ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Korthi Bridge: ಕತ್ತಲಿನ ನಡುವೆ ತಡೆಗೋಡೆಗಳ ಅಪಾಯ: ಕತ್ತಲಾದ ಕೋರ್ತಿ ಸೇತು

ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಬರುವ ಕೃಷ್ಣಾ ನದಿಗೆ ಅಡ್ಡಲಾಗಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೋರ್ತಿಯಿಂದ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 3 ಕಿ.ಮೀ. ಉದ್ದದ ಬೃಹತ್ ಸೇತುವೆ ನಿರ್ಮಿಸಿದ್ದು, ಅಲ್ಲಿ ವಿದ್ಯುತ್ ದೀಪಗಳು ಇದ್ದರೂ ರಾತ್ರಿ ವೇಳೆಯಲ್ಲಿ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ.

ವಿರುಪಾಯ್ಯ ಪ.ಹಿರೇಮಠ, ಬೀಳಗಿ

ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಬರುವ ಕೃಷ್ಣಾ ನದಿಗೆ ಅಡ್ಡಲಾಗಿ ಬಾಗಲ ಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೋರ್ತಿಯಿಂದ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 3 ಕಿ.ಮೀ. ಉದ್ದದ ಬೃಹತ್ ಸೇತುವೆ ನಿರ್ಮಿಸಿದ್ದು, ಅಲ್ಲಿ ವಿದ್ಯುತ್ ದೀಪಗಳು ಇದ್ದರೂ ರಾತ್ರಿ ವೇಳೆಯಲ್ಲಿ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ.

ಆಲಮಟ್ಟಿ ಹಿನ್ನೀರಿನಿಂದ ಕೃಷ್ಣಾ ನದಿಯಲ್ಲಿ ನೀರು ನಿಂತ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ನಿರ್ಮಿಸಲಾಗಿರುವ ಈ ಸೇತುವೆಯಲ್ಲಿ, ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ರಾತ್ರಿ ವೇಳೆಯಲ್ಲಿ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಾರ್ವಜನಿಕರ ಒತ್ತಾಯದ ಮೇರೆಗೆ ಕೆಲ ತಿಂಗಳ ಹಿಂದೆ ವಿದ್ಯುತ್ ಕಂಬಗಳನ್ನು ಅಳವಡಿಸಿ ದೀಪಗಳನ್ನು ಬೆಳಗಿಸಲಾಗಿತ್ತು. ಆದರೆ ಇದೀಗ ಸೇತುವೆಯ ಮೇಲಿರುವ ಯಾವುದೇ ವಿದ್ಯುತ್ ದೀಪಗಳು ಬೆಳಗುತ್ತಿಲ್ಲ.

ಇದನ್ನೂ ಓದಿ: Bagalkot Child Death: ಸಂಪ್‌ಗೆ ಬಿದ್ದು ಮಗು ಸಾವು; ಉಪ್ಪಿನ ರಾಶಿ ಮೇಲೆ ಮೃತದೇಹವಿಟ್ಟು, ಕುರಾನ್‌ ಪಠಿಸಿ ಬದುಕಿಸಲು ಪೋಷಕರ ಯತ್ನ

ಇದರಿಂದ ರಾತ್ರಿ ವೇಳೆಯಲ್ಲಿ ಸೇತುವೆ ಸಂಪೂರ್ಣ ಕತ್ತಲಿನಿಂದ ಆವರಿಸಿಕೊಂಡಿದ್ದು, ವಾಹನ ಸವಾರರು ಹಾಗೂ ಪಾದಚಾ ರಿಗಳು ಜೀವಭಯದಲ್ಲೇ ಸಂಚರಿಸುವಂತಾಗಿದೆ. ಇದಲ್ಲದೆ, ಸೇತುವೆ ಯ ಬದಿಯಲ್ಲಿ ಸಾರ್ವ ಜನಿಕರ ಸುರಕ್ಷತೆಗಾಗಿ ನಿರ್ಮಿಸಿರುವ ತಡೆಗೋಡೆಗಳ ಕೆಲವು ಭಾಗಗಳು ಈಗಾಗಲೇ ಹಾನಿಗೊಳಗಾಗಿವೆ.

ಕತ್ತಲಿನ ನಡುವೆ ಹಾನಿಗೊಂಡ ತಡೆಗೋಡೆಗಳು ಮತ್ತಷ್ಟು ಅಪಾಯಕ್ಕೆ ಕಾರಣವಾಗಿದ್ದು, ವಾಹನ ಗಳು ನಿಯಂತ್ರಣ ತಪ್ಪಿದರೆ ನದಿಗೆ ಬೀಳುವಂತಹ ಗಂಭೀರ ಅಪಾಯ ಎದುರಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸೇತುವೆಯ ಮೇಲೆ ದೀಪಗಳು ಅಳವಡಿಸಿರುವು ದಾದರೂ ಅವುಗಳನ್ನು ನಿರ್ವಹಣೆ ಮಾಡದಿರುವುದು ಏಕೆ? ದೀಪಗಳ ನಿರ್ವಹಣೆಗೆ ಜವಾಬ್ದಾರರು ಯಾರು? ಹಾನಿಗೊಂಡ ತಡೆಗೋಡೆಗಳನ್ನು ಯಾವಾಗ ದುರಸ್ತಿಪಡಿಸಲಾಗುವುದು? ಎಂಬ ಪ್ರಶ್ನೆ ಗಳನ್ನು ಸಾರ್ವಜನಿಕರು ಎತ್ತಿದ್ದಾರೆ.

image

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಕೆಟ್ಟುಹೋಗಿರುವ ಎಲ್ಲ ವಿದ್ಯುತ್ ದೀಪಗಳನ್ನು ದುರಸ್ತಿಪಡಿಸಿ ಸೇತುವೆ ಮೇಲೆ ನಿರಂತರ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಹಾನಿ ಗೊಂಡಿರುವ ತಡೆಗೋಡೆಗಳನ್ನು ತಕ್ಷಣ ದುರಸ್ತಿ ಪಡಿಸಿ ವಾಹನ ಸವಾರರು ಮತ್ತು ಪಾದಚಾರಿ ಗಳ ಸುರಕ್ಷತೆಯನ್ನು ಖಚಿತಪಡಿಸಬೇಕು ಇಲ್ಲದಿದ್ದರೆ ಯಾವುದೇ ಅನಾಹುತ ಸಂಭವಿಸಿದರೆ ಸಂಬಂಧಿಸಿದ ಅಧಿಕಾರಿಗಳ ಹೊಣೆ ಮಾಡಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವದು.

-ಸುಬ್ಬರಾಯಗೌಡ ಪಾಟೀಲ, ರೈತ ಧುರೀಣರು ಬೀಳಗಿ
image

ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲಾಡಳಿತಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ.

-ಶ್ರೀಶೈಲ ಉಣದ, ಯುವ ಮುಖಂಡರು