ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

1915ರಲ್ಲಿ ಬ್ರಿಟೀಷರ ಕಾಲದಲ್ಲೇ ನಿರ್ಮಾಣವಾಗಿರುವ ಜಿಲ್ಲಾ ಕೇಂದ್ರದ ರೈಲು ಮಾರ್ಗಕ್ಕೆ ಬೇಕಿದೆ ಕಾಯಕಲ್ಪ

ಜಿಲ್ಲಾ ಕೇಂದ್ರದ ರೈಲು ಸಂಚಾರ ಆರಂಭವಾಗಿ ದಶಕಗಳೇ ಕಳೆದರೂ ನಿಲ್ದಾಣದಲ್ಲಿ ಮೂಲ ಸೌಕರ್ಯ ಗಳ ಕೊರತೆ ಎದ್ದು ಕಾಣುತ್ತಿದ್ದು ಸರಿಯಾದ ಪ್ಲಾಟ್ ಫಾರ್ಮ್, ಮಳೆ ಬಿಸಿಲಿಂದ ಆಶ್ರಯ ಪಡೆಯುವ ಛಾವಣಿ,ಶುದ್ಧ ಕುಡಿಯುವ ನೀರು, ಮತ್ತು ಜನಬಳಕೆಗೆ ಬರುವಂತಹ ಶೌಚಾಲಯಗಳಿಲ್ಲದೆ ಪ್ರಯಾ ಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಮುನಿರಾಜು ಎಂ ಅರಿಕೆರೆ

ಶೌಚಾಲವಿಯದ್ದರೂ ಬಳಕೆಗಿಲ್ಲದೆ ಪ್ರಯಾಣಿಕರ ಪರದಾಟ

ಚಿಕ್ಕಬಳ್ಳಾಪುರ: ಬೆಂಗಳೂರಿಗೆ ಕೂಗಳೆತೆ ದೂರದಲ್ಲಿರುವ ಜಿಲ್ಲಾ ಕೇಂದ್ರ ರೈಲು ನಿಲ್ದಾಣ ಹೆಸರಿ ಗಷ್ಟೇ ನಿಲ್ದಾಣದಂತಿದೆ ವಿನಃ ಇಲ್ಲಿ ಪ್ರಯಾಣಿಕರಿಗೆ ಬೇಕಾದ ಮೂಲ ಸೌಕರ್ಯಗಳಿಲ್ಲದೆ ಸೊರಗು ತ್ತಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.

ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಬೇಕಾದ ಕ್ಯಾಂಟೀನ್ ಆಗಲಿ, ಕುಡಿಯಲು ಶುದ್ದ ನೀರಿನ ವ್ಯವಸ್ಥೆಯಾಗಲಿ, ಜಲಬಾದೆ ಮಲಬಾದೆ ನೀಗಿಸಿಕೊಳ್ಳಲು ಜನಬಳಕೆಗೆ ಬರುವಂತಹ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುವ ಶೌಚಾಲಯವಾಗಲಿ, ಶುದ್ದ ಸ್ವಚ್ಛ ಪರಿಸರ ಎಂಬುದು ಮರೀಚಿಕೆಯಾಗಿವೆ.

ಹೌದು. ಜಿಲ್ಲಾ ಕೇಂದ್ರದ ರೈಲು ಸಂಚಾರ ಆರಂಭವಾಗಿ ದಶಕಗಳೇ ಕಳೆದರೂ ನಿಲ್ದಾಣದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು ಸರಿಯಾದ ಪ್ಲಾಟ್ ಫಾರ್ಮ್, ಮಳೆ ಬಿಸಿಲಿಂದ ಆಶ್ರಯ ಪಡೆಯುವ ಛಾವಣಿ,ಶುದ್ಧ ಕುಡಿಯುವ ನೀರು, ಮತ್ತು ಜನಬಳಕೆಗೆ ಬರುವಂತಹ ಶೌಚಾಲಯಗಳಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

20cbpm3r ok

ಗೌರಿಬಿದನೂರು ಸಂಪರ್ಕ??

ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸಲಾಗಿದೆ.ಆದರೆ ಇಲ್ಲಿಂದ ಕೇವಲ 44 ಕಿ.ಮಿ.ಇರುವ ಗೌರಿಬಿದನೂರು ರೈಲ್ವೆ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸಿದ್ದೇ ಆದಲ್ಲಿ ನೆರೆಯ ಆಂಧ್ರ ಪ್ರದೇಶದ ಸಂಕರ್ಪ ಜಿಲ್ಲೆಗೆ ಒದಗಲಿದೆ.ಇದಾದಲ್ಲಿ ವ್ಯಾಪಾರ ವಾಣಿಜ್ಯ, ಪ್ರವಾಸೋದ್ಯಮದ ವಿಷಯದಲ್ಲಿ ಬಹುದೊಡ್ಡ ಸಂಪರ್ಕ ಕ್ರಾಂತಿಯೇ ಆಗಲಿದೆ.ಆದರೆ ಈ ಭಾಗದ ಜನಪ್ರತಿನಿಧಿ ಗಳಿಂದ ಈ ಯೋಜನೆಗಳನ್ನು ಸಾಕಾರಗೊಳಿಸುವ ಗಟ್ಟಿ ಪ್ರಯತ್ನಗಳು ನಡೆದಂತೆ ಕಾಣುತ್ತಿಲ್ಲ. ದಶಕಗಳಿಂದ ಕೇವಲ ಸರ್ವೆ ಕಾರ್ಯಗಳಿಗಷ್ಟೇ ಸೀಮಿತವಾಗಿರುವುದು ಜನತೆಯ ನಿರಾಸೆಗೆ ಕಾರಣವಾಗಿದೆ.ರಾಜ್ಯದವರೇ ಆದ ವಿ.ಸೋಮಣ್ಣ ರೈಲ್ವೆ ಮಂತ್ರಿಯಾಗಿರು ಈ ಹೊತ್ತಿನಲ್ಲದಾರೂ ಜಿಲ್ಲೆಯ ಜಿನಪ್ರತಿನಿಧಿಗಳು ಇತ್ತ ಗಮನಹರಿಸಿದರೆ ಜಿಲ್ಲೆಯ ಭವಿಷ್ಯ ಬೆಳಗಲಿದೆ ಎನ್ನುವುದು ಪ್ರಗತಿಪರ ಚಿಂತಕರ ಮಾತಾಗಿದೆ.

ಇದನ್ನೂ ಓದಿ: India squad for T20 World Cup: 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡ ಪ್ರಕಟ!

ವಿದ್ಯುತ್ ರೈಲು ಮಾರ್ಗ!!
2013ರ ವರೆಗೆ ನ್ಯಾರೋ ಗೇಜ್ ಆಗಿದ್ದ ಮಾರ್ಗವು ಬ್ರಾಡ್‌ಗೇಜ್ ಆಗಿ ಕೋಲಾರದಿಂದ ಚಿಕ್ಕಬಳ್ಳಾ ಪುರ ದೇವನಹಳ್ಳಿ ತನಕ ಬದಲಾಯಿತು. ಅಲ್ಲಿಂದಾಚೆಗೆ ಈ  ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ರೈಲುಗಳ ಓಡಾಟ ಪ್ರಾರಂಭವಾಯಿತು. ಇದರ ಬೆನ್ನಲ್ಲೇ ಈ ರೈಲು ಮಾರ್ಗವು ವಿದ್ಯುತ್ ಸಂಪರ್ಕ ಹೊಂದಿತ್ತಲ್ಲದೆ ೨೦೧೯ ರಿಂದ ರಿಂದ ಚಿಕ್ಕಬಳ್ಳಾಪುರದಿಂದ ಯಲಹಂಕ, ಯಶವಂತಪುರ ಕಂಟೋನ್ಮೆಂಟ್ ಮಾರ್ಗವಾಗಿ  ಸಂಚರಿಸುವ ಮೆಮೋ  ರೈಲುಗಳ ಸಂಖ್ಯೆಯೂ ಹೆಚ್ಚಿತು.

