂಚನೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳುವಾಗ ಮತ್ತು ಅಪರಿಚಿತ ಲಿಂಕ್ಗಳ ಮೇಲೆ ಕ್ಲಿಕ್ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಯಾವುದೇ ವಸ್ತುವನ್ನು ಖರೀದಿಸಿದಾಗ ತಪ್ಪದೇ "ರಸೀದಿ" ಪಡೆಯಿರಿ. ವಸ್ತುವಿನ ಮೇಲೆ ಐಖಐ, ಅಥವಾ Hallmarked ಚಿಹ್ನೆ ಇರುವುದನ್ನು ಖಚಿತಪಡಿಸಿಕೊಳ್ಳಿ. ಗರಿಷ್ಠ ಮಾರಾಟ ದರ ಕ್ಕಿಂತ ಹೆಚ್ಚಿನ ಹಣ ನೀಡಬೇಡಿ. ದೋಷಪೂರಿತ ವಸ್ತು ಕಂಡುಬಂದಲ್ಲಿ ಮೌನ ವಾಗಿರದೆ ಧ್ವನಿ ಎತ್ತಿ. ಗ್ರಾಹಕರು ಜಾಗೃತರಾದಾಗ ಮಾತ್ರ ಮಾರುಕಟ್ಟೆಯಲ್ಲಿನ ಭ್ರಷ್ಟಾ ಚಾರ ಮತ್ತು ವಂಚನೆಗಳನ್ನು ತಡೆಗಟ್ಟಲು ಸಾಧ್ಯ.

‘ಜಾಗೋ ಗ್ರಾಹಕ್ ಜಾಗೋ‘ ಎಂಬುದು ಕೇವಲ ಘೋಷಣೆಯಾಗದೆ ನಮ್ಮ ಜೀವನದ ಭಾಗವಾಗಲಿ. ಅಂತೆಯೇ ಗ್ರಾಹಕರು ದೂರು ನೀಡಲು ಬಳಸಬಹುದಾದ ರಾಷ್ಟ್ರೀಯ ಹೆಲ್‌ಪ್ಲೈನ್ ಸಂಖ್ಯೆ 1915 ಅನ್ನು ಬಳಸಬಹುದು.

ಜಾಗೋ ಗ್ರಾಹಕ್ ಜಾಗೋ

ಗ್ರಾಹಕರು ಜಾಗೃತರಾದಾಗ ಮಾತ್ರ ಮಾರುಕಟ್ಟೆಯಲ್ಲಿನ ಭ್ರಷ್ಟಾಚಾರ ಮತ್ತು ವಂಚನೆ ಗಳನ್ನು ತಡೆಗಟ್ಟಲು ಸಾಧ್ಯ. ‘ಜಾಗೋ ಗ್ರಾಹಕ್ ಜಾಗೋ‘ ಎಂಬುದು ಕೇವಲ ಘೋಷಣೆ ಯಾಗದೆ ನಮ್ಮ ಜೀವನದ ಭಾಗವಾಗಲಿ.