ಕರೋನಾ ಕಾಲದಲ್ಲಿ ಕೆಲವು ಕಾಲ ಸ್ಥಗಿತವಾಗಿತ್ತು. 2023ರಿಂದ ಮರಳಿ ಈ ಯಾನ ಎಂದಿನಂತೆ ಸಾಗಿದೆ. ಮುಂದಿನ ದಿನಗಳಲ್ಲಿ ಭಾನುವಾರವೂ ಸೇರಿದಂತೆ ವಾರದ 7 ದಿನವೂ ಜನತೆಗೆ ರೈಲ್ವೇ ಸೇವೆ ಲಭ್ಯವಾಗಲಿ ಎನ್ನುವುದು ಜಿಲ್ಲೆಯ ಜನತೆಯ ಆಶಯವಾಗಿದೆ.

20cbpm1nil ok

ಜಿಲ್ಲೆಯ ರೈಲ್ವೆ ಮಾರ್ಗದ ಇತಿಹಾಸ!

1915ರಷ್ಟು ಹಿಂದೆಯೇ ಬ್ರಿಟೀಷರ ಕಾಲದಲ್ಲಿ ಮೈಸೂರು ರಾಜ್ಯ ರೈಲ್ವೆಯ ಭಾಗವಾಗಿ ಬೆಂಗಳೂರು ಚಿಕ್ಕಬಳ್ಳಾಪುರ ಕೋಲಾರದವರೆಗೆ ಕಿರಿದಾದ ಗೇಜ್ ಮಾರ್ಗನಿರ್ಮಾಣವಾಗಿತ್ತು.ಇದನ್ನು ಕೋಲಾರ ಜಿಲ್ಲೆಯಲ್ಲಿದ್ದ ಚಿನ್ನದ ಗಣಿಯ ಉತ್ಪನ್ನ ಮತ್ತು ಕೃಷಿ  ಉತ್ಪನ್ನಗಳ ಸಾಗಾಟಕ್ಕೆ ಈ ಮಾರ್ಗವನ್ನು ಬಳಸಲಾಗಿತ್ತು.ಇಂದಿಗೂ ಕೂಡ ಬ್ರಿಟೀಷ್ ಕಾಲದ ನಿಲ್ದಾಣದ ಕಟ್ಟಡಗಳು, ಕೆಂಪು ಹೆಂಚು, ಕಮಾನು ಸಹಿತ ವಾಸ್ತುಶಿಲ್ಪದ ಕುರುಹುಗಳನ್ನು ಕಾಣಬಹುದು.ಇಂತಹ ಐತಿಹಾಸಿಕ ರೈಲ್ವೇ ಮಾರ್ಗ ಬ್ರಾಡ್‌ಗೇಜ್ ಆಗಿ ಬದಲಾಗಿದ್ದರೂ ಅಭಿವೃದ್ದಿ ಮಾತ್ರ ಕುಂಠಿತವಾಗಿರುವುದು ವಿಪರ್ಯಾ ಸವೇ ಸರಿ.

ಗಗನ ಕುಸುಮ!!

ಚಿಕ್ಕಬಳ್ಳಾಪುರದಿಂದ ಆಂಧ್ರಪ್ರದೇಶದ ಪುಟ್ಟಪರ್ತಿಗೆ ೧೦೫ ಕಿ.ಮಿ ಇದೆ. ಜಿಲ್ಲೆಯಿಂದ ಪುಟ್ಟಪರ್ತಿ ಸಾಯಿಬಾಬ ಸನ್ನಿಧಿಗೆ ಸಂಪರ್ಕ ಕಲ್ಪಿಸುವ ಹೊಸ ರೈಲು ಮಾರ್ಗದ ಸಮೀಕ್ಷೆ ನಡೆದು ವರ್ಷಗಳೇ ಕಳೆದಿವೆ. ಇದು ಸಾಕಾರವಾದಲ್ಲಿ ಪ್ರಾದೇಶಿಕ ಸಂಪರ್ಕ ಸುಧಾರಣೆಗೆ ಸಹಕಾರಿಯಾಗಲಿದೆ.ಹಾಲಿ ಸಂಸದ ಡಾ.ಕೆ.ಸುಧಾಕರ್ ಅವರು ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಅವರ ಕಾಲದಲ್ಲಿ ಯಾದರೂ ಇದನ್ನು ಆಗು ಮಾಡುವರೋ ಇಲ್ಲವೋ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.

ತಿರುಪತಿಗೆ ಸಂಪರ್ಕ
ಜಿಲ್ಲೆಯಲ್ಲಿ ತಿರುಪತಿ ತಿಮ್ಮಪ್ಪನ ಭಕ್ತಗಣ ಲಕ್ಷಸಂಖ್ಯೆಯಲ್ಲಿವುದು ಗುಟ್ಟಾದ ವಿಷಯವೇನಲ್ಲ. ಹೀಗಾಗಿ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಿಂದ ಚಿಂತಾಮಣಿ ಶ್ರೀನಿವಾಸಪುರ ಮದನಪಲ್ಲಿ ಮಾರ್ಗವಾಗಿ ತಿರುಪತಿಗೆ ಸಂಪರ್ಕ ಕಲ್ಪಿಸುವ ಯೋಜನೆ ಬಗ್ಗೆಯೂ ಕೆ.ಹೆಚ್.ಮುನಿಯಪ್ಪ ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದಾಗ, ವೀರಪ್ಪಮೊಯಿಲಿ ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ಕೇಳಿಬಂದಿತ್ತು. ಅವರು ಅಧಿಕಾರ ಕಳೆದುಕೊಂಡಂತೆ ಈ ಪ್ರಸ್ತಾವವೂ ಮೂಲೆಗುಂಪಾಗಿದೆ.ಇದು ಸಾಕಾರಗೊಂಡಿದ್ದೇ ಆದಲ್ಲಿ ಆಂದ್ರ ಪ್ರದೇಶ, ತೆಲಂಗಾಣದ ಜತೆಗೆ ಜಿಲ್ಲೆಯ ನಂಟು ಹೆಚ್ಚಾಗಿ ಆರ್ಥಿಕಾಭಿವೃದ್ದಿಗೆ ಅನುಕೂಲ ಆಗಲಿದೆ ಎಂಬುದು ಹಿರಿಯ ನಾಗರೀಕ ಲಕ್ಷಿö್ಮÃನಾರಾಯಣ ಗುಪ್ತಾ ಅವರ ಮಾತಾಗಿದೆ.

ಜಿಲ್ಲಾ ಕೇಂದ್ರ ರೈಲು ನಿಲ್ದಾಣದ ಅಂದ ಹೆಚ್ಚಿಸುವತ್ತ ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ಪ್ರಯಾಣಿಕ ಸ್ನೇಹಿ ನಿಲ್ದಾಣ ಮಾಡುವತ್ತ ಮುಂದಡಿಯಿಡಬೇಕು ಎನ್ನುವುದು ಜನತೆಯ ಬಯಕೆ. ಇದು ಈಡೇರು ವುದೋ ಇಲ್ಲವೋ ಕಾದು ನೋಡಬೇಕಿದೆ.ವಿಶೇಷವಾಗಿ ಶೌಚಾಲಯ, ಕುಡಿಯುವ ನೀರು, ಕ್ಯಾಂಟೀನ್ ಸಮಸ್ಯೆ ಪರಿಹರಿಸಿದರೆ ಮಹಿಳೆಯರ ಆಶೀರ್ವಾದ ಇಲಾಖೆಗೆ ಇರಲಿದೆ ಎನ್ನುವುದು ಪತ್ರಿಕೆಯ ಆಶಯವಾಗಿದೆ.